Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 50:7 - ಕನ್ನಡ ಸತ್ಯವೇದವು C.L. Bible (BSI)

7 ಕಂಡಕಂಡವರೆಲ್ಲರು ಅವರನ್ನು ಕಬಳಿಸಿದ್ದಾರೆ. ಅವರ ವಿರೋಧಿಗಳು, ‘ನಾವು ಅವರನ್ನು ಕಬಳಿಸಿದ್ದು ದೋಷವಲ್ಲ, ಏಕೆಂದರೆ, ಸತ್ಯಸ್ವರೂಪರಾದ ಸರ್ವೇಶ್ವರನಿಗೆ, ತಮ್ಮ ಪೂರ್ವಜರ ನಂಬಿಕೆ ನಿರೀಕ್ಷೆಯಾದ ಸರ್ವೇಶ್ವರನಿಗೆ ವಿರುದ್ಧ ಅವರು ಪಾಪಮಾಡಿದ್ದಾರೆ,’ ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕಂಡಕಂಡವರೆಲ್ಲರೂ ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ವಿರೋಧಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ, ಅವರು ಸತ್ಯಸ್ವರೂಪನಾದ ಯೆಹೋವನಿಗೆ, ಹೌದು, ತಮ್ಮ ಪೂರ್ವಿಕರ ನಿರೀಕ್ಷೆಯಾದ ಯೆಹೋವನಿಗೆ ಪಾಪ ಮಾಡಿದರಲ್ಲಾ’ ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕಂಡಕಂಡವರೆಲ್ಲರೂ ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ವಿರೋಧಿಗಳು - ನಾವು ಅವರನ್ನು ನುಂಗಿದ್ದು ದೋಷವಲ್ಲ, ಅವರು ನ್ಯಾಯನಿವಾಸವೆನಿಸಿಕೊಂಡ ಯೆಹೋವನಿಗೆ, ಹೌದು, ತಮ್ಮ ಪಿತೃಗಳ ನಿರೀಕ್ಷೆಯಾದ ಯೆಹೋವನಿಗೆ ಪಾಪಮಾಡಿದರಲ್ಲಾ ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನನ್ನ ಜನರನ್ನು ಕಂಡವರೆಲ್ಲ ಅವರನ್ನು ನೋಯಿಸಿದ್ದಾರೆ. ಆ ಶತ್ರುಗಳು, ‘ನಾವು ಮಾಡಿದ್ದು ತಪ್ಪಲ್ಲ. ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ. ಯೆಹೋವನು ಅವರ ನಿಜವಾದ ನಿವಾಸವಾಗಿದ್ದನು. ಯೆಹೋವನು ಅವರ ಪೂರ್ವಿಕರು ನಂಬಿದ್ದ ದೇವರಾಗಿದ್ದನು’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ಎದುರಾಳಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ; ಏಕೆಂದರೆ ನೀತಿಯ ನಿವಾಸವಾದ ಯೆಹೋವ ದೇವರಿಗೆ, ಹೌದು, ಅವರ ಪೂರ್ವಜರ ನಿರೀಕ್ಷೆಯಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ,’ ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 50:7
28 ತಿಳಿವುಗಳ ಹೋಲಿಕೆ  

ಸರ್ವೇಶ್ವರಾ, ಇಸ್ರಯೇಲರಿಗೆ ನೀವೇ ನಿರೀಕ್ಷೆ ಇಕ್ಕಟ್ಟಿನಲ್ಲಿ ಅವರಿಗೆ ನೀವೇ ರಕ್ಷೆ. ನಾಡಿನಲ್ಲಿ ಅನ್ಯದೇಶೀಯನಂತಿರುವಿರಿ, ಏಕೆ? ರಾತ್ರಿ ಕಳೆಯಲು ಗುಡಾರಹಾಕಿದ ಪ್ರಯಾಣಿಕನಂತಿರುವಿರಿ, ಏಕೆ?


“ಎಲೈ ಇಸ್ರಯೇಲ್, ನೀನು ನನಗೆ ಮೀಸಲಾದವಳು, ನನ್ನ ಬೆಳೆಯ ಪ್ರಥಮ ಫಲ. ಯಾರು ಯಾರು ಅದನ್ನು ತಿಂದರೋ ಅವರು ದ್ರೋಹಿಗಳು, ಕೇಡಿಗೆ ಗುರಿಯಾದವರು, ಎನ್ನುತ್ತಾರೆ ಸರ್ವೇಶ್ವರ.”


ಕೊಂಡುಕೊಳ್ಳುವವರು, ಅವುಗಳನ್ನು ಕೊಯ್ದರೂ ನಿರಪರಾಧಿಗಳೆನಿಸಿಕೊಳ್ಳುವರು. ಅವುಗಳನ್ನು ಮಾರುವವರು ‘ಸರ್ವೇಶ್ವರಸ್ವಾಮಿಗೆ ಸ್ತೋತ್ರ, ನಾವು ಧನವಂತರಾದೆವು’ ಎಂದುಕೊಳ್ಳುವರು. ಆ ಮಂದೆಯ ಕುರುಬರು ಸಹ ಅವುಗಳಿಗೆ ಕರುಣೆತೋರಿಸರು.”


ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ನುಡಿ ಹೀಗಿದೆ: “ನಾನು ನನ್ನ ಜನರ ಗುಲಾಮಗಿರಿಯನ್ನು ನೀಗಿಸುವೆನು. ಆಗ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಸರ್ವೇಶ್ವರ ನಿನ್ನನ್ನು ಆಶೀರ್ವದಿಸಲಿ’ ಎಂಬ ಮಾತು ಜುದೇಯ ನಾಡಿನಲ್ಲೂ ಅದರ ನಗರಗಳಲ್ಲೂ ಮತ್ತೆ ಕೇಳಿಬರುವುದು.


“ಇಸ್ರಯೇಲ್ ಚದರಿಹೋದ ಮಂದೆ. ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ. ಮೊಟ್ಟಮೊದಲು ಅಸ್ಸೀರಿಯಾದ ಅರಸನು ಅದನ್ನು ಕಬಳಿಸಿದನು. ಕಟ್ಟಕಡೆಗೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.


ಕ್ರೈಸ್ತವಿಶ್ವಾಸದಲ್ಲಿ ಸತ್‍ಪುತ್ರನಾದ ತಿಮೊಥೇಯನಿಗೆ-ಪೌಲನು ಬರೆಯುವ ಪತ್ರ.


ನೆಮ್ಮದಿಯಿಂದ ಬಾಳುವ ರಾಷ್ಟ್ರಗಳ ಮೇಲೆ ಬಹಳ ಸಿಟ್ಟುಗೊಂಡಿದ್ದೇನೆ. ಏಕೆಂದರೆ, ನಾನು ಜೆರುಸಲೇಮಿನ ವಿರುದ್ಧ ಕಿಂಚಿತ್ತೇ ಕೋಪಗೊಂಡಿದ್ದಾಗ ಅವರು ಕೇಡಿಗೆ ಕೇಡು ಕೂಡಿಸಿಬಿಟ್ಟರು.


ಸರ್ವೇಶ್ವರಾ, ನಿಮ್ಮ ಸಮಸ್ತ ಧರ್ಮಕಾರ್ಯಗಳಿಗೆ ಅನುಸಾರವಾಗಿ ನಿಮ್ಮ ನಗರವೂ ನಿಮ್ಮ ಪವಿತ್ರ ಪರ್ವತವೂ ಆದ ಜೆರುಸಲೇಮ್ ಮೇಲೆ ನಿಮಗಿರುವ ಕೋಪವನ್ನೂ ರೋಷಾಗ್ನಿಯನ್ನೂ ದಯಮಾಡಿ ತೊಲಗಿಸಿಬಿಡಿ. ನಮ್ಮ ಮತ್ತು ನಮ್ಮ ಪೂರ್ವಜರ ಪಾಪಾಪರಾಧಗಳ ನಿಮಿತ್ತ ಜೆರುಸಲೇಮ್ ಮತ್ತು ನಿಮ್ಮ ಜನತೆ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.


ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ.


ಸೇನಾಧೀಶ್ವರರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ: “ಇಸ್ರಯೇಲಿನ ಹಾಗು ಜುದೇಯದ ಜನರಿಬ್ಬರೂ ಹಿಂಸೆಗೆ ಗುರಿಯಾಗಿದ್ದಾರೆ. ಅವರನ್ನು ಸೆರೆಗೆ ಒಯ್ದವರೆಲ್ಲರು ಅವರನ್ನು ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.


“ಕಾಡಿನ ಮೃಗಗಳೇ ಬನ್ನಿ, ಬಂದು ನುಂಗಿಬಿಡಿ!


“ನಾ ರೋಷಗೊಂಡು ನನ್ನ ಜನರನ್ನೇ ನಿನ್ನ ಕೈವಶಮಾಡಿದೆ ನನಗೆ ಸ್ವಂತವಾದವರನ್ನೇ ಈ ಪರಿ ಹೊಲೆಗೆಡಿಸಿದೆ. ನೀನಾದರೋ ಕರುಣೆ ತೋರಿಸದೆಹೋದೆ ಮುದುಕರ ಮೇಲೂ ತೂಕದ ನೊಗವನು ಹೊರಿಸಿದೆ.


ಇವರು ಇಸ್ರಯೇಲರನ್ನು ನುಂಗಿಬಿಡಲು ಬಾಯಿ ತೆರೆದಿದ್ದಾರೆ. ಇಷ್ಟಾದರೂ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು I ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು II


ಪ್ರಭೂ, ತಲತಲಾಂತರಕ್ಕೆ I ಶ್ರೀನಿವಾಸ ನೀನೆಮಗೆ II


ನುಂಗಿಬಿಟ್ಟರಾ ಜನರು ಯಕೋಬ ವಂಶದವರನು I ಹಾಳುಮಾಡಿ ಬಿಟ್ಟರವರ ನಿವಾಸ ಸ್ಥಳಗಳನು II


ಸ್ವಾಮಿ ದೇವಾ, ನೀನೇ ನನ್ನ ಭರವಸೆ I ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ II


ಅವರು ನಿನ್ನ ದವಸಧಾನ್ಯಗಳನ್ನು ತಿಂದುಬಿಡುವರು. ನಿನ್ನ ಗಂಡುಹೆಣ್ಣುಮಕ್ಕಳನ್ನು ಕೊಲ್ಲುವರು. ನಿನ್ನ ದನಕುರಿಗಳನ್ನು ಕಬಳಿಸಿಬಿಡುವರು. ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹಾಳುಮಾಡುವರು. ನೀನು ನಂಬಿಕೊಂಡಿರುವ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಸ್ತ್ರಗಳಿಂದ ಹಾಳುಮಾಡುವರು.


ಸರ್ವೇಶ್ವರಾ, ನಿಮ್ಮನ್ನು ಅರಿತುಕೊಳ್ಳದವರ ಮೇಲೆ ನಿಮ್ಮ ನಾಮವನ್ನು ಉಚ್ಚರಿಸದವರ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದುಬಿಡಿ. ಅವರು ಯಕೋಬ್ಯರನ್ನು ಕಬಳಿಸಿದ್ದಾರೆ ಹೌದು, ಪೂರ್ತಿಯಾಗಿ ಕಬಳಿಸಿಬಿಟ್ಟಿದ್ದಾರೆ ಅವರ ನಿವಾಸಗಳನ್ನು ನಾಶಮಾಡಿದ್ದಾರೆ.


ಸ್ವಾಮಿ ಸರ್ವೇಶ್ವರಾ, ನೀವು ಇಸ್ರಯೇಲರ ಆಶ್ರಯ ! ನಿಮ್ಮನ್ನು ಬಿಟ್ಟುಹೋಗುವವರು ಆಶಾಭಂಗಪಡುವರು ಅವರು ಜೀವಜಲದ ಬುಗ್ಗೆಯನ್ನೆ ತೊರೆದವರು ತಮ್ಮ ಹೆಸರನ್ನು ಧೂಳಿನಲ್ಲಿ ಬರೆಸಿಕೊಂಡವರು.


ಕುರಿಗಾಹಿಗಳು ಇರಲಿಲ್ಲವಾದುದರಿಂದ ಅವು ಚದುರಿಹೋದುವು; ದಿಕ್ಕಾಪಾಲಾಗಿ ಕಾಡಿನ ಸಕಲ ಮೃಗಗಳಿಗೆ ತುತ್ತಾದವು;


ನೀನು ಇಸ್ರಯೇಲಿನ ಪರ್ವತಗಳನ್ನು ನೋಡಿ, - ‘ಆಹಾ, ಹಾಳಾದವು, ನಮಗೆ ತಿನ್ನುವ ತುತ್ತಾಗಿವೆ,’ ಎಂದು ಮಾಡಿದ ದೂಷಣೆಗಳು ಸರ್ವೇಶ್ವರನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು.


ಆ ಕಾಲದಲ್ಲಿ, ಆ ದಿನಗಳಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯೊಂದನ್ನು ಚಿಗುರಿಸುವೆನು. ಆತನು ನಾಡಿನಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.


ಆಗ ಯೆಹೂದ್ಯರು ಸುರಕ್ಷಿತವಾಗಿರುವರು. ಜೆರುಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ‘ಯೆಹೂವಚಿದ್ಕೇನು’ (ಅಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.


“ಬಿಲ್ಲುಗಾರರೇ, ನೀವೆಲ್ಲರು ವ್ಯೂಹಕಟ್ಟಿ ಬಾಬಿಲೋನಿಗೆ ಮುತ್ತಿಗೆಹಾಕಿರಿ. ಬಾಣಗಳನ್ನು ಮಿಗಿಸದೆ ಎಸೆಯಿರಿ. ಅದು ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು