Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 46:20 - ಕನ್ನಡ ಸತ್ಯವೇದವು C.L. Bible (BSI)

20 ಈಜಿಪ್ಟ್ ಅಂದವಾದ ಒಂದು ಕಡಸು ಅದಕ್ಕೆ ಹತ್ತಿಬಿಟ್ಟಿದೆ ಬಡಗಲಿಂದ ಬಂದ ಉಣ್ಣೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಐಗುಪ್ತವು ಅಂದವಾದ ಕಡಸಾಗಿದೆ; ತೊಣಚೆಯ ಹುಳಗಳು ಉತ್ತರ ದಿಕ್ಕಿನಿಂದ ಅದರ ಮೇಲೆ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಐಗುಪ್ತವು ಅಂದವಾದ ಕಡಸಾಗಿದೆ; ತೊಣಚೆಯು ಬಡಗಲಿಂದ ಅದರ ಮೇಲೆ ಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಈಜಿಪ್ಟು ಸುಂದರವಾದ ಹಸುವಿನಂತಿದೆ, ಆದರೆ ಉತ್ತರದಿಂದ ತೊಣಚಿಯು ಅದನ್ನು ಪೀಡಿಸಲು ಬರುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಈಜಿಪ್ಟ್ ದೇಶವು ಬಹಳ ಅಂದವಾದ ಕಡಸಾಗಿದೆ; ಆದರೆ ಉತ್ತರದಿಂದ ತೊಣಚೆಯು ಬಂದೇ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 46:20
8 ತಿಳಿವುಗಳ ಹೋಲಿಕೆ  

“ಎಫ್ರಯಿಮ್ ತೆನೆಹುಲ್ಲನ್ನು ತುಳಿಯುವುದರಲ್ಲಿ ಪಳಗಿರುವ ಹೋರಿಕರು. ಅದರ ಅಂದವಾದ ಹೆಗಲಮೇಲೆ ನೇಗಿಲನ್ನು ಇಟ್ಟಿರಲಿಲ್ಲ. ಜುದೇಯವು ಉಳುವಂತೆ ಮಾಡಿದೆನು. ಯಕೋಬ್ ಕುಂಟೆ ಎಳೆಯುವಂತೆ ಮಾಡಿದೆನು. ಈಗ ಎಫ್ರಯಿಮನ್ನು ನೊಗಕ್ಕೆ ಹೂಡುವೆನು.


“ಸರ್ವೇಶ್ವರನ ವಾರ್ತೆ ಇದು: ಇಗೋ, ಬಡಗಲಿಂದ ಪ್ರವಾಹ ಹೊರಡುವುದು ತುಂಬಿತುಳುಕುವ ತೊರೆಯಾಗಿ ಬರುವುದು. ಆಕ್ರಮಿಸುವುದು ನಾಡನ್ನು, ಅದರಲ್ಲಿರುವ ಸಮಸ್ತವನ್ನು. ನಗರವನ್ನು, ಅದರ ನಿವಾಸಿಗಳನ್ನು. ಆಗ ನಾಡಿನವರೆಲ್ಲರೂ ಮೊರೆಯಿಡುವರು ದೇಶದವರೆಲ್ಲರು ಗೋಳಾಡುವರು.


“ವೇಗಶಾಲಿಗಳು ಓಡಿಹೋಗಲಾರರು ಬಲಿಷ್ಟರು ತಪ್ಪಿಸಿಕೊಳ್ಳಲಾರರು. ಉತ್ತರದಲ್ಲಿ, ಯೂಫ್ರೆಟಿಸ್ ನದಿಯ ಹತ್ತಿರದಲ್ಲಿ, ಎಡವಿಬಿದ್ದಿರುವರು.


ಅದಕ್ಕೆ ಸ್ವಾಮಿ ನನಗೆ ಹೀಗೆಂದರು : “ಈ ನಾಡಿನ ನಿವಾಸಿಗಳೆಲ್ಲರ ಮೇಲೆ ಉತ್ತರದಿಂದ ಕೇಡು ಉಕ್ಕಿಬರುವುದು.


“ನನ್ನ ಸೊತ್ತಾದವರನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುತ್ತಿದ್ದೀರಿ! ಕಣ ತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿದ್ದೀರಿ. ಕೊಬ್ಬಿದ ಕುದುರೆಗಳಂತೆ ಕೆನೆಯುತ್ತಿದ್ದೀರಿ.


ಈಜಿಪ್ಟೆಂಬ ಯುವತಿ ಗುರಿಯಾಗುವಳು ಅವಮಾನಕ್ಕೆ ಸಿಕ್ಕಿಬೀಳುವಳು ಬಡಗಲವರ ಕೈಗೆ.”


ಆದರೆ ಈ ದಿನ, ಯುದ್ಧದ ದಿನ ಸೇನಾಧೀಶ್ವರನೆಂಬ ಸರ್ವೇಶ್ವರ ಸ್ವಾಮಿ ಶತ್ರುಗಳಿಗೆ ಮುಯ್ಯಿ ತೀರಿಸುವ ದಿನ ಇದು ದಂಡನೆಯ ದಿನ. ಇಂದು ಖಡ್ಗವು ಕಬಳಿಸುವುದು ತೃಪ್ತಿಯಾಗಿ ರಕ್ತವನ್ನು ಹೀರುವುದು ಸಂತೃಪ್ತಿಯಾಗಿ ಉತ್ತರದ ಯೂಪ್ರೆಟಿಸ್ ನದಿಯ ಹತ್ತಿರ ಬಲಿಮಾಡಬೇಕೆಂದಿರುವನು ಸರ್ವಶಕ್ತನೆಂಬ ಸರ್ವೇಶ್ವರ.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು