Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 41:10 - ಕನ್ನಡ ಸತ್ಯವೇದವು C.L. Bible (BSI)

10 ಬಳಿಕ ನೆತನ್ಯನ ಮಗ ಇಷ್ಮಾಯೇಲನು ರಾಜಕುವರಿಯರನ್ನು ಮತ್ತು ರಕ್ಷಾದಳದ ನಾಯಕನಾದ ನೆಬೂಜರದಾನನನ್ನು ಆಹೀಕಾಮನ ಮಗ ಗೆದಲ್ಯನಿಗೆ ಒಪ್ಪಿಸಿದ್ದ ಮಿಚ್ಪದ ಜನ ಶೇಷವನ್ನು, ಹೀಗೆ ಮಿಚ್ಪದಲ್ಲಿ ಅಳಿದುಳಿದಿದ್ದ ಎಲ್ಲರನ್ನು ಸೆರೆಹಿಡಿದು ಅಮ್ಮೋನ್ಯರ ನಾಡಿಗೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನು ರಾಜಕುಮಾರ್ತೆಯರನ್ನು, ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮಿಚ್ಪದ ಉಳಿದ ಜನರನ್ನು ಸೆರೆಹಿಡಿದು ಅಮ್ಮೋನ್ಯರ ಸೀಮೆಗೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಮೇಲೆ ನೆತನ್ಯನ ಮಗನಾದ ಇಷ್ಮಾಯೇಲನು ರಾಜಕುಮಾರ್ತೆಯರನ್ನು, ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿದ ವಿುಚ್ಪದ ಜನಶೇಷವನ್ನು, ಅಂತು ವಿುಚ್ಪದಲ್ಲಿ ಉಳಿದವರೆಲ್ಲರನ್ನೂ ಸೆರೆಹಿಡಿದು ಅಮ್ಮೋನ್ಯರ ಸೀಮೆಗೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇಷ್ಮಾಯೇಲನು ಮಿಚ್ಪದಲ್ಲಿದ್ದ ಜನರ ಉಳಿದವರನ್ನೆಲ್ಲಾ ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟು, ಉಳಿದ ಜನರೆಲ್ಲರನ್ನು ಸೆರೆಯಾಗಿ ಒಯ್ದನು. ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು, ಅಮ್ಮೋನ್ಯರ ಬಳಿಗೆ ದಾಟಿಹೋಗುವುದಕ್ಕೆ ಹೊರಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 41:10
13 ತಿಳಿವುಗಳ ಹೋಲಿಕೆ  

“ಅಮ್ಮೋನ್ಯರ ಅರಸ ಬಾಲೀಸನು ನಿಮ್ಮನ್ನು ಕೊಲ್ಲುವುದಕ್ಕಾಗಿ ನೆತನ್ಯನ ಮಗ ಇಷ್ಮಾಯೇಲನನ್ನು ಕಳಿಸಿದ್ದಾನೆ ಎಂಬುದು ನಿಮಗೆ ಗೊತ್ತಿದೆಯೇ?” ಎಂದು ಕೇಳಿದರು. ಆದರೆ ಅಹೀಕಾಮನ ಮಗ ಗೆದಲ್ಯನು ಅವರನ್ನು ನಂಬಲಿಲ್ಲ.


ಬಾಬಿಲೋನಿಯದ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆಂಬ ಸುದ್ದಿ ಹಾಗು ಬಾಬಿಲೋನಿಗೆ ಸೆರೆಹೋಗದ ನಾಡಿಗರಲ್ಲಿ ಬಡವರಾದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿ ಹರಡಿತು. ಕಾಡುಮೇಡುಗಳಲ್ಲಿದ್ದ ಎಲ್ಲ ಯಹೂದ್ಯ ಸೈನಿಕರೂ ಸೇನಾಪತಿಗಳೂ ಇದನ್ನು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು.


ಹೋರೋನಿನವನಾದ ಸನ್ಬಲ್ಲಟನೂ ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಯೂ ಅರೇಬಿಯನಾದ ಗೆಷೆಮನೂ ಈ ಸಮಾಚಾರವನ್ನೂ ಕೇಳಿದಾಗ ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿದರು. “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರೋಧವಾಗಿ ದಂಗೆ ಏಳಬೇಕೆಂದಿದ್ದೀರೋ?” ಎಂದು ಕೇಳಿದರು.


ಇಸ್ರಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ ಅಮ್ಮೋನ್ ದೇಶದವನಾದ ತೊಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬ ಹೊಟ್ಟೆಕಿಚ್ಚುಪಟ್ಟರು.


ಆ ಬಾಬಿಲೋನಿಯದ ಅರಸನು ಅಲ್ಲೆ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿದನು. ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಜುದೇಯದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು.


ಹೀಗಿದೆ ಸರ್ವೇಶ್ವರನ ನುಡಿ: “ಇವನು ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳದ ವ್ಯಕ್ತಿ ಇವನ ಸಂತಾನದಲ್ಲಿ ಇನ್ನು ಯಾವನೂ ದಾವೀದನ ಸಿಂಹಾಸನದಲ್ಲಿ ಕೂರನು, ಜುದೇಯವನ್ನು ಆಳಿ ಬಾಳನು.”


ತಮ್ಮ ಎಲ್ಲ ಮಡದಿಯರನ್ನೂ ಮಕ್ಕಳನ್ನೂ ಬಾಬಿಲೋನಿಯರ ಬಳಿಗೆ ತರಲಾಗುವುದು. ತಾವು ತಪ್ಪಿಸಿಕೊಳ್ಳಲಾಗದೆ ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಕೊಳ್ಳುವಿರಿ. ಈ ನಗರವು ತಮ್ಮ ನಿಮಿತ್ತ ಬೆಂಕಿಯಿಂದ ಸುಟ್ಟುಹೋಗುವುದು,” ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು