Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:11 - ಕನ್ನಡ ಸತ್ಯವೇದವು C.L. Bible (BSI)

11 ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ನನಗೆ ಬಹಳವಾಗಿ ದ್ರೋಹವೆಸಗಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇಸ್ರಾಯೇಲ್ ವಂಶದವರೂ, ಯೆಹೂದ ವಂಶದವರೂ ನನಗೆ ಕೇವಲ ದ್ರೋಹವನ್ನು ಮಾಡಿರುತ್ತಾರೆ ಎಂದು ಯೆಹೋವನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇಸ್ರಾಯೇಲ್ ವಂಶದವರೂ ಯೆಹೂದ ವಂಶದವರೂ ನನಗೆ ಕೇವಲ ದ್ರೋಹವನ್ನು ಮಾಡಿರುತ್ತಾರೆ ಎಂದು ಯೆಹೋವನು ಅನ್ನುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಇಸ್ರೇಲ್ ಜನರೂ ಯೆಹೂದದ ಜನರೂ ನನಗೆ ಎಲ್ಲಾ ವಿಧದಲ್ಲಿ ದ್ರೋಹವನ್ನು ಮಾಡಿರುವರು” ಎಂದು ಯೆಹೋವನು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇಸ್ರಾಯೇಲನ ಮನೆತನದವರೂ, ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾರೆ, ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:11
9 ತಿಳಿವುಗಳ ಹೋಲಿಕೆ  

“ಆದರೆ ಓ ಇಸ್ರಯೇಲ್ ವಂಶಜರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹಮಾಡಿರುವುದು ನಿಶ್ಚಯ. ಇದು ಸರ್ವೇಶ್ವರನಾದ ನನ್ನ ನುಡಿ.”


ಹೌದು, ಹೌದು ನೀ ಕೇಳಿಲ್ಲ, ತಿಳಿದೂ ಇಲ್ಲ ಅದಿಯಿಂದ ನಿನ್ನ ಕಿವಿ ತೆರೆದೂ ಇಲ್ಲ ನೀನು ಆಗರ್ಭ ದ್ರೋಹಿ, ಮಹಾ ಕುಟಿಲ ಎಂಬುದು ನನಗೆ ತಿಳಿದು ಇದೆಯಲ್ಲ !


“ಆದಾಮನಂತೆ ಅವರು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದಾರೆ. ಅವನಂತೆ ಅವರು ನನಗೆ ದ್ರೋಹವೆಸಗಿದ್ದಾರೆ.


ಅವರು ವ್ಯಭಿಚಾರದಿಂದ ಸರ್ವೇಶ್ವರಸ್ವಾಮಿಗೆ ದ್ರೋಹವೆಸಗಿದ್ದಾರೆ. ಅವರ ಮಕ್ಕಳು ಆ ಸ್ವಾಮಿಯ ಮಕ್ಕಳಲ್ಲ; ಮುಂದಿನ ಅಮಾವಾಸ್ಯೆಯೊಳಗಾಗಿ ಅವರು ನಾಶವಾಗುವರು. ಅವರ ಸ್ವತ್ತೆಲ್ಲಾ ಅಳಿದುಹೋಗುವುದು.


ಜಗದ ಕಟ್ಟಕಡೆಯಿಂದ ಕೇಳಿಬರುತಿದೆ, ‘ಸತ್ಯಸ್ವರೂಪನಿಗೆ ಸ್ತೋತ್ರ’ ಎಂಬ ಗೀತೆ. ಆದರೆ ನಶಿಸಿಹೋಗುತ್ತಿರುವೆನು ನಾನು, ಹೌದು, ನಶಿಸಿ ನಾಶವಾಗುತ್ತಿರುವೆನು, ಏನೆಂದು ಹೇಳಲಿ ನನ್ನ ಗತಿಯನು. ಇದೋ, ಬಾಧಿಸುತ್ತಿಹರು ದ್ರೋಹಿಗಳು, ದ್ರೋಹದ ಮೇಲೆ ದ್ರೋಹವೆಸಗುತಿಹರು.


ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.


ಅಕಟಾ, ದಾರಿಗರು ತಂಗುವ ಗುಡಿಸಲೊಂದು ಕಾಡಿನಲ್ಲಿ ಸಿಗಬಾರದೆ ! ಆಗ ಜನರನ್ನು ತ್ಯಜಿಸಿಬಿಟ್ಟು ನಾನಲ್ಲಿಗೆ ತೆರಳುತ್ತಿದ್ದೆ ! ಅವರೆಲ್ಲರು ವ್ಯಭಿಚಾರಿಗಳು, ದ್ರೋಹಿಗಳ ಗುಂಪೇ ಅಲ್ಲವೆ?


ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ. ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ : ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು