Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:13 - ಕನ್ನಡ ಸತ್ಯವೇದವು C.L. Bible (BSI)

13 ಪ್ರವಾದಿಗಳು ಆಡುವುದೆಲ್ಲ ಬರೀ ಗಾಳಿಮಾತುಗಳು. ದೈವೋಕ್ತಿಯೆಂಬುದು ಅವುಗಳಲ್ಲಿ ಇಲ್ಲ. ಅವರಿಗೇ ತಗಲಲಿ ಅವರು ಹೇಳುವುದೆಲ್ಲ,” ಎಂದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಪ್ರವಾದಿಗಳು ಬರೀ ಗಾಳಿಯೇ, ದೈವೋಕ್ತಿಯು ಅವರಲ್ಲಿಲ್ಲ; ಅವರಿಗೆ ಹೀಗೆಯೇ ಆಗಲಿ’” ಅಂದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಪ್ರವಾದಿಗಳು ಬರೀ ಗಾಳಿಯೇ, ದೈವೋಕ್ತಿಯು ಅವರಲ್ಲಿಲ್ಲ; ಅವರಿಗೇ ಹೀಗಾಗಲಿ ಅಂದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆ ಸುಳ್ಳುಪ್ರವಾದಿಗಳು ಹೇಳಿದ್ದು ಕೇವಲ ಗಾಳಿಯ ಮಾತು. ದೈವೋಕ್ತಿಯು ಅವರಲ್ಲಿಲ್ಲ, ಅವರಿಗೆ ಕೇಡಾಗುವದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಪ್ರವಾದಿಗಳು ಆಡುವುದೆಲ್ಲಾ ಬರೀ ಗಾಳಿ ಮಾತುಗಳು, ದೈವೋಕ್ತಿ ಎಂಬುದು ಅವುಗಳಲ್ಲಿ ಇಲ್ಲ, ಅವರು ಹೇಳುವುದೆಲ್ಲಾ ಅವರಿಗೇ ತಗಲಲಿ,” ಎಂದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:13
13 ತಿಳಿವುಗಳ ಹೋಲಿಕೆ  

ಆದುದರಿಂದ ನನ್ನ ಅಪ್ಪಣೆಯಿಲ್ಲದೆ, ನನ್ನ ಹೆಸರೆತ್ತಿ, ಪ್ರವಾದನೆ ಮಾಡುತ್ತಾ ಖಡ್ಗವಾಗಲಿ, ಕ್ಷಾಮವಾಗಲಿ ಈ ನಾಡಿಗೆ ಬರುವುದಿಲ್ಲ ಎಂದು ಬೋಧಿಸುತ್ತಿದ್ದಾರಲ್ಲವೆ? ಆ ಪ್ರವಾದಿಗಳ ವಿಷಯದಲ್ಲಿ ಸರ್ವೇಶ್ವರನಾದ ನಾನು ಹೇಳುವುದೇನೆಂದರೆ - ಖಡ್ಗದಿಂದಲೆ, ಕ್ಷಾಮದಿಂದಲೆ ಆ ಪ್ರವಾದಿಗಳು ನಾಶವಾಗುವರು.


ಆಗ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ಈ ಜನರಿಗೆ, ‘ಖಡ್ಗ ನಿಮ್ಮ ಕಣ್ಣಿಗೂ ಕಾಣಿಸದು, ಕ್ಷಾಮ ನಿಮಗೆಂದಿಗೂ ಬಂದೊದಗದು. ಸರ್ವೇಶ್ವರ ಈ ನಾಡಿನಲ್ಲೆ ನಿಮಗೆ ಚಿರಶಾಂತಿ ಸಮಾಧಾನವನ್ನು ಕೊಡುವರು’ ಎಂದು ಪ್ರವಾದಿಗಳೇ ನುಡಿಯುತ್ತಿದ್ದಾರೆ,” ಎಂದು ಹೇಳಿದೆನು.


“ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವೆ? ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ?


ಇಗೋ, ದಂಡನೆಯ ದಿನಗಳು ಸಮೀಪಿಸಿವೆ; ಮುಯ್ಯಿ ತೀರಿಸುವ ದಿನಗಳು ಬಂದಿವೆ. ಇಸ್ರಯೇಲರಿಗೆ ಇದು ತಿಳಿದಿರಲಿ. “ಪ್ರವಾದಿಯು ಹುಚ್ಚನು; ದೇವರಾತ್ಮಪ್ರೇರಿತನು ಮೂರ್ಖನು,” ಎಂದು ಹೇಳಿಕೊಳ್ಳುತ್ತೀರಿ. ಅತ್ಯಧಿಕವಾಗಿರುವ ನಿಮ್ಮ ಅಧರ್ಮ, ಮಿತಿಮೀರಿರುವ ನಿಮ್ಮ ದ್ವೇಷ ಇದಕ್ಕೆ ಕಾರಣ.


ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ಬಾಬಿಲೋನಿಗೆ ಕೊಂಡು ಒಯ್ದ ಸರ್ವೇಶ್ವರನ ಆಲಯದ ಸಕಲ ಉಪಕರಣಗಳನ್ನು ಎರಡು ವರ್ಷಗಳೊಳಗಾಗಿ ನಾನು ಪುನಃ ಈ ಸ್ಥಳಕ್ಕೆ ಸೇರಿಸುವೆನು.


ಆಗ ಜನರು, “ಬನ್ನಿ, ಈ ಯೆರೆಮೀಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.


ಕೇವಲ ಮಾತುಗಳಿಂದ ಖಂಡಿಸಬೇಕೆಂದಿರುವಿರೊ? ದೆಸೆಗೆಟ್ಟವನ ಮಾತು ಗಾಳಿಪಾಲಾಗತಕ್ಕದಲ್ಲವೊ?


ಆದರೂ ಅವರು ದೇವಸಂದೇಶಕರನ್ನು ಗೇಲಿಮಾಡಿದರು. ದೇವರ ಮಾತುಗಳನ್ನು ತುಚ್ಛೀಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು. ಆದ್ದರಿಂದ ದೇವಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು. ಅದರ ತಾಪ ಆರಿಹೋಗಲೇ ಇಲ್ಲ.


ಗಾಳಿಯಿದೆ, ಮೋಡವಿದೆ, ಆದರೆ ಮಳೆಯಿಲ್ಲ; ಕೊಡದೆಯೆ ತಾನೊಬ್ಬ ದಾನಿಯೆಂದು ಕೊಚ್ಚಿಕೊಳ್ಳುವವನೂ ಹಾಗೆಯೆ.


ನಿಶ್ಚಯವಾಗಿ ಆ ದೇವತೆಗಳೆಲ್ಲ ಕ್ಷುದ್ರರೇ‍ ಅವರ ಕಾರ್ಯಗಳೆಲ್ಲ ಶೂನ್ಯವೇ ಆ ಎರಕದ ಬೊಂಬೆಗಳೆಲ್ಲಾ ಬರಿ ಗಾಳಿಯೆ !


ನಿನ್ನನ್ನು ಅಟ್ಟಿ ಮೇಯಿಸುವ ಕುರುಬರನ್ನು ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಮಿಂಡರನ್ನು ಸೆರೆಹಿಡಿದುಕೊಂಡು ಹೋಗುವರು. ಆಗ ಖಂಡಿತವಾಗಿ ನೀನು ಆಶಾಭಂಗಪಡುವೆ ನಿನ್ನ ದುಷ್ಕೃತ್ಯಗಳ ನಿಮಿತ್ತ ಅವಮಾನಕ್ಕೀಡಾಗುವೆ.


ಅದಾದ ಮೇಲೆ ಹೋಷಾಯನ ಮಗ ಅಜರ್ಯನು, ಕಾರೇಹನ ಮಗ ಯೋಹಾನಾನನು, ಹಾಗು ಅಹಂಕಾರಿಗಳಾದ ಜನರೆಲ್ಲರು ಅವನಿಗೆ, “ನಿನ್ನ ಮಾತು ಸುಳ್ಳು, ಈಜಿಪ್ಟಿಗೆ ಹೋಗಿ ವಾಸಮಾಡಬಾರದು ಎಂದು ತಿಳಿಸುವಂತೆ ನಮ್ಮ ದೇವರಾದ ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು