Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 4:27 - ಕನ್ನಡ ಸತ್ಯವೇದವು C.L. Bible (BSI)

27 ಸರ್ವೇಶ್ವರ ಸ್ವಾಮಿ ಹೀಗೆಂದಿದ್ದಾರೆ : ನಾಡೆಲ್ಲ ಬಟ್ಟಬರಿದಾಗುವುದು; ಆದರೆ ನಾನು ಅದನ್ನು ಸಂಪೂರ್ಣವಾಗಿ ಲಯಮಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಯೆಹೋವನು, “ದೇಶವೆಲ್ಲಾ ಬಟ್ಟಬರಿದಾಗುವುದು, ಆದರೆ ನಾನು ಸಂಪೂರ್ಣವಾಗಿ ಲಯಮಾಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಯೆಹೋವನು ಹೀಗನ್ನುತ್ತಾನೆ - ದೇಶವೆಲ್ಲಾ ಬಟ್ಟಬರಿದಾಗುವದು, ಆದರೆ ನಾನು ಸಂಪೂರ್ಣವಾಗಿ ಲಯಮಾಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಯೆಹೋವನು ಹೀಗೆ ಹೇಳುತ್ತಾನೆ: “ಇಡೀ ದೇಶವು ಹಾಳಾಗುವುದು. ಆದರೆ ನಾನು ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಏಕೆಂದರೆ ಯೆಹೋವ ದೇವರು ಹೀಗೆ ಹೇಳಿದ್ದಾರೆ: “ದೇಶವೆಲ್ಲಾ ಹಾಳಾಗುವುದು. ಆದರೂ ನಾನು ಅದನ್ನು ಪೂರ್ಣ ನಾಶ ಮಾಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 4:27
29 ತಿಳಿವುಗಳ ಹೋಲಿಕೆ  

ಯಾವ ರಾಷ್ಟ್ರಗಳಿಗೆ ನಿನ್ನನ್ನು ಅಟ್ಟಿದೆನೋ ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು. ನಿನ್ನನ್ನಾದರೋ, ನಿರ್ಮೂಲ ಮಾಡೆನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡೆನು. ಸರ್ವೇಶ್ವರನಾದ ನನ್ನ ನುಡಿ ಇದು.”


“ಆದರೂ ಆ ದಿನಗಳಲ್ಲಿ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.


ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.


ನಿನ್ನನ್ನು ರಕ್ಷಿಸಲು ನಿನ್ನೊಂದಿಗೆ ನಾನಿರುವೆನು ನಿನ್ನನ್ನು ಯಾವ ರಾಷ್ಟ್ರಗಳಿಗೆ ಅಟ್ಟಿ ಚದರಿಸಿದೆನೋ ಆ ರಾಷ್ಟ್ರಗಳನ್ನೆಲ್ಲ ನಿರ್ಮೂಲ ಮಾಡುವೆನು. ನಿನ್ನನ್ನು ನಿರ್ಮೂಲ ಮಾಡೆನು, ಮಿತಿಮೀರಿ ಶಿಕ್ಷಿಸೆನು; ಆದರೆ ಶಿಕ್ಷಿಸದೆ ಮಾತ್ರ ಬಿಡೆನು - ಇದು ಸರ್ವೇಶ್ವರನಾದ ನನ್ನ ನುಡಿ.”


ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ. “ಅಯ್ಯೋ, ಸರ್ವೇಶ್ವರನಾದ ದೇವರೇ, ಇಸ್ರಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲನಮಾಡುವಿರೋ?” ಎಂದು ಮೊರೆಯಿಟ್ಟೆ.


ಅವರು ಶತ್ರುಗಳ ದೇಶದಲ್ಲಿರುವಾಗಲೂ ನಾನು ಅವರನ್ನು ಬೇಡವೆನ್ನುವುದಿಲ್ಲ. ತಾತ್ಸಾರ ಮಾಡುವುದಿಲ್ಲ, ನಾನು ಅವರಿಗೆ ಮಾಡಿದ ವಾಗ್ದಾನವನ್ನು ಮೀರುವುದಿಲ್ಲ. ನಾನು ಅವರ ದೇವರಾದ ಸರ್ವೇಶ್ವರನಲ್ಲವೆ?


ನಾನು ದೇಶವನ್ನು ಹಾಳುಪಾಳು ಮಾಡುವೆನು, ಅದರ ಶಕ್ತಿಯ ಮದವು ಇಳಿದುಹೋಗುವುದು; ಇಸ್ರಯೇಲಿನ ಮಲೆನಾಡು ಬೀಡುಬೀಳುವುದು; ಯಾರೂ ಇಲ್ಲಿ ಹಾದುಹೋಗರು.


ನಾನು ಅವರ ವಿರುದ್ಧ ಕೈಯೆತ್ತಿ ಅವರು ವಾಸವಾಗಿರುವ ದೇಶವನ್ನೆಲ್ಲಾ ಮರುಭೂಮಿಯಿಂದ ದಿಬ್ಬದವರೆಗೂ ಹಾಳುಪಾಳು ಮಾಡುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.”


ಆದ್ದರಿಂದ ನಾಡನ್ನು ಭಯಾನಕವಾಗಿಸುವರು ಹಾದು ಹೋಗುವವರೆಲ್ಲ ಬೆಬ್ಬೆರಗಾಗಿ ತಲೆದೂಗುವರು, ಸಿಳ್ಳು ಹಾಕಿ ಅದನ್ನು ಪರಿಹಾಸ್ಯ ಮಾಡುವರು.


ಜುದೇಯದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಹರ್ಷಾಡಂಬರಗಳು ಕೇಳಿಬರುವುದಿಲ್ಲ. ವಧೂವರರ ಸೊಲ್ಲನ್ನು ನಿಲ್ಲಿಸಿಬಿಡುವೆನು, ನಾಡಿಗೆ ನಾಡೇ ಹಾಳಾಗುವುದು. ಇದು ಸರ್ವೇಶ್ವರನಾದ ನನ್ನ ನುಡಿ.”


ಗುಹೆಬಿಟ್ಟು ಹೊರಟುಬರುವ ಸಿಂಹದಂತೆ ರಾಷ್ಟ್ರಗಳ ವಿನಾಶಕನೊಬ್ಬನು ಎದ್ದಿದ್ದಾನೆ; ಹೊರಟು ಬರುತ್ತಿದ್ದಾನೆ. ಅವನು ಜುದೇಯ ನಾಡನ್ನು ಹಾಳುಮಾಡುವನು. ಅದರ ಪಟ್ಟಣಗಳು ನಿರ್ಜನ ಪ್ರದೇಶಗಳಾಗುವುವು.


ಇಗೋ, ಸರ್ವೇಶ್ವರ ಬರಿದುಮಾಡುವರು ಧರೆಯನು, ನಿರ್ಜನ ಪ್ರದೇಶವಾಗಿಸುವರು ವಿರೂಪಗೊಳಿಸಿ ಅದನು, ಚದರಿಸುವರು ಅದರ ನಿವಾಸಿಗಳನು.


ಈ ಪ್ರಕಾರ ಸರ್ವೇಶ್ವರ ಯೆರೆಮೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿತು; ನಾಡು ತನ್ನ ಸಬ್ಬತ್‍ಕಾಲವನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಿತ್ತು.


ಆದರೆ, ನೀವು ದಯಾಪೂರಿತರು, ಕರುಣಾಮಯ ದೇವರು! ನಿಮ್ಮ ಮಹಾಕೃಪಾನುಸಾರ, ಕೈಬಿಡಲಿಲ್ಲ, ನಾಶಮಾಡಲಿಲ್ಲ ಅವರನು.


ನಾಶನದ ಮೇಲೆ ನಾಶನದ ಸುದ್ದಿ, ನಾಡೆಲ್ಲ ಕಾಡಾಯಿತು. ದಿಢೀರೆಂದು ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ತುಂಡುತುಂಡಾದವು !


ಸರ್ವೇಶ್ವರ : “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”


ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.


ಆದಕಾರಣ, ನನ್ನ ರೌದ್ರಕೋಪಾಗ್ನಿ ಸುರಿದು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಧಗಧಗಿಸಿತು. ಅವು ಈಗಲೂ ಹಾಳುಪಾಳಾಗಿವೆ.’


“ಆದರೂ ನಾನು ಅವರನ್ನು ನಾಶಮಾಡಲಿಲ್ಲ; ನನ್ನ ಕಟಾಕ್ಷವು ಅವರನ್ನು ಉಳಿಸಿತು; ನಾನು ಅವರನ್ನು ಮರುಭೂಮಿಯಲ್ಲಿ ನಿರ್ಮೂಲಮಾಡಲಿಲ್ಲ.


ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ದೇವಸ್ಥಾನಗಳನ್ನು ನೆಲಸಮ ಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಸುವಾಸನೆಯನ್ನು ನಾನು ಮೂಸಿಯೂ ನೋಡುವುದಿಲ್ಲ.


ಓಲಿವ್ ಮರದಲ್ಲಿ ಕಾಯಿಯನ್ನು ಉದುರಿಸಿದ ನಂತರ ಅದರ ತುತ್ತತುದಿಯಲ್ಲಿ ಎರಡು ಮೂರೇ ಕಾಯಿಗಳಿರುವುವು: ಅದರ ಫಲಭರಿತ ರೆಂಬೆಗಳಲ್ಲಿ ನಾಲ್ಕೈದೇ ಕಾಯಿಗಳಿರುವುವು. ಅಂತೆಯೇ ಇಸ್ರಯೇಲಿನಲ್ಲಿ ಅಳಿದುಳಿಯುವವರು ಕೆಲವರು ಮಾತ್ರ” ಎನ್ನುತ್ತಾರೆ ಇಸ್ರಯೇಲಿನ ದೇವರಾದ ಸರ್ವೇಶ್ವರ.


ಸ್ವಾಮಿ ತಿರಸ್ಕರಿಸಿಬಿಟ್ಟಿದ್ದಾನೆ ತನ್ನ ಬಲಿಪೀಠವನ್ನೇ ಅಸಹ್ಯಗೊಂಡು ತೊರೆದುಬಿಟ್ಟಿದ್ದಾನೆ ತನ್ನ ಪವಿತ್ರಸ್ಥಾನವನ್ನೇ ಸಿಯೋನ್ ಅರಮನೆಯ ಗೋಡೆಗಳನ್ನು ಕೆಡವಲು ಬಿಟ್ಟಿದ್ದಾನೆ ಹಗೆಗಳನ್ನೇ. ಹಬ್ಬಹರಿದಿನಗಳ ಜಯಘೋಷವೋ ಎಂಬಂತೆ ಘೋಷಣೆ ಹಾಕುತ್ತಿದ್ದಾರಲ್ಲಾ ಶತ್ರುಗಳು ಸರ್ವೇಶ್ವರನ ಮಂದಿರದಲ್ಲೆ !


ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು