Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 44:22 - ಕನ್ನಡ ಸತ್ಯವೇದವು C.L. Bible (BSI)

22 ನೀವು ನಡೆಸಿದ ದುರಾಚಾರಗಳನ್ನು ಹಾಗು ಅಸಹ್ಯಕಾರ್ಯಗಳನ್ನು ಸರ್ವೇಶ್ವರ ಇನ್ನು ಸಹಿಸಲಾರದೆ ಹೋದುದರಿಂದಲೇ ನಿಮ್ಮ ನಾಡು ಹಾಳುಬಿದ್ದಿದೆ. ನಿರ್ಜನವಾಗಿ ಭಯಭೀತಿಗೆ ಎಡೆ ಆಗಿದೆ. ಅದರ ಸ್ಥಿತಿ ಈಗಲೂ ಬದಲಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನೀವು ನಡೆಸಿದ ದುರಾಚಾರಗಳನ್ನೂ, ಅಸಹ್ಯಕಾರ್ಯಗಳನ್ನೂ ಯೆಹೋವನು ಇನ್ನು ಸಹಿಸಲಾರದೆ ಹೋದುದರಿಂದ ನಿಮ್ಮ ದೇಶವು ಹಾಳುಬಿದ್ದು ಜನವಿಲ್ಲದೆ ನಾಶಕ್ಕೂ, ಶಾಪಕ್ಕೂ ಆಸ್ಪದವಾಯಿತು; ಈಗಲೂ ಹಾಗೆಯೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನೀವು ನಡಿಸಿದ ದುರಾಚಾರಗಳನ್ನೂ ಅಸಹ್ಯಕಾರ್ಯಗಳನ್ನೂ ಯೆಹೋವನು ಇನ್ನು ಸಹಿಸಲಾರದೆ ಹೋದದರಿಂದ ನಿಮ್ಮ ದೇಶವು ಹಾಳುಬಿದ್ದು ಜನವಿಲ್ಲದೆ ಬೆರಗಿಗೂ ಶಾಪಕ್ಕೂ ಆಸ್ಪದವಾಯಿತು; ಈಗಲೂ ಹಾಗೆಯೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೆಹೋವನು ಇನ್ನು ಮುಂದೆ ತಾಳ್ಮೆಯಿಂದ ಇರಲಾರನು. ನೀವು ಮಾಡಿದ ಅಸಹ್ಯಕೃತ್ಯಗಳನ್ನು ಯೆಹೋವನು ದ್ವೇಷಿಸುತ್ತಾನೆ. ಆದ್ದರಿಂದ ಆತನು ನಿಮ್ಮ ದೇಶವನ್ನು ಬರಿದಾದ ಮರುಭೂಮಿಯನ್ನಾಗಿ ಮಾಡಿದ್ದಾನೆ, ಈಗ ಅಲ್ಲಿ ಯಾರೂ ವಾಸಿಸುವದಿಲ್ಲ. ಬೇರೆಯವರು ಆ ದೇಶದ ಬಗ್ಗೆ ಕೆಟ್ಟ ಮಾತುಗಳನ್ನಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಹೀಗೆ ನಿಮ್ಮ ಕೃತ್ಯಗಳ ಕೆಟ್ಟತನವನ್ನೂ, ನೀವು ಮಾಡಿದ ಅಸಹ್ಯಗಳನ್ನೂ ಯೆಹೋವ ದೇವರು ಇನ್ನು ತಾಳಲಾರದ್ದರಿಂದ, ನಿಮ್ಮ ದೇಶವು ಈ ದಿನ ಇರುವ ಪ್ರಕಾರ, ನಿವಾಸಿಗಳಿಲ್ಲದೆ ಹಾಳಾಗಿಯೂ, ವಿಸ್ಮಯವಾಗಿಯೂ, ಶಾಪವಾಗಿಯೂ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 44:22
40 ತಿಳಿವುಗಳ ಹೋಲಿಕೆ  

ಜೆರುಸಲೇಮಿಗೂ ಜುದೇಯದ ನಗರಗಳಿಗೂ, ಅರಸರುಗಳಿಗೂ ಕುಡಿಸಿದೆ. ಇದರಿಂದ ಅವರು ಹಾಳಾಗಿ ಇಂದು ಪರಿಹಾಸ್ಯಕ್ಕೂ ಶಾಪಕ್ಕೂ ಗುರಿಯಾಗುವಂತಾಯಿತು.


“ನೀವು ನಿಮ್ಮ ಮಾತುಗಳಿಂದ ಪ್ರಭುವನ್ನು ಬೇಸರಗೊಳಿಸಿದ್ದೀರಿ. ‘ಯಾವ ವಿಷಯದಲ್ಲಿ ಅವರನ್ನು ಬೇಸರಗೊಳಿಸಿದ್ದೇವೆ?’ ಎನ್ನುತ್ತೀರೋ? ‘ಕೆಡುಕರೆಲ್ಲರೂ ದೇವರ ದೃಷ್ಟಿಯಲ್ಲಿ ಒಳ್ಳೆಯವರು. ಅವರೇ ಆತನಿಗೆ ಬೇಕಾದವರು’ ಎಂದು ಹೇಳುವುದರಿಂದ: ‘ನ್ಯಾಯ ತೀರಿಸುವ ದೇವರೆಲ್ಲಿ?’ ಎಂದು ಕೇಳುವುದರಿಂದ.”


ಈಜಿಪ್ಟಿಗೆ ಹೋಗಿ ಅಲ್ಲಿ ಪ್ರವಾಸಿಸಲು ಹಟಹಿಡಿದ ಆ ಜುದೇಯದ ಅಳಿದುಳಿದ ಜನರನ್ನು ನಾಶಮಾಡುವೆನು. ಈಜಿಪ್ಟಿನಲ್ಲೆ ಅವರು ಮಣ್ಣುಪಾಲಾಗುವರು. ಖಡ್ಗ-ಕ್ಷಾಮಗಳಿಂದ ಅಳಿದುಹೋಗುವರು. ಚಿಕ್ಕವರು-ದೊಡ್ಡವರು ಎನ್ನದೆ ಖಡ್ಗ-ಕ್ಷಾಮಗಳಿಗೆ ತುತ್ತಾಗಿ, ಅಪವಾದ, ಅಪಹಾಸ್ಯಗಳಿಗೂ ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವರು.


ಗುಹೆಬಿಟ್ಟು ಬಂದ ಸಿಂಹದಂತೆ ಬಂದಿರುವನಾತ. ಆತನ ಕೋಪಾಗ್ನಿಯ ನಿಮಿತ್ತ ತುಂಡರಿಸುವಾ ಖಡ್ಗದ ಪ್ರಯುಕ್ತ ಅವರ ನಾಡಾಗಿದೆ ಬೆಂಗಾಡು.


ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.


ಆದ್ದರಿಂದ ನಾಡನ್ನು ಭಯಾನಕವಾಗಿಸುವರು ಹಾದು ಹೋಗುವವರೆಲ್ಲ ಬೆಬ್ಬೆರಗಾಗಿ ತಲೆದೂಗುವರು, ಸಿಳ್ಳು ಹಾಕಿ ಅದನ್ನು ಪರಿಹಾಸ್ಯ ಮಾಡುವರು.


ನನಗೋಸ್ಕರ ನೀನು ಹಣ ತೆತ್ತು ಅಗರಬತ್ತಿ ತರಲಿಲ್ಲ ಯಜ್ಞಪಶುಗಳ ವಪೆಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಬದಲಿಗೆ ನನ್ನನ್ನು ಪೀಡಿಸಿರುವೆ ನಿನ್ನ ಪಾಪಗಳಿಂದ ಬೇಸರಗೊಳಿಸಿರುವೆ ನನ್ನನು ನಿನ್ನ ದೋಷಗಳಿಂದ.


ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ?


ದೇವರ ವಿಷಯದಲ್ಲಿಯೂ ಅಂತೆಯೇ. ದೇವರು ತಮ್ಮ ಕೋಪಾಗ್ನಿಯನ್ನು ಪ್ರದರ್ಶಿಸಿ, ತಮ್ಮ ಶಕ್ತಿಯನ್ನು ಪ್ರಕಟಿಸಲು ಬಯಸಿದರು. ಹಾಗೆಮಾಡದೆ ವಿಕೋಪಕ್ಕೂ ವಿನಾಶಕ್ಕೂ ಮಾಡಲಾಗಿದ್ದ ಕುಡಿಕೆಯನ್ನು ಹೋಲುವವರನ್ನು ಅತ್ಯಂತ ಸಹನೆಯಿಂದ ಸೈರಿಸಿಕೊಂಡರಾದರೆ, ಯಾರು ಏನನ್ನು ತಾನೇ ಹೇಳಲಾದೀತು?


ಆದ್ದರಿಂದ ಧಾನ್ಯ ತುಂಬಿದ ಬಂಡೆ ನಸುಕುವಂತೆ ನಿಮ್ಮನ್ನು ಇದ್ದಲ್ಲಿಯೇ ನಸುಕಿಬಿಡುವೆನು.


ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.


“ಹೀಗೆ ನನ್ನ ಸಿಟ್ಟನ್ನು ತೀರಿಸಿಕೊಳ್ಳುವೆನು, ನನ್ನ ರೋಷವನ್ನು ಅವರ ಮೇಲೆ ಕಾರಿ ಶಾಂತನಾಗುವೆನು; ಆಗ್ರಹದಿಂದ ಮಾತಾಡಿದವನು ಸರ್ವೇಶ್ವರನಾದ ನಾನೇ ಎಂಬುದು ನನ್ನ ಕೋಪವನ್ನು ಅವರ ಮೇಲೆ ಹೊಯ್ದುಬಿಟ್ಟ ಬಳಿಕ ಅವರಿಗೆ ಗೊತ್ತಾಗುವುದು.


ಆದಕಾರಣ, ನನ್ನ ರೌದ್ರಕೋಪಾಗ್ನಿ ಸುರಿದು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಧಗಧಗಿಸಿತು. ಅವು ಈಗಲೂ ಹಾಳುಪಾಳಾಗಿವೆ.’


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ‘ನಾನು ಜೆರುಸಲೇಮಿಗು ಹಾಗುಜುದೇಯದ ಎಲ್ಲ ಊರುಗಳಿಗು ಬರಮಾಡಿದ ಕೇಡನ್ನು ನೀವೇ ನೋಡಿದ್ದೀರಿ.


ಏಕೆಂದರೆ ಅವರು ನನ್ನ ಮಾತುಗಳನ್ನು ಕೇಳದೆಹೋದರು. ನನ್ನ ದಾಸರಾದ ಪ್ರವಾದಿಗಳನ್ನು ಪದೇಪದೇ ಅವರ ಬಳಿಗೆ ಕಳಿಸಿದರೂ ಕೇಳಲೊಲ್ಲದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.


ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”


ಅವರ ಕೇಡಿಗಾಗಿ ನಾನು ಅವರನ್ನು ಜಗದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗುವ ಸ್ಥಳಗಳಲ್ಲೆಲ್ಲ ಅವರು ಕಟ್ಟುಗಾದೆಗೆ, ನಿಂದೆ ಪರಿಹಾಸ್ಯಕ್ಕೆ, ಶಾಪತಾಪಕ್ಕೆ ಗುರಿಯಾಗುವರು.


ಸರ್ವೇಶ್ವರನಾದ ನನ್ನ ಈ ಮಾತುಗಳನ್ನು ಕೇಳು : ನೀನು ನನ್ನನ್ನು ಅಲ್ಲಗಳೆದು ನನಗೆ ವಿಮುಖಳಾಗಿರುವೆ. ಆದಕಾರಣ ನಿನ್ನನ್ನು ನಾಶಮಾಡಲು ಕೈಯೆತ್ತಿರುವೆ ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಗಿದೆ ನನಗೆ.


ಇಂತಿರಲು ಒಡೆಯರು, ಸೇನಾಧೀಶ್ವರರು, ಇಸ್ರಯೇಲರ ಪರಾಕ್ರಮಿಯು ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ನನ್ನ ಶತ್ರುಗಳಾದ ನಿಮ್ಮ ಮೇಲೆ ಸೇಡು ತೀರಿಸುವೆನು. ನನ್ನ ವಿರೋಧಿಗಳಾದ ನಿಮ್ಮನ್ನು ಸದೆಬಡಿದು ಶಾಂತನಾಗಿರುವೆನು.


ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಂದ ಆಪಾದನೆ ದೊಡ್ಡದಾದುದರಿಂದ ಇವರನ್ನು ನಾಶಮಾಡುವುದಕ್ಕಾಗಿ ಸರ್ವೇಶ್ವರ ನಮ್ಮನ್ನು ಕಳಿಸಿದ್ದಾರೆ,” ಎಂದು ತಿಳಿಸಿದರು.


ಆಗ ಸರ್ವೇಶ್ವರ ಸ್ಸ್ವಾಮಿ, “ನನ್ನ ಆತ್ಮವು ಮನುಷ್ಯನಿಗೆ ಶಾಶ್ವತವಾಗಿ ಹೊಣೆಯಾಗಿರಲಾರದು. ಭ್ರಷ್ಟರಾದ ಅವರು ಮರ್ತ್ಯರು. ಅವರ ಆಯುಷ್ಯ ಕೇವಲ ನೂರಿಪ್ಪತ್ತು ವರ್ಷ ಇರಲಿ” ಎಂದರು.


ಜುದೇಯದವರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನಾದ ನನಗಾಗಿ ಸುನ್ನತಿಯಾಗಿರಿ. ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲವಾದರೆ ನಿಮ್ಮ ಪಾಪಾಕ್ರಮಗಳ ನಿಮಿತ್ತ ನನ್ನ ಕೋಪಾಗ್ನಿಯು ಭುಗಿಲೆದ್ದು ಆರಿಸಲಾಗದಷ್ಟು ಧಗಧಗಿಸುವುದು.”


‘ದಾವೀದ ಮನೆತನದವರೇ, ಸರ್ವೇಶ್ವರನ ಮಾತಿದು: ಮುಂಜಾನೆಯೆ ನ್ಯಾಯನೀತಿಯನ್ನು ಪರಿಪಾಲಿಸಿರಿ; ವಂಚಿತರನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ಕೋಪಾಗ್ನಿಯು ಜ್ವಾಲೆಯಂತೆ ಭುಗಿಲೇಳುವುದು, ಅದರ ಕಿಚ್ಚನ್ನು ಮುಚ್ಚಿಡಲು ಯಾರಿಂದಲೂ ಆಗದು.


ಇಸ್ರಯೇಲರ ದೇವರಾದ ಸರ್ವೇಶ್ವರ, ತಮ್ಮ ಜನರೆಂಬ ಕುರಿಗಳನ್ನು ಮೇಯಿಸುವ ಕುರಿಗಾಹಿಗಳ ದ್ರೋಹವನ್ನು ಅರಿತಿದ್ದಾರೆ. ಅಂಥವರನ್ನು ಕುರಿತು ಹೀಗೆನ್ನುತ್ತಾರೆ : “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟಿದ್ದೀರಿ. ಅವುಗಳ ಬಗ್ಗೆ ಎಚ್ಚರ ವಹಿಸಲೇ ಇಲ್ಲ. ನಿಮ್ಮ ನೀಚಕಾರ್ಯಗಳ ನಿಮಿತ್ತ ನಿಮ್ಮನ್ನು ವಿಚಾರಣೆಗೆ ಗುರಿಪಡಿಸುವೆನು.


ಖಡ್ಗ-ಕ್ಷಾಮ-ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ ಲೋಕದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗಿರುವ ಎಲ್ಲ ರಾಷ್ಟ್ರಗಳಲ್ಲಿ ಅವರು ಶಾಪ, ಪರಿಹಾಸ್ಯ, ದೂಷಣೆಗಳಿಗೆ ಗುರಿಯಾಗುವಂತೆ ಮಾಡುವೆನು.


ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.


ಸರ್ವೇಶ್ವರನಾದ ನನ್ನ ಗುರಿಯನ್ನು ಗಮನಿಸಿರಿ - ನಾನು ಅಪ್ಪಣೆಕೊಟ್ಟು, ಶತ್ರುಗಳು ಈ ನಗರಕ್ಕೆ ಮತ್ತೆ ಬರುವಂತೆ ಮಾಡುವೆನು. ಅವರು ಇದರ ವಿರುದ್ಧ ಯುದ್ಧಮಾಡಿ, ಇದನ್ನು ಆಕ್ರಮಿಸಿಕೊಂಡು, ಬೆಂಕಿಯಿಂದ ಸುಟ್ಟುಹಾಕುವರು. ನಾನು ಜುದೇಯದ ನಗರಗಳನ್ನು ನಿರ್ಜನವಾದ ಪಾಳುಭೂಮಿಯನ್ನಾಗಿಸುವೆನು.


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’


ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಲಿ ಅದರ ನಗರಗಳು ಹಾಳುಬಿದ್ದು ನಿರ್ಜನವಾಗುವುವು.


ಇದಲ್ಲದೆ, ಇಸ್ರಯೇಲರು ತಮ್ಮ ಅಧರ್ಮದ ನಿಮಿತ್ತವೇ ಸೆರೆಯಾಗಿಹೋದರೆಂದು ಮತ್ತು ಅವರು ನನಗೆ ದ್ರೋಹ ಮಾಡಿದ್ದರಿಂದಲೆ ನಾನು ಅವರಿಗೆ ವಿಮುಖನಾಗಿ ಅವರೆಲ್ಲರು ಖಡ್ಗಹತರಾಗುವಂತೆ ಅವರನ್ನು ಶತ್ರುವಶಮಾಡಿದೆನೆಂದು ಜನಾಂಗಗಳಿಗೆ ಗೊತ್ತಾಗುವುದು;


ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದ್ದರೂ ಕೇಳದೆ ಆ ಜನಾಂಗಗಳನ್ನೇ ಅನುಸರಿಸಿದರು.


ಇವುಗಳ ನಿಮಿತ್ತ ನಾನು ದಂಡಿಸಬಾರದೋ? ಇಂಥ ಜನತೆಯ ಮೇಲೆ ನನ್ನ ಕೋಪವನ್ನು ತೀರಿಸದಿರುವೆನೋ?


ಇಸ್ರಯೇಲರೆಲ್ಲರು ನಿಮ್ಮ ಧರ್ಮಶಾಸ್ತ್ರವನ್ನು ಮೀರಿ ನಿಮ್ಮ ಮಾತನ್ನು ಕೇಳಲೊಲ್ಲದೆ ಓರೆಯಾಗಿ ಹೋದರು. ಆದಕಾರಣ ನಿಮ್ಮ ಶಾಪದ ಕೇಡುಗಳನ್ನೂ ದೇವರ ದಾಸನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ನೀವು ಆಣೆಯಿಟ್ಟು ಪ್ರಕಟಿಸಿದ ವಿಪತ್ತುಗಳನ್ನೂ ನಮ್ಮ ಮೇಲೆ ಸುರಿಯಲಾಗಿದೆ. ನಾವು ದ್ರೋಹಿಗಳೇ ಸರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು