ಯೆರೆಮೀಯ 25:26 - ಕನ್ನಡ ಸತ್ಯವೇದವು C.L. Bible (BSI)26 ದೂರ - ಹತ್ತಿರವಿರುವ ಉತ್ತರ ನಾಡಿನ ಎಲ್ಲ ಅರಸರು, ಲೋಕದ ಸಕಲ ರಾಜ್ಯಗಳು, ಇವರೆಲ್ಲರು ಕುಡಿದ ಮೇಲೆ ಬಾಬಿಲೋನಿನ ಅರಸನು ಕುಡಿಯುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ದೂರ ಮತ್ತು ಸಮೀಪವಿರುವ ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿಯಲಿ ಎಂಬುದೇ ನನಗಾದ ಅಪ್ಪಣೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಮೇದ್ಯರ ಎಲ್ಲಾ ಅರಸರು, ದೂರವೇನು ಸಮೀಪವೇನು ಅಂತು ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು, ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿಯಲಿ [ಎಂಬದೇ ನನಗಾದ ಅಪ್ಪಣೆ]. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಉತ್ತರದಲ್ಲಿ ಸಮೀಪದಲ್ಲಿದ್ದ ಮತ್ತು ದೂರದಲ್ಲಿದ್ದ ಎಲ್ಲಾ ರಾಜರನ್ನು ಈ ಪಾತ್ರೆಯಿಂದ ಒಬ್ಬರಾದ ಮೇಲೊಬ್ಬರು ಕುಡಿಯುವಂತೆ ಮಾಡಿದೆನು. ನಾನು ಭೂಮಿಯ ಮೇಲಿದ್ದ ಎಲ್ಲಾ ರಾಜ್ಯಗಳು ಯೆಹೋವನ ಕೋಪದ ಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. ಆದರೆ ಬಾಬಿಲೋನಿನ ರಾಜನು ಎಲ್ಲಾ ದೇಶಗಳವರು ಕುಡಿದ ತರುವಾಯ ಕುಡಿಯುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಹತ್ತಿರದಲ್ಲಿಯೂ, ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿರುವ ಉತ್ತರ ದಿಕ್ಕಿನ ಅರಸರೆಲ್ಲರಿಗೂ, ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯಗಳಿಗೂ ಕುಡಿಸಿದೆನು. ಶೇಷಕಿನ ಅರಸನು ಅವರ ತರುವಾಯ ಕುಡಿಯುವನು. ಅಧ್ಯಾಯವನ್ನು ನೋಡಿ |