Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 24:1 - ಕನ್ನಡ ಸತ್ಯವೇದವು C.L. Bible (BSI)

1 ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗ ಹಾಗೂ ಜುದೇಯದ ಅರಸ ಆದ ಯೆಕೊನ್ಯನನ್ನು, ಜುದೇಯದ ಪ್ರಧಾನಿಗಳನ್ನು, ಶಿಲ್ಪಿಗಳನ್ನು ಮತ್ತು ಕಮ್ಮಾರರನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದನು. ಇದಾದ ಬಳಿಕ ಸರ್ವೇಶ್ವರ ಸ್ವಾಮಿ ತಮ್ಮ ಆಲಯದ ಮುಂದೆ ಇಟ್ಟಿದ್ದ, ಅಂಜೂರದ ಹಣ್ಣು ತುಂಬಿದ್ದ, ಎರಡು ಬುಟ್ಟಿಗಳನ್ನು ನನಗೆ ಕಾಣುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಶಿಲ್ಪಿಗಳನ್ನೂ ಮತ್ತು ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದ ಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಶಿಲ್ಪಿಗಳನ್ನೂ ಕಮ್ಮಾರರನ್ನೂ ಯೆರೂಸಲೇವಿುನಿಂದ ಬಾಬೆಲಿಗೆ ಸೆರೆ ಒಯ್ದ ಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ಕಾಣಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನು ನನಗೆ ಈ ವಸ್ತುಗಳನ್ನು ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಬುಟ್ಟಿಗಳನ್ನು ಜೋಡಿಸಿಟ್ಟಿದ್ದು ನನಗೆ ಕಂಡುಬಂತು. (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಕೊನ್ಯನನ್ನು ಸೆರೆಹಿಡಿದ ಮೇಲೆ ನಾನು ಈ ದರ್ಶನವನ್ನು ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನ್ನು ಮತ್ತು ಅವನ ಪ್ರಮುಖ ಅಧಿಕಾರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ಬಡಗಿಗಳನ್ನು ಮತ್ತು ಕಮ್ಮಾರರನ್ನು ತೆಗೆದುಕೊಂಡು ಹೋಗಿದ್ದನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಯೆಹೂದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಬಡಗಿಯರನ್ನೂ, ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಗೆ ಒಯ್ದನು. ಯೆಹೋವ ದೇವರ ದೇವಾಲಯದ ಮುಂದೆ ಇಟ್ಟಿರುವ ಎರಡು ಬುಟ್ಟಿ ಅಂಜೂರದ ಹಣ್ಣುಗಳನ್ನು ಯೆಹೋವ ದೇವರು ನನಗೆ ತೋರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 24:1
22 ತಿಳಿವುಗಳ ಹೋಲಿಕೆ  

ಅರಸ ಯೆಕೋನ್ಯನು, ರಾಜಮಾತೆಯು, ಕಂಚುಕಿಗಳು, ಜುದೇಯದ ಮತ್ತು ಜೆರುಸಲೇಮಿನ ಪದಾಧಿಕಾರಿಗಳು, ಶಿಲ್ಪಿಗಳು, ಕಮ್ಮಾರರು, ಇವರೆಲ್ಲರು ಜೆರುಸಲೇಮನ್ನು ಬಿಟ್ಟುಹೋದ ಮೇಲೆ ಈ ಪತ್ರವನ್ನು ಬರೆದನು.


ನೆಬೂಕದ್ನೆಚ್ಚರನು ವರ್ಷಾರಂಭದಲ್ಲಿ ಅವನನ್ನೂ ದೇವಾಲಯದ ಮೌಲ್ಯವಸ್ತುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಸಹೋದರನಾದ ಚಿದ್ಕೀಯನನ್ನು ಜುದೇಯದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು.


ಮತ್ತೊಂದು ದರ್ಶನದಲ್ಲಿ ಪ್ರಧಾನ ಯಾಜಕನಾದ ಯೆಹೋಶುವನು ದೂತನ ಮುಂದೆ ನಿಂತಿರುವುದನ್ನು ಸರ್ವೇಶ್ವರ ನನಗೆ ತೋರಿಸಿದರು. ಯೆಹೋಶುವನಿಗೆ ಪ್ರತಿವಾದಿಯಾಗಿ ಸೈತಾನನು ಅವನ ಪಕ್ಕದಲ್ಲಿ ನಿಂತಿದ್ದ.


ಅನಂತರ ಸರ್ವೇಶ್ವರ ನನಗೆ ನಾಲ್ಕುಮಂದಿ ಸುತ್ತಿಗೆ ಹಿಡಿದವರನ್ನು ತೋರಿಸಿದರು.


ಆ ಸ್ವಾಮಿಯಿಂದ ನನಗೆ ಮತ್ತೊಂದು ದರ್ಶನವಾಯಿತು. ಸ್ವಾಮಿ ನೂಲು ಮಟ್ಟದ ಗೋಡೆಯ ಮೇಲೆ ನಿಂತಿದ್ದರು. ಅವರ ಕೈಯಲ್ಲಿ ನೂಲುಗುಂಡೊಂದು ಇತ್ತು.


ಒಡೆಯರಾದ ಸರ್ವೇಶ್ವರ ನನಗೆ ಇನ್ನೊಂದು ದರ್ಶನವನ್ನು ತೋರಿಸಿದರು. ಅವರು ತನ್ನ ಜನರನ್ನು ದಂಡಿಸುವುದಕ್ಕಾಗಿ ಬೆಂಕಿಯನ್ನು ಬರಮಾಡಿದರು. ಅದು ಆಳವಾದ ಮಹಾಸಾಗರವನ್ನೂ ಇಡೀ ನಾಡನ್ನೂ ಕಬಳಿಸುವುದರಲ್ಲಿತ್ತು.


ಒಡೆಯರಾದ ಸರ್ವೇಶ್ವರ ನನಗೆ ತೋರಿಸಿದ ದರ್ಶನ ಇದು: ಹಿಂಗಾರು ಮಳೆ ಬಿದ್ದಿತ್ತು. ಪೈರು ಸೊಂಪಾಗಿ ಬೆಳೆಯಲು ಆರಂಭಿಸಿತ್ತು. ಈಗಾಗಲೇ ರಾಜಾದಾಯದ ಹುಲ್ಲಿನ ಕೊಯಿಲು ಮುಗಿದು ಮತ್ತೆ ಹುಲ್ಲು ಬೆಳೆಯುತ್ತಿತ್ತು. ಆಗ ಸರ್ವೇಶ್ವರ ಮಿಡತೆಗಳ ಗುಂಪೊಂದನ್ನು ಹೊರಡಿಸಿದರು.


ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ.


ಒಯ್ದವು ಅದನ್ನು ಬಾಬಿಲೋನಿನ ಅರಸನ ಬಳಿಗೆ ಬಿಗಿದು ಸರಪಣಿ, ಹಾಕಿ ಪಂಜರದೊಳಗೆ. ಅದರ ಗರ್ಜನೆ ಇಸ್ರಯೇಲಿನ ಗಿರಿಗಳಿಗೆ ಕೇಳಿಸದಂತೆ, ಸೇರಿಸಿಬಿಟ್ಟವು ಅದನ್ನು ಸುಭದ್ರ ಕೋಟೆಯೊಳಗೆ.


ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು.


ಬಾಬಿಲೋನಿನ ವಿಷಯವಾಗಿ ಆಮೋಚನ ಮಗ ಯೆಶಾಯನಿಗೆ ಕೇಳಿಬಂದ ದೇವವಾಣಿ :


ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಬಾಬಿಲೋನಿಗೆ ಸೆರೆಹೋದ ಎಲ್ಲ ಯೆಹೂದ್ಯರನ್ನು ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನ ನುಡಿ.”


ಜೆರುಸಲೇಮಿನಿಂದ ಬಾಬಿಲೋನಿಗೆ ನೆಬೂಕದ್ನೆಚ್ಚರನು ಸೆರೆ ಒಯ್ದಿದ್ದ ಹಿರಿಯರಿಗೂ ಯಾಜಕರಿಗೂ ಪ್ರವಾದಿಗಳಿಗೂ ಸಕಲ ಜನರಿಗೂ ಪ್ರವಾದಿ ಯೆರೆಮೀಯನು ಜೆರುಸಲೇಮಿನಿಂದ ಒಂದು ಪತ್ರವನ್ನು ಬರೆದನು.


ಯೋಷೀಯನ ಮಗ ಚಿದ್ಕೀಯನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅವನನ್ನು ಜುದೇಯದ ನಾಡಿಗೆ ಅರಸನನ್ನಾಗಿಸಿದ್ದನು.


ದಕ್ಷಿಣ ನಾಡಿನ ನಗರಗಳು ಮುತ್ತಿಗೆಗೆ ತುತ್ತಾಗಿವೆ. ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಜುದೇಯವೆಲ್ಲ ಸೆರೆಹೋಗಿದೆ; ಸಂಪೂರ್ಣವಾಗಿ ಸೆರೆಯಾಗಿದೆ’.”


ತುಟ್ಟತುದಿಯ ಚಿಗುರುಗಳನ್ನು ಕಚ್ಚಿ ವಾಣಿಜ್ಯ ದೇಶಕ್ಕೆ ತೆಗೆದುಕೊಂಡುಹೋಗಿ ಬಹುಮಂದಿ ವರ್ತಕರಿರುವ ಪಟ್ಟಣದಲ್ಲಿ ಇಟ್ಟುಬಿಟ್ಟಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು