ಯೆರೆಮೀಯ 46:12 - ಕನ್ನಡ ಸತ್ಯವೇದವು C.L. Bible (BSI)12 ನಿನ್ನ ಲಜ್ಜೆಯ ಸುದ್ದಿ ರಾಷ್ಟ್ರಗಳಿಗೆ ಮುಟ್ಟಿದೆ ಲೋಕವೆಲ್ಲಾ ನಿನ್ನ ಗೋಳಾಟದಿಂದ ತುಂಬಿದೆ ಯೋಧನು ಯೋಧನನ್ನು ಎಡವಿ, ಇಬ್ಬರೂ ಬಿದ್ದಿರುವರು ಕೆಳಗೆ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಿಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಬೇರೆ ಜನಾಂಗಗಳು ನೀನು ಗೋಳಾಡುವದನ್ನು ಕೇಳಿಸಿಕೊಳ್ಳುವವು. ನಿನ್ನ ಗೋಳಾಟವು ಇಡೀ ಭೂಮಂಡಲದಲ್ಲೆಲ್ಲ ಕೇಳಿಸುವುದು. ‘ಒಬ್ಬ ಶೂರ ಸೈನಿಕನು’ ಮತ್ತೊಬ್ಬ ‘ಶೂರ ಸೈನಿಕನನ್ನು’ ಎದುರಿಸುವನು. ಆ ಶೂರ ಸೈನಿಕರಿಬ್ಬರೂ ಒಟ್ಟಿಗೆ ನೆಲಕ್ಕೆ ಬೀಳುವರು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿವೆ; ನಿನ್ನ ಕೂಗು ದೇಶವನ್ನು ತುಂಬಿಸಿದೆ. ಏಕೆಂದರೆ ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ. ಇಬ್ಬರೂ ಬಿದ್ದು ಹೋಗಿದ್ದಾರೆ.” ಅಧ್ಯಾಯವನ್ನು ನೋಡಿ |