Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 4:21 - ಕನ್ನಡ ಸತ್ಯವೇದವು C.L. Bible (BSI)

21 ಎಷ್ಟರವರೆಗೆ ನಾನು ಯುದ್ಧಪತಾಕೆಗಳನ್ನು ನೋಡುತ್ತಿರಲಿ ! ಯುದ್ಧ ಕಹಳೆಗಳು ಮೊಳಗುವುದನ್ನು ಕೇಳುತ್ತಿರಲಿ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನಾನು ಎಷ್ಟರವರೆಗೆ ಯುದ್ಧದ ಪತಾಕೆಗಳನ್ನು ನೋಡಲಿ, ಎಂದಿನ ತನಕ ತುತ್ತೂರಿಯ ಶಬ್ದವನ್ನು ಕೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನಾನು ಎಷ್ಟರವರೆಗೆ ಧ್ವಜವನ್ನು ನೋಡಲಿ, ಎಂದಿನ ತನಕ ತುತೂರಿಯ ಶಬ್ದವನ್ನು ಕೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯೆಹೋವನೇ, ಎಷ್ಟು ಹೊತ್ತಿನವರೆಗೆ ನಾನು ಯುದ್ಧ ಧ್ವಜಗಳನ್ನು ನೋಡಬೇಕು? ಎಷ್ಟು ಹೊತ್ತಿನವರೆಗೆ ನಾನು ಯುದ್ಧದ ತುತ್ತೂರಿಗಳ ಶಬ್ಧವನ್ನು ಕೇಳಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಎಷ್ಟರವರೆಗೆ ನಾನು ಯುದ್ಧದ ಧ್ವಜವನ್ನು ನೋಡುತ್ತಿರಲಿ? ತುತೂರಿಯ ಶಬ್ದವನ್ನು ಎಷ್ಟರವರೆಗೆ ನಾನು ಕೇಳಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 4:21
11 ತಿಳಿವುಗಳ ಹೋಲಿಕೆ  

ಬೆನ್ಯಮೀನ್ ಕುಲದವರೇ, ಜೆರುಸಲೇಮಿನಿಂದ ವಲಸೆಹೋಗಿರಿ. ತೆಕೋವದಲ್ಲಿ ಕೊಂಬನ್ನೂದಿರಿ. ಬೇತ್‍ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ. ಏಕೆಂದರೆ ಅತಿ ವಿನಾಶಕರವಾದ ವಿಪತ್ತು ಉತ್ತರದಿಂದ ತಲೆದೋರುತ್ತಿದೆ.


ಅಯ್ಯೋ, ನನ್ನ ಕರುಳು ಯಾತನೆಯಿಂದ ಕಿತ್ತುಬರುವಂತಿದೆ. ಅಕಟಾ ! ನನ್ನ ಗುಂಡಿಗೆಯ ಪಕ್ಕೆಗಳು ಸೀಳುವಂತಿದೆ, ಹೃದಯ ತಳಮಳಗೊಂಡಿದೆ ! ಇನ್ನು ಬಾಯಿಮುಚ್ಚಿಕೊಂಡಿರಲು ನನ್ನಿಂದಾಗದು; ನನ್ನ ಮನವೇ, ಕಾಳಗದ ಕಹಳೆಯನ್ನೂ ಯುದ್ಧದ ಕೋಲಾಹಲವನ್ನೂ ಕೇಳುತ್ತಿರುವೆ, ಅಲ್ಲವೆ?


ಸರ್ವೇಶ್ವರಸ್ವಾಮಿ ಬಾಬಿಲೋನಿಯದ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೊಪ್ಪಿಸಿದರು. ಅವನು ಅವರ ಯುವ ಯೋಧರನ್ನು ಅವರ ಪವಿತ್ರಾಲಯದಲ್ಲೇ ಕತ್ತಿಯಿಂದ ಸಂಹರಿಸಿದನು. ಯುವಕರನ್ನು, ಕನ್ಯೆಯರನ್ನು, ವೃದ್ಧರನ್ನು ಹಾಗು ಅತಿವೃದ್ಧರನ್ನು ಕನಿಕರಿಸದೆ ಎಲ್ಲರನ್ನು ಕೊಲ್ಲಿಸಿದನು.


ನೆಬೂಕದ್ನೆಚ್ಚರನು ವರ್ಷಾರಂಭದಲ್ಲಿ ಅವನನ್ನೂ ದೇವಾಲಯದ ಮೌಲ್ಯವಸ್ತುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಸಹೋದರನಾದ ಚಿದ್ಕೀಯನನ್ನು ಜುದೇಯದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು.


ಈಜಿಪ್ಟಿನ ರಾಜನು ಜೆರುಸಲೇಮಿಗೆ ಬಂದು ಅವನನ್ನು ಪಟ್ಟದಿಂದ ತೆಗೆದುಹಾಕಿ, ಯೆಹೂದ್ಯರು ತನಗೆ 3400 ಕಿಲೋಗ್ರಾಂ ಬೆಳ್ಳಿಯನ್ನೂ 34 ಕಿಲೋಗ್ರಾಂ ಬಂಗಾರವನ್ನೂ ದಂಡ ತೆರುವಂತೆ ಮಾಡಿದನು.


ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತೆಯನ್ನು ರಚಿಸಿದನು. ಎಲ್ಲ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗು ತಮ್ಮ ಶೋಕಗೀತೆಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತೆ ಗ್ರಂಥದಲ್ಲಿ ಲಿಖಿತವಾಗಿವೆ.


ನಾಶನದ ಮೇಲೆ ನಾಶನದ ಸುದ್ದಿ, ನಾಡೆಲ್ಲ ಕಾಡಾಯಿತು. ದಿಢೀರೆಂದು ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ತುಂಡುತುಂಡಾದವು !


ಸರ್ವೇಶ್ವರ ಹೀಗೆನ್ನುತ್ತಾರೆ: ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು. ಪೆದ್ದ ಮಕ್ಕಳು, ಬುದ್ಧಿಯಿಲ್ಲದವರು ಕೇಡುಮಾಡುವುದರಲ್ಲಿ ಪ್ರವೀಣರು ಒಳಿತನ್ನು ಮಾಡಲು ಅರಿಯರು


ನಾವು ಈಜಿಪ್ಟಿನಲ್ಲೇ ವಾಸಮಾಡುತ್ತೇವೆ. ಅದು ಯುದ್ಧ ಕಾಣದ, ರಣಕಹಳೆ ಕೇಳದ, ಕೂಳಿನ ಕೊರತೆಯಿಲ್ಲದ ದೇಶ.’ ಎಂದುಕೊಳ್ಳಬೇಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು