Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:45 - ಕನ್ನಡ ಸತ್ಯವೇದವು C.L. Bible (BSI)

45 ಪಲಾಯನವಾದವರು ಹೆಷ್ಬೋನಿನ ನೆರಳಲ್ಲಿ ನಿಂತಿದ್ದಾರೆ ಬಲಗುಂದಿದವರಾಗಿ. ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಆ ಹೆಷ್ಬೋನಿನಿಂದಲೆ ಹೊರಟಿದೆ ಅಗ್ನಿ. ಮೋವಾಬಿನ ಮೇರೆಯನ್ನೂ ಶಿಖರವನ್ನೂ ನುಂಗಿಬಿಟ್ಟಿದೆ ಆ ಬೆಂಕಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ಪಲಾಯನವಾದವರು ಬಲಗುಂದಿದವರಾಗಿ ಹೆಷ್ಬೋನಿನ ನೆರಳಿನಲ್ಲಿ ನಿಂತಿದ್ದಾರೆ; ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಹೆಷ್ಬೋನಿನಿಂದಲೂ ಅಗ್ನಿಜ್ವಾಲೆ ಹೊರಟು ಮೋವಾಬಿನ ಹಣೆಯನ್ನೂ, ಯುದ್ಧವೀರರ ನೆತ್ತಿಯನ್ನೂ ನುಂಗಿಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ಪಲಾಯನವಾದವರು ಬಲಗುಂದಿದವರಾಗಿ ಹೆಷ್ಬೋನಿನ ನೆರಳಿನಲ್ಲಿ ನಿಂತಿದ್ದಾರೆ; ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಹೆಷ್ಬೋನಿನಿಂದಲೂ ಅಗ್ನಿಜ್ವಾಲೆ ಹೊರಟು ಮೋವಾಬಿನ ಕೆನ್ನೆಯನ್ನೂ ಯುದ್ಧವೀರರ ನೆತ್ತಿಯನ್ನೂ ನುಂಗಿಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 “ಜನರು ಪ್ರಬಲನಾದ ವೈರಿಯಿಂದ ತಪ್ಪಿಸಿಕೊಂಡು ತಮ್ಮ ರಕ್ಷಣೆಗಾಗಿ ಹೆಷ್ಬೋನ್ ಪಟ್ಟಣಕ್ಕೆ ಓಡಿಹೋದರು. ಆದರೆ ಅಲ್ಲಿ ರಕ್ಷಣೆಯಿರಲಿಲ್ಲ. ಹೆಷ್ಬೋನಿನಲ್ಲಿ ಅಗ್ನಿಜ್ವಾಲೆ ಪ್ರಾರಂಭವಾಯಿತು. ಸೀಹೋನಿನಲ್ಲಿ ಅಗ್ನಿಜ್ವಾಲೆ ಪ್ರಾರಂಭವಾಯಿತು. ಅದು ಮೋವಾಬಿನ ನಾಯಕರುಗಳನ್ನು ಸುಡುತ್ತಿದೆ. ಅದು ಆ ಗರ್ವಿಷ್ಠರನ್ನು ಸುಡುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 “ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ, ಸೀಹೋನನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ, ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:45
12 ತಿಳಿವುಗಳ ಹೋಲಿಕೆ  

ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೋವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.


ಸೀಹೋನನಾ ಪಟ್ಟಣ, ಆ ಹೆಷ್ಬೋನ್, ಅಲ್ಲಿಂದಲೆ ಹೊರಟು ಬಂದಿತು ಅಗ್ನಿಜ್ವಾಲೆ. ದಹಿಸಿ ಬಿಟ್ಟಿತದು ಮೋವಾಬ್ಯರ ರಾಜಧಾನಿಯಾದ ಆರ್ ನಗರವನ್ನು, ಅರ್ನೋನ್ ಹೊಳೆಯ ಬಳಿಯ ಪೂಜಾಸ್ಥಳಗಳ ದೇವತೆಗಳನ್ನು.


ಬಳಿಕ ಯೇಸು ಇಂತೆಂದರು: “ ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೆ?


ಆ ಕುಲದಿಂದಲೇ ಮೂಲೆಗಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲುಗಳು ಬರುವುವು. ಆ ಕುಲದಿಂದಲೇ ಸಕಲ ಅಧಿಕಾರಿಗಳು ಹೊರಬರುವರು.


ಆದಕಾರಣ ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಕೆರಿಯೋತಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಸೈನಿಕರ ಆರ್ಭಟ, ರಣಕಹಳೆಗಳ ಗರ್ಜನೆ, ಯುದ್ಧದ ಕೋಲಾಹಲ - ಇವುಗಳ ಮಧ್ಯೆ ಮೋವಾಬಿನ ಜನರು ಮಡಿಯುವರು.


ಹೆಷ್ಬೋನ್ ಪಟ್ಟಣ ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಹಿಂದಿನ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ಹೊಳೆಯವರೆಗೂ ಅವನ ನಾಡನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದನು.


ಇಸ್ರಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳಿಸಿದರು.


ಮೋವಾಬ್ಯರೇ, ನಿಮಗೆ ಧಿಕ್ಕಾರ! ಕೆಮೋಷಿನ ಭಕ್ತರೇ, ನಿಮಗೆ ಪರಿವಿನಾಶ! ಮಾಡಿಹನಾತ ತನ್ನ ಕುವರರನ್ನು ದೇಶಭ್ರಷ್ಟರನ್ನಾಗಿ ತನ್ನ ಕುವರಿಯರನ್ನು ಸೆರೆಯಾಳುಗಳನ್ನಾಗಿ ಅಮೋರಿಯರ ಅರಸ ಸೀಹೋನನಿಗೆ ಸೆರೆಯವರನ್ನಾಗಿ.


ಆಹುತಿಯಾದರವರ ಯುವಜನ ಅಗ್ನಿಗೆ I ವಿವಾಹವಾಗಲಿಲ್ಲ ಅವರ ಕನ್ಯೆಯರಿಗೆ II


ನಿರ್ಮೂಲ ಮಾಡಿದನಾತ ಅಮೋರ್ಯರ ಸೀಹೋನ್ ರಾಜನನು I ಬಾಷಾನಿನ ಅರಸ ಓಗನನು, ಕಾನಾನಿನ ರಾಜ್ಯಗಳೆಲ್ಲವನು II


ಹೌದು, ಮೆಮ್‍ಫಿಸ್ ಮತ್ತು ತಹಪನೇಸ್ ನಿವಾಸಿಗಳು ನಿನ್ನ ನಾಡನೆತ್ತಿಯನ್ನು ನುಣ್ಣಗೆ ಮೇದುಬಿಟ್ಟಿದ್ದಾರೆ.


ಮೋವಾಬಿನ ಕೀರ್ತಿ ಮಾಯವಾಯಿತು ಹೆಷ್ಬೋನ್ ಶತ್ರುಗಳ ಕೈವಶವಾಯಿತು. ‘ಮೋವಾಬ್ ಇನ್ನು ರಾಷ್ಟ್ರವೆನಿಸಿಕೊಳ್ಳದಷ್ಟು ಅದನ್ನು ಹಾಳುಮಾಡೋಣ ಬನ್ನಿ’ ಎಂದಿದ್ದಾರೆ ಆ ಶತ್ರುಗಳು. ಮದ್ಮೆನೇ, ನೀನೂ ಸುಮ್ಮನಾಗುವೆ, ಖಡ್ಗ ಬರುವುದು ನಿನ್ನನ್ನು ಬೆನ್ನಟ್ಟಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು