Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 40:5 - ಕನ್ನಡ ಸತ್ಯವೇದವು C.L. Bible (BSI)

5 ಯೆರೆಮೀಯನು ಉತ್ತರಕೊಡದೆ ಇರಲು ನೆಬೂಜರದಾನನು ಅವನಿಗೆ, “ಬಾಬಿಲೋನಿಯದ ಅರಸನು, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಜುದೇಯದ ನಗರಗಳಿಗೆ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆ. ಅವನ ಬಳಿಗೆ ಹೋಗು, ಅವನ ಹತ್ತಿರ ಜನರ ನಡುವೆ ವಾಸಮಾಡುವ ಇಲ್ಲವೆ ಎಲ್ಲಿಗೆ ಬೇಕಾದರೂ ಹೋಗು” ಎಂದು ಹೇಳಿ ಬುತ್ತಿಯನ್ನೂ ಬಹುಮಾನವನ್ನೂ ಕೊಡಿಸಿ ಅವನನ್ನು ಕಳಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆರೆಮೀಯನು ಇನ್ನೂ ಹಿಂದಿರುಗದಿರುವಲ್ಲಿ ನೆಬೂಜರದಾನನು ಅವನಿಗೆ, “ಬಾಬೆಲಿನ ಅರಸನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನಲ್ಲಾ; ಅವನ ಕಡೆಗೆ ನೀನು ಹಿಂದಿರುಗಿ ಅವನ ಹತ್ತಿರ ಜನರ ಮಧ್ಯೆ ವಾಸಿಸು; ಇಲ್ಲವೆ ಎಲ್ಲಿ ಬೇಕಾದರೂ ಹೋಗು” ಎಂದು ಹೇಳಿ ಬುತ್ತಿಯನ್ನೂ ಮತ್ತು ಬಹುಮಾನವನ್ನೂ ಕೊಡಿಸಿ ಅವನನ್ನು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಯೆರೆಮೀಯನು ಇನ್ನೂ ಹಿಂದಿರುಗದಿರುವಲ್ಲಿ ನೆಬೂಜರದಾನನು ಅವನಿಗೆ - ಬಾಬೆಲಿನ ಅರಸನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯನ್ನಾಗಿ ನೇವಿುಸಿದ್ದಾನಲ್ಲಾ; ಅವನ ಕಡೆಗೆ ನೀನು ಹಿಂದಿರುಗಿ ಅವನ ಹತ್ತಿರ ಜನರ ಮಧ್ಯೆ ವಾಸಿಸು; ಇಲ್ಲವೆ ಎಲ್ಲಿ ಬೇಕಾದರೂ ಹೋಗು ಎಂದು ಹೇಳಿ ಬುತ್ತಿಯನ್ನೂ ಬಹುಮಾನವನ್ನೂ ಕೊಡಿಸಿ ಅವನನ್ನು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅಥವಾ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನಲ್ಲಿಗೆ ಹಿಂತಿರುಗಿಹೋಗು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯಾಗಿ ನೇಮಿಸಿದ್ದಾನೆ. ಗೆದಲ್ಯನಲ್ಲಿಗೆ ಹೋಗಿ ಜನರೊಂದಿಗೆ ವಾಸಿಸು; ಅಥವಾ ನಿನ್ನ ಮನಸ್ಸು ಬಂದಲ್ಲಿಗೆ ಹೋಗು.” ತರುವಾಯ ನೆಬೂಜರದಾನನು ಯೆರೆಮೀಯನಿಗೆ ಊಟವನ್ನೂ ಕಾಣಿಕೆಯನ್ನೂ ಕೊಟ್ಟು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯೆರೆಮೀಯನು ಇನ್ನು ಹಿಂದಿರುಗದೆ ಇರುವಾಗ, ನೆಬೂಜರದಾನನು ಹೇಳಿದ್ದೇನೆಂದರೆ: “ಬಾಬಿಲೋನಿನ ಅರಸನು ಯೆಹೂದದ ಪಟ್ಟಣಗಳ ಮೇಲೆ ಅಧಿಕಾರಿಯಾಗಿ ಇಟ್ಟ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನ ಬಳಿಗೆ ತಿರುಗಿಕೋ; ಅವನ ಸಂಗಡ ಜನರೊಳಗೆ ವಾಸಮಾಡು. ಇಲ್ಲವೆ ಎಲ್ಲಿ ಹೋಗುವುದಕ್ಕೆ ನಿನಗೆ ಸರಿಯಾಗಿ ಕಾಣುತ್ತದೋ, ಅಲ್ಲಿಗೆ ಹೋಗು,” ಎಂದು ಹೇಳಿ, ಕಾವಲಿನವರ ಅಧಿಪತಿಯು ಅವನಿಗೆ ಆಹಾರವನ್ನೂ, ಬಹುಮಾನವನ್ನೂ ಕೊಟ್ಟು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 40:5
24 ತಿಳಿವುಗಳ ಹೋಲಿಕೆ  

ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಅವನನ್ನು ಒಪ್ಪಿಸಿ ಮನೆಗೆ ಕರೆದುಕೊಂಡುಹೋಗುವಂತೆ ಹೇಳಿದರು. ಅಂದಿನಿಂದ ಯೆರೆಮೀಯನು ವಾಡಿಕೆಯ ಪ್ರಕಾರ ಜನರ ನಡುವೆ ವಾಸಮಾಡಿದನು.


ನೆತಲ್ಯನ ಮಗ ಇಷ್ಮಾಯೇಲನು ಮತ್ತು ಅವನೊಂದಿಗಿದ್ದ ಹತ್ತು ಜನರು ಎದ್ದು ಅಹೀಕಾಮನ ಮಗ, ಶಾಫಾನನ ಮೊಮ್ಮಗ, ಹಾಗು ಬಾಬಿಲೋನಿಯದ ಅರಸನಿಂದ ನಾಡಿನ ರಾಜ್ಯಪಾಲನಾಗಿ ನೇಮಕಗೊಂಡಿದ್ದ ಆ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು.


ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ.


ಅವರೆಲ್ಲರು ನಮ್ಮನ್ನು ಹಲವಾರು ವಿಧದಲ್ಲಿ ಬಹುಮಾನಿಸಿದರು; ಮಾತ್ರವಲ್ಲ, ನಾವು ಅಲ್ಲಿಂದ ನೌಕಾಯಾನವನ್ನು ಮುಂದುವರಿಸಿದಾಗ, ನಮಗೆ ಅವಶ್ಯವಾದುದೆಲ್ಲವನ್ನು ತಂದು ಹಡಗಿನಲ್ಲಿಟ್ಟರು.


ಆದರೆ ಪೌಲನನ್ನು ಕಾಪಾಡಬೇಕೆಂದಿದ್ದ ಶತಾಧಿಪತಿ ಹಾಗೆ ಮಾಡುವುದನ್ನು ತಡೆದನು. ಪ್ರತಿಯಾಗಿ ಈಜು ಬಲ್ಲವರು ಮೊದಲು ಹಡಗಿನಿಂದ ಧುಮುಕಿ ಈಜಿಕೊಂಡು ಹೋಗಬೇಕು ಎಂತಲೂ,


ಮಾರನೆಯ ದಿನ ನಾವು ಸಿದೋನಿಗೆ ಆಗಮಿಸಿದೆವು. ಪೌಲನು ತನ್ನ ಗೆಳೆಯರನ್ನು ಸಂದರ್ಶಿಸುವುದಕ್ಕೂ ಅವರಿಂದ ತನಗೆ ಅಗತ್ಯವಿದ್ದುದನ್ನು ಪಡೆಯುವುದಕ್ಕೂ ಜೂಲಿಯಸನು ಆದರದಿಂದ ಅನುಮತಿಯನ್ನು ಕೊಟ್ಟನು.


ನೋಡು, ನಿನ್ನ ಕೈಗೆ ಹಾಕಿದ್ದ ಬೇಡಿಗಳನ್ನು ಈ ದಿನ ತೆಗೆಸಿದ್ದೇನೆ. ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ಮನಸಿದ್ದರೆ ಬಾ. ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ಮನಸ್ಸಿಲ್ಲದಿದ್ದರೆ ಬರಬೇಕಾಗಿಲ್ಲ. ಇಗೋ ದೇಶವೆಲ್ಲ ನಿನ್ನ ಕಣ್ಣೆದುರಿಗಿದೆ. ನಿನಗೆ ಯಾವ ಕಡೆಗೆ ಹೋಗುವುದು ಸರಿಯೆಂದು, ಒಳ್ಳೆಯದೆಂದು ತೋರುತ್ತದೋ ಆ ಕಡೆಗೆ ಹೋಗು,” ಎಂದು ಹೇಳಿದನು.


ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.


ಸರ್ವೇಶ್ವರಾ, ನಾನು ನಿಮಗೆ ಶ್ರೇಷ್ಠವಾದ ಸೇವೆಸಲ್ಲಿಸದೆ ಹೋಗಿದ್ದರೆ, ನನ್ನ ಶತ್ರುಗಳು ಕಷ್ಟಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ನಿನಗೆ ಮೊರೆಯಿಡದೆ ಇದ್ದಿದ್ದರೆ ನನಗೆ ಶಾಪ ತಗುಲಲಿ!


ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.


ಒಬ್ಬನ ನಡತೆಯನ್ನುಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ.


ದೇವರು ಕೆಳಕ್ಕೆ ದಬ್ಬುತ್ತಾನೆ ಗರ್ವಿಗಳನು ಉದ್ಧರಿಸುತ್ತಾನೆ ದೀನಮನಸ್ಕರನು.


ಸ್ವಾಮೀ, ಕೃಪೆಮಾಡಿ; ನಿಮ್ಮ ದಾಸನಾದ ನನ್ನ ಪ್ರಾರ್ಥನೆಗೂ ನಿಮ್ಮ ನಾಮಸ್ಮರಣೆಯಲ್ಲಿ ಆನಂದಿಸುವ ನಿಮ್ಮ ಭಕ್ತರ ಪ್ರಾರ್ಥನೆಗೂ ಕಿವಿಗೊಡಿ. ನಿಮ್ಮ ದಾಸನಾದ ನಾನು ಈ ದಿನ ಈ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಿ,” ಎಂದು ಬೇಡಿಕೊಂಡೆನು.


ಎಜ್ರನ ಮಾತುಗಳು ಇವು: “ನಮ್ಮ ಪಿತೃಗಳ ದೇವರಾದ ಸರ್ವೇಶ್ವರಸ್ವಾಮಿಗೆ ಸ್ತೋತ್ರವಾಗಲಿ! ಜೆರುಸಲೇಮಿನಲ್ಲಿರುವ ದೇವಾಲಯವನ್ನು ಶೋಭಿಸುವ ಸ್ಥಿತಿಗೆ ತರುವುದಕ್ಕೆ ಸರ್ವೇಶ್ವರನ ಪ್ರೇರಣೆಯಿಂದಲೇ ಅರಸನು ಮನಸ್ಸು ಮಾಡಿದ್ದಾನೆ:


ಎಜ್ರನು, ಇಸ್ರಯೇಲ್ ದೇವರಾದ ಸರ್ವೇಶ್ವರನಿಂದ ದೊರಕಿದ ಮೋಶೆಯ ಧರ್ಮೋಪದೇಶದಲ್ಲಿ ಪಾಂಡಿತ್ಯ ಪಡೆದ ಒಬ್ಬ ಧರ್ಮಶಾಸ್ತ್ರಿ ಆಗಿದ್ದನು. ಅವನ ದೇವರಾದ ಸರ್ವೇಶ್ವರನ ಕೃಪಾಹಸ್ತ ಅವನ ಮೇಲಿತ್ತು. ಆದುದರಿಂದ ಅರಸನು ಅವನಿಗೆ ಇಷ್ಟವಾದುದನ್ನೆಲ್ಲ ಅನುಗ್ರಹಿಸಿದನು.


“ದುಃಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡನು. ಹಿಲ್ಕೀಯ, ಶಾಫಾನನ ಮಗ ಅಹೀಕಾಮ್, ಮೀಕನ ಮಗ ಅಬ್ದೋನ್, ಲೇಖಕ ಶಾಫಾನ್, ಸಹಕಾರಿಯಾದ ಅಸಾಯ ಎಂಬುವರಿಗೆ,


ಆಗ ಯಾಜಕ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ ಎಂಬವರು ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಗಂಡನು. ಈಕೆ ಜೆರುಸಲೇಮಿನ ಎರಡನೇ ಕೇರಿಯಲ್ಲಿ ವಾಸವಾಗಿದ್ದಳು.


ದುಃಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡು, ಯಾಜಕ ಹಿಲ್ಕೀಯನು ಶಾಫಾನನ ಮಗ ಅಹೀಕಾಮ್, ಮೀಕಾಯನ ಮಗ ಅಕ್ಬೋರ್, ಲೇಖಕ ಶಾಫಾನ್ ಹಾಗು ತನ್ನ ಹಸ್ತಕನಾದ ಅಸಾಯ ಎಂಬುವರಿಗೆ,


ಏಳನೆಯ ತಿಂಗಳಿನಲ್ಲಿ ಇಷ್ಮಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು. ಈತನು ರಾಜವಂಶದವನು, ಎಲೀಷಾಮನ ಮೊಮ್ಮಗನು, ನೆತನ್ಯನ ಮಗನು ಹಾಗು ಅರಸನ ಪದಾಧಿಕಾರಿಗಳಲ್ಲಿ ಒಬ್ಬನು. ಅಲ್ಲಿ ಗೆದಲ್ಯನೊಂದಿಗೆ ಅವರೆಲ್ಲರು ಊಟಮಾಡುತ್ತಿದ್ದಾಗ,


ಬಾಬಿಲೋನಿಯದ ಅರಸನಿಂದ ನಾಡಿನ ರಾಜ್ಯಪಾಲನಾಗಿ ನೇಮಕಗೊಂಡಿದ್ದ ಅಹೀಕಾಮನ ಮಗ ಗೆದಲ್ಯನನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದುಹಾಕಿದ್ದರಿಂದ ಬಾಬಿಲೋನಿಯರಿಗೆ ಆ ಜನರು ಅಂಜಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು