Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 4:8 - ಕನ್ನಡ ಸತ್ಯವೇದವು C.L. Bible (BSI)

8 ಈ ನಿಮಿತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಅತ್ತುಗೋಳಾಡಿರಿ. ಸರ್ವೇಶ್ವರ ಸ್ವಾಮಿಯ ಕೋಪ ಅಗ್ನಿಯು ಜುದೇಯವನ್ನು ಬಿಟ್ಟುಹೋಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಇದರ ನಿಮಿತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ಪ್ರಲಾಪಿಸಿರಿ, ಗೋಳಾಡಿರಿ; ಯೆಹೋವನ ರೋಷಾಗ್ನಿಯು ನಮ್ಮನ್ನು ಬಿಟ್ಟಿಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಇದರ ನಿವಿುತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಹಲುಬಿ ಗೋಳಾಡಿರಿ; ಯೆಹೋವನ ರೋಷಾಗ್ನಿಯು ನಮ್ಮನ್ನು ಬಿಟ್ಟಿಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದ್ದರಿಂದ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ದೊಡ್ಡ ಧ್ವನಿಯಿಂದ ಗೋಳಾಡಿರಿ. ಏಕೆಂದರೆ ಯೆಹೋವನು ನಮ್ಮ ಮೇಲೆ ತುಂಬ ಕೋಪಗೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ. ಪ್ರಲಾಪಿಸಿರಿ, ಗೋಳಾಡಿರಿ. ಯೆಹೋವ ದೇವರ ಉಗ್ರಕೋಪದ ಉರಿಯು ನಮ್ಮಿಂದ ಹಿಂದಿರುಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 4:8
22 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಜನರಿಗೆ : “ನನ್ನ ಪ್ರಜೆಯೆಂಬ ಕುವರಿಯೇ, ಗೋಣಿತಟ್ಟನ್ನು ಸುತ್ತಿಕೊ, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡವಳಂತೆ ದುಃಖಪಟ್ಟು ಘೋರವಾಗಿ ಪ್ರಲಾಪಮಾಡು. ಕೊಳ್ಳೆಗಾರ ತಟ್ಟನೆ ನಿನ್ನ ಮೇಲೆ ಬೀಳಲಿದ್ದಾನೆ ಎಂಬುದನ್ನು ಮನದಲ್ಲಿಡು.”


ಎಂದೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆ ದಿನದಂದು ನಿಮಗೆ ಆಜ್ಞಾಪಿಸಿ : “ನೀವು ಅತ್ತು ಪ್ರಲಾಪಿಸಬೇಕು, ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು,” ಎಂದು ಹೇಳಿದರು.


ಸುಖವಾಗಿರುವವರೇ, ಗಡಗಡನೆ ನಡುಗಿರಿ. ನಿಶ್ಚಿಂತರಾಗಿರುವವರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಗಳನ್ನು ಕಿತ್ತುಹಾಕಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.


ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಎಂದೇ ತಮ್ಮ ಜನರ ವಿರುದ್ಧ ಸ್ವಾಮಿಯ ಕೋಪ ಭುಗಿಲೆದ್ದಿದೆ. ಹೊಡೆಯುವುದಕ್ಕೆ ಅವರ ಕೈ ಮೇಲಕ್ಕೆತ್ತಿದೆ. ಬೆಟ್ಟಗುಡ್ಡಗಳು ನಡುಗುವುವು. ಸತ್ತ ಹೆಣಗಳು ಕಸದಂತೆ ಬೀದಿಯಲ್ಲಿ ಬಿದ್ದಿರುವುವು. ಇಷ್ಟೆಲ್ಲ ನಡೆದರೂ ಸ್ವಾಮಿಯ ಕೋಪ ತಣಿಯದು, ಎತ್ತಿದ ಕೈ ಇಳಿಯದು.


ನಿಮ್ಮ ಕೊಂಡಾಟದಿನಗಳನ್ನು ಗೋಳಾಟ ದಿನಗಳನ್ನಾಗಿ ಮಾರ್ಪಡಿಸುವೆನು. ನಿಮ್ಮ ಹರ್ಷಗೀತೆಗಳನ್ನು ಶೋಕಗೀತೆಗಳನ್ನಾಗಿ ಬದಲಾಯಿಸುವೆನು. ನೀವೆಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆ ಬೋಳಿಸಿಕೊಳ್ಳುವಂತೆ ಮಾಡುವೆನು. ಏಕಮಾತ್ರ ಪುತ್ರನನ್ನು ಕಳೆದುಕೊಂಡವರಂತೆ ನೀವು ಅತ್ತು ಪ್ರಲಾಪಿಸುವಿರಿ. ಆ ದಿನವೆಲ್ಲಾ ನಿಮಗೆ ಕರಾಳ ದಿನವಾಗುವುದು.”


“ನರಪುತ್ರನೇ, ನೀನು ಈ ದೈವೋಕ್ತಿಯನ್ನು ಪ್ರಕಟಿಸು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅರಚಿಕೊಳ್ಳಿರಿ, ಅಯ್ಯೋ ದುರ್ದಿನವೇ! ಆ ದಿನ ಹತ್ತಿರವಾಯಿತು:


ನರಪುತ್ರನೇ, ಕೂಗು, ಗೋಳಾಡು, ಬಡಿದುಕೋ ಎದೆ! ಎರಗಿದೆ ಆ ಖಡ್ಗ ನನ್ನ ಜನರ ಮೇಲೆ ಇಸ್ರಯೇಲಿನ ಅರಸರೆಲ್ಲರ ಮೇಲೆ ತುತ್ತಾಗುವರು ಅದಕ್ಕೆ ಜನನಾಯಕರು ಜನರೊಂದಿಗೆ.


ಮೋವಾಬು ನಾಶವಾಗಿದೆ, ಅವಮಾನಕ್ಕೆ ಈಡಾಗಿದೆ. ಗೋಳಾಡಿರಿ, ಅತ್ತು ಪ್ರಲಾಪಿಸಿರಿ ! ಮೋವಾಬು ಹಾಳಾಯಿತೆಂದು ಅರ್ವೋನಿನ ತೀರದಲ್ಲೆಲ್ಲಾ ಘೋಷಿಸಿರಿ.


ಆತನ ಮನದಾಲೋಚನೆಗಳನ್ನು ನಡೆಸಿ ನೆರವೇರಿಸುವ ತನಕ ಹಿಂದಿರುಗದು ಆತನ ರೋಷವೆಂಬಾ ಬಿರುಗಾಳಿ, ಇದನ್ನು ನೀವು ಗ್ರಹಿಸುವಿರಿ ಕಟ್ಟಕಡೆಯ ದಿನಗಳಲ್ಲಿ.


ಪ್ರಲಾಪಿಸಿರಿ, ಸಮೀಪಿಸಿದೆ ಸರ್ವೇಶ್ವರನ ದಿನ; ಸನ್ನಿಹಿತವಾಗಿದೆ, ಸರ್ವನಾಶ ಮಾಡುವ ಸೇನಾಧೀಶ್ವರನ ದಿನ !


ಮನಸ್ಸೆ ಎಫ್ರಯಿಮನ್ನು ಎಫ್ರಯಿಮ್ ಮನಸ್ಸೆಯನ್ನು ಕಬಳಿಸುತ್ತದೆ. ಇವೆರಡೂ ಸೇರಿ ಜುದೇಯಕ್ಕೆ ವಿರುದ್ಧವಾಗಿ ಎದ್ದು ನಿಂತಿವೆ. ಇಷ್ಟಾದರೂ ಸಹ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಎಂದೇ ಅವರ ಯುವಕ ಯುವತಿಯರ ಬಗ್ಗೆ ಸ್ವಾಮಿಗೆ ಸಂತೋಷವಿಲ್ಲ; ಅವರ ಅನಾಥರ ಮತ್ತು ವಿಧವೆಯರ ಬಗ್ಗೆ ಸಹಾನುಭೂತಿಯಿಲ್ಲ. ಪ್ರತಿಯೊಬ್ಬನೂ ಧರ್ಮಭ್ರಷ್ಟನೂ ಅತಿ ದುಷ್ಟನೂ ಆಗಿದ್ದಾನೆ. ಪ್ರತಿಯೊಬ್ಬನ ಬಾಯಿ ನುಡಿಯುವುದು ಕೆಡುಕನ್ನೇ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಇವರು ಇಸ್ರಯೇಲರನ್ನು ನುಂಗಿಬಿಡಲು ಬಾಯಿ ತೆರೆದಿದ್ದಾರೆ. ಇಷ್ಟಾದರೂ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II


ಮೋಶೆಗೆ, “ಈ ಜನರ ಮುಖಂಡರೆಲ್ಲರನ್ನು ಹಿಡಿಸಿ, ನನ್ನ ಆಜ್ಞಾನುಸಾರ ಬಹಿರಂಗವಾಗಿ ಮರಣದಂಡನೆಗೆ ಗುರಿಮಾಡಿಸು. ಆಗ ನನ್ನ ಕೋಪಾಗ್ನಿ ಇಸ್ರಯೇಲರಿಂದ ತೊಲಗುವುದು,” ಎಂದರು.


ಹಾದುಹೋಗುವವರೇ, ನಿಮಗಿಲ್ಲವೆ ನನ್ನ ಚಿಂತೆ? ಸರ್ವೇಶ್ವರ ಸಿಟ್ಟುಗೊಂಡು ನನಗಿತ್ತಿರುವನು ಈ ವ್ಯಥೆ ! ಈ ಪರಿ ಸಂಕಟವನ್ನು ನೀವೆಲ್ಲಾದರು ನೋಡಿದ್ದುಂಟೆ?”


ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ.


‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದುಹೋದ ಅಂದವಾದ ಪಾತ್ರೆಯಂತೆ.


ಜುದೇಯದ ನಿವಾಸಿಗಳೇ, ನಿಮ್ಮ ಮಕ್ಕಳು ಅಗಲಿ ಸೆರೆಹೋಗಿದ್ದಾರೆ. ನಿಮ್ಮ ಮುದ್ದು ಮಕ್ಕಳಿಗಾಗಿ ತಲೆಬೋಳಿಸಿಕೊಳ್ಳಿ, ಮುಂಡನ ಮಾಡಿಸಿಕೊಳ್ಳಿ. ನಿಮ್ಮ ಬೋಳುತಲೆಯು ರಣಹದ್ದಿನಂತೆ ನುಣ್ಣಗಿರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು