Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:34 - ಕನ್ನಡ ಸತ್ಯವೇದವು C.L. Bible (BSI)

34 ಹೆಷ್ಬೋನಿನ ಮತ್ತು ಎಲೆಯಾಲೆಯ ಜನರು ಅರಚಿಕೊಳ್ಳುತ್ತಿದ್ದಾರೆ. ಆ ಕೂಗು ಯಹಚಿನವರೆಗೆ ಕೇಳಿಸುತ್ತಿದೆ. ಚೋಯರಿನಿಂದ ಹೊರೊನಯಿಮಿನವರೆಗೆ ಮತ್ತು ಎಗ್ಲತ್ ಶೆಲೆಶೀಯದವರೆಗೆ ಆ ಕಿರಿಚಾಟ ಕೇಳಿಸುತ್ತಿದೆ. ನಿಮ್ರೀಮ್ ಹಳ್ಳವೂ ಹಾಳಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಹೆಷ್ಬೋನಿನಿಂದ ಎಲೆಯಾಲೆಯ ಮತ್ತು ಯಹಚಿನವರೆಗೆ ಜನರು ಅರಚಿಕೊಳ್ಳುತ್ತಾರೆ, ಚೋಯರಿನಿಂದ ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕಿರಿಚಿಕೊಳ್ಳುತ್ತಾರೆ; ನಿಮ್ರೀಮ್ ಹಳ್ಳವೂ ಹಾಳಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಹೆಷ್ಬೋನಿನಿಂದ ಎಲೆಯಾಲೆಯ ಮತ್ತು ಯಹಚಿನವರೆಗೆ ಅರಿಚಿಕೊಳ್ಳುತ್ತಾರೆ. ಚೋಯರಿನಿಂದ ಹೊರೊನಯಿವಿುನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕಿರಿಚಿಕೊಳ್ಳುತ್ತಾರೆ; ನಿಮ್ರೀಮ್ ಹಳ್ಳವೂ ಹಾಳಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 “ಹೆಷ್ಬೋನ್ ಮತ್ತು ಎಲೆಯಾಲೆ ಎಂಬ ಪಟ್ಟಣಗಳ ಜನರು ಅರಚಿಕೊಳ್ಳುತ್ತಿದ್ದಾರೆ. ಅವರ ಕಿರುಚಾಟವು ದೂರದ ಯಹಚಿನವರೆಗೂ ಕೇಳಿಬರುತ್ತಿದೆ. ಅವರ ಕಿರುಚಾಟವು ಚೋಯರಿನಿಂದ ದೂರದ ಹೊರೊನಯಿಮ್ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕೇಳಿಬರುತ್ತದೆ. ನಿಮ್ರೀಮ್ ಹಳ್ಳದ ನೀರು ಸಹ ಬತ್ತಿಹೋಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 “ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಲೆಯವರೆಗೂ, ಯಹಚಿನವರೆಗೂ, ಚೋಗರ್ ಮೊದಲ್ಗೊಂಡು ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಮೂರು ವರ್ಷದ ಕಡಸಿನಂತೆ ತಮ್ಮ ಶಬ್ದವನ್ನೆತ್ತಿದ್ದರು; ಏಕೆಂದರೆ ನಿಮ್ರೀಮ್‌ನ ನೀರು ಸಹ ಹಾಳಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:34
10 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಸ್ವಾಮಿ ಇಸ್ರಯೇಲರಿಗೆ ಅಧೀನಪಡಿಸಿರುವ ಈ ಪ್ರದೇಶ, ಅಂದರೆ ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬಿಯೋನ್ ಎಂಬ ಪಟ್ಟಣಗಳನ್ನು ಒಳಗೊಂಡ ಈ ಪ್ರದೇಶ ದನಕುರಿಗಳ ಮೇವಿಗೆ ಹುಲುಸಾದ ಪ್ರದೇಶ.


ಅಳುತ್ತಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಿರುವರು ‘ನಾಶವಾದೆವಲ್ಲಾ!’ ಎಂಬ ಪ್ರಾಣಸಂಕಟದ ಪ್ರಲಾಪವು ಹೊರೊನಯಿಮ್ ಇಳಿಜಾರಿನಲ್ಲಿ ಕೇಳಿಸುತ್ತಿರುವುದು.


ದಕ್ಷಿಣ ಪ್ರದೇಶ, ಚೋಗರೂರಿನ ತನಕ ಇದ್ದ ಜೆರಿಕೋ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು.


ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೋದೋಮ್ - ಗೊಮೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನ ವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯಪಡೆದಿತ್ತು.


ಈಗ ಲವಣ ಸಮುದ್ರ ಎನಿಸಿಕೊಳ್ಳುವ ಸಿದ್ದೀಮ್ ತಗ್ಗುಪ್ರದೇಶದಲ್ಲಿ ಒಂದುಗೂಡಿದ್ದ ಸೊದೋಮಿನ ಅರಸ ಬೆರಗ, ಗೊಮೋರದ ಅರಸ ಬಿರ್ಶಗ, ಅದ್ಮಾಹದ ಅರಸ ಶಿನಾಬ, ಚೆಬೋಯಿಮನ ಅರಸ ಶೆಮೇಬರ, ಬೆಲಗಿನ (ಅಂದರೆ ಚೋಗರದ) ಅರಸ - ಈ ಐವರೊಡನೆ ಯುದ್ಧಮಾಡಿದರು.


ಮೇಲ್ನಾಡಿಗೆ ದಂಡನೆಯಾಗಿದೆ, ಹೋಲೇನ್, ಯಾಚಾ, ಮೇಫಾತ್, ದೀಬೋನ್, ನೆಬೋ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು