Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 42:20 - ಕನ್ನಡ ಸತ್ಯವೇದವು C.L. Bible (BSI)

20 ನಿಮ್ಮನ್ನು ನೀವೇ ಮೋಸಮಾಡಿಕೊಳ್ಳುತ್ತಿದ್ದೀರಿ. ನೀವೇ ನನ್ನ ಬಳಿಗೆ ಬಂದು ‘ನಮ್ಮ ದೇವರಾದ ಸರ್ವೇಶ್ವರನನ್ನು ನಮಗಾಗಿ ಪ್ರಾರ್ಥಿಸು. ನಮ್ಮ ದೇವರಾದ ಸರ್ವೇಶ್ವರ ಯಾವ ಅಪ್ಪಣೆ ಕೊಡುತ್ತಾರೋ ಅದನ್ನು ನಮಗೆ ತಿಳಿಸು. ಅದರಂತೆ ನಾವು ನಡೆಯುತ್ತೇವೆ,’ ಎಂಬುದಾಗಿ ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನನ್ನನ್ನು ನೀವೇ ಕಳುಹಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ನಿಮ್ಮನ್ನು ನೀವೇ ಮೋಸಪಡಿಸಿಕೊಂಡಿದ್ದೀರಿ; ನೀವು ನನ್ನ ಬಳಿಗೆ ಬಂದು, ‘ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು; ನಮ್ಮ ದೇವರಾದ ಯೆಹೋವನು ಯಾವ ಅಪ್ಪಣೆ ಕೊಡುತ್ತಾನೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು’ ಎಂಬುದಾಗಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನನ್ನನ್ನು ಕಳುಹಿಸಿದಿರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ನಿಮ್ಮನ್ನು ನೀವೇ ಮೋಸಪಡಿಸಿಕೊಂಡಿದ್ದೀರಿ; ನೀವು ನನ್ನ ಬಳಿಗೆ ಬಂದು - ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು; ನಮ್ಮ ದೇವರಾದ ಯೆಹೋವನು ಯಾವ ಅಪ್ಪಣೆಕೊಡುತ್ತಾನೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು ಎಂಬದಾಗಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವದಕ್ಕೆ ನನ್ನನ್ನು ಕಳುಹಿಸಿದಿರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನೀವು ನಿಮಗೆ ಮರಣವನ್ನು ಬರಮಾಡುವ ತಪ್ಪನ್ನು ಮಾಡುತ್ತಿದ್ದೀರಿ. ನೀವು ನನ್ನನ್ನು ನಿಮ್ಮ ದೇವರಾದ ಯೆಹೋವನಲ್ಲಿಗೆ ಕಳುಹಿಸಿದಿರಿ. ‘ನಮಗಾಗಿ ಯೆಹೋವನಾದ ನಮ್ಮ ದೇವರನ್ನು ಪ್ರಾರ್ಥಿಸು. ದೇವರು ಮಾಡಬೇಕೆಂದು ಹೇಳಿದ್ದೆಲ್ಲವನ್ನು ನಮಗೆ ಹೇಳು, ನಾವು ಯೆಹೋವನ ಆಜ್ಞೆಯನ್ನು ಪಾಲಿಸುತ್ತೇವೆ’ ಎಂದು ನೀವು ಹೇಳಿದ್ದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ನೀವೇ ನನ್ನ ಬಳಿಗೆ ಬಂದು ನಮ್ಮ ದೇವರಾದ ಯೆಹೋವ ದೇವರನ್ನು ನಮಗಾಗಿ ಪ್ರಾರ್ಥಿಸು, ‘ನಮ್ಮ ದೇವರಾದ ಯೆಹೋವ ದೇವರು ಯಾವ ಅಪ್ಪಣೆ ಕೊಡುತ್ತಾರೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು,’ ಎಂದು ಹೇಳಿ ಮಾರಣಾಂತಿಕ ತಪ್ಪನ್ನು ಮಾಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 42:20
17 ತಿಳಿವುಗಳ ಹೋಲಿಕೆ  

ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ.


ಮೋಸಹೋಗದಿರಿ, ದೇವರನ್ನು ವಂಚಿಸಬಹುದೆಂದು ಭಾವಿಸದಿರಿ; ಬಿತ್ತುವುದನ್ನೇ ಕೊಯ್ಯುತ್ತೇವೆ ಎಂಬುದನ್ನು ನೆನಪಿನಲ್ಲಿಡಿ.


ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು:


ಪ್ರಶ್ನೆ ಕೇಳುವುದಕ್ಕೆ ಬರುವ ಜನರಂತೆ, ಅವರು ನಿನ್ನ ಬಳಿಗೆ ಬಂದು, ನನ್ನ ಭಕ್ತರಾಗಿ ನಿನ್ನ ಮುಂದೆ ಕೂತುಕೊಂಡು, ನಿನ್ನ ಮಾತುಗಳನ್ನು ಕೇಳುತ್ತಾರೆ; ಆದರೆ ಕೈಗೊಳ್ಳುವುದಿಲ್ಲ. ಬಾಯಿಂದ ಬಹು ಪ್ರೀತಿಯನ್ನು ತೋರಿಸುತ್ತಾರೆ; ಅವರ ಮನಸ್ಸಾದರೋ ತಾವು ದೋಚಿಕೊಂಡದ್ದರ ಮೇಲೆ ಇರುತ್ತದೆ.


“ದಯಮಾಡಿ ನಮ್ಮ ಬಿನ್ನಹವನ್ನು ಆಲಿಸಬೇಕು.


ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.


ಇಸ್ರಯೇಲಳಿಗೆ ಇಷ್ಟು ದಂಡನೆ ಆದರೂ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನನ್ನ ಕಡೆಗೆ ಪೂರ್ಣಮನಸ್ಸಿನಿಂದ ತಿರುಗಿಕೊಳ್ಳಲಿಲ್ಲ. ತಿರುಗಿಕೊಂಡಂತೆ ನಟಿಸಿದಳು ಮಾತ್ರ. ಇದು ಸರ್ವೇಶ್ವರನಾದ ನನ್ನ ನುಡಿ.”


ಪಾಪದ ಹೊರೆ ಹೊತ್ತವರು ನಾವಯ್ಯಾ I ಅವುಗಳ ಪರಿಹಾರಕನು ನೀನಯ್ಯಾ II


ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ I ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ II


ಆ ಧೂಪಾರತಿಗಳು ಸರ್ವೇಶ್ವರನ ಸನ್ನಿಧಿಗೆ ತರಲಾದವುಗಳು. ಈ ಕಾರಣ ಪವಿತ್ರವಾದುವು. ಆದುದರಿಂದ ಅವುಗಳನ್ನು ತಗಡುಗಳಾಗಿ ತಟ್ಟಿ ಬಲಿಪೀಠಕ್ಕೆ ಮುಚ್ಚಳವನ್ನಾಗಿ ಮಾಡಿಸು. ಹೀಗೆ ಅವು ಇಸ್ರಯೇಲರಿಗೆ ನೆನಪು ಹುಟ್ಟಿಸುವ ಗುರುತುಗಳಾಗುವುವು,” ಎಂದು ಹೇಳಿದರು.


ಹೀಗಿರುವಲ್ಲಿ ಅರಸ ಚಿದ್ಕೀಯನು ಶೆಲೆಮ್ಯನ ಮಗ ಯೆಹೂಕಲನನ್ನು ಮತ್ತು ಯಾಜಕ ಮಾಸೇಯನ ಮಗ ಚೆಫನ್ಯನನ್ನು ಯೆರೆಮೀಯನ ಬಳಿಗೆ ಕಳಿಸಿ, “ನಮಗಾಗಿ ನಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸು” ಎಂದು ವಿನಂತಿಸಿದನು.


ಅರಸ ಚಿದ್ಕೀಯನು ಪ್ರವಾದಿ ಯೆರೆಮೀಯನನ್ನು ಸರ್ವೇಶ್ವರನ ಆಲಯದ ಮೂರನೆಯ ಬಾಗಿಲ ಬಳಿಗೆ ಕರೆತರಿಸಿ, “ನಾನು ನಿನ್ನಲ್ಲಿ ಒಂದು ವಿಷಯವನ್ನು ಕೇಳುತ್ತೇನೆ, ನನಗೆ ಏನನ್ನೂ ಮರೆಮಾಡಬೇಡ,” ಎಂದನು.


ಅದಾದ ಮೇಲೆ ಹೋಷಾಯನ ಮಗ ಅಜರ್ಯನು, ಕಾರೇಹನ ಮಗ ಯೋಹಾನಾನನು, ಹಾಗು ಅಹಂಕಾರಿಗಳಾದ ಜನರೆಲ್ಲರು ಅವನಿಗೆ, “ನಿನ್ನ ಮಾತು ಸುಳ್ಳು, ಈಜಿಪ್ಟಿಗೆ ಹೋಗಿ ವಾಸಮಾಡಬಾರದು ಎಂದು ತಿಳಿಸುವಂತೆ ನಮ್ಮ ದೇವರಾದ ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ.


ಲೇವಿಯ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸು.


ಅದಕ್ಕೆ ಅವರು ಯೆರೆಮೀಯನಿಗೆ, “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮೂಲಕ ನಮಗೆ ಕಳಿಸುವ ಮಾತಿನಂತೆ ನಾವು ನಡೆಯದಿದ್ದರೆ, ಆ ಸರ್ವೇಶ್ವರನೇ ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಂತು, ನಮ್ಮನ್ನು ಖಂಡಿಸಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು