Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 44:6 - ಕನ್ನಡ ಸತ್ಯವೇದವು C.L. Bible (BSI)

6 ಆದಕಾರಣ, ನನ್ನ ರೌದ್ರಕೋಪಾಗ್ನಿ ಸುರಿದು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಧಗಧಗಿಸಿತು. ಅವು ಈಗಲೂ ಹಾಳುಪಾಳಾಗಿವೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದಕಾರಣ ನನ್ನ ಉಗ್ರರೋಷಾಗ್ನಿಯು ಸುರಿದು ಯೆಹೂದದ ಊರುಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಧಗಧಗಿಸಿತು; ಅವು ಈಗಲೂ ಹಾಳು ಪಾಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆದಕಾರಣ ನನ್ನ ಉಗ್ರರೋಷಾಗ್ನಿಯು ಸುರಿದು ಯೆಹೂದದ ಊರುಗಳಲ್ಲಿಯೂ ಯೆರೂಸಲೇವಿುನ ಬೀದಿಗಳಲ್ಲಿಯೂ ಧಗಧಗಿಸಿತು; ಅವು ಈಗಲೂ ಹಾಳುಹಾಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದ್ದರಿಂದ ಆ ಜನರ ಮೇಲೆ ನಾನು ನನ್ನ ಕೋಪವನ್ನು ವ್ಯಕ್ತಪಡಿಸಿದೆ. ನಾನು ಯೆಹೂದದ ಪಟ್ಟಣಗಳನ್ನು ಮತ್ತು ಜೆರುಸಲೇಮಿನ ಬೀದಿಗಳನ್ನು ದಂಡಿಸಿದೆ. ನನ್ನ ಕೋಪವು ಜೆರುಸಲೇಮ್ ನಗರವನ್ನು ಮತ್ತು ಯೆಹೂದದ ಪಟ್ಟಣಗಳನ್ನು ಈಗಿದ್ದ ಕಲ್ಲಿನ ದಿಬ್ಬಗಳನ್ನಾಗಿ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆದ್ದರಿಂದ ನನ್ನ ರೌದ್ರವೂ ನನ್ನ ಕೋಪವೂ ಸುರಿದು, ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಉರಿಯಿತು. ಅವು ಈ ದಿನದವರೆಗೂ ಹಾಳೂ, ಬೀಳೂ ಆದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 44:6
34 ತಿಳಿವುಗಳ ಹೋಲಿಕೆ  

“ಸರ್ವೇಶ್ವರನಾದ ನಾನು ಹೇಳುವುದನ್ನು ಗಮನಿಸಿರಿ; ಇಗೋ, ನನ್ನ ಕೋಪವೆಂಬ ರೋಷಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಕಾಡುಮರಗಳ ಮೇಲೂ ಭೂಮಿಯ ಬೆಳೆಯ ಮೇಲೂ ಅದನ್ನು ಕಾರುವೆನು. ಅದು ಆರದೆ ದಹಿಸುವುದು!”


ಆದಕಾರಣ ನಾನೂ ಕೋಪೋದ್ರೇಕದಿಂದ ವರ್ತಿಸುವೆನು. ಅವರನ್ನು ಕಟಾಕ್ಷಿಸೆನು, ಉಳಿಸೆನು; ಅವರು ನನ್ನ ಕಿವಿಯಲ್ಲಿ ಎಷ್ಟು ಗಟ್ಟಿಯಾಗಿ ಕೂಗಿಕೊಂಡರೂ ನಾನು ಆಲಿಸೆನು.”


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’


ನಾನೇ ನಿಮಗೆ ವಿರುದ್ಧವಾಗಿ ಕಡುಕೋಪದಿಂದ, ರೋಷಾವೇಶದಿಂದ, ಕ್ರೋಧಭರಿತನಾಗಿ, ಚಾಚಿದ ಕೈಯಿಂದಲೂ ಭುಜಪರಾಕ್ರಮದಿಂದಲೂ ಯುದ್ಧಮಾಡುವೆನು.


ಜುದೇಯದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಹರ್ಷಾಡಂಬರಗಳು ಕೇಳಿಬರುವುದಿಲ್ಲ. ವಧೂವರರ ಸೊಲ್ಲನ್ನು ನಿಲ್ಲಿಸಿಬಿಡುವೆನು, ನಾಡಿಗೆ ನಾಡೇ ಹಾಳಾಗುವುದು. ಇದು ಸರ್ವೇಶ್ವರನಾದ ನನ್ನ ನುಡಿ.”


ನಿನ್ನ ಮಕ್ಕಳು ಬಿದ್ದರು ಬೀದಿ ಚೌಕಗಳಲಿ ಬಲೆಗೆ ಬಿದ್ದ ಜಿಂಕೆಮರಿಯಂತಿಹರು ಪ್ರಜ್ಞೆತಪ್ಪಿ. ನಿನ್ನ ದೇವರನು ಮೂದಲಿಸಿಹರು ಸರ್ವೇಶ್ವರನ ರೋಷವನ್ನನುಭವಿಸಿಹರು.


ಎಚ್ಚೆತ್ತುಕೊ, ಎಚ್ಚೆತ್ತುಕೊ, ನೀನೆದ್ದು ನಿಲ್ಲು ಜೆರುಸಲೇಮೆ! ಕುಡಿದುಬಿಟ್ಟಿರುವೆ ನೀ ಮತ್ತು ತರುವ ಪಾನಪಾತ್ರೆಯಿಂದ ತೊಟ್ಟನ್ನೂ ಬಿಡದೆ ಹೀರಿರುವೆ ಸರ್ವೇಶ್ವರನ ಕೋಪ ತುಂಬಿದಾ ಕೊಡದಿಂದ !


ಅದಕ್ಕೆ ನಾನು: “ಸ್ವಾಮಿ, ಈ ಪರಿಸ್ಥಿತಿ ಎಷ್ಟರ ತನಕ?” ಎಂದು ಕೇಳಿದೆನು. ಅದಕ್ಕೆ ಪ್ರತ್ಯುತ್ತರವಾಗಿ :


ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು. ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.


ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.


ಅಂತೆಯೇ ನಿನ್ನ ಲಂಪಟತನ ಅಸಹ್ಯವಾಗಿರುವುದರಿಂದಲೂ ನಾನು ನಿನ್ನನ್ನು ಎಷ್ಟು ಶುದ್ಧಿಮಾಡಿದರೂ ನೀನು ಶುದ್ಧಿಯಾಗದೆ ಹೋದದ್ದರಿಂದಲೂ ನಾನು ನನ್ನ ರೋಷವನ್ನು ನಿನ್ನಲ್ಲಿ ಹರಿಸಿ ಶಾಂತನಾಗುವವರೆಗೂ ನೀನು ನಿನ್ನ ಕೊಳೆಯನ್ನು ಇನ್ನೂ ಕಳೆದುಕೊಳ್ಳದೆ, ಶುದ್ಧಿಯಾಗದೆ ಇರುವೆ.


ಆ ರಕ್ತದಿಂದ ರೋಷವೆದ್ದು ಮುಯ್ಯಿಗೆ ಮುಯ್ಯಿ ತೀರಿಸಲೆಂದು, ಅದನ್ನು ನಾನು ಇಂಗಗೊಡಿಸದೆ ಬರೀ ಬಂಡೆಯ ಮೇಲೆ ನಿಲ್ಲಿಸಿದ್ದೇನೆ.


“ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ, ನಿಮ್ಮ ಮೇಲೆ ದೊರೆತನಮಾಡುವೆನು;


ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು, ಹತ್ತಿರದಲ್ಲಿರುವವನು ಖಡ್ಗದಿಂದ ಸಾಯುವನು; ಅಂತು ನಾನು ಅವರ ಮೇಲೆ ಇಟ್ಟಿರುವ ರೋಷವನ್ನು ತೀರಿಸಿಬಿಡುವೆನು.


“ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.


ಅವರು ಒಂದು ವೇಳೆ ಸರ್ವೇಶ್ವರನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಏಕೆಂದರೆ, ಸರ್ವೇಶ್ವರ ಆ ಜನರ ವಿರುದ್ಧ ತೋರಿಸಬೇಕೆಂದಿರುವ ಕೋಪಾಕ್ರೋಶ ಭಯಾನಕವಾಗಿದೆ,” ಎಂದು ಆಜ್ಞಾಪಿಸಿದನು.


‘ದಾವೀದ ಮನೆತನದವರೇ, ಸರ್ವೇಶ್ವರನ ಮಾತಿದು: ಮುಂಜಾನೆಯೆ ನ್ಯಾಯನೀತಿಯನ್ನು ಪರಿಪಾಲಿಸಿರಿ; ವಂಚಿತರನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ಕೋಪಾಗ್ನಿಯು ಜ್ವಾಲೆಯಂತೆ ಭುಗಿಲೇಳುವುದು, ಅದರ ಕಿಚ್ಚನ್ನು ಮುಚ್ಚಿಡಲು ಯಾರಿಂದಲೂ ಆಗದು.


ಜುದೇಯದವರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನಾದ ನನಗಾಗಿ ಸುನ್ನತಿಯಾಗಿರಿ. ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲವಾದರೆ ನಿಮ್ಮ ಪಾಪಾಕ್ರಮಗಳ ನಿಮಿತ್ತ ನನ್ನ ಕೋಪಾಗ್ನಿಯು ಭುಗಿಲೆದ್ದು ಆರಿಸಲಾಗದಷ್ಟು ಧಗಧಗಿಸುವುದು.”


ನಾನು ನಿಮಗೆ ವಿರುದ್ಧ ಕೋಪದಿಂದ ವರ್ತಿಸುವೆನು. ನಿಮ್ಮ ಪಾಪಗಳ ಕಾರಣ ಏಳ್ಮಡಿಯಾಗಿ ಶಿಕ್ಷಿಸುವೆನು.


ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ದೇವಸ್ಥಾನಗಳನ್ನು ನೆಲಸಮ ಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಸುವಾಸನೆಯನ್ನು ನಾನು ಮೂಸಿಯೂ ನೋಡುವುದಿಲ್ಲ.


ನಿಮ್ಮ ನಾಡು ಹಾಳುಬಿದ್ದಿದೆ: ನಿಮ್ಮ ಪಟ್ಟಣಗಳು ಸುಟ್ಟು ಭಸ್ಮವಾಗಿವೆ. ನಿಮ್ಮ ಕಣ್ಮುಂದೆಯೆ ನಿಮ್ಮ ಭೂಮಿಯನ್ನು ಅನ್ಯಜನರು ಕಬಳಿಸುತ್ತಿದ್ದಾರೆ. ಅನ್ಯದೇಶಗಳು ನಾಶವಾದಂತೆಯೇ ನಿಮ್ಮ ನಾಡು ಹಾಳಾಗಿದೆ.


ಸರ್ವೇಶ್ವರ ಸ್ವಾಮಿ ಹೀಗೆಂದಿದ್ದಾರೆ : ನಾಡೆಲ್ಲ ಬಟ್ಟಬರಿದಾಗುವುದು; ಆದರೆ ನಾನು ಅದನ್ನು ಸಂಪೂರ್ಣವಾಗಿ ಲಯಮಾಡುವುದಿಲ್ಲ.


ಇವರು ಜುದೇಯ ಪಟ್ಟಣಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಮಾಡುವುದನ್ನು ನೀನೆ ನೋಡಿರುವೆ ಅಲ್ಲವೆ?


ಸರ್ವೇಶ್ವರನಾದ ನನ್ನ ಗುರಿಯನ್ನು ಗಮನಿಸಿರಿ - ನಾನು ಅಪ್ಪಣೆಕೊಟ್ಟು, ಶತ್ರುಗಳು ಈ ನಗರಕ್ಕೆ ಮತ್ತೆ ಬರುವಂತೆ ಮಾಡುವೆನು. ಅವರು ಇದರ ವಿರುದ್ಧ ಯುದ್ಧಮಾಡಿ, ಇದನ್ನು ಆಕ್ರಮಿಸಿಕೊಂಡು, ಬೆಂಕಿಯಿಂದ ಸುಟ್ಟುಹಾಕುವರು. ನಾನು ಜುದೇಯದ ನಗರಗಳನ್ನು ನಿರ್ಜನವಾದ ಪಾಳುಭೂಮಿಯನ್ನಾಗಿಸುವೆನು.


“ಆಕಾಶದಿಂದ ಆತ ಸುರಿಸಿದ್ದಾನೆ ಅಗ್ನಿಯನ್ನೆ ಅದು ದಹಿಸುತ್ತಿದೆ ನನ್ನೊಳಗಿನ ಎಲುಬುಗಳನ್ನೆ ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ ಅದು ನನ್ನನ್ನೆಳೆಯುತ್ತಿದೆ ನೆಲಕ್ಕೆ ಹಾಳುಬಿದ್ದ ನಾನು ಸದಾ ಬಳಲುತ್ತಿದ್ದೇನೆ.”


ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಹರಿಸುತ್ತಾ, ನಿಮ್ಮನ್ನು ಜನಾಂಗಗಳಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಒಂದುಗೂಡಿಸಿ,


ಸರ್ವೇಶ್ವರ ನಿಮ್ಮ ಪಿತೃಗಳ ಮೇಲೆ ಬಹಳ ಸಿಟ್ಟುಗೊಂಡಿದ್ದಾರೆ.


ಬಿರುಗಾಳಿಯಂತೆ ಅವರನ್ನು ಅಪರಿಚಿತ ಜನಾಂಗಗಳ ಮಧ್ಯೆ ತೂರಿ ಚದರಿಬಿಟ್ಟೆ; ಹಾಗೆ ಅವರು ಚದರಿಹೋದ ಮೇಲೆ ನಾಡು ಹಾಳಾಯಿತು. ಅಲ್ಲಿ ಯಾರೂ ಉಳಿಯದಂತಾಯಿತು. ಅವರ ನಿಮಿತ್ತ ಚೆಲುವ ನಾಡು ನಿರ್ಜನ ಪ್ರದೇಶವಾಯಿತು.”


ಈ ಕೆಟ್ಟ ವಂಶದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು. ಇದು ಸರ್ವೇಶ್ವರನಾದ ನನ್ನ ನುಡಿ.”


ನೀವು ನಡೆಸಿದ ದುರಾಚಾರಗಳನ್ನು ಹಾಗು ಅಸಹ್ಯಕಾರ್ಯಗಳನ್ನು ಸರ್ವೇಶ್ವರ ಇನ್ನು ಸಹಿಸಲಾರದೆ ಹೋದುದರಿಂದಲೇ ನಿಮ್ಮ ನಾಡು ಹಾಳುಬಿದ್ದಿದೆ. ನಿರ್ಜನವಾಗಿ ಭಯಭೀತಿಗೆ ಎಡೆ ಆಗಿದೆ. ಅದರ ಸ್ಥಿತಿ ಈಗಲೂ ಬದಲಾಗಿಲ್ಲ.


ಅಯ್ಯೋ, ಅಂದು ಜನಭರಿತವಾಗಿದ್ದ ನಗರಿ ಇಂದು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ ! ರಾಷ್ಟ್ರಗಳಲ್ಲೆಲ್ಲಾ ಅತಿ ಶ್ರೇಷ್ಠಳಾಗಿದ್ದವಳು ವಿಧವೆ ಆಗಿಬಿಟ್ಟಳಲ್ಲಾ ! ಪ್ರಾಂತ್ಯಗಳಲ್ಲೆಲ್ಲಾ ಬಹಳ ಪ್ರವೀಣಳಾಗಿದ್ದವಳು ದಾಸಿಯಂತೆ ಆಗಿಬಿಟ್ಟಿರುವಳಲ್ಲಾ !


ಸಿಯೋನ್ ಶ್ರೀ ಪರ್ವತ ಹಾಳಾಯಿತು ಅದು ಅಲೆದಾಡುವ ನರಿಗಳ ಬೀಡಾಯಿತು.


ಆದರೂ ನನ್ನ ದಾಸರಾದ ಪ್ರವಾದಿಗಳಿಗೆ ನಾನು ಕೊಟ್ಟ ಆಜ್ಞೆಗಳು, ವಿಧಿನಿಯಮಗಳು ನಿಮ್ಮ ಪಿತೃಗಳ ಮರಣದ ನಂತರವೂ ಶಾಶ್ವತವಾಗಿ ಉಳಿದಿವೆಯಲ್ಲವೆ? ಅವರು ಪಶ್ಚಾತ್ತಾಪಪಟ್ಟು, ‘ಸೇನಾಧೀಶ್ವರ ಸರ್ವೇಶ್ವರ ನಮ್ಮ ದುರ್ಮಾರ್ಗ ಹಾಗೂ ದುಷ್ಕೃತ್ಯಗಳಿಗೆ ತಕ್ಕಂತೆ ಏನು ಮಾಡಬೇಕೆಂದು ಸಂಕಲ್ಪಿಸಿದ್ದರೋ, ಅದನ್ನು ನಮಗೆ ಮಾಡಿಯೇ ಮಾಡಿದ್ದಾರೆ’ ಎಂದು ಹೇಳಿಕೊಂಡರಲ್ಲವೆ?”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು