Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 41:5 - ಕನ್ನಡ ಸತ್ಯವೇದವು C.L. Bible (BSI)

5 ಇಂತಿರಲು ಗಡ್ಡ ಬೋಳಿಸಿ, ಬಟ್ಟೆ ಹರಿದು, ಗಾಯಮಾಡಿಕೊಂಡಿದ್ದ ಎಂಬತ್ತು ಜನರು ಶೆಕೆಮ್, ಶಿಲೋ, ಸಮಾರಿಯ ಎಂಬ ಊರುಗಳಿಂದ ಬಂದು, ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಗಡ್ಡಬೋಳಿಸಿ, ಬಟ್ಟೆಹರಿದು ಗಾಯ ಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದು ಕೈಯಲ್ಲಿ ಧೂಪ ಮತ್ತು ನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಗಡ್ಡ ಬೋಳಿಸಿ ಬಟ್ಟೆಹರಿದು ಗಾಯಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಒಂದು ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಶೆಕೆಮಿನಿಂದಲೂ ಶೀಲೋವಿನಿಂದಲೂ ಸಮಾರ್ಯದಿಂದಲೂ ಎಂಬತ್ತು ಜನರು ಗಡ್ಡವನ್ನೂ ಕ್ಷೌರ ಮಾಡಿದವರಾಗಿಯೂ ವಸ್ತ್ರಗಳನ್ನು ಹರಿದುಕೊಂಡವರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಯೆಹೋವ ದೇವರ ಆಲಯಕ್ಕೆ ತರುವುದಕ್ಕೋಸ್ಕರ ಕಾಣಿಕೆಯನ್ನೂ, ಧೂಪವನ್ನೂ ಕೈಯಲ್ಲಿ ತೆಗೆದುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 41:5
28 ತಿಳಿವುಗಳ ಹೋಲಿಕೆ  

ಅನಂತರ ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟು ಅವನಿಂದ ಸಮಾರಿಯ ಎಂಬ ಗುಡ್ಡವನ್ನು ಕೊಂಡುಕೊಂಡನು. ಅದರ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಆ ಭೂಮಿಯ ಒಡೆಯನಾಗಿದ್ದ ಶೆಮೆರಿನ ಜ್ಞಾಪಕಾರ್ಥವಾಗಿ ಸಮಾರಿಯ ಎಂಬ ಹೆಸರಿಟ್ಟನು.


ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.


ನಾಡೆಲ್ಲವು ತಮ್ಮ ವಶವಾದ ಮೇಲೆ ಇಸ್ರಯೇಲ್ ಜನಾಂಗವೆಲ್ಲ ಶೀಲೋವಿನಲ್ಲಿ ಕೂಡಿ ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.


“ನೀವು ನಿಮ್ಮ ದೇವರಾದ ಸರ್ವೇಶ್ವರನ ಮಕ್ಕಳು. ಆದುದರಿಂದ ಸತ್ತವರಿಗಾಗಿ ನಿಮ್ಮ ದೇಹವನ್ನು ಗಾಯಮಾಡಿಕೊಳ್ಳಬಾರದು; ನಿಮ್ಮ ಮುಂದಲೆಯನ್ನು ಬೋಳಿಸಿಕೊಳ್ಳಬಾರದು.


ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಇಸ್ರಯೇಲರೆಲ್ಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.


‘ಯೆರುಬ್ಬಾಳ’ನ ಮಗ ಅಬೀಮೆಲೆಕನು ಶೆಕೆಮಿಗೆ ಹೋಗಿ ತನ್ನ ಸೋದರ ಮಾವಂದಿರಿಗೂ ತಾಯಿಯ ಬಂಧುಗಳೆಲ್ಲರಿಗೂ,


ಯಕೋಬನು ಮೆಸಪೊಟೇಮಿಯಾದಿಂದ ಹಿಂದಿರುಗಿ ಬಂದು ಕಾನಾನ್ ನಾಡಿನ ಶೆಕೆಮ್ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಿದನು. ಆ ಪಟ್ಟಣದ ಮುಂದೆಯೇ ತನ್ನ ಗುಡಾರಗಳನ್ನು ಹಾಕಿಸಿಕೊಂಡನು.


ಹತ್ತಿಹರು ಗುಡಿಗೋಪುರಗಳನು ಆಳುವುದಕ್ಕಾಗಿ, ದೀಬೋನಿನವರು, ಗೋಳಾಡುತಿಹರು ನೆಬೋವಿನಲಿ ಮೇಣ್ ಮೇದೆಬದಲಿ, ಮೋವಾಬ್ಯರು ತಲೆ ಬೋಳಿಸಿಹರು, ಗಡ್ಡ ಕತ್ತರಿಸಿಹರು ದುಃಖದಿಂದ ಎಲ್ಲರು.


ಯೆಹೂದ್ಯರ ಅರಸ ಆಸನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಒಮ್ರಿಯ ಮಗ ಅಹಾಬನು ಇಸ್ರಯೇಲರ ಅರಸನಾದನು; ಸಮಾರಿಯ ಪಟ್ಟಣದಲ್ಲಿ ಇಪ್ಪತ್ತೆರಡು ವರ್ಷ ಆಳಿದನು.


ಯಾರೊಬ್ಬಾಮನು ಎಫ್ರಯಿಮ್ ಮಲೆನಾಡಿನ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ ಅಲ್ಲಿ ವಾಸಿಸಿದನು. ಅಲ್ಲಿಂದ ಪೆನೂವೇಲಿಗೆ ಹೋಗಿ ಅದನ್ನೂ ಭದ್ರಪಡಿಸಿದನು.


ವರ್ಷ ವರ್ಷವೂ ಇದು ಹಾಗೆಯೆ ನಡೆಯುತ್ತಿತ್ತು; “ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು.


ಈ ಕಾರಣ ನನ್ನ ನಾಮಕ್ಕೆ ನೆಲೆಯಾದ ಹಾಗು ನಿಮ್ಮ ಭರವಸೆಗೆ ಆಧಾರವಾದ ಈ ದೇವಾಲಯಕ್ಕೆ, ನಿಮಗೂ ನಿಮ್ಮ ಪೂರ್ವಜರಿಗೂ ನಾನು ಕೊಟ್ಟ ಈ ಸ್ಥಳಕ್ಕೆ ನಾನು ಶಿಲೋಗೆ ಬರಮಾಡಿದ ಗತಿಯನ್ನೇ ಬರಮಾಡುವೆನು.


ನಾನು ನನ್ನ ನಾಮವನ್ನು ಮೊದಲು ಪ್ರತಿಷ್ಠಾಪಿಸಿದ ‘ಶಿಲೊ’ ಎಂಬ ಸ್ಥಾನಕ್ಕೆ ಹೋಗಿ ನೋಡಿ. ನನ್ನ ಜನ ಇಸ್ರಯೇಲರ ಅಧರ್ಮದ ನಿಮಿತ್ತ ಆ ಸ್ಥಳಕ್ಕೆ ತಂದ ಗತಿಯನ್ನು ಹೋಗಿ ನೋಡಿ.


ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತರಿಗದು ಪ್ರಿಯ I ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ II


ಆದುದರಿಂದ ಹಾನೂನನು ದಾವೀದನ ಸೇವಕರನ್ನು ಬಂಧಿಸಿದನು. ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ನಿಲುವಂಗಿಗಳನ್ನು ಕುಂಡಿಯಿಂದ ಕೆಳಗಿನ ಭಾಗವನ್ನೆಲ್ಲಾ ಕತ್ತರಿಸಿ ಕಳುಹಿಸಿಬಿಟ್ಟನು.


ಇಸ್ರಯೇಲರು ಈಜಿಪ್ಟಿನಿಂದ ತಂದ ಜೋಸೆಫನ ಎಲುಬುಗಳನ್ನು ಶೆಕೆಮ್ ಊರಿನ ಹೊಲದಲ್ಲಿ ಹೂಳಿಟ್ಟರು. ಈ ಹೊಲವನ್ನು ಯಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ಬೆಳ್ಳಿನಾಣ್ಯ ಕೊಟ್ಟು ಕೊಂಡುಕೊಂಡಿದ್ದನು. ಅದು ಜೋಸೆಫ್ಯರ ಸೊತ್ತಾಗಿತ್ತು.


ಹಿವ್ವಿಯನಾದ ಹಮೋರನ ಮಗನೂ ಆ ನಾಡಿಗೆ ಒಡೆಯನೂ ಆದ ಶೆಕೆಮನು ಆಕೆಯನ್ನು ನೋಡಿ, ಎತ್ತಿಕೊಂಡು ಹೋಗಿ, ಆಕೆಯನ್ನು ಜತೆಗೂಡಿ ಮಾನಭಂಗ ಮಾಡಿದನು.


ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಹೋಗಿದ್ದರು.


ಶಿಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ದಾನ್ಯರಲ್ಲಿ ಮೀಕನು ಮಾಡಿಸಿದ ವಿಗ್ರಹವಿತ್ತು.


ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು I ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು II


ಈ ನಾಡಿನಲ್ಲಿ ದೊಡ್ಡವರು ಹಾಗುಚಿಕ್ಕವರು ಸಾಯುವರು. ಅವರನ್ನು ಯಾರು ಹೂಣಿಡುವುದಿಲ್ಲ. ಅವರಿಗಾಗಿ ಯಾರೂ ಗೋಳಾಡುವುದಿಲ್ಲ. ದೇಹವನ್ನು ಹುಣ್ಣಾಗಿಸಿಕೊಳ್ಳುವುದಿಲ್ಲ. ತಲೆ ಬೋಳಿಸಿಕೊಳ್ಳುವುದಿಲ್ಲ.


ಗೆದಲ್ಯನನ್ನು ಕೊಂದು ಎರಡು ದಿನಗಳಾಗಿದ್ದರೂ ಆ ಸಂಗತಿ ಇನ್ನು ಯಾರಿಗೂ ತಿಳಿದಿರಲಿಲ್ಲ.


ಗಾಜಾ ಊರು ತಲೆಬೋಳಿಸಿಕೊಂಡಿದೆ ಅಷ್ಕೆಲೋನ್ ಊರು ನಿಶ್ಶಬ್ದವಾಗಿದೆ. ಅನಕಿಮ್ ಬೈಲುನಾಡಿನ ಅವಶೇಷವೇ, ಎಂದಿನವರೆಗೆ ನಿನ್ನನ್ನೇ ಕತ್ತರಿಸಿಕೊಳ್ಳುತ್ತಿರುವೆ !


ಎಲ್ಲರ ತಲೆಬೋಳು, ಎಲ್ಲರ ಗಡ್ಡ ವಿಕಾರ, ಎಲ್ಲರ ಕೈ ಗಾಯ. ಎಲ್ಲರ ನಡುವಿಗೆ ಗೋಣಿತಟ್ಟು.


ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ, ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು.


ಆದುದರಿಂದ ಹಾನೂನನು ದಾವೀದನ ಸೈನಿಕರನ್ನು ಬಂಧಿಸಿದನು. ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು