Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:9 - ಕನ್ನಡ ಸತ್ಯವೇದವು C.L. Bible (BSI)

9 ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಲಿ ಅದರ ನಗರಗಳು ಹಾಳುಬಿದ್ದು ನಿರ್ಜನವಾಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಬೇಕಲ್ಲಾ; ಅದರ ಪಟ್ಟಣಗಳು ಹಾಳುಬಿದ್ದು ನಿರ್ಜನವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಬೇಕಲ್ಲಾ; ಅದರ ಪಟ್ಟಣಗಳು ಹಾಳುಬಿದ್ದು ನಿರ್ಜನವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಮೋವಾಬಿನ ಭೂಮಿಯ ಮೇಲೆ ಉಪ್ಪನ್ನು ಹರಡಿರಿ. ದೇಶವು ಬರಿದಾದ ಮರುಭೂಮಿಯಾಗುವುದು. ಮೋವಾಬಿನ ಪಟ್ಟಣಗಳು ಬರಿದಾಗುವವು. ಅಲ್ಲಿ ಯಾರೂ ವಾಸಮಾಡಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಏಕೆಂದರೆ ಅದರ ಪಟ್ಟಣಗಳು ಹಾಳಾಗುವುವು; ಅವುಗಳಲ್ಲಿ ನಿವಾಸಿಗಳಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:9
8 ತಿಳಿವುಗಳ ಹೋಲಿಕೆ  

“ಮೋವಾಬ್ಯರೇ, ನಗರಗಳನ್ನು ಬಿಟ್ಟು ಹೋಗಿ ಬಂಡೆಗಳ ಗುಹೆಯಲ್ಲಿ ವಾಸಮಾಡಿ. ಹಳ್ಳಕೊಳ್ಳಗಳ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಜೀವಿಸಿರಿ.


ಮೋವಾಬಿನ ಮಹಿಳೆಯರು ಅರ್ನೊನ್ ನದಿಯ ಹಾಯ್ಗಡಗಳಲಿ, ಅಲೆಯುತಿಹರು ಗೂಡಿಂದ ಹೊರದೂಡಲಾದ ಹಕ್ಕಿಮರಿಗಳ ಪರಿ.


ನಾನು ಆಶ್ರಯಿಸಿಕೊಂಡಿರಲು ಪ್ರಭುವನು I ನೀವು ಹೇಳುವುದೆಂತು ನನಗೀ ಮಾತನು: II


ಆಗ ಆ ಮಹಿಳೆ ಅರಣ್ಯದಲ್ಲಿರುವ ತನ್ನ ಸ್ಥಳಕ್ಕೆ ಹಾರಿಹೋಗುವಂತೆ ದೊಡ್ಡ ಗರುಡಪಕ್ಷಿಗಿರುವಂಥ ಎರಡು ರೆಕ್ಕೆಗಳನ್ನು ಆಕೆಗೆ ಕೊಡಲಾಯಿತು. ಅಲ್ಲಿ ಘಟಸರ್ಪದ ಕಣ್ಣಿಗೆ ಬೀಳದೆ ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುವಂತಾಯಿತು.


ಇಸ್ರಯೇಲಿನ ಜೀವಂತ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಶ್ಚಯವಾಗಿ ಹೇಳುತ್ತೇನೆ - ಸೊದೋಮಿನ ಗತಿಯೇ ಮೋವಾಬಿನ ಗತಿ ಆಗುವುದು. ಗೊಮೋರಾದ ದುರ್ಗತಿಯೇ ಅಮ್ಮೋನ್ಯರಿಗೆ ಸಂಭವಿಸುವುದು. ಈ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವುವು. ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು; ಅಳಿದುಳಿದ ನನ್ನ ಜನರಿಗೆ ಅವು ಸೊತ್ತಾಗುವುವು.”


ಈಜಿಪ್ಟಿನಲ್ಲಿ ವಾಸಿಸುವ ಯುವತಿಯೇ, ಸೆರೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೊ. ಮೆಂಫಿಸ್ ನಗರ ಹಾಳಾಗುವುದು ಅದು ಸುಟ್ಟು ನಿರ್ಜನವಾಗುವುದು.


‘ಆಹಾ ರೆಕ್ಕೆಗಳು ನನಗಿತ್ತಾದರೆ ಪಾರಿವಾಳದಂತೆ I ಹಾರಿ ಹೋಗಿ ನೆಮ್ಮದಿಯಿಂದಿರಬಹುದಿತ್ತು’ ಎನ್ನುತ್ತಿದ್ದೆ II


ನೀವು ನಡೆಸಿದ ದುರಾಚಾರಗಳನ್ನು ಹಾಗು ಅಸಹ್ಯಕಾರ್ಯಗಳನ್ನು ಸರ್ವೇಶ್ವರ ಇನ್ನು ಸಹಿಸಲಾರದೆ ಹೋದುದರಿಂದಲೇ ನಿಮ್ಮ ನಾಡು ಹಾಳುಬಿದ್ದಿದೆ. ನಿರ್ಜನವಾಗಿ ಭಯಭೀತಿಗೆ ಎಡೆ ಆಗಿದೆ. ಅದರ ಸ್ಥಿತಿ ಈಗಲೂ ಬದಲಾಗಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು