Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:15 - ಕನ್ನಡ ಸತ್ಯವೇದವು C.L. Bible (BSI)

15 ಇಸ್ರಯೇಲ್ ವಂಶವೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಗಮನದಿಂದ ಕೇಳು : “ನಾನು ಒಂದು ರಾಷ್ಟ್ರವನ್ನು ದೂರದಿಂದ ನಿನ್ನ ವಿರುದ್ಧ ಬರಮಾಡುವೆನು. ಅದು ಪ್ರಾಚೀನ ಹಾಗೂ ಪ್ರಬಲ ರಾಷ್ಟ್ರ. ಅದರ ಭಾಷೆ ನಿನಗೆ ತಿಳಿಯದು. ಅದು ಆಡುವ ಮಾತು ನಿನಗೆ ಅರ್ಥವಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು. ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಇಗೋ, ಇಸ್ರಾಯೇಲ್ ವಂಶವೇ, ಯೆಹೋವನ ಮಾತನ್ನು ಕೇಳು, ನಾನು ಒಂದು ಜನಾಂಗವನ್ನು ದೂರದಿಂದ ನಿಮ್ಮ ಮೇಲೆ ಬರಮಾಡುವೆನು; ಅದು ತಲತಲಾಂತರಗಳಿಂದ ಸ್ಥಿರವಾದ ಜನಾಂಗ, ಅದರ ಭಾಷೆಯು ನಿನಗೆ ತಿಳಿಯದು, ಅದು ಆಡುವ ಮಾತುಗಳನ್ನು ನೀನು ಗ್ರಹಿಸಲಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಇದು ಯೆಹೋವನ ಮಾತು: “ಇಸ್ರೇಲ್ ಮನೆತನವೇ, ನಿನ್ನ ಮೇಲೆ ಧಾಳಿ ಮಾಡುವುದಕ್ಕೆ ನಾನು ಬಹಳ ದೂರದಿಂದ ಒಂದು ಜನಾಂಗವನ್ನು ತರುತ್ತೇನೆ. ಅದು ಒಂದು ಬಲಿಷ್ಠ ಜನಾಂಗ; ಅದೊಂದು ಪುರಾತನ ಕಾಲದಿಂದ ಬಂದ ಜನಾಂಗ. ಆ ಜನಾಂಗದವರು ಮಾತನಾಡುವ ಭಾಷೆ ನಿನಗೆ ತಿಳಿಯುವದಿಲ್ಲ. ಅವರು ಹೇಳುವುದು ನಿನಗೆ ಅರ್ಥವಾಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಯೆಹೋವ ದೇವರು ಹೀಗೆ ಹೇಳುತ್ತಾರೆ, “ಓ ಇಸ್ರಾಯೇಲ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆ. ಅದು ಬಲವಾದ ಜನಾಂಗವು. ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:15
27 ತಿಳಿವುಗಳ ಹೋಲಿಕೆ  

ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗ, ರಣಹದ್ದು ಹೇಗೆ ದೂರದಿಂದ ಹಾರಿಬರುವುದೊ ಹಾಗೆಯೇ ದೂರದಿಂದ ನಿಮ್ಮ ಮೇಲೆ ಬರುವಂತೆ ಮಾಡುವರು.


ಇಗೋ ಅವರು ರಾಷ್ಟ್ರಗಳಿಗೆ ಅರುಹಿಸುವ ಸಮಾಚಾರ : ಮುತ್ತಿಗೆ ಹಾಕುವವರು ದೂರದೇಶದಿಂದ ಜೆರುಸಲೇಮಿಗೆ ಬರುವರು. ಜುದೇಯದ ಪಟ್ಟಣಗಳಿಗೆ ವಿರುದ್ಧ ಘೋಷಣೆಗಳನ್ನು ಪ್ರಕಟಿಸುವರು.


ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನು, ನೀವು ಗ್ರಹಿಸಲಾಗದ ಅಸ್ಪಷ್ಟ ಮಾತುಗಳನ್ನು ಆಡುವ ಅಹಂಕಾರದ ಜನರನ್ನು ಇನ್ನು ಮೇಲೆ ಕಾಣಲಾರಿರಿ.


ನೀವು ನನಗೆ ಕಿವಿಗೊಡದೆಹೋದರೆ, ಸರ್ವೇಶ್ವರ ಅಪರಿಚಿತವಾದ ಅನ್ಯಭಾಷೆಯನ್ನು ಆಡುವ ಜನರ ಮುಖಾಂತರ ನಿಮಗೆ ಪಾಠಕಲಿಸುವರು.


ದೂರದ ಜನಾಂಗಕ್ಕೆ ಸ್ವಾಮಿ ಧ್ವಜಾರೋಹಣ ಮಾಡುವರು ಗುರುತಾಗಿ, ಕರೆಯುವರವರನು ಜಗದ ಕಟ್ಟಕಡೆಯಿಂದ ಸೀಟಿಹಾಕಿ; ಬರುವರಾಗ ಆ ಜನರು ತ್ವರೆಮಾಡಿ, ವೇಗವಾಗಿ.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು.


ಪವಿತ್ರಗ್ರಂಥದಲ್ಲಿ ಇಂತಿದೆ: ಅನ್ಯಭಾಷೆಯವರ ಮುಖಾಂತರ ಅನ್ಯದೇಶೀಯರ ಬಾಯ ಮುಖಾಂತರ ನಾನೆನ್ನ ಜನರೊಡನೆ ಮಾತಾಡಿದಾಗಲೂ ಎನ್ನ ಮಾತಿಗೆ ಕಿವಿಗೊಡರವರು, ಎಂದರು ಪ್ರಭು.”


ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿಬಿಟ್ಟು, ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ; ಇಸ್ರಯೇಲ್ ವಂಶದವರೇ, ನೀವು ಏಕೆ ಸಾಯಬೇಕು?


ಏಕೆಂದರೆ ಈ ಎಲ್ಲ ಜನಾಂಗದವರು, ಇಸ್ರಯೇಲ್ ವಂಶದವರು ಕೂಡ, ಹೃದಯದಲ್ಲಿ ಸುನ್ನತಿಯಿಲ್ಲದವರು. ಇದು ಸರ್ವೇಶ್ವರನಾದ ನಾನು ಆಡುವ ಮಾತು.”


ಮತ್ತೆ ಸರ್ವೇಶ್ವರ ಸ್ವಾಮಿ, “ಇಗೋ, ಉತ್ತರದಿಂದ ಒಂದು ರಾಷ್ಟ್ರ ಬರುತ್ತಿದೆ. ಅದು ಮಹಾ ಬಲಿಷ್ಠ ರಾಷ್ಟ್ರ. ಜಗದ ಕಟ್ಟಕಡೆಯಿಂದ ಹೊರಟುಬರುತ್ತಿದೆ.


ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ನನಗೆ ಬಹಳವಾಗಿ ದ್ರೋಹವೆಸಗಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.”


ಸರ್ವೇಶ್ವರ ಹೀಗೆನ್ನುತ್ತಾರೆ : “ಕಳ್ಳನು ಸಿಕ್ಕಿಬಿದ್ದು ಹೇಗೆ ನಾಚಿಕೆಪಡುತ್ತಾನೋ ಹಾಗೆಯೆ, ಎಲೈ ಇಸ್ರಯೇಲ್ ಜನರೇ, ನೀವು ನಾಚಿಕೆಪಡುವಿರಿ. ಮರಕ್ಕೆ, ‘ನೀನು, ನನ್ನ ತಂದೆ’ ಎಂತಲೂ ಕಲ್ಲಿಗೆ, ‘ನೀನು ಹೆತ್ತ ತಾಯಿ’ ಎಂತಲೂ ಹೇಳುತ್ತೀರಿ. ನಿಮ್ಮ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು ಎಲ್ಲರು ಮಾನಭಂಗಕ್ಕೆ ಈಡಾಗುವರು.


ಗುಡುಗು, ಭೂಕಂಪ, ಮಹಾಗರ್ಜನೆ, ಬಿರುಗಾಳಿ, ಚಂಡಮಾರುತ, ಭಸ್ಮಮಾಡುವಂಥ ಅಗ್ನಿಜ್ವಾಲೆ - ಇವುಗಳ ಮೂಲಕ ಸರ್ವೇಶ್ವರ ನಿನ್ನ ಪರವಾಗಿ ಪ್ರತ್ಯಕ್ಷವಾಗುವರು.


ನಾನು ನಿನ್ನ ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೊತ್ತಲ ಕಟ್ಟುವೆನು. ದಿಬ್ಬವನ್ನೆಬ್ಬಿಸಿ ನಿನ್ನನ್ನು ಮುತ್ತುವೆನು.


ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ !


ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು. ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.


ನಾವು ಹೋಗಿ ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿಗೊಳಿಸೋಣ,” ಎಂದರು.


ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ನಾಡಿನ ಬೆಳೆಯನ್ನೂ ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ನಿರಂತರ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗುವಿರಿ.


ಈಜಿಪ್ಟರಿಗೆದುರಾಗಿ ತೆರಳಿದಂದು I ಜೋಸೆಪ್ಯರಿಗಾತ ವಿಧಿಸಿದಾಜ್ಞೆಯದು II


ಆಗ ಪ್ರವಾದಿ ಯೆಶಾಯನು ಹಿಜ್ಕೀಯನ ಬಳಿಗೆ ಬಂದು, “ಆ ದೂತರು ಎಲ್ಲಿಯವರು? ಏನು ಕೇಳಿದರು?” ಎಂದನು. ಅದಕ್ಕೆ ಹಿಜ್ಕೀಯನು, “ಅವರು ಬಹುದೂರದ ನಾಡಾದ ಬಾಬಿಲೋನಿಯದಿಂದ ಬಂದವರು,” ಎಂದು ಉತ್ತರಕೊಟ್ಟನು.


ಅವರು ಅಂಗದೋಷವಿಲ್ಲದವರಾಗಿರಬೇಕು. ಸುಂದರರು, ಸಮಸ್ತ ಶಾಸ್ತ್ರಜ್ಞರು, ಪಂಡಿತರು, ವಿದ್ಯಾನಿಪುಣರು, ರಾಜಾಲಯದಲ್ಲಿ ಸನ್ನಿಧಿಸೇವೆಮಾಡಲು ಸಮರ್ಥರೂ ಆಗಿರಬೇಕು. ಅವರಿಗೆ ಬಾಬಿಲೋನ್ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿಸಬೇಕು,” ಎಂದು ಅಪ್ಪಣೆಕೊಟ್ಟನು.


ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ: “ಎತ್ತಿಕಟ್ಟುವೆನು ನಿಮಗೆ ವಿರುದ್ಧವಾಗಿ ಜನಾಂಗವೊಂದನ್ನು; ಸದೆಬಡಿವುದದು ನಿಮ್ಮನ್ನು ಹಮಾತಿನ ದಾರಿಯಿಂದ ಅರಬಾ ತೊರೆಯ ತನಕ.”


ಇದಕೇಳಿ ನಡುನಡುಗಿತು ನನ್ನ ಒಡಲು ಅದುರಿದವು ಆ ಶಬ್ದಕ್ಕೆ ನನ್ನ ತುಟಿಗಳು ಕೊಳೆತಂತಾದವು ನನ್ನೆಲುಬುಗಳು ನಿಂತಲ್ಲೇ ತತ್ತರಿಸಿದವು ನನ್ನ ಕಾಲುಗಳು ಆಪತ್ತು ಬಂದೊದಗುವುದು ನಮ್ಮನ್ನು ಆಕ್ರಮಿಸುವವರಿಗೆ ಕಾದಿರುವೆ ನಾನು ಸಹನಶೀಲನಾಗಿ ಅಂದಿನವರೆಗೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು