Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 41:2 - ಕನ್ನಡ ಸತ್ಯವೇದವು C.L. Bible (BSI)

2 ನೆತಲ್ಯನ ಮಗ ಇಷ್ಮಾಯೇಲನು ಮತ್ತು ಅವನೊಂದಿಗಿದ್ದ ಹತ್ತು ಜನರು ಎದ್ದು ಅಹೀಕಾಮನ ಮಗ, ಶಾಫಾನನ ಮೊಮ್ಮಗ, ಹಾಗು ಬಾಬಿಲೋನಿಯದ ಅರಸನಿಂದ ನಾಡಿನ ರಾಜ್ಯಪಾಲನಾಗಿ ನೇಮಕಗೊಂಡಿದ್ದ ಆ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆಗ ನೆತನ್ಯನ ಮಗನಾದ ಇಷ್ಮಾಯೇಲನೂ ಅವನೊಂದಿಗಿದ್ದ ಹತ್ತು ಜನರೂ ಎದ್ದು ಅಹೀಕಾಮನ ಮಗ ಶಾಫಾನನ ಮೊಮ್ಮಗ ಬಾಬೆಲಿನ ಅರಸನಿಂದ ದೇಶಾಧಿಪತಿಯಾಗಿ ನೇಮಿಸಲ್ಪಟ್ಟವನೂ ಆದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆಗ ನೆತನ್ಯನ ಮಗನಾದ ಇಷ್ಮಾಯೇಲನೂ ಅವನೊಂದಿಗಿದ್ದ ಹತ್ತು ಜನರೂ ಎದ್ದು ಅಹೀಕಾಮನ ಮಗ ಶಾಫಾನನ ಮೊಮ್ಮಗ ಬಾಬೆಲಿನ ಅರಸನಿಂದ ದೇಶಾಧಿಪತಿಯಾಗಿ ನೇವಿುಸಲ್ಪಟ್ಟವನೂ ಆದ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅವರು ಒಟ್ಟಿಗೆ ಊಟ ಮಾಡುತ್ತಿದ್ದಾಗ, ಇಷ್ಮಾಯೇಲ್ ಮತ್ತು ಅವನ ಹತ್ತು ಜನರು ಎದ್ದು ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಕೊಂದರು. ಗೆದಲ್ಯನನ್ನು ಬಾಬಿಲೋನಿನ ರಾಜನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನೆತನ್ಯನ ಮಗ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಜನರಸಹಿತವಾಗಿ ಎದ್ದು, ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮೊಮ್ಮಗ ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಹೊಡೆದು ಕೊಂದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 41:2
12 ತಿಳಿವುಗಳ ಹೋಲಿಕೆ  

ಆದರೆ ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತುಮಂದಿ ಆಳುಗಳೊಡನೆ ಬಂದು ಗೆದಲ್ಯನನ್ನು, ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನು ಹಾಗು ಬಾಬಿಲೋನಿಯಾದವರನ್ನು ಸಂಹರಿಸಿದನು.


ಯೆರೆಮೀಯನು ಉತ್ತರಕೊಡದೆ ಇರಲು ನೆಬೂಜರದಾನನು ಅವನಿಗೆ, “ಬಾಬಿಲೋನಿಯದ ಅರಸನು, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಜುದೇಯದ ನಗರಗಳಿಗೆ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆ. ಅವನ ಬಳಿಗೆ ಹೋಗು, ಅವನ ಹತ್ತಿರ ಜನರ ನಡುವೆ ವಾಸಮಾಡುವ ಇಲ್ಲವೆ ಎಲ್ಲಿಗೆ ಬೇಕಾದರೂ ಹೋಗು” ಎಂದು ಹೇಳಿ ಬುತ್ತಿಯನ್ನೂ ಬಹುಮಾನವನ್ನೂ ಕೊಡಿಸಿ ಅವನನ್ನು ಕಳಿಸಿಬಿಟ್ಟನು.


ಬಾಬಿಲೋನಿಯದ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆಂಬ ಸುದ್ದಿ ಹಾಗು ಬಾಬಿಲೋನಿಗೆ ಸೆರೆಹೋಗದ ನಾಡಿಗರಲ್ಲಿ ಬಡವರಾದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿ ಹರಡಿತು. ಕಾಡುಮೇಡುಗಳಲ್ಲಿದ್ದ ಎಲ್ಲ ಯಹೂದ್ಯ ಸೈನಿಕರೂ ಸೇನಾಪತಿಗಳೂ ಇದನ್ನು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು.


ಉಪಕಾರಕ್ಕೆ ಅಪಕಾರವನ್ನೆಸಗಿಹರು I ಗೆಳೆತನಕ್ಕೆ ಹಗೆತನವನ್ನೇ ತೋರಿಹರು II


ನನ್ನಾಪ್ತಮಿತ್ರನು, ನನ್ನ ನಂಬಿಕೆಗೆ ಪಾತ್ರನು I ನನ್ನೊಡನೆ ಉಂಡವನು, ನನಗೆರಡು ಬಗೆದಿಹನು II


ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ಗುಪ್ತಸಂಭಾಷಣೆಗಾಗಿಯೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ, ತನ್ನ ತಮ್ಮನಾದ ಅಸಾಹೇಲನನ್ನು ವಧಿಸಿದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದುಕೊಂದನು.


“ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು ನನಗೆ ಗೊತ್ತು. ಆದರೆ ‘ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು’ ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ.


ಹೀಗೆ ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಯೋನಾಥಾನ, ತನ್ಹುಮೆತನ ಮಗನಾದ ಸೆರಾಯ, ಮಾಕಾ ಊರಿನವನ ಮಗನಾದ ಯೆಜನ್ಯ ನೆಟೋಫದವನಾದ ಏಫಯನ ಮಕ್ಕಳು ಗೆದಲ್ಯನ ಬಳಿಗೆ ಹೋದರು.


ಇದಲ್ಲದೆ, ಆ ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನು ಹಾಗು ಅಲ್ಲಿ ಸಿಕ್ಕಿದ ಬಾಬಿಲೋನಿಯದ ಸೈನಿಕರನ್ನು ಹತಿಸಿದನು.


“ಅಮ್ಮೋನ್ಯರ ಅರಸ ಬಾಲೀಸನು ನಿಮ್ಮನ್ನು ಕೊಲ್ಲುವುದಕ್ಕಾಗಿ ನೆತನ್ಯನ ಮಗ ಇಷ್ಮಾಯೇಲನನ್ನು ಕಳಿಸಿದ್ದಾನೆ ಎಂಬುದು ನಿಮಗೆ ಗೊತ್ತಿದೆಯೇ?” ಎಂದು ಕೇಳಿದರು. ಆದರೆ ಅಹೀಕಾಮನ ಮಗ ಗೆದಲ್ಯನು ಅವರನ್ನು ನಂಬಲಿಲ್ಲ.


ಅದಕ್ಕೆ ಅಹೀಕಾಮನ ಮಗ ಗೆದಲ್ಯನು, “ನೀನು ಹಾಗೆ ಮಾಡಲೆಕೂಡದು. ನೀನು ಇಷ್ಮಾಯೇಲನ ವಿಷಯವಾಗಿ ಹೇಳಿದ್ದು ಸುಳ್ಳು,” ಎಂದು ಉತ್ತರಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು