Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 44:8 - ಕನ್ನಡ ಸತ್ಯವೇದವು C.L. Bible (BSI)

8 ಪ್ರವಾಸಿಗಳಾಗಿ ನೀವು ಬಂದಿರುವ ಈಜಿಪ್ಟಿನಲ್ಲಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತುವ ದುಷ್ಕೃತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುತ್ತಿದ್ದೀರಿ. ಆದ್ದರಿಂದ ನೀವೂ ನಿರ್ಮೂಲರಾಗಿ ಎಲ್ಲ ಭೂರಾಜ್ಯಗಳ ಶಾಪ, ನಿಂದೆ, ದೂಷಣೆಗಳಿಗೆ ಗುರಿಯಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಪ್ರವಾಸಿಗಳಾಗಿ ನೀವು ಬಂದಿರುವ ಐಗುಪ್ತ ದೇಶದಲ್ಲಿ ಅನ್ಯದೇವತೆಗಳಿಗೆ ಧೂಪಹಾಕುವ ದುಷ್ಕೃತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುವುದರಿಂದ ನೀವು ನಿರ್ಮೂಲರಾಗಿ ಸಕಲ ಭೂರಾಜ್ಯಗಳ ಶಾಪ ಮತ್ತು ದೂಷಣೆಗಳಿಗೆ ಗುರಿಯಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಪ್ರವಾಸಿಗಳಾಗಿ ನೀವು ಬಂದಿರುವ ಐಗುಪ್ತದಲ್ಲಿ ಅನ್ಯದೇವತೆಗಳಿಗೆ ಧೂಪಹಾಕುವ ದುಷ್ಕೃತ್ಯವನ್ನು ನಡಿಸುತ್ತಾ ನನ್ನನ್ನು ಕೆಣಕುವದರಿಂದ ನೀವು ನಿರ್ಮೂಲರಾಗಿ ಸಕಲ ಭೂರಾಜ್ಯಗಳ ಶಾಪದೂಷಣೆಗಳಿಗೆ ಗುರಿಯಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀವು ವಿಗ್ರಹಗಳನ್ನು ಮಾಡಿ ನನ್ನನ್ನು ಏಕೆ ಸಿಟ್ಟಿಗೆಬ್ಬಿಸುವಿರಿ? ಈಗ ನೀವು ಈಜಿಪ್ಟಿನಲ್ಲಿ ವಾಸಮಾಡುತ್ತಿರುವಿರಿ. ಈಗ ಈಜಿಪ್ಟಿನ ಸುಳ್ಳುದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿ ನನಗೆ ಕೋಪ ಬರುವಂತೆ ಮಾಡುತ್ತಿರುವಿರಿ. ನೀವೇ ನಿಮ್ಮನ್ನು ನಾಶಮಾಡಿಕೊಳ್ಳುವಿರಿ. ಅದು ನಿಮ್ಮ ತಪ್ಪೇ ಆಗುವುದು. ಬೇರೆ ಜನಾಂಗದವರು ನಿಂದಿಸುವಂತೆ ನಿಮ್ಮನ್ನು ನೀವು ಮಾಡಿಕೊಳ್ಳುತ್ತಿದ್ದೀರಿ. ಭೂಮಂಡಲದ ಎಲ್ಲಾ ಜನಾಂಗಗಳು ನಿಮ್ಮನ್ನು ತಮಾಷೆ ಮಾಡುವಂತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಏಕೆ ನೀವು ನೀವೇ ನಿರ್ಮೂಲರಾಗುವ ಹಾಗೆಯೂ, ನೀವು ಭೂಮಿಯ ಎಲ್ಲಾ ಜನಾಂಗಗಳಲ್ಲಿ ಶಾಪವೂ, ನಿಂದೆಯೂ ಆಗುವ ಹಾಗೆಯೂ, ನೀವು ತಂಗುವುದಕ್ಕೆ ಹೋಗಿರುವ ಈಜಿಪ್ಟ್ ದೇಶದಲ್ಲಿ ಬೇರೆ ದೇವರುಗಳಿಗೆ ಧೂಪ ಸುಟ್ಟು, ನನಗೆ ಕೋಪವನ್ನು ಎಬ್ಬಿಸುತ್ತೀರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 44:8
29 ತಿಳಿವುಗಳ ಹೋಲಿಕೆ  

“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’


ಅಲ್ಲಿನವರು ತಮಗೂ ನಿಮಗೂ ಮತ್ತು ನಿಮ್ಮ ಪೂರ್ವಜರಿಗೂ ತಿಳಿಯದ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿ ಪೂಜಿಸುವುದಕ್ಕೆ ತವಕಪಟ್ಟರು. ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡೆಸಿದರು. ಆದ್ದರಿಂದಲೇ ಆ ಸ್ಥಳಗಳು ಹಾಳಾದವು, ನಿರ್ಜನಪ್ರದೇಶಗಳಾದವು.


ಆದ್ದರಿಂದ ನಾಡನ್ನು ಭಯಾನಕವಾಗಿಸುವರು ಹಾದು ಹೋಗುವವರೆಲ್ಲ ಬೆಬ್ಬೆರಗಾಗಿ ತಲೆದೂಗುವರು, ಸಿಳ್ಳು ಹಾಕಿ ಅದನ್ನು ಪರಿಹಾಸ್ಯ ಮಾಡುವರು.


ನಾನು ಇಸ್ರಯೇಲರಿಗೆ ಕೊಟ್ಟ ನನ್ನ ನಾಡಿನಿಂದ ನಿಮ್ಮನ್ನು ಕಿತ್ತುಹಾಕುವೆನು; ನನ್ನ ಹೆಸರಿಗೆ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಿರಾಕರಿಸಿಬಿಡುವೆನು; ಎಲ್ಲ ಜನಾಂಗಗಳವರು ಪರಿಹಾಸ್ಯದಿಂದ ಲಾವಣಿ ಕಟ್ಟುವುದಕ್ಕೂ ನಿಂದಿಸುವುದಕ್ಕೂ ಇದು ಆಸ್ಪದವಾಗುವಂತೆ ಮಾಡುವೆನು.


ಇಲ್ಲಿ, ದೇವರ ದನಿಯನು ಕೇಳಿಯೂ ದಂಗೆ ಎದ್ದವರು ಯಾರು? ಮೋಶೆಯ ಮುಂದಾಳತ್ವದಲ್ಲಿ ಈಜಿಪ್ಟ್ ದೇಶವನ್ನು ಬಿಟ್ಟುಬಂದ ಎಲ್ಲರೂ ಅಲ್ಲವೇ?


ಈಜಿಪ್ಟಿಗೆ ಹೋಗಿ ಅಲ್ಲಿ ಪ್ರವಾಸಿಸಲು ಹಟಹಿಡಿದ ಆ ಜುದೇಯದ ಅಳಿದುಳಿದ ಜನರನ್ನು ನಾಶಮಾಡುವೆನು. ಈಜಿಪ್ಟಿನಲ್ಲೆ ಅವರು ಮಣ್ಣುಪಾಲಾಗುವರು. ಖಡ್ಗ-ಕ್ಷಾಮಗಳಿಂದ ಅಳಿದುಹೋಗುವರು. ಚಿಕ್ಕವರು-ದೊಡ್ಡವರು ಎನ್ನದೆ ಖಡ್ಗ-ಕ್ಷಾಮಗಳಿಗೆ ತುತ್ತಾಗಿ, ಅಪವಾದ, ಅಪಹಾಸ್ಯಗಳಿಗೂ ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವರು.


“ಹೀಗಿರಲು, ಸೇನಾಧೀಶ್ವರ ಸ್ವಾಮಿಯೂ ಇಸ್ರಯೇಲಿನ ದೇವರೂ ಆದ ಸರ್ವೇಶ್ವರ ಈಗ ಹೇಳುವುದನ್ನು ಕೇಳಿ: ‘ಈ ದೊಡ್ಡ ಕೇಡನ್ನು ನಿಮಗೆ ನೀವೆ ಬರಮಾಡಿಕೊಳ್ಳುವುದು ಸರಿಯೆ? ಈ ದುರಾಚಾರದ ನಿಮಿತ್ತ ಜುದೇಯದ ಗಂಡಸರು, ಹೆಂಗಸರು, ಮಕ್ಕಳು, ಮೊಲೆಕೂಸುಗಳು ನಿರ್ಮೂಲವಾಗುವರು. ನಿಮ್ಮಲ್ಲಿ ಯಾರೂ ಉಳಿಯರು.


ಖಡ್ಗ-ಕ್ಷಾಮ-ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ ಲೋಕದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗಿರುವ ಎಲ್ಲ ರಾಷ್ಟ್ರಗಳಲ್ಲಿ ಅವರು ಶಾಪ, ಪರಿಹಾಸ್ಯ, ದೂಷಣೆಗಳಿಗೆ ಗುರಿಯಾಗುವಂತೆ ಮಾಡುವೆನು.


ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”


ಅವರ ಕೇಡಿಗಾಗಿ ನಾನು ಅವರನ್ನು ಜಗದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗುವ ಸ್ಥಳಗಳಲ್ಲೆಲ್ಲ ಅವರು ಕಟ್ಟುಗಾದೆಗೆ, ನಿಂದೆ ಪರಿಹಾಸ್ಯಕ್ಕೆ, ಶಾಪತಾಪಕ್ಕೆ ಗುರಿಯಾಗುವರು.


ಆಯ್ಕೆಯಾದವರಿಗೆ ನಿಮ್ಮ ಹೆಸರು ಶಾಪದ ಹೆಸರಾಗಿಯೇ ಉಳಿಯುವುದು. ಏಕೆಂದರೆ, ಸ್ವಾಮಿ ಸರ್ವೇಶ್ವರ ಆದ ನಾನು ನಿಮ್ಮನ್ನು ಕೊಲೆಗೀಡುಮಾಡುವೆನು. ನನ್ನ ಭಕ್ತಾದಿಗಳಿಗಾದರೋ ಹೊಸ ಹೆಸರನ್ನು ಕೊಡುವೆನು.


ಜೆರುಸಲೇಮ್ ನಗರ ಹಾಳಾಯಿತು. ಜುದೇಯ ನಾಡು ಬಿದ್ದುಹೋಯಿತು. ಜನರ ನಡೆನುಡಿಗಳೆಲ್ಲ ಸ್ವಾಮಿಗೆ ವಿರುದ್ಧವಾದವು. ಸ್ವಾಮಿಯ ಮಹಿಮಾ ಸಾನ್ನಿಧ್ಯಕ್ಕೆ ಪ್ರತೀಕೂಲವಾದವು.


ಈಜಿಪ್ಟಿನ ವಿಷಯವಾಗಿ ದೈವೋಕ್ತಿ : ಇಗೋ, ಸರ್ವೇಶ್ವರ ವೇಗವಾಗಿ ಚಲಿಸುವ ಮೇಘಗಳ ಮೇಲೆ ಈಜಿಪ್ಟಿಗೆ ಬರುವರು. ಅವರ ಮುಂದೆ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯ ಕರಗಿ ನೀರಾಗುವುದು.


ಕಳವು, ಕೊಲೆ, ವ್ಯಭಿಚಾರಗಳನ್ನು ಮಾಡುತ್ತೀರಿ. ಸುಳ್ಳುಸಾಕ್ಷಿ ಹೇಳುತ್ತೀರಿ. ಬಾಳನಿಗೆ ಧೂಪಾರತಿ ಎತ್ತುತ್ತೀರಿ. ಕಂಡು ಕೇಳದ ಅನ್ಯದೇವತೆಗಳನ್ನು ಆರಾಧಿಸುತ್ತೀರಿ.


ಆಗ ಜುದೇಯದ ನಗರದವರೂ ಜೆರುಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಧೂಪಾರತಿಯೆತ್ತಿದರೋ ಅವುಗಳನ್ನು ಮರೆಹೊಕ್ಕು ಕೂಗಿಕೊಳ್ಳುವರು. ಆದರೆ ಅಂಥ ಕೇಡಿನ ಕಾಲದಲ್ಲಿ ಆ ದೇವತೆಗಳಿಂದ ಅವರಿಗೆ ಯಾವ ರಕ್ಷಣೆಯೂ ದೊರಕದು.


“ಸರ್ವಶಕ್ತ ಸರ್ವೇಶ್ವರನಾದ ನಾನೇ ಈ ಇಸ್ರಯೇಲನ್ನೂ ಜುದೇಯವನ್ನೂ ನೆಟ್ಟಿ ಬೆಳೆಸಿದೆ. ಆದರೆ ಈಗ ‘ನಿನಗೆ ಕೇಡು,’ ಎಂದು ಶಪಿಸುತ್ತಿದ್ದೇನೆ. ಏಕೆಂದರೆ ಬಾಳನಿಗೆ ಧೂಪಾರತಿಯೆತ್ತಿ, ನನ್ನನ್ನು ಕೆಣಕಿ, ತಮಗೇ ಕೆಡುಕನ್ನು ಮಾಡಿಕೊಂಡಿದ್ದಾರೆ.


ಅವರು ಗಿರಿಶಿಖರಗಳ ಮೇಲೆ ಬಲಿಯನರ್ಪಿಸುತ್ತಾರೆ. ಬೆಟ್ಟಗುಡ್ಡಗಳ ಮೇಲೆ ಧೂಪಹಾಕುತ್ತಾರೆ. ದಟ್ಟ ನೆರಳಿನ ಅಲ್ಲೋನ್, ಲಿಬ್ನೆ, ಏಲಾ ವೃಕ್ಷಗಳ ಅಡಿಯಲ್ಲಿ ಇಂತಹುದನ್ನೆಲ್ಲ ಮಾಡುತ್ತಾರೆ. ಹೀಗಿರಲು ನಿಮ್ಮ ಪುತ್ರಿಯರು ಸೂಳೆಯರಾಗುವರು. ನಿಮ್ಮ ಸೊಸೆಗಳು ವ್ಯಭಿಚಾರಿಣಿಗಳಾಗುವರು. ಇದರಲ್ಲಿ ಆಶ್ಚರ್ಯವೇನಿಲ್ಲ.


ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ.


ಹೊರಗೆ ಕತ್ತಿ, ಒಳಗೆ ಭಯಭೀತಿ ಇವರಲ್ಲಿರುವುವು. ಯುವಕ ಯುವತಿಯರು, ಮಕ್ಕಳು ಮುದುಕರು ಕತ್ತಿಕಠಾರಿಗಳಿಗೆ ತುತ್ತಾಗುವರು ಇವರೆಲ್ಲರು.


ಇಸ್ರಯೇಲ್ ವಂಶವೂ ಯೆಹೂದ ವಂಶವೂ ಚಿಕ್ಕಂದಿನಿಂದ ನನ್ನ ಚಿತ್ತಕ್ಕೆ ವಿರುದ್ಧವಾಗಿಯೇ ನಡೆಯುತ್ತಾ ಬಂದಿದೆ. ಹೌದು, ಇಸ್ರಯೇಲ್ ವಂಶದವರು ತಮ್ಮ ಕೈಕೆಲಸದ ವಿಗ್ರಹಗಳಿಂದ ನನ್ನನ್ನು ರೇಗಿಸುತ್ತಲೇ ಬಂದಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.


ವೃದ್ಧ, ಯುವಕ, ಯುವತಿ, ಮಹಿಳೆ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿ,” ಎಂದು ನನಗೆ ಕೇಳಿಸುವಂತೆ ಅಪ್ಪಣೆಮಾಡಿದರು. ಆಗ ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.


ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲವಲೇಶವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿ, ಬಿಟ್ಟುಬಿಡಿ; ನೀವು ಏಕೆ ಸಾಯಬೇಕು?” ಇದು ಸರ್ವೇಶ್ವರನಾದ ದೇವರ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು