Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 25:18 - ಕನ್ನಡ ಸತ್ಯವೇದವು C.L. Bible (BSI)

18 ಜೆರುಸಲೇಮಿಗೂ ಜುದೇಯದ ನಗರಗಳಿಗೂ, ಅರಸರುಗಳಿಗೂ ಕುಡಿಸಿದೆ. ಇದರಿಂದ ಅವರು ಹಾಳಾಗಿ ಇಂದು ಪರಿಹಾಸ್ಯಕ್ಕೂ ಶಾಪಕ್ಕೂ ಗುರಿಯಾಗುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅದನ್ನು ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅರಸರಿಗೂ ಮತ್ತು ಪ್ರಧಾನರಿಗೂ ಕುಡಿಸಿದೆನು. ಇದರಿಂದ ಅವರು ಹಾಳಾಗಿ ಪರಿಹಾಸ್ಯಕ್ಕೂ ಮತ್ತು ಶಾಪಕ್ಕೂ ಗುರಿಯಾಗುವುದಕ್ಕೆ ಆಸ್ಪದವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಯೆರೂಸಲೇವಿುಗೂ ಯೆಹೂದದ ಪಟ್ಟಣಗಳಿಗೂ ಅರಸರಿಗೂ ಪ್ರಧಾನರಿಗೂ ಕುಡಿಸಿದೆನು; ಇದರಿಂದ ಅವರು ಹಾಳಾಗಿ ಬೆರಗಿನ ಸಿಳ್ಳಿಗೂ ಶಾಪಕ್ಕೂ ಗುರಿಯಾಗುವದಕ್ಕೆ ಆಸ್ಪದವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ನಾನು ಈ ದ್ರಾಕ್ಷಾರಸವನ್ನು ಜೆರುಸಲೇಮಿನ ಮತ್ತು ಯೆಹೂದದ ಜನರಿಗೆ ಸುರಿದೆನು. ನಾನು ರಾಜನನ್ನು ಮತ್ತು ಯೆಹೂದದ ನಾಯಕರನ್ನು ಈ ಪಾತ್ರೆಯಲ್ಲಿಯ ದ್ರಾಕ್ಷಾರಸವನ್ನು ಕುಡಿಯುವಂತೆ ಮಾಡಿದೆನು. ಅವರು ಬರಿದಾದ ಮರುಭೂಮಿಯಂತಾಗಲೆಂದು ಹೀಗೆ ಮಾಡಿದೆನು. ಆ ಸ್ಥಳವು ತುಂಬಾ ಹಾಳಾಗಲಿ, ಜನರು ಅದರ ಬಗ್ಗೆ ಸಿಳ್ಳುಹಾಕಲಿ, ಶಾಪಹಾಕಲಿ ಎಂಬ ಉದ್ದೇಶದಿಂದ ನಾನು ಹಾಗೆ ಮಾಡಿದೆನು. ಹಾಗೆಯೇ ಆಯಿತು. ಯೆಹೂದವು ಈಗ ಹಾಗೆಯೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅದರ ಅರಸುಗಳಿಗೂ, ಅಧಿಕಾರಿಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳು ಮಾಡಿ, ಭಯಕ್ಕೂ, ಪರಿಹಾಸ್ಯಕ್ಕೂ, ಶಾಪಕ್ಕೂ ಗುರಿ ಮಾಡುವ ಹಾಗೆ ಕುಡಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 25:18
27 ತಿಳಿವುಗಳ ಹೋಲಿಕೆ  

ನೀವು ನಡೆಸಿದ ದುರಾಚಾರಗಳನ್ನು ಹಾಗು ಅಸಹ್ಯಕಾರ್ಯಗಳನ್ನು ಸರ್ವೇಶ್ವರ ಇನ್ನು ಸಹಿಸಲಾರದೆ ಹೋದುದರಿಂದಲೇ ನಿಮ್ಮ ನಾಡು ಹಾಳುಬಿದ್ದಿದೆ. ನಿರ್ಜನವಾಗಿ ಭಯಭೀತಿಗೆ ಎಡೆ ಆಗಿದೆ. ಅದರ ಸ್ಥಿತಿ ಈಗಲೂ ಬದಲಾಗಿಲ್ಲ.


ಅವರ ಕೇಡಿಗಾಗಿ ನಾನು ಅವರನ್ನು ಜಗದ ಎಲ್ಲ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. ಅವರನ್ನು ಅಟ್ಟಲಾಗುವ ಸ್ಥಳಗಳಲ್ಲೆಲ್ಲ ಅವರು ಕಟ್ಟುಗಾದೆಗೆ, ನಿಂದೆ ಪರಿಹಾಸ್ಯಕ್ಕೆ, ಶಾಪತಾಪಕ್ಕೆ ಗುರಿಯಾಗುವರು.


ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ I ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ II


ನ್ಯಾಯತೀರ್ಪಿನ ಕಾಲವು ಬಂದಿದೆ. ಮೊತ್ತಮೊದಲು ದೇವರ ಸ್ವಂತಜನರೇ ಆ ತೀರ್ಪಿಗೆ ಗುರಿಯಾಗುವರು. ದೇವಜನರಾದ ನಾವೇ ಅದಕ್ಕೆ ಮೊದಲು ಒಳಗಾಗುವುದಾದರೆ ದೇವರ ಶುಭಸಂದೇಶದಲ್ಲಿ ವಿಶ್ವಾಸವಿಡದವರ ಗತಿಯಾದರೂ ಏನು?


“ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.”


ಆದಕಾರಣ ನಾನು ಜುದೇಯದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಜೆರುಸಲೇಮಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.”


ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿದ್ದಾರೆ. ನಮ್ಮನ್ನೂ ನಮ್ಮನ್ನಾಳುವ ಅಧಿಪತಿಗಳನ್ನೂ ಖಂಡಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾರೆ. ಜೆರುಸಲೇಮಿಗೆ ಆದಂಥ ಕೇಡು ವಿಶ್ವದಲ್ಲಿ ಎಂದೂ ಆಗಲಿಲ್ಲ.


ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


ರಾಷ್ಟ್ರಗಳ ಮೇಲೂ ರಾಜ್ಯಗಳ ಮೇಲೂ ಅಧಿಕಾರವುಳ್ಳವನನ್ನಾಗಿ ನಾನು ನಿನ್ನನ್ನು ಈ ದಿನ ನೇಮಿಸಿದ್ದೇನೆ. ಇದರಿಂದಾಗಿ ಕಿತ್ತುಹಾಕುವ ಹಾಗು ಕೆಡುವುವ, ನಾಶಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು,” ಎಂದರು


ನಮ್ಮ ಪಿತೃಗಳಿಗೆ ನೀವೆಂದಿರಿ ‘ಸವಿಯಿರಿ ನಾಡಿನ ಫಲವನು, ಸಮೃದ್ಧಿಯನು’. ಆದರಿದೋ ಅನುಭವಿಸುತ್ತಿರುವೆವು ಈ ನಾಡಿನಲಿ ಗುಲಾಮಗಿರಿಯನು!


ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನವರೆಗೂ ಮಹಾಪರಾಧಿಗಳೇ; ನಮ್ಮ ಪಾಪಗಳ ನಿಮಿತ್ತ ನಾವೂ ನಮ್ಮ ಅರಸರೂ ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಸಿಕ್ಕಿಬಿದ್ದೆವು. ಈಗಿರುವಂತೆ, ಕತ್ತಿಗೂ ಸೆರೆಗೂ ಸುಲಿಗೆಗೂ ಅಪಮಾನಕ್ಕೂ ಗುರಿ ಆದೆವು.


‘ನಾನು ಈ ನಾಡನ್ನೂ ನಿವಾಸಿಗಳನ್ನೂ ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುದನ್ನು ನೀನು ಕೇಳಿದಾಗ, ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.


ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೀರಿ; ನಿಮ್ಮ ಬಾಯಿ ನುಡಿದದ್ದನ್ನು ನಿಮ್ಮ ಕೈ ಈಗ ನೆರವೇರಿಸಿತು.


ನೀವಾದರೋ ಸರ್ವೇಶ್ವರನಿಗೆ ಮೀಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ ಇಸ್ರಯೇಲರ ಪಾಳೆಯವೇ ಶಾಪಕ್ಕೆ ಗುರಿಯಾಗಿ ನಾಶವಾದೀತು.


ಆದುದರಿಂದ ಸರ್ವೇಶ್ವರ, ಜುದೇಯ ನಾಡಿನ ಮೇಲೂ ಜೆರುಸಲೇಮಿನ ಮೇಲೂ ಕೋಪಗೊಂಡು ಅವುಗಳನ್ನು ಭಯಭೀತಿಗೂ ಹಾಸ್ಯಪರಿಹಾಸ್ಯಗಳಿಗೂ ಆಸ್ಪದವಾಗಿಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿಗಳು.


ನಾಶಗೊಳಿಸುವನಾತ ದೇಶಾಧಿಪತಿಗಳನು ನಿರ್ನಾಮಗೊಳಿಸುವನು ರಾಜಾಧಿರಾಜರನು.


ಆಯ್ಕೆಯಾದವರಿಗೆ ನಿಮ್ಮ ಹೆಸರು ಶಾಪದ ಹೆಸರಾಗಿಯೇ ಉಳಿಯುವುದು. ಏಕೆಂದರೆ, ಸ್ವಾಮಿ ಸರ್ವೇಶ್ವರ ಆದ ನಾನು ನಿಮ್ಮನ್ನು ಕೊಲೆಗೀಡುಮಾಡುವೆನು. ನನ್ನ ಭಕ್ತಾದಿಗಳಿಗಾದರೋ ಹೊಸ ಹೆಸರನ್ನು ಕೊಡುವೆನು.


ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”


ಹಾಳಾದ ದೇಶಗಳಲ್ಲಿ ಈ ದೇಶವೂ ಹಾಳಾಗುವುದು. ಪಾಳುಬಿದ್ದಿರುವ ಪಟ್ಟಣಗಳಲ್ಲಿ ಅದರ ಪಟ್ಟಣಗಳೂ ಪಾಳುಬಿದ್ದಿರುವುವು.


“ಒಮ್ರಿ ಅರಸನ ಆಜ್ಞೆಗಳನ್ನೂ ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದಕಾರಣ ನಿಮ್ಮನ್ನು ವಿನಾಶಗೊಳಿಸುವೆನು; ನಿಮ್ಮ ಜನರನ್ನು ಅಪಹಾಸ್ಯಕ್ಕೆ ಈಡುಮಾಡುವೆನು. ನೀವು ಜನಾಂಗಗಳ ನಿಂದೆಗೆ ಗುರಿಯಾಗುವಿರಿ.”


ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,” ಎಂಬುದಾಗಿ ಸರ್ವೇಶ್ವರ ಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು.


“ಇದು ಸರ್ವೇಶ್ವರನಾದ ನನ್ನ ನುಡಿ - ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು