Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 24:3 - ಕನ್ನಡ ಸತ್ಯವೇದವು C.L. Bible (BSI)

3 ಆಗ ಸರ್ವೇಶ್ವರ ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಯೆಹೋವನು ನನ್ನನ್ನು, “ಯೆರೆಮೀಯನೇ, ಏನು ನೋಡುತ್ತೀ?” ಎಂದು ಕೇಳಲು ನಾನು, “ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ, ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ” ಎಂದು ಉತ್ತರ ಕೊಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಗ ಯೆಹೋವನು ನನ್ನನ್ನು - ಯೆರೆಮೀಯನೇ, ಏನು ನೋಡುತ್ತೀ ಎಂದು ಕೇಳಲು ನಾನು - ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ; ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ ಎಂದು ಉತ್ತರಕೊಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು. “ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಬಹಳ ಚೆನ್ನಾಗಿವೆ. ಕೊಳೆತ ಅಂಜೂರಗಳು ತಿನ್ನಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 24:3
10 ತಿಳಿವುಗಳ ಹೋಲಿಕೆ  

ಅವರು ನನಗೆ: “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಿದರು. “ಮಾಗಿದ ಹಣ್ಣಿನ ಒಂದು ಬುಟ್ಟಿ” ಎಂದು ಉತ್ತರಿಸಿದೆ. ಆಗ ಸರ್ವೇಶ್ವರ ನನಗೆ ಹೀಗೆಂದರು: “ಇಸ್ರಯೇಲರಾದ ನನ್ನ ಜನರಿಗೆ ಕಡೆಗಾಲ ಮಾಗುತ್ತಾ ಬಂದಿದೆ. ಇನ್ನು ಅವರನ್ನು ಕಂಡೂ ಕಾಣದಂತೆ ಇರಲಾರೆ. ಅವರನ್ನು ದಂಡಿಸಿಯೇ ತೀರುವೆನು.


“ಏನನ್ನು ನೋಡುತ್ತಿರುವೆ?” ಎಂದು ಅವನು ನನ್ನನ್ನು ಕೇಳಿದಾಗ ನಾನು, “ಇಗೋ, ಏಳು ದೀಪಗಳುಳ್ಳ ಸುವರ್ಣಮಯ ದೀಪಸ್ತಂಭವೊಂದನ್ನು ನೋಡುತ್ತಿದ್ದೇನೆ. ಅದರ ಮೇಲ್ಗಡೆ ಎಣ್ಣೆಯ ಪಾತ್ರೆ ಇದೆ. ಅದರ ಮೇಲೆ ದೀಪಗಳಿಗೆ ಏಳು ನಾಳಗಳಿವೆ.


ಅವರು ನನಗೆ: “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಿದರು. ನಾನು “ಒಂದು ನೂಲುಗುಂಡು,” ಎಂದು ಉತ್ತರಕೊಟ್ಟೆ. ಆಗ ಸ್ವಾಮಿ, “ಇಗೋ,ನನ್ನ ಜನರಾದ ಇಸ್ರಯೇಲಿನ ಮಧ್ಯೆ ನೂಲುಗುಂಡನ್ನು ಹಿಡಿದು ಅವರ ನಡತೆ-ಗೋಡೆ ನೆಟ್ಟಗಿಲ್ಲವೆಂದು ತೋರಿಸುವೆನು. ಅವರನ್ನು ಕಂಡೂ ಕಾಣದಂತಿರದೆ, ದಂಡಿಸಿಯೇ ತೀರುವೆನು.


(ಪೂರ್ವಕಾಲದಲ್ಲಿ ಇಸ್ರಯೇಲರಲ್ಲಿ ಯಾವನಾದರೂ ದೇವೋತ್ತರ ಕೇಳಬೇಕಾದರೆ ದಾರ್ಶನಿಕನ ಬಳಿಗೆ ಹೋಗೋಣ ಬನ್ನಿ ಎನ್ನುವನು; ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು ಆ ಕಾಲದಲ್ಲಿ ದಾರ್ಶನಿಕರೆಂದು ಕರೆಯುತ್ತಿದ್ದರು.)


ದೂತನು ನನ್ನನ್ನು, “ನಿನಗೆ ಏನು ಕಾಣಿಸುತ್ತಿದೆ?” ಎಂದು ಕೇಳಿದನು. ಅದಕ್ಕೆ ನಾನು “ಹಾರುತ್ತಿರುವ ಪತ್ರದ ಸುರುಳಿ ಕಾಣಿಸುತ್ತಿದೆ. ಅದರ ಉದ್ದ ಒಂಬತ್ತು ಮೀಟರ್, ಅಗಲ ನಾಲ್ಕುವರೆ ಮೀಟರ್,” ಎಂದು ಉತ್ತರಕೊಟ್ಟೆ.


ಆಗ ಸರ್ವೇಶ್ವರ ನನಗೆ ದಯಪಾಲಿಸಿದ ಸಂದೇಶ ಇದು:


‘ಇಗೋ, ನಾನು ಅವರ ಮೇಲೆ ಖಡ್ಗ-ಕ್ಷಾಮ-ವ್ಯಾಧಿಗಳನ್ನು ಬರಮಾಡುವೆನು. ಯಾರೂ ತಿನ್ನಲಾಗದಷ್ಟು ಕೆಟ್ಟು ಅಸಹ್ಯವಾದ ಅಂಜೂರದ ಹಣ್ಣಿನ ಗತಿಗೆ ಅವರನ್ನು ಇಳಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು