Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 44:17 - ಕನ್ನಡ ಸತ್ಯವೇದವು C.L. Bible (BSI)

17 ನಾವು, ನಮ್ಮ ಪೂರ್ವಜರು, ನಮ್ಮ ಅರಸರು, ಅಧಿಕಾರಿಗಳು ಜುದೇಯದ ಊರುಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಮಾಡಿದಂತೆ ಗಗನದೊಡತಿಯಾದ ದೇವತೆಗೆ ಧೂಪಾರತಿ ಎತ್ತುತ್ತೇವೆ. ಪಾನನೈವೇದ್ಯವನ್ನು ಸುರಿಯುತ್ತೇವೆ. ನಾವು ಬಾಯಿಬಿಟ್ಟು ಹೇಳಿದ ಈ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುತ್ತೇವೆ. ಏಕೆಂದರೆ ಹಾಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬ ಉಂಡು ಸುಖಪಡುತ್ತಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವುದಿಲ್ಲ ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ ನಾವೂ ಮತ್ತು ನಮ್ಮ ಪೂರ್ವಿಕರೂ ನಮ್ಮ ಅರಸರೂ, ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು, ಸುರಿಯುವೆವು ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇವಿುನ ಬೀದಿಗಳಲ್ಲಿ ನಾವೂ ನಮ್ಮ ಪಿತೃಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಾವು ಸ್ವರ್ಗದ ರಾಣಿಗೆ ನೈವೇದ್ಯವನ್ನು ಅರ್ಪಿಸುವದಾಗಿ ಹರಕೆ ಮಾಡಿದ್ದೇವೆ ಮತ್ತು ನಮ್ಮ ಹರಕೆಗಳನ್ನೆಲ್ಲ ಪೂರೈಸುತ್ತೇವೆ. ನಾವು ನೈವೇದ್ಯವನ್ನು ಕೊಡುತ್ತೇವೆ ಮತ್ತು ಅವಳ ಪೂಜೆಗಾಗಿ ಪಾನನೈವೇದ್ಯವನ್ನು ಅರ್ಪಿಸುತ್ತೇವೆ. ನಾವು ಮೊದಲು ಹಾಗೆಯೇ ಮಾಡಿದ್ದೇವೆ. ನಮ್ಮ ಪೂರ್ವಿಕರು, ನಮ್ಮ ರಾಜರು, ನಮ್ಮ ಅಧಿಕಾರಿಗಳು ಮೊದಲು ಮಾಡಿದಂತೆಯೇ ನಾವೆಲ್ಲರೂ ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಪಟ್ಟಣಗಳಲ್ಲಿ ಮಾಡಿದ್ದೆವು. ನಾವು ಸ್ವರ್ಗದ ರಾಣಿಯನ್ನು ಪೂಜಿಸುವ ಕಾಲದಲ್ಲಿ ನಮ್ಮಲ್ಲಿ ಸಾಕಷ್ಟು ಆಹಾರವಿತ್ತು. ನಾವು ಜಯಶೀಲರಾಗಿದ್ದೆವು. ನಮಗೆ ಕೆಟ್ಟದ್ದೇನೂ ಆಗಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆದರೆ ಸ್ವಂತ ಬಾಯಿಂದ ಹೊರಡುವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ. ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನಾರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ. ನಾವೂ, ನಮ್ಮ ತಂದೆಗಳೂ, ನಮ್ಮ ಅರಸರೂ, ನಮ್ಮ ಪ್ರಧಾನರೂ ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ಮಾಡುವೆವು. ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 44:17
32 ತಿಳಿವುಗಳ ಹೋಲಿಕೆ  

‘ಗಗನದೊಡತಿ’ ಎಂದು ಇವರು ಕರೆದ ದೇವತೆಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಅವರ ಮಕ್ಕಳು ಸೌದೆಯನ್ನು ಆಯ್ದು ತರುತ್ತಾರೆ. ಗಂಡಸರು ಬೆಂಕಿ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದುತ್ತಾರೆ. ನನ್ನನ್ನು ಕೆಣಕಬೇಕೆಂದೇ ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ.


ನಮ್ಮ ಅರಸರು, ರಾಜ್ಯಪಾಲರು, ಯಾಜಕರು, ಹಿರಿಯರು ಅನುಸರಿಸಲಿಲ್ಲ, ನಿಮ್ಮಾಜ್ಞೆಯನು, ಧರ್ಮೋಪದೇಶವನು. ಲಕ್ಷಿಸಲಿಲ್ಲ ನೀವಿತ್ತ ಎಚ್ಚರಿಕೆಯ ಮಾತುಗಳನು.


ಅವರಾದರೋ ನನ್ನ ಮಾತನ್ನು ಲೆಕ್ಕಿಸದೆ ನನ್ನ ವಿರುದ್ಧ ದಂಗೆಯೆದ್ದರು; ತಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತ್ಯಜಿಸಲಿಲ್ಲ. ಆಗ ನಾನು ಈಜಿಪ್ಟ್ ದೇಶದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು ಎಂದುಕೊಂಡೆ.


ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಸರ್ವೇಶ್ವರನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು.


“ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದು ತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೊ ಲೇಸಾಗಿತ್ತು. ಆಗ ಮಾಂಸ ಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟಮಾಡುತ್ತಿದ್ದೆವು,” ಎಂದು ಗುಣಗಿದರು.


ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ.


ನೀವು, ನಿಮ್ಮ ಪೂರ್ವಜರು, ನಿಮ್ಮ ಅರಸರು, ಅಧಿಕಾರಿಗಳು, ಜನಸಾಮಾನ್ಯರು ಮತ್ತು ನೀವೆಲ್ಲರು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಎತ್ತಿದ ಧೂಪಾರತಿ ಸರ್ವೇಶ್ವರನ ನೆನಪಿನಲ್ಲಿ ಇದೆ ಅಲ್ಲವೆ? ಅದನ್ನು ಅವರು ಮರೆತುಬಿಟ್ಟಿದ್ದಾರೆಯೇ?


ಜೆರುಸಲೇಮಿನ ಮನೆಗಳೂ ಜುದೇಯದ ಅರಸರ ಮನೆಗಳೂ, ಅಂದರೆ ಯಾವ ಯಾವ ಮನೆಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಾರತಿ ಎತ್ತಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲ ಹೊಲಸಾಗಿ ತೋಫೆತ್ ಸ್ಥಳಕ್ಕೆ ಸಮಾನವಾಗುವುವು.”


ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಮೀರಿ, ಎರಡು ಎರಕದ ಹೋರಿಕರುಗಳ ಮೂರ್ತಿಗಳನ್ನು ಮಾಡಿಕೊಂಡರು; ಅಶೇರ ವಿಗ್ರಹಸ್ಥಂಭಗಳನ್ನು ನಿಲ್ಲಿಸಿಕೊಂಡರು; ಆಕಾಶಸೈನ್ಯ ಹಾಗು ಬಾಳ್ ದೇವತೆಗಳನ್ನು ಪೂಜಿಸಿದರು;


ಆಕೆ ಅವನಿಗೆ, “ಅಪ್ಪಾ, ನೀನು ಬಾಯಾರೆ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅವರು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿ ತೀರಿಸಿದ್ದಾರೆ. ಆದ್ದರಿಂದ ನಿನ್ನ ಬಾಯಿಂದ ಬಂದದ್ದನ್ನೇ ನೆರವೇರಿಸು,” ಎಂದಳು.


ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುತ್ತವೆ. ಗಂಡನು ರದ್ದುಮಾಡಿದ್ದರಿಂದ ಸರ್ವೇಶ್ವರ ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.


ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿಹೋಗುವ ಬೆಳ್ಳಿಬಂಗಾರವಲ್ಲ.


ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.


ನಿಮ್ಮ ಪೂರ್ವಜರು, ಜುದೇಯದ ಅರಸರು, ಅವರ ಪತ್ನಿಯರು, ನೀವು, ನಿಮ್ಮ ಹೆಂಡತಿಯರು, ಇವರೆಲ್ಲರು ಜುದೇಯದ ನಾಡಿನಲ್ಲೂ ಜೆರುಸಲೇಮಿನ ಹಾದಿಬೀದಿಗಳಲ್ಲೂ ನಡೆಸಿದ ದುರಾಚಾರಗಳನ್ನು ನೀವು ಮರೆತುಬಿಟ್ಟಿರೋ?


‘ಈ ಕಾರ್ಯಗಳನ್ನು ನಡೆಸಿದ್ದು ನನ್ನ ವಿಗ್ರಹವೇ ವಿಧಿಸಿದ್ದು ನನ್ನ ಕೆತ್ತನೆಯ ಬೊಂಬೆಯೇ, ಎರಕದ ಮೂರ್ತಿಯೇ’ ಎಂದು ನೀ ಜಂಬ ಕೊಚ್ಚಿಕೊಳ್ಳದಂತೆ ಪುರಾತನ ಕಾಲದಲ್ಲೆ ನಾನಿವುಗಳನು ಮುಂತಿಳಿಸಿದೆ. ಅವುಗಳು ನೆರವೇರುವುದಕ್ಕೆ ಮುಂಚೆಯೇ ಪ್ರಕಟಿಸಿದೆ.


ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II


“ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II


ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿ ಈ ನಾಡಿನ ಮೇಲೆ ಉರಿಯಹತ್ತಿ ಆರಿಹೋಗುವುದೇ ಇಲ್ಲ,’ ಎನ್ನುತ್ತಾರೆ ಸರ್ವೇಶ್ವರ.


“ನಿಮ್ಮಲ್ಲಿ ಯಾರಾದರು ಸರ್ವೇಶ್ವರನಿಗೆ ಹರಕೆ ಮಾಡಿದರೆ, ಇಲ್ಲವೆ ತಾನು ವಸ್ತುವೊಂದನ್ನು ಮುಟ್ಟುವುದಿಲ್ಲವೆಂದು ಆಣೆಯಿಟ್ಟು ಹೇಳಿದರೆ ಅಂಥವನು ತನ್ನ ಮಾತನ್ನು ಮೀರದೆ ನುಡಿದಂತೆ ನೆರವೇರಿಸಬೇಕು.


ಹೇಗೆಂದರೆ, ‘ಸಿರಿಯಾ ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿವೆ; ಅಂತೆಯೇ ನಾನೂ ಅವುಗಳಿಗೆ ಬಲಿಸಮರ್ಪಿಸಿದರೆ ನನಗೂ ಜಯವಾಗುವುದು’, ಎಂದುಕೊಂಡನು; ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಬಲಿಕೊಟ್ಟನು. ಆದರೆ ಆ ದೇವತೆಗಳಿಂದ ಅವನಿಗೂ ಎಲ್ಲ ಇಸ್ರಯೇಲರಿಗೂ ಕೇಡು ಉಂಟಾಯಿತು.


ನನ್ನ ಸ್ವಜನರು ನನ್ನನ್ನೆ ತೊರೆದುಬಿಟ್ಟು, ಅನ್ಯದೇವತೆಗಳಿಗೆ ಬಲಿಯರ್ಪಿಸಿ, ತಮ್ಮ ಕೈಯಿಂದ ನಿರ್ಮಿಸಿದ ಮೂರ್ತಿಗಳಿಗೆ ಆರಾಧನೆ ಮಾಡುತ್ತಿದ್ದಾರೆ; ಇಂಥ ಅಧರ್ಮಕ್ಕೆಲ್ಲ ನಾನು ಅವರಿಗೆ ವಿಧಿಸುವ ದಂಡನೆಗಳನ್ನು ತಿಳಿಸುವೆನು, ಕೇಳು :


ಆಗ ಜುದೇಯದ ನಗರದವರೂ ಜೆರುಸಲೇಮಿನ ನಿವಾಸಿಗಳೂ ಯಾವ ದೇವತೆಗಳಿಗೆ ಧೂಪಾರತಿಯೆತ್ತಿದರೋ ಅವುಗಳನ್ನು ಮರೆಹೊಕ್ಕು ಕೂಗಿಕೊಳ್ಳುವರು. ಆದರೆ ಅಂಥ ಕೇಡಿನ ಕಾಲದಲ್ಲಿ ಆ ದೇವತೆಗಳಿಂದ ಅವರಿಗೆ ಯಾವ ರಕ್ಷಣೆಯೂ ದೊರಕದು.


ನನ್ನ ಜನರಾದರೋ ನನ್ನನ್ನು ಮರೆತು ವ್ಯರ್ಥವಿಗ್ರಹಗಳಿಗೆ ಧೂಪಾರತಿ ಎತ್ತಿದ್ದುಂಟು. ಸನಾತನ ಸನ್ಮಾರ್ಗಗಳಲ್ಲಿ ಮುಗ್ಗರಿಸಿ ಸರಿಯಲ್ಲದ ಸೀಳುದಾರಿಯಲ್ಲಿ ಅಲೆದದ್ದುಂಟು.


ಸರ್ವೇಶ್ವರನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆದುತಂದರು; ಇಗೋ, ಆ ಆಲಯದ ಬಾಗಿಲ ಮುಂದೆ, ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಸುಮಾರು ಇಪ್ಪತ್ತೈದು ಜನರು ಸರ್ವೇಶ್ವರನ ಆಲಯಕ್ಕೆ ಬೆನ್ನುಮಾಡಿ ಪೂರ್ವದ ಕಡೆಗೆ ಮುಖಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.


‘ನಾವು ಜನಾಂಗಗಳಂತೆ, ಅನ್ಯದೇಶಗಳವರಂತೆ ಮರ, ಕಲ್ಲುಗಳ ವಿಗ್ರಹಗಳನ್ನು ಪೂಜಿಸುವೆವು’ ಎಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆ ಎಷ್ಟು ಮಾತ್ರವೂ ನೆರವೇರದು.


ನಿನ್ನನ್ನು ಆಭರಣಗಳಿಂದ ಸಿಂಗರಿಸಿಕೊಂಡು ವೈಭವದ ಮಂಚದ ಮೇಲೆ ಕೂತಿರುವೆ. ಅದರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.


ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ.


ಇವರು ಜುದೇಯ ಪಟ್ಟಣಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಮಾಡುವುದನ್ನು ನೀನೆ ನೋಡಿರುವೆ ಅಲ್ಲವೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು