Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 39:3 - ಕನ್ನಡ ಸತ್ಯವೇದವು C.L. Bible (BSI)

3 ನೇರ್ಗಲ್‍ಸರೆಚರ್, ಸಮ್ಗರ್‍ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥ ನೇರ್ಗಲ್‍ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲ ಪದಾಧಿಕಾರಿಗಳು ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಕುಳಿತುಕೊಂಡರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ನೇರ್ಗಲ್ ಸರೆಚರ್, ಸಮ್ಗರ್ ನೆಬೋ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಕಲ ಸರದಾರರೂ ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಆಸೀನರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನೇರ್ಗಲ್‍ಸರೆಚರ್, ಸಮ್ಗರ್‍ನೆಬೋ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್‍ಸರೆಚರ್, ಅಂತು ಬಾಬೆಲಿನ ಅರಸನ ಸಕಲ ಸರದಾರರೂ ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಆಸೀನರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆಗ ಬಾಬಿಲೋನಿನ ಎಲ್ಲಾ ರಾಜ್ಯಾಧಿಕಾರಿಗಳು ಜೆರುಸಲೇಮ್ ನಗರವನ್ನು ಪ್ರವೇಶಿಸಿದರು. ಅವರು ಒಳಗೆ ಬಂದು ಮಧ್ಯ ದ್ವಾರದಲ್ಲಿ ಕುಳಿತುಕೊಂಡರು. ಅವರು ಯಾರೆಂದರೆ: ಸಮ್ಗರ್ ನೆಬೋದದ ಅಧಿಪತಿಯಾದ ನೇರ್ಗಲ್ ಸರೆಚರ್; ಇನ್ನೊಬ್ಬ ದೊಡ್ಡ ಅಧಿಕಾರಿಯಾದ ಸೆರ್ಸೆಕೀಮ್ ಮತ್ತು ಬೇರೆಬೇರೆ ದೊಡ್ಡ ಅಧಿಕಾರಿಗಳು ಕೂಡ ಅಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ನೇರ್ಗಲ್ ಸರೆಚರ್, ಸಮ್ಗರ್‌ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಚೋಯಿಸರ ಮುಖ್ಯಸ್ಥ ನೇರ್ಗಲ್ ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲಾ ಪದಾಧಿಕಾರಿಗಳು ಪುರಪ್ರವೇಶ ಮಾಡಿ, ಮಧ್ಯಮ ದ್ವಾರದೊಳಗೆ ಕುಳಿತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 39:3
6 ತಿಳಿವುಗಳ ಹೋಲಿಕೆ  

ಆಗ ಯೆರೆಮೀಯನು, “ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲರ ದೇವರೂ ಆದ ಸ್ವಾಮಿ ಹೀಗೆನ್ನುತ್ತಾರೆ: ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳ ಮೊರೆಹೊಕ್ಕರೆ ತಮ್ಮ ಪ್ರಾಣ ಉಳಿಯುವುದು. ಈ ನಗರ ಬೆಂಕಿ ಇಂದ ಸುಟ್ಟುಹೋಗದು, ತಾವೂ ತಮ್ಮ ಮನೆಯವರೂ ಮನೆತನದವರೂ ಬದುಕುವಿರಿ.


ಇಸ್ರಯೇಲರ ದೇವರಾದ ಸರ್ವೇಶ್ವರ ಇಂತೆನ್ನುತ್ತಾರೆ: ‘ಇಗೋ ನಿಮ್ಮ ಪೌಳಿಗೋಡೆಗೆ ಮುತ್ತಿಗೆ ಹಾಕಿರುವ ಬಾಬಿಲೋನಿನ ಅರಸನಿಗೂ ಅವನ ಸೈನಿಕರಿಗೂ ವಿರುದ್ಧವಾಗಿ ನೀವು ಹಿಡಿದಿರುವ ಆಯುಧಗಳನ್ನು ನಿಮ್ಮ ವಿರುದ್ಧವಾಗಿಯೇ ತಿರುಗಿಸಿಬಿಡುವೆನು. ಅವುಗಳನ್ನೆಲ್ಲ ಈ ನಗರದ ನಡುವೆ ಗುಡ್ಡೆಹಾಕಿಸುವೆನು.


ಅಂತೆಯೇ ನೆಬೂಜರದಾನನು ಹಾಗು ಕಂಚುಕಿಯರ ಮುಖ್ಯಸ್ಥ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥ ನೇರ್ಗಲ್‍ಸರೆಚರ್ ಮತ್ತು ಬಾಬಿಲೋನಿಯರ ಅರಸನ ಎಲ್ಲ ಪದಾಧಿಕಾರಿಗಳು ಸೇರಿ ಯೆರೆಮೀಯನನ್ನು ಕಾರಾಗೃಹದಿಂದ ಕರೆತರಿಸಿದರು.


ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು.


ಬಾಬಿಲೋನಿನವರು ಸುಕ್ಕೋತ್ಬೆನೋತ್, ಕೂತದವರು ನೇರ್ಗಲ್,


ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ಧೂಳು ನಿನ್ನನ್ನು ಮುಸುಕುವುದು; ಒಡಕು ಬಿದ್ದ ಕೋಟೆಯೊಳಗೆ ಶತ್ರು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಸರಕುಗಾಡಿ, ರಥ, ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಅದರುವುವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು