Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:29 - ಕನ್ನಡ ಸತ್ಯವೇದವು C.L. Bible (BSI)

29 ಮೋವಾಬ್ಯರಿಗೆ ಬಹಳ ಸೊಕ್ಕೇರಿದೆ! ಅವರ ಹೆಮ್ಮೆಯ ಸುದ್ದಿ, ಡಂಭಾಚಾರ, ಅಹಂಕಾರ, ಗರ್ವ, ಸ್ವಪ್ರತಿಷ್ಠೆ ಇವುಗಳ ಸಮಾಚಾರ ನಮ್ಮ ಕಿವಿಗೆ ಬಿದ್ದಿದೆ. -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಮೋವಾಬ್ಯರಿಗೆ ಬಹು ಸೊಕ್ಕೇರಿದೆ ಎಂಬ ಅವರ ಹೆಮ್ಮೆಯ ಸುದ್ದಿಯೂ, ಅವರ ಡಂಭ, ಅಹಂಕಾರ, ಸ್ವಾಭಿಮಾನ ಮತ್ತು ಸ್ವಪ್ರತಿಷ್ಠೆ ಇವುಗಳ ಸಮಾಚಾರವೂ ನಮ್ಮ ಕಿವಿಗೆ ಬಿದ್ದಿವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಮೋವಾಬ್ಯರಿಗೆ ಬಹು ಸೊಕ್ಕೇರಿದೆ ಎಂಬ ಅವರ ಹೆಮ್ಮೆಯ ಸುದ್ದಿಯೂ ಅವರ ಡಂಭ, ಅಹಂಕಾರ, ಸ್ವಾಭಿಮಾನ ಸ್ವಪ್ರತಿಷ್ಠೆ ಇವುಗಳ ಸಮಾಚಾರವೂ ನಮ್ಮ ಕಿವಿಗೆ ಬಿದ್ದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 “ಮೋವಾಬಿನ ಸೊಕ್ಕಿನ ಬಗ್ಗೆ ನಾವು ಕೇಳಿದ್ದೇವೆ. ಅವನಿಗೆ ತುಂಬ ಸೊಕ್ಕು ಬಂದಿತ್ತು. ತಾನೇ ಮುಖ್ಯವಾದವನೆಂದು ಅವನು ಭಾವಿಸಿದ್ದನು. ಅವನು ಯಾವಾಗಲೂ ಬಡಾಯಿಕೊಚ್ಚಿಕೊಳ್ಳುತ್ತಿದ್ದನು. ಅವನು ತುಂಬಾ ಸೊಕ್ಕಿನವನಾಗಿದ್ದನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 “ಮೋವಾಬಿನ ಹೆಮ್ಮೆಯನ್ನು ಕುರಿತು, ಅದರ ಮಹಾ ಗರ್ವವನ್ನು ಕುರಿತು, ಅದರ ಡಂಭವನ್ನೂ, ಅಹಂಕಾರವನ್ನೂ, ಬಡಾಯಿಯನ್ನೂ, ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:29
13 ತಿಳಿವುಗಳ ಹೋಲಿಕೆ  

ಯೆಹೂದ ಜನತೆ ಪೇಳ್ವರವರಿಗೆ : “ನಮ್ಮ ಕಿವಿಗೆ ಬಿದ್ದಿದೆ ಮೋವಾಬ್ಯರ ಮದ, ತಿಳಿದಿದೆ ನಮಗೆ ಅವರ ದುರಹಂಕಾರ, ಅವರ ಒಣ ಡಂಭಾಚಾರ, ಗರ್ವೋದ್ರೇಕ".


ಉನ್ನತನಾದರೂ ಗಮನಿಸುವನು ಪ್ರಭು ದೀನರನು I ದೂರದಿಂದಲೇ ಗುರುತಿಸುವನಾತನು ಗರ್ವಿಷ್ಠರನು II


ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎಂತಲೇ, “ದೇವರು ಗರ್ವಿಷ್ಠರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ,” ಎಂದು ಲಿಖಿತವಾಗಿದೆ.


ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು.


ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.


ಮೇಲಿಂದ ಮೇಲಕ್ಕೆ ದೃಷ್ಟಿಸಿ ನೋಡುವ, ಠೀವಿಯಿಂದ ಕಣ್ಣುರೆಪ್ಪೆಗಳನ್ನೇರಿಸುವ ಜನರುಂಟು.


ಭಂಗಕ್ಕೆ ಮುಂಚೆ ಗರ್ವದ ಗುಂಡಿಗೆ; ಗೌರವಕ್ಕೆ ಮೊದಲು ನಮ್ರತೆ.


ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.


ಸೊಕ್ಕೇರಿದ ಗರ್ವಿ ಕುಚೋದ್ಯನೆನಿಸಿಕೊಳ್ಳುವನು; ಅಹಂಕಾರ, ಮದಮತ್ಸರಗಳಿಂದ ಅವನು ವರ್ತಿಸುವನು.


ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಲೋಕದವರಿಗೆ ಪಾಪದ ಫಲವನ್ನೂ ದುರುಳರಿಗೆ ದುಷ್ಕೃತ್ಯಗಳ ಫಸಲನ್ನೂ ತಿನ್ನಿಸುವೆನು. ಸೊಕ್ಕಿದವನ ಕೊಬ್ಬನ್ನು ಕರಗಿಸುವೆನು. ಬಲಾತ್ಕಾರ ಮಾಡುವವರ ಹೆಮ್ಮೆಯನ್ನು ಅಡಗಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು