Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 40:1 - ಕನ್ನಡ ಸತ್ಯವೇದವು C.L. Bible (BSI)

1 ಸರ್ವೇಶ್ವರನ ವಾಣಿ ಮತ್ತೊಮ್ಮೆ ಯೆರೆಮೀಯನಿಗೆ ಕೇಳಿಸಿತು. ಇಷ್ಟರೊಳಗೆ ರಕ್ಷಾದಳದ ನಾಯಕ ನೆಬೂಜರದಾನನು ಜೆರುಸಲೇಮಿನವರ ಮತ್ತು ಜುದೇಯರ ಗುಂಪನ್ನು ಬಾಬಿಲೋನಿಗೆ ಸೆರೆಯೊಯ್ಯುತ್ತಿದ್ದಾಗ ಅವರಲ್ಲಿ ಯೆರೆಮೀಯನು ಕೂಡ ಸಂಕೋಲೆಗಳಿಂದ ಬಂಧಿತನಾಗಿರುವುದನ್ನು ಕಂಡು ಅವನನ್ನು ರಾಮದ ಬಳಿ ಬಿಡುಗಡೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೋವನು ಮತ್ತೊಮ್ಮೆ ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು. ಇಷ್ಟರೊಳಗೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿನವರ ಮತ್ತು ಯೆಹೂದ್ಯರ ಗುಂಪನ್ನು ಬಾಬಿಲೋನಿಗೆ ಸೆರೆಯೊಯ್ಯುತ್ತಿದ್ದಾಗ ಅವರಲ್ಲಿ ಸಂಕೋಲೆಗಳಿಂದ ಕಟ್ಟಲ್ಪಟ್ಟಿದ್ದ ಯೆರೆಮೀಯನನ್ನು ರಾಮದ ಬಳಿಯಲ್ಲಿ ಬಿಡಿಸಿಬಿಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆಹೋವನು ಮತ್ತೊಮ್ಮೆ ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು. ಇಷ್ಟರೊಳಗೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇವಿುನವರ ಮತ್ತು ಯೆಹೂದ್ಯರ ಗುಂಪನ್ನು ಬಾಬೆಲಿಗೆ ಸೆರೆಯೊಯ್ಯುತ್ತಿದ್ದಾಗ ಅವರಲ್ಲಿ ಸಂಕೋಲೆಗಳಿಂದ ಕಟ್ಟಲ್ಪಟ್ಟಿದ್ದ ಯೆರೆಮೀಯನನ್ನು ರಾಮದ ಬಳಿಯಲ್ಲಿ ಬಿಡಿಸಿಬಿಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ರಾಮನಗರದ ಹತ್ತಿರ ಅವನ ಬಿಡುಗಡೆಯಾದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನ ವಿಶೇಷ ರಕ್ಷಕ ದಳದ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ರಾಮದಲ್ಲಿ ನೋಡಿದನು. ಯೆರೆಮೀಯನನ್ನು ಸಂಕೋಲೆಗಳಿಂದ ಬಿಗಿಯಲಾಗಿತ್ತು. ಅವನು ಜೆರುಸಲೇಮ್ ಮತ್ತು ಯೆಹೂದದ ಎಲ್ಲಾ ಸೆರೆಯಾಳುಗಳ ಜೊತೆಗಿದ್ದನು. ಆ ಸೆರೆಯಾಳುಗಳನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಸಂಕೋಲೆಗಳಿಂದ ಕಟ್ಟಿಸಿ, ಬಾಬಿಲೋನಿಗೆ ಒಯ್ಯುವ ಯೆರೂಸಲೇಮಿನ ಯೆಹೂದದ ಸೆರೆಯವರೆಲ್ಲರ ಮಧ್ಯದಲ್ಲಿ ತೆಗೆದುಕೊಂಡುಹೋಗಿ, ರಾಮದಿಂದ ಬಿಟ್ಟು ಕಳುಹಿಸಿದ ಮೇಲೆ, ಯೆರೆಮೀಯನಿಗೆ ಯೆಹೋವ ದೇವರಿಂದ ವಾಕ್ಯವು ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 40:1
14 ತಿಳಿವುಗಳ ಹೋಲಿಕೆ  

ಶುಭಸಂದೇಶದ ನಿಮಿತ್ತ ನಾನು ಸೆರೆಯಾಳಾಗಿದ್ದರೂ ಪ್ರಭುವಿನ ರಾಯಭಾರಿಯಾಗಿದ್ದೇನೆ. ಎಂತಲೇ, ಈ ಶುಭಸಂದೇಶವನ್ನು ಧೈರ್ಯದಿಂದ ಸೂಕ್ತ ರೀತಿಯಲ್ಲಿ ಸಾರಲಾಗುವಂತೆ ನನಗಾಗಿ ಪ್ರಾರ್ಥಿಸಿರಿ.


ಅದಕ್ಕೆ ಅವನು ಪ್ರತ್ಯುತ್ತರವಾಗಿ, “ನೀವು ಮಾಡುತ್ತಿರುವುದಾದರೂ ಏನು? ನಿಮ್ಮ ಅಳುವಿನಿಂದ ನನ್ನ ಹೃದಯವನ್ನು ಸೀಳುತ್ತಿರುವಿರಾ? ನಾನು ಜೆರುಸಲೇಮಿನಲ್ಲಿ ಬಂಧಿತನಾಗುವುದಕ್ಕೆ ಮಾತ್ರವಲ್ಲ, ಪ್ರಭು ಯೇಸುವಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು.


ಸರ್ವೇಶ್ವರ ಹೀಗೆನ್ನುತ್ತಾರೆ: “ಕೇಳಿಬರುತ್ತಿದೆ ರಾಮಾ ಊರಿನೊಳು ರೋದನ ಗೋಳಾಟ, ಅಘೋರ ಆಕ್ರಂದನ. ಕಳೆದುಕೊಂಡ ಮಕ್ಕಳಿಗಾಗಿ ಗೋಳಾಡುತ್ತಿಹಳು ರಾಖೇಲಳು ಇನ್ನಿಲ್ಲದ ಅವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು.”


ಗಿಬ್ಯೋನ್, ರಾಮಾ, ಬೇರೋತ್,


ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.


ಚೂರುಚೂರುಗೈದನು ಕಂಚಿನ ಕದಗಳನು I ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು II


ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ I ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ I ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ II


ಅಲ್ಲಿ ಅವನ ಸ್ವಂತ ಮನೆ ಇದ್ದುದರಿಂದ ಅಲ್ಲಿಯೇ ಸರ್ವೇಶ್ವರನಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಇಸ್ರಯೇಲರನ್ನು ಪಾಲಿಸುತ್ತಿದ್ದನು.


ರಕ್ಷಾದಳದ ನಾಯಕನಾದ ನೆಬೂಜರದಾನನು ನಗರದಲ್ಲಿ ಉಳಿದಿದ್ದವರನ್ನು ಹಾಗು ಮೊದಲೇ ತನ್ನನ್ನು ಮರೆಹೊಕ್ಕಿದವರನ್ನು ಮತ್ತಿತರ ಕೆಲಸಗಾರರನ್ನೆಲ್ಲಾ ಬಾಬಿಲೋನಿಗೆ ಸೆರೆ ಒಯ್ದನು.


ನಾವು ಸೆರೆಯಾಗಿ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ ಜೆರುಸಲೇಮಿನಿಂದ ಪಲಾಯನ ಮಾಡಿದವನೊಬ್ಬನು ನನ್ನ ಬಳಿಗೆ ಬಂದು, - ‘ಪಟ್ಟಣವು ಶತ್ರು ವಶವಾಯಿತು’ ಎಂದು ಹೇಳಿದನು.


ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರಯೇಲ್ ರಾಜ ಬಾಷನು ಯೆಹೂದ್ಯರಿಗೆ ವಿರೋಧವಾಗಿ ಹೊರಟುಬಂದನು. ಯಾರೂ ಯೆಹೂದ್ಯರ ಅರಸ ಆಸನ ಬಳಿಗೆ ಹೋಗಿಬರುವುದಕ್ಕಾಗದಂತೆ ರಾಮಕೋಟೆಯನ್ನು ಕಟ್ಟಿಸಿದನು.


ಹತ್ತು ದಿನಗಳಾದ ಮೇಲೆ ಸರ್ವೇಶ್ವರನ ವಾಣಿ ಯೆರೆಮೀಯನಿಗೆ ಕೇಳಿಬಂದಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು