Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 49:36 - ಕನ್ನಡ ಸತ್ಯವೇದವು C.L. Bible (BSI)

36 ನಾಲ್ಕು ದಿಕ್ಕುಗಳಿಂದಲೂ ನಾಲ್ಕು ಗಾಳಿಗಳನ್ನು ಏಲಾಮ್ಯರ ಮೇಲೆ ಬರಮಾಡಿ ಅವರನ್ನು ಆಯಾ ಗಾಳಿಗೆ ತೂರಿಬಿಡುವೆನು. ಏಲಾಮಿನಿಂದ ದೇಶಭ್ರಷ್ಟರಾದವರು ಆಶ್ರಯ ಹುಡುಕದ ರಾಜ್ಯವೇ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ನಾನು ನಾಲ್ಕು ದಿಕ್ಕುಗಳಿಂದಲೂ ನಾಲ್ಕು ಗಾಳಿಗಳನ್ನು ಏಲಾಮ್ಯರ ಮೇಲೆ ಬರಮಾಡಿ, ಅವರನ್ನು ಆಯಾ ಗಾಳಿಗಳಿಗೆ ತೂರಿಬಿಡುವೆನು; ಏಲಾಮು ದೇಶಭ್ರಷ್ಟರಾದವರನ್ನು ಸೇರದೆ ಇರುವ ರಾಜ್ಯವೇ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ನಾನು ನಾಲ್ಕು ದಿಕ್ಕುಗಳಿಂದಲೂ ನಾಲ್ಕು ಗಾಳಿಗಳನ್ನು ಏಲಾಮ್ಯರ ಮೇಲೆ ಬರಮಾಡಿ ಅವರನ್ನು ಆಯಾ ಗಾಳಿಗಳಿಗೆ ತೂರಿಬಿಡುವೆನು; ಏಲಾಮು ದೇಶಭ್ರಷ್ಟರು ಸೇರದೆ ಇರುವ ರಾಜ್ಯವೇ ಇರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ನಾನು ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು ಆಕಾಶದ ನಾಲ್ಕು ಮೂಲೆಗಳಿಂದ ಬರಮಾಡುವೆನು. ಆ ನಾಲ್ಕು ಗಾಳಿಗಳು ಬೀಸುವ ಎಲ್ಲಾ ಕಡೆಗಳಲ್ಲಿಯೂ ಏಲಾಮ್ಯರನ್ನು ಚದುರಿಸುವೆನು. ಏಲಾಮಿನ ಸೆರೆಯಾಳುಗಳು ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಸಿಕ್ಕುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಆಕಾಶದ ನಾಲ್ಕು ದಿಕ್ಕುಗಳಿಂದ ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು ತಂದು, ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿನಿಂದ ಓಡಿಸಲಾದವರು ಸೇರದ ಜನಾಂಗವು ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 49:36
18 ತಿಳಿವುಗಳ ಹೋಲಿಕೆ  

ಅವರ ಒಂಟೆಗಳು ಕೊಳ್ಳೆಯಾಗುವುವು. ಅವರ ಲೆಕ್ಕವಿಲ್ಲದ ದನಕುರಿಗಳು ಸೂರೆಹೋಗುವುವು. ಮುಂದಲೆಗೂದಲು ಕತ್ತರಿಸಿಕೊಳ್ಳುವ ಆ ಜನರನ್ನು ಎಲ್ಲ ಕಡೆಯ ಗಾಳಿಗೂ ತೂರುವೆನು. ಎಲ್ಲ ಕಡೆಯಿಂದಲೂ ವಿಪತ್ತನ್ನು ಅವರ ಮೇಲೆ ಬರಮಾಡುವೆನು.


ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ; ನಾಲ್ಕುಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿದ್ದರು. ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ, ಮರಗಳ ಮೇಲಾಗಲಿ ಗಾಳಿಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ಅವರು ತಡೆಹಿಡಿದಿದ್ದರು.


“ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ಇಸ್ರಯೇಲರನ್ನು ಸಕಲ ಜನಾಂಗಗಳೊಡನೆ ಸೇರಿಸಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಹೀಗೆ ಕಾಳನ್ನೂ ಜೊಳ್ಳನ್ನೂ ಬೇರ್ಪಡಿಸುವೆನು.


ಆ ಹೋತಕ್ಕೆ ಅತ್ಯಧಿಕ ಹುಮ್ಮಸ್ಸು ಬಂದಿತು. ಆದರೆ ಅದು ಪ್ರಾಬಲ್ಯಕ್ಕೆ ಬರುವಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಪ್ರಸಿದ್ಧ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೂ ಚಾಚಿಕೊಂಡವು.


ನಿನ್ನಲ್ಲಿ ತಂದೆಗಳು ಮಕ್ಕಳನ್ನು, ಮಕ್ಕಳು ತಂದೆಗಳನ್ನು ತಿನ್ನುವರು; ನಾನು ನಿನ್ನನ್ನು ದಂಡಿಸಿ ನಿನ್ನಲ್ಲಿ ಉಳಿದ ಸಮಸ್ತರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು.’


‘ಇಗೋ, ಸಿಯೋನ್ ಯಾರಿಗೂ ಬೇಡವಾದವಳು, ಭ್ರಷ್ಟಳಾದಳು’ ಎಂದು ಜನರು ನಿನ್ನನ್ನು ಜರೆವುದು ನನಗೆ ಹಿಡಿಸದು ನಿನ್ನನ್ನು ಗುಣಪಡಿಸುವೆನು ನಿನ್ನ ಗಾಯಗಳನ್ನು ವಾಸಿಮಾಡುವೆನು - ಇದು ಸರ್ವೇಶ್ವರನಾದ ನನ್ನ ನುಡಿ.


ಆದರೆ ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯ ಒಡೆದು ನಾಲ್ಕು ದಿಕ್ಕುಗಳಿಗೂ ಸೀಳಿಹೋಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ಪ್ರಬಲವಾಗಿ ಇದ್ದಂತೆ ಅದು ಇನ್ನು ಪ್ರಬಲವಾಗದು.


ಆ ಕೊಂಬು ಮುರಿದುಹೋದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದಂತೆಯೆ ಆ ಜನಾಂಗದಿಂದ ನಾಲ್ಕು ರಾಜ್ಯಗಳು ಏಳುವುವು. ಆದರೆ ಮೊದಲನೇ ರಾಜನಿಗೆ ಇದ್ದಷ್ಟು ಶಕ್ತಿ ಅವುಗಳಿಗೆ ಇರುವುದಿಲ್ಲ.


ನಿನ್ನಲ್ಲಿನ ಮೂರನೆಯ ಒಂದು ಭಾಗದ ಜನರು ವ್ಯಾಧಿಯಿಂದ ಸಾಯುವರು, ನಿನ್ನ ಮಧ್ಯದಲ್ಲೆ ಕ್ಷಾಮದಿಂದ ನಾಶವಾಗುವರು; ಇನ್ನೊಂದು ಭಾಗದವರು ನಿನ್ನ ಸುತ್ತಲು ಖಡ್ಗದಿಂದ ಹತರಾಗುವರು; ಮತ್ತೊಂದು ಭಾಗದವರನ್ನು ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.


ಇಸ್ರಯೇಲಿನ ಸೆರೆಹೋದ ಜನರನ್ನು ಬರಮಾಡಿಕೊಳ್ಳುವ ದೇವರಾದ ಸರ್ವೇಶ್ವರ, “ನಾನು ಕೂಡಿಸಿಕೊಂಡ ಇಸ್ರಯೇಲ ಜನರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು” ಎಂದಿದ್ದಾರೆ.


ಆ ದಿನ ಬಂದಾಗ, ಮಹಾ ತುತೂರಿಯೊಂದನ್ನು ಊದಲಾಗುವುದು. ಗಡೀಪಾರಾಗಿ ಚದುರಿಹೋಗಿರುವ ಇಸ್ರಯೇಲರನ್ನು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ಕರೆಯಲಾಗುವುದು. ಅವರೆಲ್ಲರೂ ಜೆರುಸಲೇಮಿಗೆ ಬಂದು ಪವಿತ್ರಪರ್ವತದ ಮೇಲೆ ಸರ್ವೇಶ್ವರ ಸ್ವಾಮಿಗೆ ಅಡ್ಡಬೀಳುವರು, ಆರಾಧನೆಮಾಡುವರು.


ಇಸ್ರಯೇಲರಲ್ಲಿ ಸೆರೆಹೋದವರನ್ನು, ಜುದೇಯದಿಂದ ಚದರಿಹೋದವರನ್ನು ಕರೆತರಲು, ಧರೆಯ ಚತುರ್ದಿಕ್ಕುಗಳಿಂದವರನ್ನು ಬರಮಾಡಲು, ರಾಷ್ಟ್ರಗಳಿಗೆ ಗುರುತಾಗಿ ಧ್ವಜವನ್ನು ಆತ ಏರಿಸುವನು.


ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು I ಬಂದು ಸೇರಿಸುತಿಹನು ಚದರಿದ ಇಸ್ರಯೇಲರನು II


“ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲ ಜನಾಂಗಗಳಲ್ಲಿಯೂ ಸರ್ವೇಶ್ವರ ನಿಮ್ಮನ್ನು ಚದುರಿಸುವರು; ಅಲ್ಲಿ ನಿಮಗಾಗಲಿ ನಿಮ್ಮ ಪಿತೃಗಳಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.


ಶತ್ರುಗಳಿಂದ ನೀವುಪರಾಜಯವನ್ನು ಹೊಂದುವಂತೆ ಸರ್ವೇಶ್ವರ ಮಾಡುವರು; ನೀವು ಒಂದೇ ದಾರಿಯಿಂದ ಅವರ ಮೇಲೆ ದಾಳಿಮಾಡಲು ಹೋಗಿ ಏಳು ದಾರಿ ಹಿಡಿದು ಓಡಿಹೋಗುವಿರಿ. ಜಗದ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವುವು.


ಅದಕ್ಕೆ ದೂತನು, “ಇವು ಆಕಾಶದ ನಾಲ್ಕು ಮಾರುತಗಳು; ಭೂಲೋಕದೊಡೆಯನ ಸಾನ್ನಿಧ್ಯದಿಂದ ಇದೀಗಲೆ ಹೊರಟುಬಂದಿವೆ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು