ಯೆರೆಮೀಯ 51:11 - ಕನ್ನಡ ಸತ್ಯವೇದವು C.L. Bible (BSI)11 ಸರ್ವೇಶ್ವರನು ಬಾಬಿಲೋನನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಅದನ್ನು ಮೇದ್ಯರ ಅರಸರು ನಾಶಮಾಡುವಂತೆ ಅವರನ್ನು ಪ್ರೇರೇಪಿಸಿದ್ದಾರೆ. ಆ ನಾಶವು, ಸರ್ವೇಶ್ವರನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ ಆಗಿದೆ. ‘ಮೇದ್ಯರೇ, ಬಾಣಗಳನ್ನು ಮಸೆಯಿರಿ, ಯುದ್ಧಸನ್ನದ್ಧರಾಗಿರಿ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರೇಪಿಸಿದ್ದಾನೆ. ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತಿಕಾರವೇ; ಮೇದ್ಯರೇ, ಬಾಣಗಳನ್ನು ಮಸೆಯಿರಿ, ಗುರಾಣಿಗಳನ್ನು ಸನ್ನದ್ಧ ಮಾಡಿರಿ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರಿಸಿದ್ದಾನೆ; ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ; [ಮೇದ್ಯರೇ,] ಬಾಣಗಳನ್ನು ಮಸೆಯಿರಿ, ಸನ್ನದ್ಧರಾಗಿರಿ! ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ನಿಮ್ಮ ಬಾಣಗಳನ್ನು ಮಸೆಯಿರಿ. ನಿಮ್ಮ ಕವಚಗಳನ್ನು ಧರಿಸಿರಿ. ಯೆಹೋವನು ಮೇದ್ಯರ ರಾಜರನ್ನು ಪ್ರಚೋದಿಸಿದ್ದಾನೆ. ಬಾಬಿಲೋನನ್ನು ನಾಶಪಡಿಸಬೇಕೆಂಬ ಉದ್ದೇಶದಿಂದ ಆತನು ಅವರನ್ನು ಪ್ರಚೋದಿಸಿದ್ದಾನೆ. ಯೆಹೋವನು ಬಾಬಿಲೋನಿನ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾನೆ. ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿದ್ದ ಯೆಹೋವನ ಪವಿತ್ರ ಆಲಯವನ್ನು ನಾಶಮಾಡಿತು. ಆದ್ದರಿಂದ ಯೆಹೋವನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 “ಬಾಣಗಳನ್ನು ಮೆರುಗು ಮಾಡಿರಿ; ಡಾಲುಗಳನ್ನು ಎತ್ತಿಕೊಳ್ಳಿರಿ, ಯೆಹೋವ ದೇವರು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾರೆ; ಆತನ ಆಲೋಚನೆ ಬಾಬಿಲೋನಿಗೆ ವಿರೋಧವಾಗಿ ಅದನ್ನು ನಾಶಮಾಡುವುದಕ್ಕೆ ಇದೆ. ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯು, ಅವರ ದೇವಾಲಯದ ಪ್ರತಿದಂಡನೆಯಾಗಿದೆ. ಅಧ್ಯಾಯವನ್ನು ನೋಡಿ |
ಆದುದರಿಂದ ಅಸ್ಸೀರಿಯದ ರಾಜಪೂಲ್ (ಇವನಿಗೆ ತಿಲ್ಗತ್ಪಿಲೆಸರ್ ಎಂಬ ಹೆಸರೂ ಇದೆ) ಅವರ ಮೇಲೆ ದಾಳಿಮಾಡುವಂತೆ ಇಸ್ರಯೇಲ್ ದೇವರು ಪ್ರೇರಿಸಿದರು. ಅವನು ರೂಬೇನ್, ಗಾದ್ ಮತ್ತು ಪೂರ್ವದಲ್ಲಿಯ ಮನಸ್ಸೆ ಗೋತ್ರ ಗೋತ್ರಗಳವರನ್ನು ಗಡೀಪಾರು ಮಾಡಿ ಅವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಒಯ್ದನು. ಅವರು ಅಲ್ಲಿಯೇ ನೆಲೆಸುವಂತೆ ಮಾಡಿದನು.