Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:25 - ಕನ್ನಡ ಸತ್ಯವೇದವು C.L. Bible (BSI)

25 ನಿಮ್ಮ ಅಪರಾಧಗಳು ಈ ಪ್ರಯೋಜನಗಳನ್ನು ತಡೆಗಟ್ಟಿವೆ. ನಿಮ್ಮ ಪಾಪಗಳು, ಈ ಒಳಿತು ನಿಮಗೆ ಸಿಗದಂತೆ ತಪ್ಪಿಸಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನಿಮ್ಮ ಅಪರಾಧಗಳು ನಿಮಗಾಗುವ ಪ್ರಯೋಜನಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮ್ಮ ಒಳಿತನ್ನು ತಡೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನಿಮ್ಮ ಅಪರಾಧಗಳು ಇವುಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮಗೆ ಮೇಲನ್ನು ತಡೆದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಯೆಹೂದದ ಜನರೇ, ನೀವು ತಪ್ಪುಗಳನ್ನು ಮಾಡಿರುವಿರಿ. ಆದ್ದರಿಂದಲೇ ಮಳೆಬೆಳೆಗಳು ಆಗಿಲ್ಲ. ನಿಮ್ಮ ಪಾಪಗಳಿಂದಾಗಿ ಯೆಹೋವನ ಆ ಉತ್ತಮ ಕಾಣಿಕೆಗಳನ್ನು ನೀವು ಸವಿಯಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಇವೆ; ನಿಮ್ಮ ಪಾಪಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಗೆದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:25
11 ತಿಳಿವುಗಳ ಹೋಲಿಕೆ  

ಬದಲಿಗೆ, ನಿಮ್ಮ ಅಪರಾಧಗಳೇ ನಿಮ್ಮನ್ನು ಜೀವದಿಂದ ಬೇರ್ಪಡಿಸುತ್ತಾ ಬಂದಿವೆ. ಅವರು ನಿಮಗೆ ಕಿವಿಗೊಡದಂತೆ ನಿಮ್ಮ ಪಾಪಗಳೇ ಅವರನ್ನು ವಿಮುಖರನ್ನಾಗಿ ಮಾಡಿವೆ.


ಒಣನೆಲವಾಗಿಸಿದನಾತ ಬುಗ್ಗೆಗಳನು I ಉಪ್ಪುನೆಲವಾಗಿಸಿದ ಫಲಭೂಮಿಯನು II


ರೋಗಿಗಳಾದರವರು ಅನಾಚಾರದ ನಿಮಿತ್ತ I ಬಾಧೆಗೊಳಗಾದರವರು ಪಾಪಕಾರ್ಯಗಳ ನಿಮಿತ್ತ II


ಜೀವಾತ್ಮನಾದ ಮಾನವನು ತನ್ನ ಪಾಪದ ಶಿಕ್ಷೆಗಾಗಿ ಗೊಣಗುಟ್ಟುವುದೆಂತು?


ಆದಕಾರಣವೇ ಹದಮಳೆಗೆ ಅಡ್ಡಿಯಾಯಿತು. ವಸಂತಕಾಲದ ಮಳೆ ಬರದೆಹೋಯಿತು. ಇನ್ನೂ ನೀನು ವೇಶ್ಯೆ ಮುಖದವಳು, ಲಜ್ಜೆಗೆಟ್ಟವಳು !


‘ಸಿಯೋನ್’ ನಾರಿಮಣಿಯೇ, ನಿನ್ನ ದೋಷದ ಫಲವನ್ನು ಅನುಭವಿಸಿ ಆಗಿದೆ. ಸರ್ವೇಶ್ವರನು ಮತ್ತೆ ಒಯ್ಯನು ನಿನ್ನನ್ನು ಸೆರೆಗೆ. ‘ಎದೋಮ್’ ನಾರಿಮಣಿಯೇ, ನಿನ್ನ ದೋಷದ ನಿಮಿತ್ತ ಸರ್ವೇಶ್ವರನು ನಿನ್ನನ್ನು ದಂಡಿಸುವನು ನಿನ್ನ ಪಾಪಾಕ್ರಮಗಳನ್ನು ಬಯಲಿಗೆ ಎಳೆಯುವನು.


ಜುದೇಯ ನಾಡೇ, ನಿನ್ನ ನಡತೆ ಹಾಗೂ ಕೃತ್ಯಗಳೇ ನಿನಗೆ ಈ ವಿಪತ್ತನ್ನು ಒದಗಿಸಿವೆ. ಇದು ನಿನ್ನ ಪಾಪದ ಪ್ರತಿಫಲ. ನೋಡು ಎಷ್ಟು ಕಹಿಯಾಗಿದೆ; ಹೃದಯ ಇರಿಯುವಂತಿದೆ !


ಬರಗಾಲದ ಬಗ್ಗೆ ಸರ್ವೇಶ್ವರ ಯೆರೆಮೀಯನಿಗಿತ್ತ ಸಂದೇಶ :


ಸರ್ವೇಶ್ವರಾ, ನಮ್ಮ ದ್ರೋಹಗಳು ಹಲವು ನಿಮಗೆ ವಿರುದ್ಧ ಪಾಪಮಾಡಿದೆವು. ನಮ್ಮ ಅಪರಾಧಗಳೇ ನಮಗೆ ವಿರುದ್ಧ ಸಾಕ್ಷಿ ನೀಡುತ್ತಿವೆ ಆದರೂ ನಿಮ್ಮ ನಾಮದ ನಿಮಿತ್ತ ಕೈನೀಡು ನಮಗೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು