Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 23:3 - ಕನ್ನಡ ಸತ್ಯವೇದವು C.L. Bible (BSI)

3 ನನ್ನ ಮಂದೆಯನ್ನು ಯಾವ ಯಾವ ದೇಶಗಳಿಗೆ ಅಟ್ಟಲಾಗಿದೆಯೋ ಆ ಎಲ್ಲ ದೇಶಗಳಿಂದ ಅಳಿದುಳಿದ ಕುರಿಗಳನ್ನು ಒಟ್ಟುಗೂಡಿಸಿ ತಮ್ಮ ತಮ್ಮ ಹಟ್ಟಿಗಳಿಗೆ ಮರಳಿ ಬರಮಾಡುವೆನು. ಅವು ದೊಡ್ಡ ಪೀಳಿಗೆಯಾಗಿ ಬೆಳೆಯುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ ತಮ್ಮ ತಮ್ಮ ಹಟ್ಟಿಗಳಿಗೆ ತಿರಿಗಿ ಬರಮಾಡುವೆನು; ಅವು ದೊಡ್ಡ ಪೀಳಿಗೆಯಾಗಿ ಹೆಚ್ಚುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 “ನಾನು ನನ್ನ ಕುರಿಗಳನ್ನು ಬೇರೆ ದೇಶಗಳಿಗೆ ಕಳುಹಿಸಿದೆ. ಆದರೆ ಉಳಿದ ನನ್ನ ಕುರಿಗಳನ್ನು ಒಂದೆಡೆ ಸೇರಿಸುವೆನು. ಅವುಗಳನ್ನು ಅವುಗಳ ಹುಲ್ಲುಗಾವಲಿಗೆ ತರುವೆನು. ಅವುಗಳಿಗೆ ಅನೇಕ ಮಕ್ಕಳಾಗಿ ಅವುಗಳ ಸಂಖ್ಯೆ ಬೆಳೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 “ಆದರೆ ನಾನು ನನ್ನ ಮಂದೆಯ ಶೇಷವನ್ನು, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ, ಅವರನ್ನು ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು. ಅವರು ಪೀಳಿಗೆಯಾಗಿ ಹೆಚ್ಚುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 23:3
28 ತಿಳಿವುಗಳ ಹೋಲಿಕೆ  

‘ಇಗೋ, ನಾನು ಕಡುಕೋಪದಿಂದಲೂ ರೋಷಾವೇಶದಿಂದಲೂ ಈ ಜನರನ್ನು ಯಾವ ದೇಶಗಳಿಗೆ ಅಟ್ಟಿದೆನೋ ಆ ಎಲ್ಲ ದೇಶಗಳಿಂದ ಈ ಸ್ಥಳಕ್ಕೆ ಮರಳಿ ಕರೆತಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.


ಹೌದು, ನಾನು ನಿಮಗೆ ದೊರೆಯುವೆನು. ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಿಮ್ಮನ್ನು ಅಟ್ಟಲಾಗಿದ್ದ ಸಮಸ್ತ ದೇಶಗಳಿಂದಲೂ ಸಕಲ ರಾಷ್ಟ್ರಗಳ ಮಧ್ಯೆಯಿಂದಲೂ ಒಟ್ಟುಗೂಡಿಸಿ, ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.’


ಇಗೋ, ನಾನು ನನ್ನ ಪ್ರಜೆಯಾದ ಇಸ್ರಯೇಲರನ್ನೂ ಯೆಹೂದ್ಯರನ್ನೂ ಅವರ ದುರವಸ್ಥೆಯಿಂದ ಬಿಡುಗಡೆಮಾಡುವ ದಿನಗಳು ಬರುವುವು. ಆಗ ನಾನು ಅವರನ್ನು ಅವರ ಪೂರ್ವಜರಿಗೆ ಅನುಗ್ರಹಿಸಿದ ನಾಡಿಗೆ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಸರ್ವೇಶ್ವರನಾದ ನನ್ನ ನುಡಿ’.”


“ಆಮೇಲೆ ಅವರನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು. ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಯೇಲ್ ನಾಡನ್ನು ಅವರಿಗೆ ದಯಪಾಲಿಸುವೆನು.


ಇಗೋ ನೋಡು, ಅವರನ್ನು ಬರಮಾಡುವೆನು ಉತ್ತರದೇಶದಿಂದ ಅವರನ್ನು ಒಂದುಗೂಡಿಸುವೆನು ದಿಗಂತಗಳಿಂದ. ಅವರೊಡನೆ ಕುರುಡರನ್ನೂ ಕುಂಟರನ್ನೂ ಗರ್ಭಿಣಿಯರನ್ನೂ ದಿನತುಂಬಿದ ಬಸುರಿಯರನ್ನೂ ಒಟ್ಟಿಗೆ ಕರೆತರುವೆನು. ಅವರು ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗುವರು.


ಹೇ ಪ್ರಭು, ನಮ್ಮ ದೇವಾ, ನಮ್ಮನ್ನುದ್ಧರಿಸು I ನಾಡುನಾಡುಗಳಿಂದ ನಮ್ಮನೊಂದುಗೂಡಿಸು I ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು I ನಿನ್ನ ಸ್ತುತಿ ಸ್ತೋತ್ರಗಳಲಿ ಹೆಚ್ಚಳ ಪಡುವೆವು II


ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ಇನ್ನೊಂದು ವಿಷಯದಲ್ಲಿ ಇಸ್ರಯೇಲ್ ವಂಶದವರ ವಿಜ್ಞಾಪನೆಯನ್ನು ಆಲಿಸಿ ನೆರವೇರಿಸುವೆನು. ಅದೇನೆಂದರೆ, ಅವರ ಜನಸಂಖ್ಯೆಯನ್ನು ಹಿಂಡಿನಂತೆ ಹೆಚ್ಚಿಸುವೆನು.


ಅಂದು ಜನರು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ನಿಮ್ಮ ಬಳಿಗೆ ಬಂದು ಸೇರುವರು. ಸಮುದ್ರದಿಂದ ಸಮುದ್ರದವರೆಗೂ ಪರ್ವತದಿಂದ ಪರ್ವತದವರೆಗೂ ಈಜಿಪ್ಟಿನಿಂದ ಯೂಫ್ರೆಟಿಸ್ ನದಿಯವರೆಗೂ ಚದರಿಹೋಗಿರುವ ಜನರೆಲ್ಲರು ನಿನ್ನೆಡೆಗೆ ಬರುವರು.


ಈ ಕೆಟ್ಟ ವಂಶದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು. ಇದು ಸರ್ವೇಶ್ವರನಾದ ನನ್ನ ನುಡಿ.”


“ನನ್ನ ದಾಸ ಯಕೋಬನೇ, ಅಂಜಬೇಡ! ಇಸ್ರಯೇಲೇ, ಭಯಪಡಬೇಡ” ಎನ್ನುತ್ತಾರೆ ಸರ್ವೇಶ್ವರ. “ದೂರ ನಾಡಿನಿಂದ ನಿನ್ನನ್ನು ಮುಕ್ತನನ್ನಾಗಿಸುವೆನು ನಿನ್ನ ಸಂತಾನ ಸೆರೆಹೋದ ಸೀಮೆಯಿಂದ ನಿನ್ನನ್ನು ಉದ್ಧರಿಸುವೆನು. ಹಿಂದಿರುಗಿ, ಹಾಯಾಗಿ ನೆಮ್ಮದಿಯಿಂದಿರುವುದು ಯಕೋಬು ಯಾರಿಂದಲೂ ಅದನ್ನು ಹೆದರಿಸಲಾಗದು.


ಸರ್ವೇಶ್ವರ ಹೀಗೆನ್ನುತ್ತಾರೆ: “ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳಾ ಶಿರೋಮಣಿಗೆ ಜೈಕಾರಮಾಡಿರಿ. ‘ಸರ್ವೇಶ್ವರ ಆಳಿದುಳಿದಾ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿಸಿರಿ.


“ನನ್ನ ದಾಸ ಯಕೋಬೇ, ಭಯಪಡಬೇಡ ಇಸ್ರಯೇಲೇ, ಅಂಜಬೇಡ, ಇಗೋ, ನಾನು ನಿನ್ನನ್ನು ಉದ್ಧರಿಸುವೆನು ದೂರದೇಶದಿಂದ ನಿನ್ನ ಸಂತಾನವನ್ನು ರಕ್ಷಿಸುವೆನು ಸೆರೆಹೋದ ಸೀಮೆಯಿಂದ. ಯಕೋಬು ಹಾಯಾಗಿ ಹಿಂತಿರುಗಿ ಬಾಳುವುದು ನೆಮ್ಮದಿಯಿಂದ. ಭಯಪಡಬೇಡ ನನ್ನ ದಾಸ ಯಕೋಬೇ, ನಾನಿದ್ದೇನೆ ನಿನ್ನೊಂದಿಗೆ.


ನಾನು ನಿಮ್ಮ ಮೇಲೆ ಕರುಣೆಯಿಟ್ಟು, ಹೆಚ್ಚು ಸಂತಾನ, ಪ್ರಾಪ್ತಿಯನ್ನು ಕೊಟ್ಟು ಅಭಿವೃದ್ಧಿಗೊಳಿಸಿ, ನಿಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು.


ಬದಲಿಗೆ, ‘ಇಸ್ರಯೇಲರನ್ನು ಉತ್ತರ ದೇಶದಿಂದ ಹಾಗು ಅವರನ್ನು ತಾನು ತಳ್ಳಿಬಿಟ್ಟಿದ್ದ ಎಲ್ಲ ಸೀಮೆಗಳಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವರು. ನಾನು ಅವರ ಪೂರ್ವಜರಿಗೆ ದಯಪಾಲಿಸಿದ ನಾಡಿಗೆ ಅವರನ್ನು ಮರಳಿ ಬರಮಾಡುವೆನು.


ಇಸ್ರಯೇಲೆಂಬ ಮಂದೆಯನ್ನು ಮರಳಿ ಅದರ ಹುಲ್ಲುಗಾವಲಿಗೆ ಸೇರಿಸುವೆನು. ಅದು ಕರ್ಮೆಲಿನಲ್ಲೂ ಭಾಷಾನಿನಲ್ಲೂ ಮೇಯುವುದು. ಎಫ್ರಯಿಮಿನ ಮತ್ತು ಗಿಲ್ಯಾದಿನ ಗುಡ್ಡಗಳಲ್ಲಿ ಹೊಟ್ಟೆತುಂಬ ತಿನ್ನುವುದು.


ನಿಮ್ಮಲ್ಲಿ ಬಹುಜನರನ್ನೂ ಪಶುಗಳನ್ನೂ ವೃದ್ಧಿಗೊಳಿಸುವೆನು; ಅವು ಹೆಚ್ಚಿ ಫಲಭರಿತವಾಗುವುವು. ಮೊದಲಿನಂತೆ ನಿಮ್ಮಲ್ಲಿ ನಿವಾಸಿಗಳನ್ನು ತುಂಬಿಸಿ, ಮೊದಲಿಗಿಂತ ನಿಮ್ಮನ್ನು ಉತ್ತಮಸ್ಥಿತಿಗೆ ತರುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ದೃಢವಾಗುವುದು.


“ಯಕೋಬ ವಂಶಜರೇ, ನಾನು ನಿಮ್ಮನ್ನೆಲ್ಲಾ ಖಂಡಿತವಾಗಿ ಒಟ್ಟುಗೂಡಿಸುವೆನು. ಇಸ್ರಯೇಲಿನ ಅಳಿದುಳಿದ ಜನರನ್ನು ಸೇರಿಸಿಯೇ ಸೇರಿಸುವೆನು. ಹಟ್ಟಿಯಲ್ಲಿರುವ ಕುರಿಗಳಂತೆ ಅವರನ್ನು ಒಟ್ಟಿಗೆ ಸೇರಿಸುವೆನು. ಹುಲ್ಲುಗಾವಲಿನಲ್ಲಿರುವ ಕುರಿಮಂದೆಯಂತೆ ಒಂದುಗೂಡಿಸುವೆನು,” ಎನ್ನುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು