Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 36:20 - ಕನ್ನಡ ಸತ್ಯವೇದವು C.L. Bible (BSI)

20 ಅಧಿಕಾರಿಗಳು ಸುರುಳಿಯನ್ನು ಲೇಖಕ ಎಲೀಷಾಮನ ಕೊಠಡಿಯಲ್ಲಿ ಇಟ್ಟುಬಿಟ್ಟು, ಪ್ರಾಕಾರದಲ್ಲಿದ್ದ ಅರಸನ ಬಳಿಗೆ ಹೋಗಿ, ಈ ಮಾತುಗಳನ್ನೆಲ್ಲ ಅರಿಕೆ ಮಾಡಿದರು. ಅರಸನು ಕೂಡಲೆ ಸುರುಳಿಯನ್ನು ತರಬೇಕೆಂದು ಯೆಹೂದಿಯನ್ನು ಕಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅನಂತರ ಅವರು ಸುರುಳಿಯನ್ನು ಲೇಖಕನಾದ ಎಲೀಷಾಮನ ಕೋಣೆಯಲ್ಲಿ ಇಟ್ಟುಬಿಟ್ಟು ಪ್ರಾಕಾರದಲ್ಲಿನ ಅರಸನ ಬಳಿಗೆ ಹೋಗಿ ಆ ಮಾತುಗಳನ್ನೆಲ್ಲಾ ಅವನಿಗೆ ಅರಿಕೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಸುರಳಿಯನ್ನು ಲೇಖಕನಾದ ಎಲೀಷಾಮನ ಕೋಣೆಯಲ್ಲಿ ಇಟ್ಟುಬಿಟ್ಟು ಪ್ರಾಕಾರದಲ್ಲಿನ ಅರಸನ ಬಳಿಗೆ ಹೋಗಿ ಈ ಮಾತುಗಳನ್ನೆಲ್ಲಾ ಅವನಿಗೆ ಅರಿಕೆಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಅನಂತರ ರಾಜಾಧಿಕಾರಿಗಳು ಆ ಸುರುಳಿಯನ್ನು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಲ್ಲಿ ಇಟ್ಟರು. ಅವರು ರಾಜನಾದ ಯೆಹೋಯಾಕೀಮನ ಬಳಿಗೆ ಹೋಗಿ ಆ ಸುರುಳಿಯ ಬಗ್ಗೆ ವಿವರವಾಗಿ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಮೇಲೆ ಅವರು ಅರಸನ ಬಳಿಗೆ ಅಂಗಳಕ್ಕೆ ಹೋದರು; ಆದರೆ ಆ ಸುರುಳಿಯನ್ನು ಲೇಖಕನಾದ ಎಲೀಷಾಮನ ಕೊಠಡಿಯಲ್ಲಿ ಇಟ್ಟುಬಿಟ್ಟರು ಮತ್ತು ಅರಸನಿಗೆ ಆ ವಾಕ್ಯಗಳನ್ನೆಲ್ಲಾ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 36:20
3 ತಿಳಿವುಗಳ ಹೋಲಿಕೆ  

ಅಲ್ಲಿ ಲೇಖಕ ಎಲೀಷಾಮನು, ಶೆಮಾಯನ ಮಗ ದೆಲಾಯನು, ಅಕ್ಬೋರನ ಮಗ ಎಲ್ನಾಥಾನನು, ಶೆಫಾನನ ಮಗ ಗೆಮರ್ಯನು, ಹನನೀಯನ ಮಗ ಚಿದ್ಕೀಯನು, ಹೀಗೆ ರಾಜ್ಯಾಧಿಕಾರಿಗಳೆಲ್ಲರು ಕುಳಿತುಕೊಂಡಿದ್ದರು.


ಅವನು ಲೇಖಕ ಎಲೀಷಾಮನ ಕೊಠಡಿಯಿಂದ ಅದನ್ನು ತೆಗೆದುಕೊಂಡು ಬಂದು ಅರಸನ ಮತ್ತು ಅವನ ಪಕ್ಕದಲ್ಲಿ ನಿಂತಿದ್ದ ಎಲ್ಲ ರಾಜ್ಯಾಧಿಕಾರಿಗಳ ಮುಂದೆ ಓದಿದನು.


ಜೀಸೆಫನ ವಂಶದವರಲ್ಲಿ - ಎಫ್ರಾಯಿಮ್ ಕುಲದಿಂದ ಅಮ್ಮೀಹೂದನ ಮಗ ಎಲೀಷಾಮಾ ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು