Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 40:10 - ಕನ್ನಡ ಸತ್ಯವೇದವು C.L. Bible (BSI)

10 ನಾನಂತು ಮಿಚ್ಪದಲ್ಲಿ ವಾಸವಾಗಿರುವೆನು. ನಮ್ಮ ಬಳಿಗೆ ಬರುವ ಬಾಬಿಲೋನಿಯರ ಮುಂದೆ ನಿಮ್ಮ ಪ್ರತಿನಿಧಿಯಾಗಿರುವೆನು. ನೀವು ಹೋಗಿ ದ್ರಾಕ್ಷಾರಸ, ಹಣ್ಣು, ಎಣ್ಣೆ ಮುಂತಾದವುಗಳನ್ನು ಸಂಗ್ರಹಿಸಿ ನಿಮ್ಮ ಉಗ್ರಾಣಗಳಲ್ಲಿ ತುಂಬಿಸಿಡಿ. ನೀವು ಹಿಡಿದಿರುವ ಪಟ್ಟಣಗಳಲ್ಲೆ ವಾಸವಾಗಿರಿ,” ಎಂದು ಶಪಥಮಾಡಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಾನಂತು ಮಿಚ್ಪದಲ್ಲಿ ವಾಸವಾಗಿದ್ದು ನಮ್ಮ ಬಳಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪಕ್ಷವನ್ನು ವಹಿಸುವೆನು; ನೀವು ದ್ರಾಕ್ಷಾರಸ, ಹಣ್ಣು, ಎಣ್ಣೆ, ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದ ಪಟ್ಟಣಗಳಲ್ಲಿ ವಾಸಿಸಿರಿ” ಎಂದು ಖಂಡಿತವಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಾನಂತು ವಿುಚ್ಪದಲ್ಲಿ ವಾಸವಾಗಿದ್ದು ನಮ್ಮ ಬಳಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪಕ್ಷವನ್ನು ವಹಿಸುವೆನು; ನೀವು ದ್ರಾಕ್ಷಾರಸ, ಹಣ್ಣು, ಎಣ್ಣೆ, ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದ ಪಟ್ಟಣಗಳಲ್ಲಿ ವಾಸಿಸಿರಿ ಎಂದು ಖಂಡಿತವಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನಾನು ಸ್ವತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನಾನಾದರೋ ಇಗೋ, ನಾನು ನಮ್ಮ ಬಳಿಗೆ ಬರುವ ಬಾಬಿಲೋನಿಯರ ಹತ್ತಿರ ಕಾದುಕೊಳ್ಳುವುದಕ್ಕೆ ಮಿಚ್ಪದಲ್ಲಿ ವಾಸಮಾಡುವೆನು. ಆದರೆ ನೀವು ದ್ರಾಕ್ಷಾರಸವನ್ನೂ, ಹಣ್ಣುಗಳನ್ನೂ, ಎಣ್ಣೆಯನ್ನೂ ಕೂಡಿಸಿ, ನಿಮ್ಮ ಪಾತ್ರೆಗಳಲ್ಲಿ ಇಟ್ಟು, ನೀವು ಹಿಡಿದಿರುವ ನಿಮ್ಮ ಪಟ್ಟಣಗಳಲ್ಲಿ ವಾಸವಾಗಿರಿ,” ಎಂಬುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 40:10
15 ತಿಳಿವುಗಳ ಹೋಲಿಕೆ  

ತಾವು ಹೊರದೂಡಲ್ಪಟ್ಟು ವಾಸಮಾಡುತ್ತಿದ್ದ ಎಲ್ಲಾ ಊರುಗಳಿಂದ ಜುದೇಯಕ್ಕೆ ಹಿಂದಿರುಗಿದರು. ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಬಂದು ಸೇರಿಕೊಂಡರು. ದ್ರಾಕ್ಷಾರಸವನ್ನೂ ಹಣ್ಣುಹಂಪಲುಗಳನ್ನೂ ಹೇರಳವಾಗಿ ಕೂಡಿಸಿಕೊಂಡರು.


‘ಸಿಬ್ಮ’ದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ದುಃಖಿಸುವುದಕ್ಕಿಂತಲು ನಿನ್ನನ್ನು ಕಂಡು ಹೆಚ್ಚಾಗಿ ದುಃಖಿಸುತ್ತೇನೆ. ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿವೆ. ಈಗ ನಿನ್ನ ಹಣ್ಣುಹಂಪಲುಗಳ ಮೇಲೆ ಹಾಗು ದ್ರಾಕ್ಷೆಯ ಸುಗ್ಗಿಯ ಮೇಲೆ ಸೂರೆಗಾರ ಬಂದೆರಗಿದ್ದಾನೆ.


ಆದರೆ ಏನೂ ಇಲ್ಲದ ಬಡಜನರನ್ನು ಜುದೇಯದ ನಾಡಿನಲ್ಲೆ ಬಿಟ್ಟು ಅವರಿಗೆ ಹೊಲತೋಟಗಳನ್ನು ಕೊಟ್ಟನು.


ರೇಕಾಬನ ಮಗ ಯೋನಾದಾಬನ ಸಂತಾನದವರಲ್ಲಿ ನನ್ನ ಸಮ್ಮುಖ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು’ ಎಂದನು.”


ಎಂದೇ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ, ಕಣ್ಣೀರಿಡುವೆನು ಯಜ್ಜೇರಿನವರ ಸಮೇತ, ತೋಯಿಸುತಿಹೆನು ಹೆಷ್ಬೋನನು, ಎಲ್ಲಾನನು ಕಣ್ಣೀರಿಂದ, ಏಕೆನೆ ಇಲ್ಲವಾಗಿದೆ ಅಲ್ಲಿ ಹಣ್ಣುಹಂಪಲು ಸುಗ್ಗಿಯ ಗೀತ.


ದಾವೀದನು ಗುಡ್ಡದ ತುದಿಯ ಆಚೆಗೆ ಹೋಗುವಷ್ಟರಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ಇನ್ನೂರು ರೊಟ್ಟಿಗಳನ್ನು, ನೂರು ಒಣಗಿದ ದ್ರಾಕ್ಷಿಗೊಂಚಲುಗಳನ್ನು, ನೂರು ಹಣ್ಣುಗಳನ್ನು ಹಾಗು ಒಂದು ಬುದ್ದಲಿ ದ್ರಾಕ್ಷಾರಸವನ್ನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು.


ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಯೇಲರಿಗೆ ಆ ನಾಡನ್ನು ಸ್ವಾಧೀನಪಡಿಸುವನು; ಆದುದರಿಂದ ಅವನನ್ನು ಧೈರ್ಯಗೊಳಿಸು.


ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆಮಾಡುತ್ತಾ ಎಚ್ಚರಿಕೆಯಿಂದಿರಿ,” ಎಂದರು.


ಅಯ್ಯೋ, ನನ್ನ ಗತಿ ಏನೆಂದು ಹೇಳಲಿ? ಬೇಸಿಗೆಯಲ್ಲಿ ಬೆಳೆಯನ್ನು ಕೊಯ್ಯಲು ಬಂದವನಂತೆ ಇದ್ದೇನೆ. ಹಕ್ಕಲನ್ನು ಆಯ್ದ ಮೇಲೆ ದ್ರಾಕ್ಷಿಹಣ್ಣನ್ನು ಕೊಯ್ಯಲು ಬಂದವನಂತೆ ಇದ್ದೇನೆ. ತಿನ್ನುವುದಕ್ಕೆ ಒಂದು ಗೊಂಚಲು ಸಹ ಉಳಿದಿಲ್ಲ. ನನಗೆ ಇಷ್ಟವಾದ ದೋರೆ ಅಂಜೂರ ಕೂಡ ಸಿಕ್ಕುತ್ತಿಲ್ಲ.


ಆಗ ಯೆರೆಮೀಯನು ಅಹೀಕಾಮನ ಮಗ ಗೆದಲ್ಯನು ಇದ್ದ ಮಿಚ್ಪಕ್ಕೆ ಹೋಗಿ ಅವನೊಡನೆ ಹಾಗು ನಾಡಿನ ಉಳಿದ ಜನರ ನಡುವೆ ವಾಸಮಾಡಿದನು.


ತನ್ನ ಕೆಲಸದಲ್ಲಿ ನಿಪುಣನಾದವನನ್ನು ಗುರುತುಹಚ್ಚು; ಅಂಥವನು ರಾಜರನ್ನಲ್ಲದೆ ನೀಚರನ್ನು ಸೇವಿಸಲಾರನು.


“ನೀವು ಕಣದ ಕೆಲಸವನ್ನೂ ಆಲೆಯ ಕೆಲಸವನ್ನೂ ಪೂರೈಸಿ, ಬೆಳೆಯನ್ನು ಮನೆಗೆ ತಂದಾಗ, ಏಳು ದಿನಗಳವರೆಗೂ ಪರ್ಣಕುಠೀರಗಳ ಜಾತ್ರೆಯನ್ನು ಆಚರಿಸಬೇಕು.


ನಿಮ್ಮ ಪ್ರಜೆಗಳು ಭಾಗ್ಯವಂತರು! ಸದಾ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಜ್ಞಾನವಾಕ್ಯಗಳನ್ನು ಕೇಳುವ ನಿಮ್ಮ ಸೇವಕರು ಧನ್ಯರು!


ಹುಲ್ಲು ಕೊಯ್ದು ತಂದಮೇಲೆ, ಗುಡ್ಡದ ಸೊಪ್ಪು ಕೂಡಿಸಿಟ್ಟ ಮೇಲೆ, ಹಸಿ ಹುಲ್ಲು ಚಿಗುರುತ್ತದೆ.


ಆಗ ರಕ್ಷಾದಳದ ನಾಯಕನಾದ ನೆಬೂಜರದಾನನನ್ನು, ಅಹೀಕಾಮನ ಮಗ ಹಾಗು ಶಾಫಾನನ ಮೊಮ್ಮಗ ಆದ ಗೆದಲ್ಯನ ವಶಕ್ಕೆ ಒಪ್ಪಿಸಿದ್ದ ಜನರನ್ನು, ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಜುದೇಯದಲ್ಲಿ ವಾಸಿಸುವುದಕ್ಕೆ ಹಿಂದಿರುಗಿ ಬಂದಿದ್ದ ಅಳಿದುಳಿದ ಯೆಹೂದಜನರನ್ನು, ಪ್ರವಾದಿ ಯೆರೆಮೀಯನನ್ನು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು