Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 40:7 - ಕನ್ನಡ ಸತ್ಯವೇದವು C.L. Bible (BSI)

7 ಬಾಬಿಲೋನಿಯದ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆಂಬ ಸುದ್ದಿ ಹಾಗು ಬಾಬಿಲೋನಿಗೆ ಸೆರೆಹೋಗದ ನಾಡಿಗರಲ್ಲಿ ಬಡವರಾದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿ ಹರಡಿತು. ಕಾಡುಮೇಡುಗಳಲ್ಲಿದ್ದ ಎಲ್ಲ ಯಹೂದ್ಯ ಸೈನಿಕರೂ ಸೇನಾಪತಿಗಳೂ ಇದನ್ನು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಬಾಬೆಲಿನ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ದೇಶಾಧಿಪತಿಯನ್ನಾಗಿ ನೇಮಿಸಿ, ಬಾಬಿಲೋನಿಗೆ ಸೆರೆಯೊಯ್ಯಲ್ಪಡದ ದೇಶೀಯರಲ್ಲಿ ಬಡ, ದಿಕ್ಕಿಲ್ಲದ ಗಂಡಸರನ್ನೂ, ಹೆಂಗಸರನ್ನೂ ಮತ್ತು ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದನೆಂಬ ಸುದ್ದಿಯನ್ನು ಕಾಡುಮೇಡುಗಳಲ್ಲಿದ್ದ ಸಕಲ ಯೆಹೂದ ಸೈನಿಕರೂ ಮತ್ತು ಸೇನಾಪತಿಗಳು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಅವನ ಬಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಬಾಬೆಲಿನ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ದೇಶಾಧಿಪತಿಯನ್ನಾಗಿ ನೇವಿುಸಿ ಬಾಬೆಲಿಗೆ ಸೆರೆಯೊಯ್ಯಲ್ಪಡದ ದೇಶೀಯರಲ್ಲಿ ದರಿದ್ರರಾದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದನೆಂಬ ಸುದ್ದಿಯನ್ನು ಕಾಡುಮೇಡುಗಳಲ್ಲಿದ್ದ ಸಕಲ ಯೆಹೂದ ಸೈನಿಕರೂ ಸೇನಾಪತಿಗಳೂ ಕೇಳಿ ವಿುಚ್ಪದಲ್ಲಿ ವಾಸವಾಗಿದ್ದ ಅವನ ಬಳಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಜೆರುಸಲೇಮ್ ನಗರವನ್ನು ನಾಶಮಾಡಿದಾಗ ಯೆಹೂದದ ಕೆಲವು ಜನ ಸೈನ್ಯಾಧಿಕಾರಿಗಳು ಮತ್ತು ಅವನ ಸೈನಿಕರು ಇನ್ನೂ ಕಾಡುಮೇಡುಗಳಲ್ಲಿದ್ದರು. ಬಾಬಿಲೋನಿನ ರಾಜನು ಅಹೀಕಾಮನ ಮಗನಾದ ಗೆದಲ್ಯನನ್ನು ಅಳಿದುಳಿದ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದಾನೆಂಬ ಸಮಾಚಾರ ಕಿವಿಗೆ ಬಿತ್ತು. ಇಲ್ಲಿ ಅಳಿದುಳಿದವರು ಬಹಳ ಬಡವರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು. ಅವರನ್ನು ಬಂಧಿಗಳನ್ನಾಗಿ ಮಾಡಿಕೊಂಡು ಬಾಬಿಲೋನಿಗೆ ತೆಗೆದುಕೊಂಡು ಹೋಗಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಬಾಬಿಲೋನಿನ ಅರಸನು ಅಹೀಕಾಮನ ಮಗ ಗೆದಲ್ಯನನ್ನು ರಾಜ್ಯಪಾಲನಾಗಿ ಮಾಡಿದ್ದಾನೆಂಬ ಸುದ್ದಿಯನ್ನು ಮತ್ತು ಬಾಬಿಲೋನಿಗೆ ಸೆರೆಹೋಗದೆ ಇದ್ದ ದೇಶಿಯರಲ್ಲಿ ಬಡವರಾದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿಯನ್ನು ಉಳಿದಿದ್ದ ಯೆಹೂದ ಸೇನಾಧಿಪತಿಗಳೂ ಅವರ ಜನರೂ ಕೇಳಿದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 40:7
14 ತಿಳಿವುಗಳ ಹೋಲಿಕೆ  

ಆದರೆ ಏನೂ ಇಲ್ಲದ ಬಡಜನರನ್ನು ಜುದೇಯದ ನಾಡಿನಲ್ಲೆ ಬಿಟ್ಟು ಅವರಿಗೆ ಹೊಲತೋಟಗಳನ್ನು ಕೊಟ್ಟನು.


ಇವುಗಳನ್ನು ದೇಶದ ಸಕಲ ಜನರು ಇಸ್ರಯೇಲಿನ ರಾಜನಿಗೆ ಒಪ್ಪಿಸತಕ್ಕದ್ದು,


ಇವರನ್ನು ನೋಡಿ, ಜುದೇಯದ ಅರಸ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.


ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು.


ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.


ಕಾರೇಹನ ಮಗ ಯೋಹಾನಾನನು ಹಾಗು, ಅವನೊಂದಿಗಿದ್ದ ಎಲ್ಲ ಸೇನಾಪತಿಗಳು ನೆತನ್ಯನ ಮಗ ಇಷ್ಮಾಯೇಲನು ಮಾಡಿದ ಎಲ್ಲ ಕೆಡುಕನ್ನು ಕೇಳಿದರು.


ನೇರೀಯನ ಮಗ ಬಾರೂಕನನ್ನು, ರಾಜಕುವರಿಯರನ್ನು, ಅಂತು ಗಂಡಸರು, ಹೆಂಗಸರು, ಮಕ್ಕಳು,


ಹೊಲಗಳನ್ನು ಮತ್ತು ದ್ರಾಕ್ಷಿಯ ತೋಟಗಳನ್ನು ವ್ಯವಸಾಯ ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದರು.


ರಕ್ಷಾದಳದ ನಾಯಕನಾದ ನೆಬೂಜರದಾನನು ನಗರದಲ್ಲಿ ಉಳಿದಿದ್ದವರನ್ನು ಹಾಗು ಮೊದಲೇ ತನ್ನನ್ನು ಮರೆಹೊಕ್ಕಿದವರನ್ನು ಮತ್ತಿತರ ಕೆಲಸಗಾರರನ್ನೆಲ್ಲಾ ಬಾಬಿಲೋನಿಗೆ ಸೆರೆ ಒಯ್ದನು.


ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಅವನನ್ನು ಒಪ್ಪಿಸಿ ಮನೆಗೆ ಕರೆದುಕೊಂಡುಹೋಗುವಂತೆ ಹೇಳಿದರು. ಅಂದಿನಿಂದ ಯೆರೆಮೀಯನು ವಾಡಿಕೆಯ ಪ್ರಕಾರ ಜನರ ನಡುವೆ ವಾಸಮಾಡಿದನು.


ಏಳನೆಯ ತಿಂಗಳಿನಲ್ಲಿ ಇಷ್ಮಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು. ಈತನು ರಾಜವಂಶದವನು, ಎಲೀಷಾಮನ ಮೊಮ್ಮಗನು, ನೆತನ್ಯನ ಮಗನು ಹಾಗು ಅರಸನ ಪದಾಧಿಕಾರಿಗಳಲ್ಲಿ ಒಬ್ಬನು. ಅಲ್ಲಿ ಗೆದಲ್ಯನೊಂದಿಗೆ ಅವರೆಲ್ಲರು ಊಟಮಾಡುತ್ತಿದ್ದಾಗ,


ಬಳಿಕ ನೆತನ್ಯನ ಮಗ ಇಷ್ಮಾಯೇಲನು ರಾಜಕುವರಿಯರನ್ನು ಮತ್ತು ರಕ್ಷಾದಳದ ನಾಯಕನಾದ ನೆಬೂಜರದಾನನನ್ನು ಆಹೀಕಾಮನ ಮಗ ಗೆದಲ್ಯನಿಗೆ ಒಪ್ಪಿಸಿದ್ದ ಮಿಚ್ಪದ ಜನ ಶೇಷವನ್ನು, ಹೀಗೆ ಮಿಚ್ಪದಲ್ಲಿ ಅಳಿದುಳಿದಿದ್ದ ಎಲ್ಲರನ್ನು ಸೆರೆಹಿಡಿದು ಅಮ್ಮೋನ್ಯರ ನಾಡಿಗೆ ಹೊರಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು