Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:17 - ಕನ್ನಡ ಸತ್ಯವೇದವು C.L. Bible (BSI)

17 ಮೋವಾಬಿನ ನೆರೆಹೊರೆಯವರೇ, ಅದರ ಹೆಸರುವಾಸಿಯನ್ನು ಅರಿತವರೇ, ನೀವೆಲ್ಲರು ಅದಕ್ಕಾಗಿ ಎದೆಬಡಿದುಕೊಳ್ಳಿ ! ‘ಅಯ್ಯೋ, ಶಕ್ತಿಯುತ ಚೆಂಗೋಲು, ಮಹಿಮೆಯ ದಂಡಕೋಲು ಮುರಿದುಹೋಯಿತಲ್ಲಾ!’ ಎಂದು ಪ್ರಲಾಪಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಮೋವಾಬಿನ ನೆರೆಹೊರೆಯವರೇ, ಅದರ ಹೆಸರನ್ನೂ, ಪ್ರಖ್ಯಾತಿಯನ್ನು ಬಲ್ಲವರೇ, ನೀವೆಲ್ಲರೂ ಅದಕ್ಕಾಗಿ ಎದೆಬಡುಕೊಳ್ಳಿರಿ. ‘ಅಯ್ಯೋ, ಬಲವಾದ ಕೋಲು, ಮಹಿಮೆಯ ದಂಡವು ಮುರಿದುಹೋಯಿತಲ್ಲಾ’ ಎಂದು ಪ್ರಲಾಪಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಮೋವಾಬಿನ ನೆರೆಹೊರೆಯವರೇ, ಅದರ ಹೆಸರುವಾಸಿಯನ್ನು ಬಲ್ಲವರೇ, ನೀವೆಲ್ಲರೂ ಅದಕ್ಕಾಗಿ ಎದೆಬಡುಕೊಳ್ಳಿರಿ; ಅಯ್ಯೋ, ಬಲವಾದ ಕೋಲು, ಮಹಿಮೆಯ ದಂಡವು ಮುರಿದುಹೋಯಿತಲ್ಲಾ ಎಂದು ಪ್ರಲಾಪಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಮೋವಾಬಿನ ಸುತ್ತಮುತ್ತಲೂ ವಾಸಿಸುವ ನೀವೆಲ್ಲರು ಆ ದೇಶಕ್ಕಾಗಿ ಗೋಳಾಡಬೇಕು. ಮೋವಾಬ್ ಎಷ್ಟು ಸುಪ್ರಸಿದ್ಧವಾಗಿದೆ ಎಂಬುದು ನಿಮಗೆಲ್ಲ ಗೊತ್ತು. ಆದ್ದರಿಂದ ಅದಕ್ಕಾಗಿ ಗೋಳಾಡಿರಿ. ‘ರಾಜನ ಶಕ್ತಿಯು ಇಲ್ಲವಾಯಿತು. ಮೋವಾಬಿನ ಸಾಮರ್ಥ್ಯ ಮತ್ತು ಘನತೆ ಕಣ್ಮರೆಯಾದವು’ ಎಂದು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ, ‘ಬಲವಾದ ಕೋಲೂ, ಮಹಿಮೆಯ ಬೆತ್ತವೂ ಹೇಗೆ ಮುರಿದುಹೋಯಿತು?’ ಎಂದು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:17
12 ತಿಳಿವುಗಳ ಹೋಲಿಕೆ  

ಮುರಿದುಹಾಕಿದೆ ಭಾರವಾದ ಅವರ ನೊಗವನು ಅವರ ಬೆನ್ನನ್ನು ಬಡಿದ ಬೆತ್ತವನು ದಬ್ಬಾಳಿಕೆ ನಡೆಸಿದವರ ದೊಣ್ಣೆಯನು; ಮಿದ್ಯಾನನ್ನು ಗೆದ್ದ ದಿನದಂದು ಹಾಗೆಯೆ ಮಾಡಿದೆಯಲ್ಲವೆ ನೀನು?


ಅದು ಹೇಗೆ ನುಚ್ಚುನೂರಾಗಿದೆ ! ಆ ಜನರು ಕಿರಿಚಿಕೊಳ್ಳುತ್ತಿದ್ದಾರೆ ! ಇಗೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ. ನೆರೆಹೊರೆಯವರು ಅಣಕಿಸುವುದಕ್ಕೂ ಬೆಚ್ಚಿಬೀಳುವುದಕ್ಕೂ ಆಸ್ಪದ ಆಗಿದೆ.” ಸರ್ವೇಶ್ವರ ಹೀಗೆನ್ನುತ್ತಾರೆ :


ನಿಸ್ಸಾರವಾಗಿದೆ ಹೆಷ್ಬೋನಿನ ಹೊಲ, ಸಿಬ್ಮದ ದ್ರಾಕ್ಷಾಲತೆ, ಒಮ್ಮೆ ವ್ಯಾಪಿಸಿತ್ತು ಆ ರಾಜ್ಯದ್ರಾಕ್ಷಿ ಯಜ್ಜೇರಿನವರೆಗೆ, ಹಬ್ಬಿತ್ತದರ ಶಾಖೆ ಮರುಭೂಮಿಗೆ, ಸಮುದ್ರದಾಚೆ, ಮಾಡಿತು ನಾಡಿನೊಡೆಯರನು ಕುಡಿದು ಮತ್ತರಾಗುವಂತೆ.


ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ.


ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II


ಏಕೆನೆ, ಎಡೆಬಿಡದೆ ದಂಡಿಸಿದರು ಪ್ರಜೆಗಳನು ಕೋಪೋದ್ರೇಕದಿಂದ ತಡೆಯಿಲ್ಲದೆ ದಬ್ಬಾಳಿಕೆ ನಡೆಸಿದರು ರಾಷ್ಟ್ರಗಳ ಮೇಲೆ ಸಿಟ್ಟಿನಿಂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು