ಯೆರೆಮೀಯ 25:31 - ಕನ್ನಡ ಸತ್ಯವೇದವು C.L. Bible (BSI)31 ಆತನ ಶಬ್ದ ವ್ಯಾಪಿಸುವುದು ಭೂಮಿಯ ಕಟ್ಟಕಡೆಗೆ ಸರ್ವೇಶ್ವರನೆ ಆಪಾದನೆ ಹೊರಿಸುವನು ಜನಾಂಗಗಳ ಮೇಲೆ ನರಮಾನವರನ್ನೆಲ್ಲ ಗುರಿಮಾಡುವನು ತೀರ್ಪಿಗೆ ದುರುಳರನ್ನು ತುತ್ತಾಗಿಸುವನು ಕತ್ತಿಗೆ - ಇದು ಸರ್ವೇಶ್ವರನ ನುಡಿ’.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಆ ಶಬ್ದವು ಭೂಮಿಯ ಕಟ್ಟಕಡೆಯವರೆಗೆ ವ್ಯಾಪಿಸುವುದು, ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ, ಅವನು ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು, ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)31 ಶಬ್ದವು ಭೂವಿುಯ ಕಟ್ಟ ಕಡೆಯವರೆಗೆ ವ್ಯಾಪಿಸುವದು; ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ; ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು; ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು. ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ಆ ಧ್ವನಿಯು ಭೂಲೋಕದ ಎಲ್ಲಾ ಕಡೆಗೂ ಹಬ್ಬುತ್ತದೆ. ಈ ಧ್ವನಿಯೆಲ್ಲಾ ಏತಕ್ಕೆ? ಯೆಹೋವನು ಎಲ್ಲಾ ಜನಾಂಗದ ಜನರನ್ನು ದಂಡಿಸುತ್ತಿದ್ದಾನೆ. ಯೆಹೋವನು ಜನರ ವಿರುದ್ಧ ತನ್ನ ವಾದವನ್ನು ಹೇಳಿದನು. ಜನರ ಬಗ್ಗೆ ತೀರ್ಪನ್ನು ಕೊಟ್ಟನು. ಆತನು ದುಷ್ಟರನ್ನು ಖಡ್ಗದಿಂದ ಕೊಲ್ಲುತ್ತಿದ್ದಾನೆ.’” ಈ ಸಂದೇಶವು ಯೆಹೋವನಿಂದ ಬಂದದ್ದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಭೂಮಿಯ ಅಂತ್ಯಗಳವರೆಗೆ ಘೋಷವು ಬರುವುದು. ಯೆಹೋವ ದೇವರಿಗೆ ಜನಾಂಗಗಳ ಸಂಗಡ ವ್ಯಾಜ್ಯವಿದೆ. ಅವರು ಎಲ್ಲಾ ಮನುಷ್ಯರ ಸಂಗಡ ನ್ಯಾಯಕ್ಕೆ ನಿಲ್ಲುವರು. ದುಷ್ಟರನ್ನು ಖಡ್ಗಕ್ಕೆ ಒಪ್ಪಿಸುವರು,’ ” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |