Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 25:37 - ಕನ್ನಡ ಸತ್ಯವೇದವು C.L. Bible (BSI)

37 ಆತನ ಕೋಪಾಗ್ನಿಯ ನಿಮಿತ್ತ ಹಾಯಾದ ಗೋಮಾಳಗಳ ಧ್ವಂಸ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಯಬ್ದವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಶಬ್ದವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ನೆಮ್ಮದಿಯಿಂದ ಕೂಡಿದ ಆ ಹುಲ್ಲುಗಾವಲುಗಳು ಬರಿದಾದ ಮರುಭೂಮಿಗಳಂತಾಗಿವೆ. ಏಕೆಂದರೆ ಯೆಹೋವನು ತುಂಬಾ ಕೋಪಗೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಸಮಾಧಾನವುಳ್ಳ ಗೋಮಾಳಗಳು ಯೆಹೋವ ದೇವರ ಕೋಪದ ದೆಸೆಯಿಂದ ಕೆಡವಿಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 25:37
10 ತಿಳಿವುಗಳ ಹೋಲಿಕೆ  

ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು; ಓಫೆಲ್ ಗುಡ್ಡವು, ಕೀಸ್ ಕೋವರವು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.


ಏಕೆಂದರೆ, ನಮ್ಮ ದೇವರು ದಹಿಸುವ ಅಗ್ನಿ.


ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ I ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ I ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ II


ಸರ್ವೇಶ್ವರ ಬರುವನಿದೋ ಅಗ್ನಿಮಯನಾಗಿ ಆತನ ರಥಗಳು ಬಿರುಗಾಳಿಯಂತೆ ರಭಸವಾಗಿ ತೋರಿಸುವನು ತನ್ನ ಸಿಟ್ಟನ್ನು ರೌದ್ರವೇಶದಿಂದ ಖಂಡಿಸುವನು ಧಗಧಗಿಸುವ ಜ್ವಾಲೆಯಿಂದ


ಅವರು ನಿನ್ನ ದವಸಧಾನ್ಯಗಳನ್ನು ತಿಂದುಬಿಡುವರು. ನಿನ್ನ ಗಂಡುಹೆಣ್ಣುಮಕ್ಕಳನ್ನು ಕೊಲ್ಲುವರು. ನಿನ್ನ ದನಕುರಿಗಳನ್ನು ಕಬಳಿಸಿಬಿಡುವರು. ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹಾಳುಮಾಡುವರು. ನೀನು ನಂಬಿಕೊಂಡಿರುವ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಸ್ತ್ರಗಳಿಂದ ಹಾಳುಮಾಡುವರು.


ಜನರು ಗೋದಿಯನ್ನು ಬಿತ್ತಿದರು ಆದರೆ ಮುಳ್ಳುಗಿಡವನ್ನು ಕೊಯ್ದರು ! ಕ್ಷೇಮ ಕೆಡುವಷ್ಟು ಪ್ರಯಾಸಪಟ್ಟರು ಆದರೆ ಯಾವ ಲಾಭವೂ ಗಿಟ್ಟದೆಹೋಯಿತು. ತಮ್ಮ ಬೆಳೆಯ ವಿಷಯವಾಗಿ ಹೇಸಬೇಕಾಯಿತು ನನ್ನ ಕೋಪಾಗ್ನಿಯೆ ಇದಕ್ಕೆ ಕಾರಣವಾಯಿತು.”


“ಜೆರುಸಲೇಮ್, ಕಣ್ಣೆತ್ತಿ ನೋಡು, ಉತ್ತರದಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ಅಂದವಾದ ಆ ನಿನ್ನ ಹಿಂಡು ಎಲ್ಲಿ?


ಅಕಟಕಟಾ, ಕುರಿಗಾಹಿಗಳ ಕೂಗಾಟ ಮೇಷಪಾಲರ ಕಿರುಚಾಟ ಸರ್ವೇಶ್ವರನಿಂದಲೆ ಆ ಹುಲ್ಲುಗಾವಲಿನ ವಿನಾಶ!


ಬಹುಮಂದಿ ಕುರಿಗಾಹಿಗಳು ಬಂದು ಹಾಳುಮಾಡಿದ್ದಾರೆ ನನ್ನ ದ್ರಾಕ್ಷಾತೋಟವನ್ನು. ತುಳಿದುಹಾಕಿದ್ದಾರೆ ನನ್ನಾ ಸೊತ್ತನ್ನು ಕಾಡನ್ನಾಗಿಸಿದ್ದಾರೆ ಆ ನನ್ನ ಪ್ರಿಯ ಆಸ್ತಿಯನ್ನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು