Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:6 - ಕನ್ನಡ ಸತ್ಯವೇದವು C.L. Bible (BSI)

6 ಆದಕಾರಣ ಅಡವಿಯ ಸಿಂಹ ಅವರನ್ನು ಕೊಲ್ಲುವುದು ಕಾಡಿನ ತೋಳ ಕೊಳ್ಳೆಹೊಡೆಯುವುದು ಚಿರತೆ ಅವರ ಪಟ್ಟಣಗಳಿಗೆ ಹೊಂಚುಹಾಕುವುದು ಅಲ್ಲಿಂದ ಹೊರಬರುವ ಪ್ರತಿಯೊಬ್ಬನನ್ನು ಸೀಳುವುದು. ಅವರ ಅಪರಾಧಗಳೋ ಬಹಳ, ಅವರ ದ್ರೋಹಗಳೋ ಅಪಾರ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವುದು, ಕಾಡಿನ ತೋಳವು ಕೊಳ್ಳೆ ಹೊಡೆಯುವುದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವುದು. ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವದು, ಕಾಡಿನ ತೋಳವು ಕೊಳ್ಳೆಮಾಡುವದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವದು; ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದ್ದರಿಂದ ಕಾಡಿನ ಸಿಂಹವು ಅವರ ಮೇಲೆರಗುವುದು, ಮರಳುಗಾಡಿನ ತೋಳವು ಅವರನ್ನು ಕೊಂದು ಬಿಡುವದು. ಅವರ ನಗರಗಳ ಹತ್ತಿರ ಚಿರತೆಯು ಅಡಗಿಕೊಂಡಿದೆ. ನಗರದಿಂದ ಹೊರಗೆ ಬಂದವರನ್ನೆಲ್ಲ ಅದು ಚೂರುಚೂರು ಮಾಡುವುದು. ಯೆಹೂದದ ಜನರು ಮತ್ತೆಮತ್ತೆ ಪಾಪಗಳನ್ನು ಮಾಡಿದ್ದರಿಂದ ಹೀಗಾಗುವದು. ಅವರು ಅನೇಕಸಲ ಯೆಹೋವನಿಂದ ದೂರ ಹೋಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಹೀಗಿರುವುದರಿಂದ ಅಡವಿಯ ಸಿಂಹವು ಅವರನ್ನು ದಾಳಿಮಾಡುವುದು. ಕಾಡಿನ ತೋಳವು ಅವರನ್ನು ಸೂರೆಮಾಡುವುದು. ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವುದು. ಅಲ್ಲಿಂದ ಹೊರಗೆ ಬರುವವರೆಲ್ಲರೂ ಸೀಳಲಾಗುವರು. ಏಕೆಂದರೆ, ಅವರ ದ್ರೋಹಗಳು ಬಹಳವಾಗಿವೆ. ಅವರ ಹಿಂಜಾರುವಿಕೆಯು ಹೆಚ್ಚಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:6
38 ತಿಳಿವುಗಳ ಹೋಲಿಕೆ  

ಅದರ ಪ್ರಮುಖರು ಗರ್ಜಿಸುವ ಸಿಂಹಗಳು. ಅದರ ನ್ಯಾಯಾಧಿಪತಿಗಳು ಹಸಿದ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.


“ಅವರ ಕುದುರೆಗಳು ಚಿರತೆಗಳಿಗಿಂತ ಬಿರುಸು; ಹಸಿದ ತೋಳಗಳಿಗಿಂತ ಚುರುಕು. ಅವರ ರಾಹುತರು ರಭಸದಿಂದ ಹಾರಿಬರುವರು. ಬೇಟೆಯನ್ನು ಕಬಳಿಸಲು ಕಾತರದಿಂದ ಹಾರುವ ರಣಹದ್ದಿನಂತೆ ದೂರದಿಂದ ಧಾವಿಸಿಬರುವರು.


ಗುಹೆಬಿಟ್ಟು ಹೊರಟುಬರುವ ಸಿಂಹದಂತೆ ರಾಷ್ಟ್ರಗಳ ವಿನಾಶಕನೊಬ್ಬನು ಎದ್ದಿದ್ದಾನೆ; ಹೊರಟು ಬರುತ್ತಿದ್ದಾನೆ. ಅವನು ಜುದೇಯ ನಾಡನ್ನು ಹಾಳುಮಾಡುವನು. ಅದರ ಪಟ್ಟಣಗಳು ನಿರ್ಜನ ಪ್ರದೇಶಗಳಾಗುವುವು.


ಅಲ್ಲಿನ ಪ್ರಮುಖರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ಕಬಳಿಸುವ, ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.


ನಾನು ಕಂಡ ಆ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತಿದ್ದವು. ಬಾಯಿಯು, ಸಿಂಹದ ಬಾಯಂತೆ ಇತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಅಪಾರ ಅಧಿಕಾರವನ್ನೂ ಕೊಟ್ಟಿತು.


ಎಫ್ರಯಿಮಿಗೆ ನಾನು ಸಿಂಹ; ಯೆಹೂದ್ಯಕುಲಕ್ಕೆ ಪ್ರಾಯದ ಸಿಂಹ; ಅದನ್ನು ಸೀಳಿಬಿಡುವೆನು; ಎಳೆದುಕೊಂಡು ಹೋಗುವೆನು; ಯಾರೂ ಅದನ್ನು ನನ್ನಿಂದ ಬಿಡಿಸಿಕೊಳ್ಳಲಾರರು.


ಅನಂತರ ನಾನು ನೋಡುತ್ತಿರುವಾಗಲೆ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು.


ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೆ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯ ಕೊಡಲಾಯಿತು.


ಆದರೂ ಇವಳು ತಾನು ಈಜಿಪ್ಟ್ ದೇಶದಲ್ಲಿ ಸೂಳೆಯಾಗಿದ್ದ ತನ್ನ ತಾರುಣ್ಯವನ್ನು ನೆನಪುಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು.


ಒಂದೊಂದು ಬೀದಿಯ ಕೊನೆಯಲ್ಲಿ ನೀನು ಜಗಲಿಯನ್ನು ಕಟ್ಟಿಕೊಂಡು, ನಿನ್ನ ಸೌಂದರ್ಯವನ್ನು ನೀಚಕೆಲಸಕ್ಕೆ ಒಪ್ಪಿಸಿ, ಹಾದುಹೋಗುವವರೆಲ್ಲರನ್ನೂ ಸೇರಿ ಸೂಳೆತನವನ್ನು ಅಧಿಕಗೊಳಿಸಿರುವೆ.


ಅದರ ಅಗಣಿತ ದ್ರೋಹಗಳಿಗಾಗಿ ಸರ್ವೇಶ್ವರ ಮಾಡಿದನದನ್ನು ದುಃಖಕ್ಕೆ ಈಡಾಗಿ, ಅದರ ವಿರೋಧಿಯೇ ಅದಕ್ಕೀಗ ಅಧಿಪತಿ ! ಅದರ ಶತ್ರುಗಳಿಗೋ ಸುಖಸಮೃದ್ಧಿ ! ಅದರ ಹಸುಳೆಗಳೂ ಸೆರೆಹೋಗಿವೆ ವೈರಿಯ ವಶವಾಗಿ !


“ಎದೋಮ್ಯರಿಗೆ ನಿತ್ಯ ನೆಲೆಯಾದ ಗೋಮಾಳಕ್ಕೆ ಇದೋ ಜೋರ್ಡನ್ ದಟ್ಟಡವಿಯಿಂದ ಸಿಂಹದೋಪಾದಿ ಏರಿಬರುವೆನು. ಕ್ಷಣಮಾತ್ರದಲ್ಲಿ ಅವರನ್ನು ಅಲ್ಲಿಂದ ಓಡಿಸಿಬಿಡುವೆನು. ಅದನ್ನು ಪಾಲಿಸುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನ್ಯಾಯವಿಚಾರಣೆಗೆ ನನ್ನನ್ನು ಎಳೆಯುವಂಥ ವ್ಯಕ್ತಿ ಯಾರು? ಮಂದೆಯನ್ನು ಕಾಯುವ ಯಾವನು ತಾನೆ ನನ್ನೆದುರಿಗೆ ನಿಲ್ಲಬಲ್ಲನು?


ಆತನ ಮನದಾಲೋಚನೆಗಳನ್ನು ನಡೆಸಿ ನೆರವೇರಿಸುವ ತನಕ ಹಿಂದಿರುಗದು ಆತನ ರೋಷವೆಂಬಾ ಬಿರುಗಾಳಿ, ಇದನ್ನು ನೀವು ಗ್ರಹಿಸುವಿರಿ ಕಟ್ಟಕಡೆಯ ದಿನಗಳಲ್ಲಿ.


ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.


ಗುಹೆಬಿಟ್ಟು ಬಂದ ಸಿಂಹದಂತೆ ಬಂದಿರುವನಾತ. ಆತನ ಕೋಪಾಗ್ನಿಯ ನಿಮಿತ್ತ ತುಂಡರಿಸುವಾ ಖಡ್ಗದ ಪ್ರಯುಕ್ತ ಅವರ ನಾಡಾಗಿದೆ ಬೆಂಗಾಡು.


ಸರ್ವೇಶ್ವರಾ, ನಮ್ಮ ದ್ರೋಹಗಳು ಹಲವು ನಿಮಗೆ ವಿರುದ್ಧ ಪಾಪಮಾಡಿದೆವು. ನಮ್ಮ ಅಪರಾಧಗಳೇ ನಮಗೆ ವಿರುದ್ಧ ಸಾಕ್ಷಿ ನೀಡುತ್ತಿವೆ ಆದರೂ ನಿಮ್ಮ ನಾಮದ ನಿಮಿತ್ತ ಕೈನೀಡು ನಮಗೆ.


ನಿನ್ನ ಕೆಟ್ಟತನವೇ ನಿನ್ನನ್ನು ಶಿಕ್ಷಿಸುವುದು ನಿನ್ನ ದ್ರೋಹಗಳೇ ನಿನ್ನನ್ನು ಖಂಡಿಸುವುವು. ನಿನಗೆ ನನ್ನ ಭಯವಿಲ್ಲದೆ ನಿನ್ನ ದೇವರಾದ ಸರ್ವೇಶ್ವರನಾದ ನನ್ನನ್ನು ತೊರೆದುಬಿಟ್ಟದ್ದು ನಿನಗೆ ಕೆಟ್ಟದ್ದಾಗಿಯೂ ಕಹಿಯಾಗಿಯೂ ಪರಿಣಮಿಸುವುದು. ಇದನ್ನು ಚೆನ್ನಾಗಿ ಗ್ರಹಿಸಿಕೊ, ಕಣ್ಣಾರೆ ನೋಡು. ಇದು ಸರ್ವಶಕ್ತನೂ, ಸ್ವಾಮಿ ಸರ್ವೇಶ್ವರನೂ ಆದ ನನ್ನ ನುಡಿ.”


ನಿನಗೆ ಮಾರ್ಗದರ್ಶಿಯಾಗಿದ್ದ, ನಿನಗೆ ದೇವರಾಗಿದ್ದ ಸರ್ವೇಶ್ವರನಾದ ನನ್ನನ್ನೇ ತೊರೆದುಬಿಟ್ಟು ಇದನ್ನೆಲ್ಲ ನೀನೇ ನಿನ್ನ ಮೇಲೆ ಬರಮಾಡಿಕೊಂಡಿರುವೆ.


ಶತ್ರುಗಳು ಯುವ ಸಿಂಹಗಳಂತೆ ಅವನಿಗೆ ವಿರುದ್ಧ ಗರ್ಜಿಸಿ ಆರ್ಭಟಿಸುತ್ತಿವೆ; ಅವನ ನಾಡನ್ನು ಹಾಳುಮಾಡಿವೆ, ಅವನ ಊರುಗಳು ಸುಟ್ಟು ನಿರ್ಜನವಾಗಿವೆ.


“ಸರ್ವೇಶ್ವರಾ, ನಿಮಗೆ ವಿರುದ್ಧ ನಾವು ಗೈದ ಅಪರಾಧಗಳು ಹಲವು. ನಮ್ಮ ಪಾಪಗಳೇ ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ. ನಮ್ಮ ಅಪರಾಧಗಳು ನಮ್ಮೊಡನೆಯೇ ಇವೆ. ನಮ್ಮ ದ್ರೋಹಗಳನ್ನು ನಾವು ಬಲ್ಲೆವು.


ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು I ತಿರುಗಾಡುತ್ತವೆ ಆಗ ಕಾಡಿನ ಜೀವಜಂತುಗಳು II


ಆಗ ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ, “ನೀವು ಅನ್ಯಜನರ ಹೆಣ್ಣುಗಳನ್ನು ಮದುವೆ ಮಾಡಿಕೊಂಡು ಇಸ್ರಯೇಲರ ಅಪರಾಧವನ್ನು ಹೆಚ್ಚಿಸಿ ಇದ್ದೀರಿ.


“ನನ್ನ ದೇವರೇ, ನಾನು ಮನಗುಂದಿದವನು ಆಗಿದ್ದೇನೆ; ನಿಮ್ಮ ಕಡೆಗೆ ಮುಖವನ್ನು ಎತ್ತುವುದಕ್ಕೆ ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ; ನಮ್ಮ ಅಪರಾಧ ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ!


ಈಗ ಈ ದುಷ್ಟ ಪೀಳಿಗೆಗೆ ಸೇರಿದವರಾದ ನೀವು ನಿಮ್ಮ ಪೂರ್ವಜರಿಗೆ ಬದಲಾಗಿ ಬಂದು ಇಸ್ರಯೇಲರ ಮೇಲಿದ್ದ ಸರ್ವೇಶ್ವರನ ಕೋಪಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೀರಿ.


ನಾಶಮಾಡುವುವು ಅದನು ಕಾಡುಹಂದಿಗಳು I ತಿಂದುಹಾಕುವುವು ಅದನು ಅರಣ್ಯಮೃಗಗಳು II


ಈ ಜೆರುಸಲೇಮಿನವರು ಎಂದಿಗೂ ಹಿಂದಿರುಗದಂತೆ ಬಿಟ್ಟುಹೋದದ್ದೇಕೆ? ಮೋಸವನ್ನೇ ಪಟ್ಟಾಗಿ ಹಿಡಿದಿದ್ದಾರೆ. ಹಿಂತಿರುಗಿ ಬರಲೊಲ್ಲರು.


‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ.


ಪ್ರಧಾನ ಯಾಜಕರೂ ಪ್ರಜೆಗಳೂ ಕೂಡ ಮಹಾದ್ರೋಹಿಗಳಾಗಿ, ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಅನುಸರಿಸಿ, ಸರ್ವೇಶ್ವರ ತಮಗೆ ಪ್ರತಿಷ್ಠಿಸಿಕೊಂಡಿದ್ದ ಜೆರುಸಲೇಮಿನ ದೇವಾಲಯವನ್ನು ಹೊಲೆಮಾಡಿದರು.


ನಾನು ತಲೆಯೆತ್ತಿದರೆ ಬೇಟೆಯಾಡುವೆ ನನ್ನನ್ನು ಸಿಂಹದಂತೆ ಮತ್ತೆ ನಿನ್ನ ಶಕ್ತಿ ಸಾಮರ್ಥ್ಯವನ್ನು ನನ್ನ ಮೇಲೆ ಪ್ರಯೋಗಿಸುವೆ.


ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.


ಇಸ್ರಯೇಲ್ ಜನರೇ, ದುಷ್ಟಸಂತತಿಯವರೇ, ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿರಿ : ನಾನು ನಿಮಗೆ ಬೆಂಗಾಡಾಗಿಯೂ ಗಾಢಾಂಧಕಾರವಾಗಿಯೂ ಪರಿಣಮಿಸಿದ್ದೇನೊ? ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ; ನಿನ್ನ ಬಳಿಗೆ ಇನ್ನು ಬಾರೆವು’ ಎಂದು ನನ್ನ ಜನರಾದ ನೀವು ಹೇಳುವುದು ಹೇಗೆ?


ಆಕಾಶದಲ್ಲಿ ಹಾರುವ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ. ಬೆಳವಕ್ಕಿ, ಬಾನಕ್ಕಿ, ಕೊಕ್ಕರೆ ಇವು ತಮ್ಮ ಗಮನಾಗಮನದ ಸಮಯಗಳನ್ನು ತಿಳಿದಿರುತ್ತವೆ. ಆದರೆ ನನ್ನ ಜನರು ಸರ್ವೇಶ್ವರನಾದ ನನ್ನ ನಿಯಮಗಳನ್ನೆ ತಿಳಿಯರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು