Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 39:8 - ಕನ್ನಡ ಸತ್ಯವೇದವು C.L. Bible (BSI)

8 ಅರಮನೆಯನ್ನೂ ಪ್ರಜೆಗಳ ಮನೆಗಳನ್ನೂ ಬಾಬಿಲೋನಿಯದವರು ಬೆಂಕಿಯಿಂದ ಸುಟ್ಟು ಜೆರುಸಲೇಮಿನ ಸುತ್ತಣವಿದ್ದ ಗೋಡೆಗಳನ್ನು ಕೆಡವಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಮತ್ತು ಕಸ್ದೀಯರು ಅರಮನೆಯನ್ನೂ, ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು, ಯೆರೂಸಲೇಮಿನ ಸುತ್ತಣ ಗೋಡೆಗಳನ್ನು ಕೆಡವಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಮತ್ತು ಕಸ್ದೀಯರು ಅರಮನೆಯನ್ನೂ ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಯೆರೂಸಲೇವಿುನ ಸುತ್ತಣ ಗೋಡೆಗಳನ್ನು ಕೆಡವಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಬಾಬಿಲೋನಿನ ಸೈನಿಕರು ಅರಮನೆಗೂ ಮತ್ತು ಜೆರುಸಲೇಮಿನ ಉಳಿದ ನಿವಾಸಿಗಳ ಮನೆಗಳಿಗೂ ಬೆಂಕಿಯಿಟ್ಟರು. ಜೆರುಸಲೇಮಿನ ಗೋಡೆಗಳನ್ನು ಕೆಡವಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅರಮನೆಯನ್ನೂ, ಜನರ ಮನೆಗಳನ್ನೂ, ಬಾಬಿಲೋನಿಯರು ಬೆಂಕಿಯಿಂದ ಸುಟ್ಟರು. ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 39:8
25 ತಿಳಿವುಗಳ ಹೋಲಿಕೆ  

ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ. ಜೆರುಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.


ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳಿಗೆ ಮೊರೆಹೋಗದಿದ್ದರೆ ಈ ನಗರವು ಬಾಬಿಲೋನಿನವರ ಕೈವಶವಾಗುವುದು. ಅವರು ಇದನ್ನು ಬೆಂಕಿ ಇಂದ ಸುಟ್ಟುಬಿಡುವರು. ತಾವು ಅವರ ಕೈಯಿಂದ ತಪ್ಪಿಸಿಕೊಳ್ಳಲಾರಿರಿ,” ಎಂದು ಹೇಳಿದನು.


ಈ ನಗರಕ್ಕೆ ಒಳಿತನ್ನು ಅಲ್ಲ, ಕೆಡುಕನ್ನು ಮಾಡಲೆಂದೆ ಇದರ ಮೇಲೆ ಕಣ್ಣಿಟ್ಟಿದ್ದೇನೆ. ಇದು ಬಾಬಿಲೋನಿಯಾದ ಅರಸನ ಕೈವಶವಾಗುವುದು. ಅವನು ಇದನ್ನು ಸುಟ್ಟು ಭಸ್ಮಮಾಡುವನು. ಇದು ಸರ್ವೇಶ್ವರನಾದ ನನ್ನ ನುಡಿ.’


ಆದುದರಿಂದ ನಿಮ್ಮ ದೆಸೆಯಿಂದಲೇ ಸಿಯೋನ್ ಪಟ್ಟಣವನ್ನು ಹೊಲದಂತೆ ಉಳಲಾಗುವುದು. ಜೆರುಸಲೇಮ್ ನಗರ ಹಾಳುದಿಬ್ಬವಾಗುವುದು. ದೇವಾಲಯದ ಪರ್ವತ ಕಾಡುಗುಡ್ಡದಂತಾಗುವುದು.


ಆದಕಾರಣ ನಾನು ಜುದೇಯದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಜೆರುಸಲೇಮಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.”


ಸ್ವಾಮಿ ತಿರಸ್ಕರಿಸಿಬಿಟ್ಟಿದ್ದಾನೆ ತನ್ನ ಬಲಿಪೀಠವನ್ನೇ ಅಸಹ್ಯಗೊಂಡು ತೊರೆದುಬಿಟ್ಟಿದ್ದಾನೆ ತನ್ನ ಪವಿತ್ರಸ್ಥಾನವನ್ನೇ ಸಿಯೋನ್ ಅರಮನೆಯ ಗೋಡೆಗಳನ್ನು ಕೆಡವಲು ಬಿಟ್ಟಿದ್ದಾನೆ ಹಗೆಗಳನ್ನೇ. ಹಬ್ಬಹರಿದಿನಗಳ ಜಯಘೋಷವೋ ಎಂಬಂತೆ ಘೋಷಣೆ ಹಾಕುತ್ತಿದ್ದಾರಲ್ಲಾ ಶತ್ರುಗಳು ಸರ್ವೇಶ್ವರನ ಮಂದಿರದಲ್ಲೆ !


ಸ್ವಾಮಿ ಯಕೋಬಿನ ನಿವಾಸಿಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಸಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು.


ದೋಚಿಕೊಂಡನು ದ್ರೋಹಿ ಆಕೆಯ ಆಸ್ತಿಯನ್ನು ಕೈಚಾಚಿ. 'ಸೇರಿಸಬಾರದು ಸಭೆಗೆ ಮ್ಲೇಚ್ಛರನ್ನು’ ಎಂಬುದು ದೇವನ ಆಣತಿ. ಆದರಿಗೋ ಅಂಥವರೇ ಪವಿತ್ರಾಲಯ ಪ್ರವೇಶಿಸುವ ದುರ್ಗತಿ !


ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು.


ಸರ್ವೇಶ್ವರನಾದ ನನ್ನ ಗುರಿಯನ್ನು ಗಮನಿಸಿರಿ - ನಾನು ಅಪ್ಪಣೆಕೊಟ್ಟು, ಶತ್ರುಗಳು ಈ ನಗರಕ್ಕೆ ಮತ್ತೆ ಬರುವಂತೆ ಮಾಡುವೆನು. ಅವರು ಇದರ ವಿರುದ್ಧ ಯುದ್ಧಮಾಡಿ, ಇದನ್ನು ಆಕ್ರಮಿಸಿಕೊಂಡು, ಬೆಂಕಿಯಿಂದ ಸುಟ್ಟುಹಾಕುವರು. ನಾನು ಜುದೇಯದ ನಗರಗಳನ್ನು ನಿರ್ಜನವಾದ ಪಾಳುಭೂಮಿಯನ್ನಾಗಿಸುವೆನು.


“ಇಸ್ರಯೇಲರ ದೇವರಾದ ಸರ್ವೇಶ್ವರನಾದ ನನ್ನ ನುಡಿ ಇದು: ನೀನು ಜುದೇಯದ ಅರಸ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆಂದು ಹೇಳು - ‘ಸರ್ವೇಶ್ವರನ ಮಾತನ್ನು ಆಲಿಸು: ಇಗೋ, ನಾನು ಈ ನಗರವನ್ನು ಬಾಬಿಲೋನಿನ ಅರಸನ ಕೈವಶಮಾಡುವೆನು. ಅವನು ಇದನ್ನು ಬೆಂಕಿಯಿಂದ ಸುಟ್ಟುಹಾಕುವನು.


ಆದರೆ ನನ್ನ ಕಡೆಗೆ ಕಿವಿಗೊಡದೆ, ಸಬ್ಬತ್ ದಿನದಲ್ಲಿ ಹೊರೆಹೊತ್ತು, ಜೆರುಸಲೇಮಿನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಗೊಳ್ಳದೆ, ಆ ಸಬ್ಬತ್ ದಿನವನ್ನು ಪವಿತ್ರ ದಿನ ಎಂದು ಆಚರಿಸದೆಹೋದರೆ, ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು. ಅದು ಜೆರುಸಲೇಮಿನ ಅರಮನೆಗಳನ್ನು ದಹಿಸಿಬಿಡುವುದು, ಆ ಬೆಂಕಿ ಆರುವುದೇ ಇಲ್ಲ.”


“ಸರ್ವೇಶ್ವರನಾದ ನಾನು ಹೇಳುವುದನ್ನು ಗಮನಿಸಿರಿ; ಇಗೋ, ನನ್ನ ಕೋಪವೆಂಬ ರೋಷಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಕಾಡುಮರಗಳ ಮೇಲೂ ಭೂಮಿಯ ಬೆಳೆಯ ಮೇಲೂ ಅದನ್ನು ಕಾರುವೆನು. ಅದು ಆರದೆ ದಹಿಸುವುದು!”


ಸೇನಾಧೀಶ್ವರಸ್ವಾಮಿಯಿಂದ ನಾನು ಕಿವಿಯಾರೆ ಕೇಳಿದಂತೆ ಹಲವಾರು ಮಂದಿರಗಳು ಬರಿದಾಗುವುವು. ಸುಂದರ ಹಾಗೂ ಸವಿಸ್ತಾರವಾದ ಭವನಗಳು ನಿವಾಸಿಗಳಿಲ್ಲದೆ ಪಾಳುಬೀಳುವುವು.


ಅವನ ಜನರು ಜೆರುಸಲೇಮಿನ ಪೌಳಿಗೋಡೆಗಳನ್ನು ಕೆಡವಿದರು. ಅದರ ಎಲ್ಲ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟು ನೆಲಸಮ ಮಾಡಿದರು; ಅಮೂಲ್ಯವಾದ ವಸ್ತುಗಳನ್ನು ನಾಶಮಾಡಿದರು.


ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು.


ನುಂಗಿಬಿಟ್ಟರಾ ಜನರು ಯಕೋಬ ವಂಶದವರನು I ಹಾಳುಮಾಡಿ ಬಿಟ್ಟರವರ ನಿವಾಸ ಸ್ಥಳಗಳನು II


ಈ ನಗರಕ್ಕೆ ಮುತ್ತಿಗೆಹಾಕಲಿರುವ ಬಾಬಿಲೋನಿಯರು ಇದರೊಳಗೆ ನುಗ್ಗಿ ಬೆಂಕಿಯಿಕ್ಕುವರು. ಯಾವ ಮನೆಗಳ ಮಾಳಿಗೆಗಳಲ್ಲಿ ನನ್ನ ಜನರು ಬಾಳ್‍ದೇವತೆಗೆ ಧೂಪಾರತಿ ಎತ್ತಿದ್ದಾರೋ, ಅನ್ಯದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದ್ದಾರೋ, ನನ್ನನ್ನು ಕೆಣಕಿದ್ದಾರೋ, ಆ ಮನೆಗಳಿರುವ ಈ ನಗರವನ್ನು ಸುಟ್ಟುಬಿಡುವರು.


ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ಮಾಡುವೆನು; ನೀನು ನಿನ್ನ ಮಿಂಡರಿಗೆ ಇನ್ನು ಬಹುಮಾನ ತರದಂತೆಮಾಡುವೆನು.


ಸಭೆಯವರು ಇವರ ಮೇಲೆ ಕಲ್ಲುತೂರಿ, ಕತ್ತಿಗಳಿಂದ ಸಂಹರಿಸಿ, ಇವರ ಗಂಡುಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.


ನಾವು ಸೆರೆಯಾಗಿ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ ಜೆರುಸಲೇಮಿನಿಂದ ಪಲಾಯನ ಮಾಡಿದವನೊಬ್ಬನು ನನ್ನ ಬಳಿಗೆ ಬಂದು, - ‘ಪಟ್ಟಣವು ಶತ್ರು ವಶವಾಯಿತು’ ಎಂದು ಹೇಳಿದನು.


ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು