ಯೆರೆಮೀಯ 33:9 - ಕನ್ನಡ ಸತ್ಯವೇದವು C.L. Bible (BSI)9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಮೇಲುಗಳ ಸುದ್ದಿಯನ್ನು ಕೇಳಿ ನಾನು ಈ ಪಟ್ಟಣಕ್ಕೆ ಉಂಟುಮಾಡುವ ಸುಖ ಸಮಾಧಾನಗಳನ್ನು ನೋಡಿ ಹೆದರಿ ನಡುಗುವ ಸಕಲ ಭೂರಾಜ್ಯಗಳ ಮುಂದೆ ಈ ಪಟ್ಟಣವು ನನ್ನ ಕೀರ್ತಿಯೂ, ಮಹಿಮೆಯೂ ಮತ್ತು ಆನಂದದ ಬಿರುದು ಆಗುವುದು.’” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಮೇಲುಗಳ ಸುದ್ದಿಯನ್ನು ಕೇಳಿ ನಾನು ಈ ಪಟ್ಟಣಕ್ಕೆ ಉಂಟುಮಾಡುವ ಸುಖಸಮಾಧಾನಗಳನ್ನು ನೋಡಿ ಹೆದರಿ ನಡುಗುವ ಸಕಲ ಭೂರಾಜ್ಯಗಳ ಮುಂದೆ ಈ ಪಟ್ಟಣವು ನನ್ನ ಕೀರ್ತಿಯೂ ಮಹಿಮೆಯೂ ಆನಂದದ ಬಿರುದೂ ಆಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆಗ ಜೆರುಸಲೇಮ್ ಒಂದು ಅದ್ಭುತವಾದ ಸ್ಥಳವಾಗುವುದು; ಜನರು ಸಂತೋಷದಿಂದಿರುವರು. ಅಲ್ಲಿ ನಡೆದ ಒಳ್ಳೆಯ ಸಂಗತಿಗಳ ಬಗ್ಗೆ ಕೇಳಿದಾಗ ಬೇರೆ ಜನಾಂಗಗಳ ಜನರು ಅದನ್ನು ಹೊಗಳುವರು; ವಿಸ್ಮಯಪಡುವರು. ನಾನು ಜೆರುಸಲೇಮಿಗೆ ಮಾಡುತ್ತಿರುವ ಒಳಿತಿನ ವಿಷಯವು ಅವರ ಕಿವಿಗೆ ಬೀಳುವುದು.’ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖ ಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲಾ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.’ ಅಧ್ಯಾಯವನ್ನು ನೋಡಿ |