Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 48:12 - ಕನ್ನಡ ಸತ್ಯವೇದವು C.L. Bible (BSI)

12 ಹೀಗಿರಲು ಸರ್ವೇಶ್ವರ ಇಂತೆನ್ನುತ್ತಾರೆ: “ಇಗೋ, ದಿನಗಳು ಬರಲಿವೆ. ಆಗ ನಾನು ‘ಹೊಯ್ಯತಕ್ಕವರನ್ನು’ ಅವರ ಬಳಿಗೆ ಕಳುಹಿಸುವೆನು. ಅವರು ಅದನ್ನು ಹೊಯ್ದುಬಿಡುವರು. ಪಾತ್ರೆಗಳನ್ನು ಬರಿದುಮಾಡುವರು. ಗಡಿಗೆಗಳನ್ನು ಒಡೆದುಹಾಕುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಹೀಗಿರಲು ಯೆಹೋವನು ಇಂತೆನ್ನುತ್ತಾನೆ, “ಇಗೋ, ಮುಂದಿನ ಕಾಲದಲ್ಲಿ ನಾನು ಅವರ ಬಳಿಗೆ ಹೊಯ್ಯತಕ್ಕವರನ್ನು ಕಳುಹಿಸುವೆನು, ಅವರು ಅದನ್ನು ಹೊಯ್ದುಬಿಡುವರು, ಪಾತ್ರೆಗಳನ್ನು ಬರಿದು ಮಾಡುವರು, ಗಡಿಗೆಗಳನ್ನು ಒಡೆದುಬಿಡುವರು” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಹೀಗಿರಲು ಯೆಹೋವನು ಇಂತೆನ್ನುತ್ತಾನೆ - ಇಗೋ, ಮುಂದಿನ ಕಾಲದಲ್ಲಿ ನಾನು ಅವರ ಬಳಿಗೆ ಹೊಯ್ಯತಕ್ಕವರನ್ನು ಕಳುಹಿಸುವೆನು, ಅವರು ಅದನ್ನು ಹೊಯ್ದುಬಿಡುವರು, ಪಾತ್ರೆಗಳನ್ನು ಬರಿದು ಮಾಡುವರು, ಗಡಿಗೆಗಳನ್ನು ಒಡೆದುಬಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೆಹೋವನು ಹೀಗೆಂದನು: “ನಿನ್ನನ್ನು ನಿನ್ನ ಪಾತ್ರೆಯಿಂದ ಸುರಿಯುವದಕ್ಕೆ ನಾನು ಜನರನ್ನು ಕಳುಹಿಸುತ್ತೇನೆ. ಆ ಜನರು ಮೋವಾಬಿನ ಪಾತ್ರೆಗಳನ್ನು ಬರಿದಾಗಿಸುವರು. ಅನಂತರ ಆ ಪಾತ್ರೆಗಳನ್ನು ಒಡೆದು ಚೂರುಚೂರು ಮಾಡುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದ್ದರಿಂದ ಇಗೋ, ದಿನಗಳು ಬರುವವು” ಎಂದು ಯೆಹೋವ ದೇವರು ಅನ್ನುತ್ತಾರೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು; ಅದರ ಪಾತ್ರೆಗಳನ್ನು ಬರಿದುಮಾಡಿ, ತಮ್ಮ ಬುದ್ದಲಿಗಳನ್ನು ಒಡೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 48:12
14 ತಿಳಿವುಗಳ ಹೋಲಿಕೆ  

(ಸರ್ವೇಶ್ವರ, ಕೊಳ್ಳೆಗಾರರು ಸುಲಿಗೆಮಾಡಿದ್ದನ್ನೂ ಮುರಿದುಹಾಕಿದ ದ್ರಾಕ್ಷಿಯ ತೋಟಗಳನ್ನೂ ಸರಿಪಡಿಸಲಿದ್ದಾರೆ. ಯಕೋಬಿನ ಮಹತ್ವವನ್ನು ಹಾಗೂ ಇಸ್ರಯೇಲಿನ ಮಹಿಮೆಯನ್ನು ಈಗ ಮತ್ತೆ ಸ್ಥಾಪಿಸಲಿದ್ದಾರೆ).


ಮೋವಾಬಿನ ಎಲ್ಲ ಮಾಳಿಗೆಗಳ ಮೇಲೆಯೂ ಚೌಕಗಳಲ್ಲಿಯೂ ಒಂದೇ ರೋದನ. ಏಕೆಂದರೆ ಯಾರಿಗೂ ಬೇಡದ ಮಡಕೆಯಂತೆ ಮೋವಾಬನ್ನು ಒಡೆದುಹಾಕಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.


ಆ ಗೋಡೆಯೆಂಬ ಕುಂಬಾರನ ಮಡಕೆಯ ಚೂರಿನಿಂದ, ಬೆಂಕಿಯ ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲೀ ತೊಟ್ಟಿಯ ನೀರನ್ನು ತೋಡಿಕೊಳ್ಳುವುದಕ್ಕಾಗಲೀ ಸಾಧ್ಯವಾಗದು.”


ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು I ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು"II


ಮೋವಾಬು ಹಾಳಾಗಿದೆ ಸುಟ್ಟುಹೋದ ಅದರ ನಗರಗಳಿಂದ ಹೊಗೆ ಎದ್ದಿದೆ. ಅದರ ಸರ್ವಶ್ರೇಷ್ಟ ಯುವಕರು ಹೋಗಿದ್ದಾರೆ ಹತರಾಗುವುದಕ್ಕೆ, ಸರ್ವಶಕ್ತ ಸರ್ವೇಶ್ವರನೆಂಬ ನಾಮವುಳ್ಳ ರಾಜಾಧಿರಾಜನ ನುಡಿಯಂತೆ.


ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ. ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ. ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ. ಅದು ಎಂದೂ ಸೆರೆಹೋಗಲಿಲ್ಲ. ಆದಕಾರಣ ಅದರ ರುಚಿ ಅದರಲ್ಲಿದೆ. ಅದರ ವಾಸನೆ ಮಾರ್ಪಡಲಿಲ್ಲ.


ಸೂರೆಗಾರನು ಪ್ರತಿಯೊಂದು ನಗರದ ಮೇಲೆ ಬೀಳುವನು. ಯಾವ ಪಟ್ಟಣವೂ ಉಳಿಯದು. ಸರ್ವೇಶ್ವರನ ನುಡಿಯಂತೆಯೆ ಮೇಲ್ನಾಡು ನಾಶವಾಗುವುದು, ಬೈಲ್ನಾಡು ಹಾಳಾಗುವುದು.


‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದುಹೋದ ಅಂದವಾದ ಪಾತ್ರೆಯಂತೆ.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


“ಆಗ ನೀನು, ನಿನ್ನ ಸಂಗಡ ಬಂದವರ ಕಣ್ಣೆದುರಿಗೇ ಆ ಮಣ್ಣಿನ ಮಡಕೆಯನ್ನು ಒಡೆದುಬಿಟ್ಟು ಅವರಿಗೆ ಹೀಗೆಂದು ನುಡಿ :


ಅವರಲ್ಲಿನ ಶ್ರೀಮಂತರು ತಮ್ಮ ಊಳಿಗದವರನ್ನು ನೀರಿಗೆ ಕಳಿಸುತ್ತಾರೆ. ಅವರೋ ಕೊಳಗಳಲ್ಲಿ ನೀರು ಕಾಣದೆ ಬರೀ ಬಿಂದಿಗೆಗಳೊಂದಿಗೆ ಹಿಂದಿರುಗುತ್ತಾರೆ. ನಿರಾಶೆಗೊಂಡು, ನಾಚಿಕೆಪಟ್ಟು ಮೋರೆ ಮುಚ್ಚಿಕೊಳ್ಳುತ್ತಾರೆ.


ಮೋವಾಬಿನ ಮಹಿಳೆಯರು ಅರ್ನೊನ್ ನದಿಯ ಹಾಯ್ಗಡಗಳಲಿ, ಅಲೆಯುತಿಹರು ಗೂಡಿಂದ ಹೊರದೂಡಲಾದ ಹಕ್ಕಿಮರಿಗಳ ಪರಿ.


ಇಸ್ರಯೇಲ್ ವಂಶದವರು ನಂಬಿಕೆ ಇಟ್ಟಿದ್ದ ಬೇತೇಲ್ ಕ್ಷೇತ್ರವನ್ನು ಕುರಿತು ಆಶಾಭಂಗಪಟ್ಟಂತೆ ಆಗ ಮೋವಾಬ್ಯರು ತಮ್ಮ ಕೆಮೋಷ್ ದೇವತೆಯನ್ನು ಕುರಿತು ಆಶಾಭಂಗಪಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು