Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 44:23 - ಕನ್ನಡ ಸತ್ಯವೇದವು C.L. Bible (BSI)

23 ನೀವು ಸರ್ವೇಶ್ವರ ಸ್ವಾಮಿಯ ಮಾತನ್ನು ಕೇಳದೆ, ಅವರ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ, ಪಾಪಮಾಡಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿದ್ದರಿಂದಲೇ ಇಂಥಾ ವಿಪತ್ತು ನಿಮಗೆ ಸಂಭವಿಸಿದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ, ನಿಬಂಧನೆಗಳನ್ನೂ, ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪ ಮಾಡಿ ಅನ್ಯದೇವತೆಗಳಿಗೆ ಧೂಪಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪಮಾಡಿ [ಅನ್ಯದೇವತೆಗಳಿಗೆ] ಧೂಪ ಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ನೀವು ಬೇರೆ ದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿದ್ದಕ್ಕಾಗಿ ಆ ಕೇಡುಗಳೆಲ್ಲಾ ಸಂಭವಿಸಿದವು. ನೀವು ಯೆಹೋವನ ವಿರುದ್ಧ ಪಾಪಮಾಡಿದಿರಿ. ನೀವು ಯೆಹೋವನ ಆಜ್ಞಾಪಾಲನೆ ಮಾಡಲಿಲ್ಲ. ನೀವು ಆತನ ಉಪದೇಶಗಳನ್ನಾಗಲಿ ಅಥವಾ ಆತನು ಬೋಧಿಸಿದ ಧರ್ಮೋಪದೇಶಗಳನ್ನಾಗಲಿ ಅನುಸರಿಸಲಿಲ್ಲ. ನೀವು ಮಾಡಿಕೊಂಡ ಒಡಂಬಡಿಕೆಯಂತೆ ನಡೆಯಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ನೀವು ಧೂಪ ಸುಟ್ಟು, ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಯೆಹೋವ ದೇವರ ಮಾತನ್ನು ಕೇಳದೆ, ದೈವನಿಯಮವನ್ನೂ, ದೈವತೀರ್ಪುಗಳನ್ನೂ, ದೈವಷರತ್ತುಗಳನ್ನೂ ಅನುಸರಿಸದೆ, ದೇವರಿಗೆ ವಿಧೇಯರಾಗದೆ ಇದ್ದುದರಿಂದಲೇ, ಈ ಕೇಡು ಈ ದಿನ ನಿಮಗೆ ಸಂಭವಿಸಿದೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 44:23
24 ತಿಳಿವುಗಳ ಹೋಲಿಕೆ  

ಆಗ ಅವರಿಗೆ, ‘ಈ ನಾಡಿನವರು ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಬರಮಾಡಿದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಆರಾಧಿಸಿದ್ದರಿಂದಲೇ ಸರ್ವೇಶ್ವರ ಈ ಎಲ್ಲಾ ಆಪತ್ತು-ವಿಪತ್ತುಗಳನ್ನು ಬರಮಾಡಿದ್ದಾರೆ’ ಎಂಬ ಉತ್ತರಸಿಕ್ಕುವುದು,” ಎಂದರು.


ದುಷ್ಕರ್ಮಿಗಳು ಬಂದಿಹರೆನ್ನ ಸಮೀಪಕ್ಕೆ I ದೂರವಿರುವರು ಅವರು ನಿನ್ನ ಧರ್ಮಶಾಸ್ತ್ರಕೆ II


ನಿಮ್ಮ ಪೂರ್ವಿಕರು ಹೀಗೆ ಮಾಡಿದ್ದರಿಂದಲೆ ನಮ್ಮ ದೇವರು ಎಲ್ಲಾ ಕೇಡನ್ನು ನಮ್ಮ ಮೇಲೂ ನಮ್ಮ ಪಟ್ಟಣದ ಮೇಲೂ ಬರಮಾಡಿದ್ದಾರೆ. ಹೀಗಿರಲಾಗಿ, ನೀವೂ ಸಬ್ಬತ್‍ದಿನವನ್ನು ಅಶುದ್ಧಮಾಡಿ ಇಸ್ರಯೇಲರ ಮೇಲಿದ್ದ ದೇವಕೋಪವನ್ನು ಹೆಚ್ಚಿಸಬೇಡಿ,” ಎಂದು ಹೇಳಿ ಅವರನ್ನು ಗದರಿಸಿದೆ.


ದೇವರ ಆಲಯಕ್ಕೂ ಕಲ್ಲಿನ ವಿಗ್ರಹಕ್ಕೂ ಎಲ್ಲಿಯ ಸಾಮ್ಯ? ನಾವಾದರೋ ಜೀವಂತ ದೇವರ ಮಂದಿರವಾಗಿದ್ದೇವೆ. ಇದನ್ನು ದೇವರೇ ಹೇಳಿದ್ದಾರೆ: “ನನ್ನ ಜನರಲ್ಲೇ ನಾ ಮನೆಮಾಡುವೆನು ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು ಅವರೆನಗೆ ಪ್ರಜೆಯಾಗಿರುವರು.”


ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ : ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ.


ಜೆರುಸಲೇಮ್ ಅಶುದ್ಧಳಾದಳು ಪದೇ ಪದೇ ಪಾಪಮಾಡಿ. ಹೊಗಳುತ್ತಿದ್ದವರೇ ತೆಗಳುವವರಾದರು ಆಕೆಯ ನಗ್ನತೆಯನ್ನು ನೋಡಿ. ಆಕೆಯೋ ನಿಟ್ಟುಸಿರಿಡುತ್ತಿರುವಳು ಮುಖವನ್ನು ಮರೆಮಾಡಿ.


ನೀವು, ನಿಮ್ಮ ಪೂರ್ವಜರು, ನಿಮ್ಮ ಅರಸರು, ಅಧಿಕಾರಿಗಳು, ಜನಸಾಮಾನ್ಯರು ಮತ್ತು ನೀವೆಲ್ಲರು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಎತ್ತಿದ ಧೂಪಾರತಿ ಸರ್ವೇಶ್ವರನ ನೆನಪಿನಲ್ಲಿ ಇದೆ ಅಲ್ಲವೆ? ಅದನ್ನು ಅವರು ಮರೆತುಬಿಟ್ಟಿದ್ದಾರೆಯೇ?


ಆ ಗಗನದೊಡತಿಗೆ ಧೂಪಾರತಿ ಎತ್ತುವುದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವುದನ್ನೂ ನಿಲ್ಲಿಸಿಬಿಟ್ಟಂದಿನಿಂದ ಎಲ್ಲಾ ತರಹದ ಕೊರತೆಗೆ ಗುರಿಯಾಗುತ್ತಿದ್ದೇವೆ, ಖಡ್ಗ-ಕ್ಷಾಮಗಳಿಂದ ನಾಶವಾಗುತ್ತಿದ್ದೇವೆ.”


ಪ್ರವಾಸಿಗಳಾಗಿ ನೀವು ಬಂದಿರುವ ಈಜಿಪ್ಟಿನಲ್ಲಿ ಅನ್ಯದೇವತೆಗಳಿಗೆ ಧೂಪಾರತಿ ಎತ್ತುವ ದುಷ್ಕೃತ್ಯವನ್ನು ನಡೆಸುತ್ತಾ ನನ್ನನ್ನು ಕೆಣಕುತ್ತಿದ್ದೀರಿ. ಆದ್ದರಿಂದ ನೀವೂ ನಿರ್ಮೂಲರಾಗಿ ಎಲ್ಲ ಭೂರಾಜ್ಯಗಳ ಶಾಪ, ನಿಂದೆ, ದೂಷಣೆಗಳಿಗೆ ಗುರಿಯಾಗುವಿರಿ.


ಆ ಶಾಪ ಈಡೇರುವಂತೆ ಮಾಡಿದ್ದಾನೆ. ನೀವು ಆತನ ವಾಣಿಗೆ ಕಿವಿಗೊಡದೆ ಪಾಪಮಾಡಿದ್ದರಿಂದ ಇದು ನಿಮಗೆ ಸಂಭವಿಸಿದೆ.


ದೂರವಿದೆ ದುರುಳರಿಗೆ ಆ ಜೀವೋದ್ಧಾರ I ಅವರಿಗಿದೆ ನಿನ್ನ ನಿಬಂಧನೆಗಳ ತಾತ್ಸಾರ II


ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಪರ ದೇವರನು I ಕೈಗೊಂಡು ನಡೆಯದೆ ಹೋದರು ಆತನ ವಿಧಿನಿಯಮಗಳನು II


ಆದರೂ ಅವರು ದೇವಸಂದೇಶಕರನ್ನು ಗೇಲಿಮಾಡಿದರು. ದೇವರ ಮಾತುಗಳನ್ನು ತುಚ್ಛೀಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು. ಆದ್ದರಿಂದ ದೇವಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು. ಅದರ ತಾಪ ಆರಿಹೋಗಲೇ ಇಲ್ಲ.


ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು I ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು II


ನಿನ್ನ ಶಾಸ್ತ್ರವನು ಜನ ಪಾಲಿಸದ ಕಾರಣ I ಹರಿಯುತ್ತಿದೆ ಧಾರೆಯಾಗಿ ನನ್ನ ಕಣ್ಕಣ II


“ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ,


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ‘ನಾನು ಜೆರುಸಲೇಮಿಗು ಹಾಗುಜುದೇಯದ ಎಲ್ಲ ಊರುಗಳಿಗು ಬರಮಾಡಿದ ಕೇಡನ್ನು ನೀವೇ ನೋಡಿದ್ದೀರಿ.


ಅಲ್ಲಿನವರು ತಮಗೂ ನಿಮಗೂ ಮತ್ತು ನಿಮ್ಮ ಪೂರ್ವಜರಿಗೂ ತಿಳಿಯದ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿ ಪೂಜಿಸುವುದಕ್ಕೆ ತವಕಪಟ್ಟರು. ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡೆಸಿದರು. ಆದ್ದರಿಂದಲೇ ಆ ಸ್ಥಳಗಳು ಹಾಳಾದವು, ನಿರ್ಜನಪ್ರದೇಶಗಳಾದವು.


ಅವರು ಇಂದಿನವರೆಗೂ ಪಶ್ಚಾತ್ತಾಪಪಡಲಿಲ್ಲ. ನನಗೆ ಭಯಪಡಲಿಲ್ಲ. ನಿಮಗೂ ನಿಮ್ಮ ಪೂರ್ವಜರಿಗೂ ನಾನು ನೇಮಿಸಿದ ನಿಯಮನಿಷ್ಠೆಗಳನ್ನು ಅನುಸರಿಸಿ ನಡೆಯಲಿಲ್ಲ.”


ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದ್ದರೂ ಕೇಳದೆ ಆ ಜನಾಂಗಗಳನ್ನೇ ಅನುಸರಿಸಿದರು.


ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಧರ್ಮಮಾರ್ಗಗಳನ್ನು ತೊರೆದುಬಿಟ್ಟಿದ್ದೇವೆ. ನಿಮ್ಮ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಸರ್ವೇಶ್ವರನೆಂಬ ನಿಮ್ಮ ದಯೆಯನ್ನು ಬೇಡಿಕೊಳ್ಳಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು