Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 32:35 - ಕನ್ನಡ ಸತ್ಯವೇದವು C.L. Bible (BSI)

35 ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗೆ ಆಹುತಿಕೊಡುವುದಕ್ಕಾಗಿ ಬೆನ್‍ಹಿನ್ನೋಮ್ ಕಣಿವೆಯಲ್ಲಿ ಬಾಳ್‍ದೇವತೆಗೆ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಹೀಗೆ ಯೆಹೂದ ಕುಲವನ್ನೆ ಪಾಪಕ್ಕೆ ಸಿಕ್ಕಿಸಿದ್ದಾರೆ. ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ. ಅದರ ಯೋಚನೆಕೂಡ ನನ್ನ ಮನಸ್ಸಿನಲ್ಲಿ ಸುಳಿಯಲಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗಾಗಿ ಆಹುತಿ ಕೊಡುವುದಕ್ಕೆ ಬೆನ್ ಹಿನ್ನೋಮ್ ತಗ್ಗಿನಲ್ಲಿನ ಬಾಳನ ಪೂಜಾಸ್ಥಳಗಳನ್ನು ಕಟ್ಟಿ, ಯೆಹೂದವನ್ನು ಪಾಪಕ್ಕೆ ಸಿಕ್ಕಿಸಿದ್ದಾರೆ; ನಾನು ಇಂಥ ಅಸಹ್ಯಕಾರ್ಯವನ್ನು ವಿಧಿಸಲಿಲ್ಲ, ಅದರ ಸಂಕಲ್ಪವೂ ನನ್ನ ಮನಸ್ಸಿನಲ್ಲಿ ಹುಟ್ಟಲಿಲ್ಲ” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ತಮ್ಮ ಗಂಡು ಹೆಣ್ಣುಮಕ್ಕಳನ್ನು ಮೋಲೆಕ್ ದೇವತೆಗಾಗಿ ಆಹುತಿಕೊಡುವದಕ್ಕೆ ಬೆನ್‍ಹಿನ್ನೋಮ್ ತಗ್ಗಿನಲ್ಲಿನ ಬಾಳನ ಪೂಜಾಸ್ಥಳಗಳನ್ನು ಕಟ್ಟಿ ಯೆಹೂದವನ್ನು ಪಾಪಕ್ಕೆ ಸಿಕ್ಕಿಸಿದ್ದಾರೆ; ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ, ಅದರ ಸಂಕಲ್ಪವೂ ನನ್ನ ಮನಸ್ಸಿನಲ್ಲಿ ಹುಟ್ಟಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 “ಬೆನ್‌ಹಿನ್ನೊಮ್ ಕಣಿವೆಯಲ್ಲಿ ಅವರು ಸುಳ್ಳುದೇವರಾದ ಬಾಳನಿಗಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿದ್ದಾರೆ. ತಮ್ಮ ಮಕ್ಕಳನ್ನು ಆಹುತಿಕೊಡುವದಕ್ಕಾಗಿ ಈ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಇಂಥಾ ಭಯಂಕರವಾದ ಕೆಲಸವನ್ನು ಮಾಡಲು ನಾನು ಅವರಿಗೆ ಆಜ್ಞಾಪಿಸಿಲ್ಲ. ಯೆಹೂದದ ಜನರು ಇಂಥಾ ಭಯಂಕರವಾದ ಕಾರ್ಯವನ್ನು ಮಾಡುವರೆಂದು ನಾನೆಂದೂ ಊಹಿಸಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗೆ ಆಹುತಿ ಕೊಡುವುದಕ್ಕಾಗಿ ಬೆನ್ ಹಿನ್ನೋಮ್ ತಗ್ಗಿನಲ್ಲಿ ಬಾಳ್ ದೇವತೆಗೆ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಹೀಗೆ ಯೆಹೂದ ಕುಲವನ್ನೇ ಪಾಪಕ್ಕೆ ಸಿಕ್ಕಿಸಿದ್ದಾರೆ. ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ. ಅದರ ಯೋಚನೆ ಕೂಡ ನನ್ನ ಮನಸ್ಸಿನಲ್ಲಿ ಸುಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 32:35
33 ತಿಳಿವುಗಳ ಹೋಲಿಕೆ  

ತಮ್ಮ ಗಂಡುಹೆಣ್ಣು ಮಕ್ಕಳನ್ನೂ ಆಹುತಿಕೊಡುವುದಕ್ಕೆ ಬೆನ್‍ಹಿನ್ನೋಮ್ ಕಣಿವೆಯಲ್ಲಿನ ತೋಫೆತೆಂಬ ಬಲಿಪೀಠವನ್ನು ಕಟ್ಟಿದ್ದಾರೆ. ಇಂಥ ಕಾರ್ಯವನ್ನು ನಾನು ವಿಧಿಸಿಲ್ಲ. ಅದು ನನ್ನ ಮನಸ್ಸಿಗೂ ಸುಳಿದಿಲ್ಲ.


ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕ ದೇವತೆಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ಸರ್ವೇಶ್ವರ ನಾನೇ.


ಇದಲ್ಲದೆ, ಅವನು ತನ್ನ ಮಕ್ಕಳನ್ನು ಬೆನ್‍ಹಿನ್ನೋಮ್ ಕಣಿವೆಯಲ್ಲಿ ಬಲಿಯಗ್ನಿ ಪರೀಕ್ಷೆಗೆ ಗುರಿಪಡಿಸಿದನು; ಕಣಿ ಹೇಳಿಸುವುದು, ಶಕುನ ನೋಡಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಭೂತಪ್ರೇತಗಳನ್ನು ವಿಚಾರಿಸುವವರನ್ನು ಸಂಪರ್ಕಿಸುವುದು ಇವೇ ಮೊದಲಾದ ದುಷ್ಕೃತ್ಯಗಳಿಂದ ಸರ್ವೇಶ್ವರನಿಗೆ ಕೋಪ ಬರಿಸಿದನು.


ತಮ್ಮ ಗಂಡುಹೆಣ್ಣುಮಕ್ಕಳನ್ನು ಯಾರೂ ಮೋಲೆಕನಿಗಾಗಿ ಬಲಿಯಗ್ನಿಪರೀಕ್ಷೆಗೆ ಈಡುಮಾಡದಂತೆ ಬೆನ್ಹಿನ್ನೋಮ್ ಕಣಿವೆಯಲ್ಲಿದ್ದ ತೋಫೆತ್ ಎಂಬ ಸ್ಥಳವನ್ನು ಹೊಲೆಮಾಡಿದನು.


ಅವನು ಯಾರೊಬ್ಬಾಮನಂತೆ ತಾನು ಪಾಪಮಾಡಿದ್ದಲ್ಲದೆ ಇಸ್ರಯೇಲರ ಪಾಪಕ್ಕೆ ಕಾರಣವಾಗಿದ್ದನು. ಹೀಗೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದುದರಿಂದ ಈ ದುರ್ಗತಿ ಸಂಭವಿಸಿತು.


ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡುಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಆಹುತಿಕೊಟ್ಟಿದ್ದಾರೆ.


ಓಕ್‍ಮರಗಳ ತೋಪುಗಳಲ್ಲೂ ಸೊಂಪಾಗಿ ಹರಡಿರುವ ಮರಗಳ ಅಡಿಯಲ್ಲೂ ಕಾಮಾಗ್ನಿಯಿಂದ ಕುದಿಯುತ್ತೀರಿ. ಹೊಳೆಕೊರೆದ ಡೊಗರುಗಳಲ್ಲೂ ಬಂಡೆಬಿರುಕುಗಳಲ್ಲೂ ಮಕ್ಕಳನ್ನು ಬಲಿಕೊಡುತ್ತೀರಿ. ನೀವು ವಿದ್ರೋಹಿಗಳ ಸಂತಾನ, ಸುಳ್ಳುಗಾರರ ಸಂತತಿ.


ಆದರೆ ಯೆಹೂದ್ಯರೂ ಜೆರುಸಲೇಮಿನವರೂ ಮನಸ್ಸೆಯಿಂದ ಪ್ರಚೋದಿತರಾಗಿ ಇಸ್ರಯೇಲರ ಮುಂದೆಯೇ ಸರ್ವೇಶ್ವರನಿಂದ ನಾಶಹೊಂದಿದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.


ಇದಲ್ಲದೆ ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನು ಬೇತೇಲಿನಲ್ಲಿ ಏರ್ಪಡಿಸಿದ ಪೂಜಾಸ್ಥಳವನ್ನೂ ಅದರಲ್ಲಿದ್ದ ಬಲಿಪೀಠವನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನೂ ಸುಟ್ಟು ಬೂದಿಮಾಡಿದನು.


“ಯೆಹೂದ್ಯರ ಅರಸನಾದ ಮನಸ್ಸೆಯು, ಹಿಂದೆ ಇದ್ದ ಅಮೋರಿಯರ ಕೃತ್ಯಗಳಿಗಿಂತ ಅಸಹ್ಯವಾದ ಕೃತ್ಯಗಳನ್ನು ನಡೆಸಿದ್ದಾನೆ. ವಿಗ್ರಹಗಳಿಂದ ಯೆಹೂದ್ಯರನ್ನು ಪಾಪಕ್ಕೆ ಪ್ರೇರಿಸಿದ್ದಾನೆ;


ಆದರೂ ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನ ಮಾರ್ಗವನ್ನು ಬಿಡಲೇ ಇಲ್ಲ.


ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು,’ ಎನ್ನುತ್ತಾರೆ.


ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಯೇಲರನ್ನೂ ಪಾಪಕ್ಕೆ ಪ್ರೇರಿಸಿ ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ರೇಗಿಸಿದ್ದರಿಂದ ಹೀಗಾಯಿತು.


ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ತನ್ನ ತಂದೆಯ ಮಾರ್ಗದಲ್ಲಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.


ಯಾರೊಬ್ಬಾಮನ ಪಾಪಗಳ ನಿಮಿತ್ತ ಹಾಗು ಅವನ ಪ್ರೇರಣೆಯಿಂದ ಇಸ್ರಯೇಲರು ಮಾಡಿದ ಪಾಪಗಳ ನಿಮಿತ್ತ ಸರ್ವೇಶ್ವರ ಅವರನ್ನು ಶತ್ರುಗಳಿಗೆ ಒಪ್ಪಿಸುವರು,” ಎಂದು ಆಕೆಗೆ ಹೇಳಿದನು.


ಇದಲ್ಲದೆ, ಅವರು ನಿನಗೆ, ‘ಸೊಲೊಮೋನನೂ ಅವನ ಮನೆಯವರೂ ನನ್ನನ್ನು ಬಿಟ್ಟು ಸಿದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ಕೆಮೋಷ್, ಅಮ್ಮೋನಿಯರ ದೇವತೆಯಾದ ಮಿಲ್ಕೋಮ್ ಇವುಗಳನ್ನು ಆರಾಧಿಸುತ್ತಿದ್ದಾರೆ. ಅವರ ತಂದೆ ದಾವೀದನು ನನ್ನ ನಿಯಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆಹೋದದ್ದೂ ಇದಕ್ಕೆ ಕಾರಣ.


ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಪರಿಗ್ರಹಿಸಬಾರದು; ಅವಳು ಅಶುದ್ಧಳಾದವಳು; ಅವಳನ್ನು ಪುನಃ ಪರಿಗ್ರಹಿಸುವುದು ಸರ್ವೇಶ್ವರನಿಗೆ ಹೇಯಕಾರ್ಯ. ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿಗೆ ದೋಷವುಂಟಾಗಲು ಅವಕಾಶಕೊಡಬೇಡಿ.


ಮಕ್ಕಳನ್ನು ಆಹುತಿಕೊಡುವವರು, ಕಣಿಹೇಳುವವರು, ಶಕುನ ನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು,


ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು,


ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವರ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರುಮಾಡುತ್ತೇನೆ,’ ಎಂದು ಬರೆದಿದೆ.


ಸರ್ವೇಶ್ವರನಿಗೆ ಅಸಹ್ಯವಾಗಿರುವ ಹಲವು ಹೇಸಿಗೆ ಕೆಲಸಗಳನ್ನು ಅವರು ತಮ್ಮ ದೇವತೆಗಳಿಗೆ ಮಾಡುತ್ತಾರೆ; ತಮ್ಮ ಗಂಡುಹೆಣ್ಣು ಮಕ್ಕಳನ್ನು ತಮ್ಮ ದೇವತೆಗಳಿಗೆ ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಮಾಡುವ ಸೇವೆ ಹಾಗಿರಬಾರದು.


ಅವನು ಜೆರುಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಏರ್ಪಡಿಸಿದನು.


ಸರ್ವೇಶ್ವರನ ನುಡಿ : “ಯೆಹೂದ್ಯರು ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೆ ಮಾಡಿದ್ದಾರೆ. ನನ್ನ ಹೆಸರಿನಿಂದ ಪ್ರಖ್ಯಾತಗೊಂಡ ದೇವಾಲಯದಲ್ಲಿ ತಮ್ಮ ಅಸಹ್ಯವಸ್ತುಗಳನ್ನು ಇಟ್ಟು ಅದನ್ನು ಹೊಲೆಮಾಡಿದ್ದಾರೆ.


ಬೋಕಿಯ ಬಾಗಿಲಿನ ಸಮೀಪದಲ್ಲಿರುವ ‘ಬೆನ್‍ಹಿನ್ನೋಮ್’ ಕಣಿವೆಗೆ ಹೋಗು. ನಾನು ನಿನಗೆ ತಿಳಿಸುವ ಈ ಸಂದೇಶವನ್ನು ಅಲ್ಲಿ ಸಾರು -


ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ಅವರ ಬಳಿಗೆ ತಡಮಾಡದೆ ಕಳುಹಿಸುತ್ತಾಬಂದೆ. ‘ಎಚ್ಚರಿಕೆ, ನಾನು ಹೇಸುವ ಈ ಅಸಹ್ಯಕಾರ್ಯಗಳನ್ನು ಮಾಡಬೇಡಿ’ ಎಂದು ಪ್ರಕಟಿಸುತ್ತಾ ಬಂದೆ.


ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆರಿಸಿಕೊಂಡ ಜೆರುಸಲೇಮಿನ ದೇವಾಲಯದ ಎರಡು ಪ್ರಾಕಾರಗಳಲ್ಲಿಯೂ


ಪ್ರಧಾನ ಯಾಜಕರೂ ಪ್ರಜೆಗಳೂ ಕೂಡ ಮಹಾದ್ರೋಹಿಗಳಾಗಿ, ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಅನುಸರಿಸಿ, ಸರ್ವೇಶ್ವರ ತಮಗೆ ಪ್ರತಿಷ್ಠಿಸಿಕೊಂಡಿದ್ದ ಜೆರುಸಲೇಮಿನ ದೇವಾಲಯವನ್ನು ಹೊಲೆಮಾಡಿದರು.


ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು