Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:12 - ಕನ್ನಡ ಸತ್ಯವೇದವು C.L. Bible (BSI)

12 ಆ ಜನರು ಸರ್ವೇಶ್ವರ ಸ್ವಾಮಿಯನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವರು ಯೆಹೋವನನ್ನು ಅಲ್ಲಗಳೆದು, ‘ಆತನು ಏನು ಮಾಡುವನು? ನಮಗೆ ಕೇಡುಬಾರದು, ಖಡ್ಗವೂ, ಕ್ಷಾಮವೂ ನಮ್ಮ ಕಣ್ಣಿಗೆ ಬೀಳವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವರು ಯೆಹೋವನನ್ನು ಅಲ್ಲಗಳೆದು - ಆತನು ಏನು ಮಾಡಿಯಾನು? ನಮಗೆ ಕೇಡುಬಾರದು, ಖಡ್ಗವೂ ಕ್ಷಾಮವೂ ನಮ್ಮ ಕಣ್ಣಿಗೆ ಬೀಳವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಆ ಜನರು ಯೆಹೋವನ ಬಗ್ಗೆ ಸುಳ್ಳು ಹೇಳಿದ್ದಾರೆ. ‘ಯೆಹೋವನು ನಮಗೇನೂ ಮಾಡುವುದಿಲ್ಲ. ನಮಗೆ ಕೆಟ್ಟದ್ದೇನೂ ಆಗುವದಿಲ್ಲ. ಯಾವ ಸೈನ್ಯವೂ ನಮ್ಮ ಮೇಲೆ ಧಾಳಿ ಮಾಡುವುದಿಲ್ಲ; ನಾವೆಂದೂ ಉಪವಾಸಬೀಳುವದಿಲ್ಲ’ ಎಂದು ಅವರು ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆ ಜನರು ಯೆಹೋವ ದೇವರನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:12
25 ತಿಳಿವುಗಳ ಹೋಲಿಕೆ  

ಆದರೂ ಅವರು ದೇವಸಂದೇಶಕರನ್ನು ಗೇಲಿಮಾಡಿದರು. ದೇವರ ಮಾತುಗಳನ್ನು ತುಚ್ಛೀಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು. ಆದ್ದರಿಂದ ದೇವಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು. ಅದರ ತಾಪ ಆರಿಹೋಗಲೇ ಇಲ್ಲ.


ಬಂಡಿ ಹೋಗುವ ದಾರಿಯನ್ನು ಗಮನಿಸಿರಿ. ಅದು ತಾನಾಗಿ ಸ್ವದೇಶದ ದಾರಿಹಿಡಿದು ಬೇತ್‍ಷೆಮೆಷಿನ ಕಡೆಗೆ ಹೋದರೆ ಈಗ ಬಂದಿರುವ ಕೇಡನ್ನು ಕಳುಹಿಸಿದವನು ಆ ಸರ್ವೇಶ್ವರನೇ ಎಂದು ತಿಳಿಯಿರಿ. ಬಂಡಿ ಆ ಮಾರ್ಗವನ್ನು ಹಿಡಿಯದಿದ್ದರೆ ಆ ಸರ್ವೇಶ್ವರನ ಹಸ್ತ ನಮ್ಮನ್ನು ಮುಟ್ಟಲಿಲ್ಲ, ಈ ಕೇಡು ಆಕಸ್ಮಿಕವಾಗಿ ಬಂದಿದೆ ಎಂದು ತಿಳಿದುಕೊಳ್ಳಿ,” ಎಂದು ಹೇಳಿದರು.


ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರು ತನ್ನೊಳಗೆ, ‘ನಾನು ಹಟಹಿಡಿದು ಅವಿಧೇಯನಾದರೂ ನನಗೆ ಕ್ಷೇ‍ಮವಾಗಿಯೇ ಇರುವುದು’ ಎಂದುಕೊಂಡು ಹಿಗ್ಗಬಾರದು. ಹಾಗೆ ಮಾಡುವವನು ದೋಷಿಗಳಿಗೂ ನಿರ್ದೋಷಿಗಳಿಗೂ ನಾಶವನ್ನುಂಟು ಮಾಡುವನು.


ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ.


ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶಮಾಡುತ್ತಾರೆ. ಆದರೂ ಸರ್ವೆಶ್ವರಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ.


“ಗಾಳಿಮಾತಿನಿಂದ ಮೋಸಮಾಡುವಂಥ ಸುಳ್ಳುಗಾರನೊಬ್ಬನು: ‘ದ್ರಾಕ್ಷಾರಸ, ಮದ್ಯಪಾನಗಳ ಕುರಿತು ಪ್ರವಾದನೆ ಮಾಡುತ್ತೇನೆ, ಎಂದು ಹೇಳಿದರೆ ಅಂಥವನೇ ಈ ಜನರಿಗೆ ಸರಿಯಾದ ಪ್ರವಾದಿ ಎನಿಸಿಕೊಳ್ಳುವನು.


ಸರ್ವೇಶ್ವರ ಇಂತೆನ್ನುತ್ತಾರೆಂದು ನುಡಿ: ಅಂಥವರಿಗೆ ಆದ ದರ್ಶನ ಮಿಥ್ಯ; ಕೇಳಿಸಿದ ವಾಣಿ ಸುಳ್ಳು; ಸರ್ವೇಶ್ವರ ಅವರನ್ನು ಕಳುಹಿಸಲಿಲ್ಲ. ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.


ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಬಾಬಿಲೋನಿಗೆ ಸೆರೆಹೋದ ಎಲ್ಲ ಯೆಹೂದ್ಯರನ್ನು ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನ ನುಡಿ.”


ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”


ಆಗ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನೀವು ನಿಶ್ಚಯವಾಗಿಯೂ ಈ ಜನರನ್ನು ಹಾಗೂ ಜೆರುಸಲೇಮಿನವರನ್ನು ಮೋಸಗೊಳಿಸಿದ್ದೀರಿ. ‘ನಿಮಗೆ ಸಮಾಧಾನವಾಗುವುದು’ ಎಂದು ಅವರಿಗೆ ಹೇಳಿದಿರಿ, ಆದರೆ ಕತ್ತಿ ಅವರ ಕುತ್ತಿಗೆಗೆ ಬಂದಿದೆ” ಎಂದೆನು.


ನೆನೆವನು ಮನದೊಳು ದುರುಳನಿಂತು: I “ಯಾರಿಗೂ ನನ್ನ ಕದಲಿಸಲಾಗದು I ಬಾರದು ನನಗೆಂದಿಗು ಆಪತ್ತು” II


ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.


ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.


ಯೆರೆಮೀಯನು ಜನರೆಲ್ಲರನ್ನು ಸಂಬೋಧಿಸಿ ದೇವರಾದ ಸರ್ವೇಶ್ವರ ತನ್ನ ಮುಖಾಂತರ ಅವರಿಗೆ ಹೇಳಿಕಳುಹಿಸಿದ ಮಾತುಗಳನ್ನೆಲ್ಲ ತಿಳಿಸಿದನು.


“ದೇವನಿಲ್ಲ” ಎನ್ನುವವರು ಮನದಲಿ ದುರ್ಮತಿಗಳು I ಹೇಯ ಕೃತ್ಯವೆಸಗುವರು ಆ ಭ್ರಷ್ಟಚಾರಿಗಳು I ಒಳಿತನ್ನು ಮಾಡುವರಾರೂ ಇಲ್ಲ ಅವರೊಳು II


ಅವರು - ‘ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿ, ಕಾಡುಮೇಡು, ಹಳ್ಳಕೊಳ್ಳ, ಕಗ್ಗತ್ತಲು, ನಿರ್ಜಲ, ನಿರ್ಜನ ಹಾಗೂ ಯಾರೂ ಹಾದುಹೋಗದ ಬೆಂಗಾಡಿನ ಮಾರ್ಗವಾಗಿ ನಡೆಸಿಬಂದ ಆ ಸರ್ವೇಶ್ವರ ಎಲ್ಲಿ?’ ಎಂದುಕೊಳ್ಳಲಿಲ್ಲವೆ?


ಅವರು, ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಕೇವಲ ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು