Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 50:35 - ಕನ್ನಡ ಸತ್ಯವೇದವು C.L. Bible (BSI)

35 ಸರ್ವೇಶ್ವರ ಇಂತೆನ್ನುತ್ತಾರೆ: ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ ಅದರ ಜನಸಾಮಾನ್ಯರನ್ನು, ಪದಾಧಿಕಾರಿಗಳನ್ನು, ಪಂಡಿತರನ್ನು ಇವರೆಲ್ಲರನ್ನು ಹತಿಸಲಿದೆ ಆ ಖಡ್ಗ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಯೆಹೋವನು ಇಂತೆನ್ನುತ್ತಾನೆ, “ಖಡ್ಗವು ಕಸ್ದೀಯರ ಮೇಲೆ ಬೀಳಲಿ! ಬಾಬೆಲಿನ ಸಾಮಾನ್ಯ ಜನರು, ಪ್ರಧಾನರು, ಪಂಡಿತರು, ಇವರನ್ನೆಲ್ಲಾ ಹತಿಸಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಯೆಹೋವನು ಇಂತೆನ್ನುತ್ತಾನೆ - ಖಡ್ಗವು ಕಸ್ದೀಯರ ಮೇಲೆ ಬೀಳಲಿ! ಬಾಬೆಲಿನ ಸಾಮಾನ್ಯಜನರು, ಪ್ರಧಾನರು, ಪಂಡಿತರು, ಇವರನ್ನೆಲ್ಲಾ ಹತಿಸಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಯೆಹೋವನು ಹೀಗೆನ್ನುತ್ತಾನೆ: “ಖಡ್ಗವೇ, ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾಶಮಾಡು! ಖಡ್ಗವೇ, ಬಾಬಿಲೋನಿನ ಸಾಮಾನ್ಯ ಜನರನ್ನು, ಅಧಿಕಾರಿಗಳನ್ನು ಮತ್ತು ಪಂಡಿತರನ್ನು ಕೊಂದುಹಾಕು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 “ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದರ ಜನಸಾಮಾನ್ಯರನ್ನು, ಪ್ರಧಾನರನ್ನು, ಪಂಡಿತರನ್ನು ಇವರೆಲ್ಲರನ್ನು ಹತಿಸಲಿದೆ ಖಡ್ಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 50:35
22 ತಿಳಿವುಗಳ ಹೋಲಿಕೆ  

ಎಲೈ, ಸರ್ವೇಶ್ವರನ ಖಡ್ಗವೇ, ಇನ್ನೆಷ್ಟರವರೆಗೆ ವಿಶ್ರಾಂತಿಗೊಳ್ಳದಿರುವೆ? ಓರೆಯಲ್ಲಿ ಅವಿತುಕೊಂಡರು, ಶಾಂತಿಗೊಳ್ಳು, ಸುಮ್ಮನಿರು.


ತಮ್ಮ ಇಚ್ಛಾನುಸಾರ ಅವರು ನಡೆದ ಕಾರಣ, ಅವರ ಪಟ್ಟಣಗಳಲ್ಲಿ ಕತ್ತಿಯ ಕಾಳಗ ನಡೆಯುವುದು. ಅವರ ಪುರದ್ವಾರದ ಕತ್ತಿಯ ಕಬ್ಬಿಣದ ಅಗುಳಿಗಳನ್ನು ಮುರಿದು ಕೋಟೆಯಲ್ಲೇ ಅವರನ್ನು ಕಡಿದುಹಾಕುವರು.


ಅದೇ ರಾತ್ರಿ ಬಾಬಿಲೋನಿನ ರಾಜ ಬೇಲ್ಶಚ್ಚರನು ಕೊಲ್ಲಲ್ಪಟ್ಟನು.


ಬಾಬಿಲೋನಿನ ರಾಜ್ಯಪಾಲರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಯೋಧರು, ಇವರೆಲ್ಲರಿಗೆ ತಲೆಗೇರುವ ತನಕ ಕುಡಿಸುವೆನು. ಅವರು ಎಂದೆಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆ ಮಾಡುವರು ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರನೆಂಬ ರಾಜಾಧಿರಾಜರು.”


ಮಂದೆಕಾಯದ ಕುರುಬನಿಗೆ ಧಿಕ್ಕಾರ! ತಾಕುವುದು ಅವನ ತೋಳಿಗೂ ಬಲಗಣ್ಣಿಗೂ ಖಡ್ಗ ತೀರಾ ಬತ್ತಿಹೋಗಲಿ ಅವನ ತೋಳು ಪೂರಾ ಮಬ್ಬಾಗಲಿ ಅವನ ಬಲಗಣ್ಣು.


ನನ್ನ ಮುಂದೆ ಕುಳಿತುಕೊಂಡು ಇರುವಾಗ ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:


ಅವರು ಹೊಟ್ಟೆಬಾಕರೇ ಸರಿ. ಅವರಿಗೆ ಔತಣವನ್ನು ಸಿದ್ಧಮಾಡುವೆನು. ತಿಂದು ಸಂಭ್ರಮಪಡುವಂತೆ ಮಾಡುವೆನು. ತಲೆಗೇರುವತನಕ ಕುಡಿಸಿ ಎಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆಯಲ್ಲಿರುವಂತೆ ಮಾಡುವೆನು.


ಆದಕಾರಣ ಆ ದಿನದಂದು ಅಲ್ಲಿ ಯುವಕರು ಬೀದಿ ಚೌಕಗಳಲ್ಲಿ ಬಿದ್ದು ಸಾಯುವರು. ಯುದ್ಧವೀರರೆಲ್ಲರು ಸತ್ತು ಸ್ತಬ್ದರಾಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”


ಅದರ ಗೂಳಿಗಳನ್ನೆಲ್ಲ ಕೊಲ್ಲಿರಿ. ಹೋಗಲಿ ಅವು ವಧ್ಯಸ್ಥಾನಕ್ಕೆ. ಅವುಗಳಿಗೆ ಧಿಕ್ಕಾರ. ಅವುಗಳಿಗೆ ಬಂದಿದೆ ವಿಪತ್ಕಾಲ! ಸಮೀಪಿಸಿದೆ ದಂಡನೆಯ ದಿನ!


ಜನಾಂಗಗಳ ಒಡೆಯಾ, ಅರಸರೇ, ನಿಮಗೆ ಅಂಜದೆ ಇರುವವರಾರು? ಹೌದು, ನೀವು ಭಯಭಕ್ತಿಗೆ ಪಾತ್ರರು ರಾಷ್ಟ್ರಗಳ ಜ್ಞಾನಿಗಳಲ್ಲೂ ರಾಜಪರಂಪರೆಯಲ್ಲೂ ಯಾವನೂ ಇಲ್ಲ ನಿಮಗೆ ಸಮಾನನು.


ಜ್ಞಾನಿಗಳು ನಾಚಿಕೆಪಡುವರು, ನಿಬ್ಬೆರಗಾಗಿ ಬೋನಿಗೆ ಸಿಕ್ಕಿಬೀಳುವರು. ಏಕೆಂದರೆ ಸರ್ವೇಶ್ವರನಾದ ನನ್ನ ಮಾತನ್ನು ಅವರು ನಿರಾಕರಿಸಿದ್ದಾರೆ. ಇದು ತಾನೋ ಅವರ ಜ್ಞಾನ?


ನ್ಯಾಯ ತೀರಿಸುವನು ಸರ್ವೇಶ್ವರ ಮನುಜರಿಗೆಲ್ಲ ಅಗ್ನಿಯಿಂದ, ತನ್ನ ಖಡ್ಗದಿಂದ. ಹತರಾಗುವರು ಬಹುಜನ ಆತನಿಂದ.


ಸುಳ್ಳುಶಕುನ ಹೇಳುವವರನು ನಿರರ್ಥಕಗೊಳಿಸುವವನು ನಾನೆ ಕಣಿ ಹೇಳುವವರನು ಮರುಳುಗೊಳಿಸುವವನು ನಾನೆ ವಿವೇಕಿಗಳೊಡನೆ ವಾದಿಸಿ ಅವರ ವಿವೇಕವೇ ಅವಿವೇಕವೆಂದು ತೋರಿಸಿದವನು ನಾನೆ.


ಹುರಿದುಂಬಿಸಿ ಕರೆತಂದಿರುವೆನು ಒಬ್ಬನನ್ನು ಉತ್ತರದಿಂದ ನನ್ನ ನಾಮವನ್ನು ಪ್ರಚುರಪಡಿಸಲು ಬಂದಿಹನಾತ ಪೂರ್ವದಿಂದ ಕುಂಬಾರನು ಜೇಡಿಮಣ್ಣನ್ನು ತುಳಿಯುವಂತೆ ತುಳಿಯುವನಾತ ರಾಜರನ್ನು ಮಣ್ಣಂತೆ.


ಇಂತಿರಲು ಇವರ ಮಧ್ಯೆ ಎಸಗುವೆನು ಅಧಿಕಾಶ್ಚರ್ಯವಾದ ಅದ್ಭುತಕಾರ್ಯಗಳನು, ಅಳಿವುದು ಇವರ ಜ್ಞಾನಿಗಳ ಜ್ಞಾನವು, ಅಡಗುವುದು ವಿವೇಕಿಗಳ ವಿವೇಕವು".


ಶತ್ರುಗಳ ಕತ್ತಿಯ ಮೂಲಕ ನಿಮ್ಮನ್ನು ಸಂಹರಿಸುವೆನು.ನೀವು ನನ್ನ ನಿಬಂಧನವನ್ನು ಮೀರಿದುದರಿಂದ ಆ ಕತ್ತಿ ಪ್ರತಿದಂಡನೆ ಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ಅಂಟುರೋಗವುಂಟಾಗುವಂತೆ ಮಾಡುವೆನು. ಹೀಗೆ ನೀವು ಶತ್ರುಗಳಿಗೆ ಶರಣಾಗುವಿರಿ.


ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯುವಂತೆ ನಾ ನಿನ್ನ ಕೈಹಿಡಿದು ನಡೆಸುವೆನು ಮುಂದೆ.


ಇಗೋ ಬಾಬಿಲೋನಿಯದ ವಿಗ್ರಹಗಳನ್ನು ದಂಡಿಸುವ ದಿನಗಳು ಬರಲಿವೆ. ಆ ನಾಡೆಲ್ಲ ನಾಚಿಕೆಗೆ ಈಡಾಗುವುದು. ಅದರ ಪ್ರಜೆಗಳು ಅದರಲ್ಲೇ ಹತರಾಗಿ ಬೀಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು