Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 23:12 - ಕನ್ನಡ ಸತ್ಯವೇದವು C.L. Bible (BSI)

12 ಕತ್ತಲೊಳು ಜಾರಿಬೀಳುವ ಇಳುಮೇಡು ಅವರ ಮಾರ್ಗ ತಳ್ಳಲ್ಪಡುವರು, ಅಂಧಕಾರದೊಳು ಬಿದ್ದುಹೋಗುವರು ಕೇಡನ್ನು ಅವರ ಮೇಲೆ ಬರಮಾಡುವೆನು ವಿಚಾರಣೆ ವರುಷದ ಕೇಡನ್ನು ಬರಮಾಡುವೆನು ಸರ್ವೇಶ್ವರನ ನುಡಿ ಇದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಸ್ಥಳಗಳಿಗೆ ಸಮಾನವಾಗುವುದು. ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರ್ಷದ ಕೇಡನ್ನು ಬರಮಾಡುವೆನು ಎಂದು ಯೆಹೋವನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಇಳುಮೇಡುಗಳಿಗೆ ಸಮಾನವಾಗುವದು; ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರುಷದ ಕೇಡನ್ನು ಬರಮಾಡುವೆನು. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದ್ದರಿಂದ ನಾನು ಅವರಿಗೆ ನನ್ನ ಸಂದೇಶಗಳನ್ನು ಇನ್ನು ಮೇಲೆ ಕೊಡುವುದಿಲ್ಲ. ಆಗ ಅವರು ಕತ್ತಲಲ್ಲಿ ನಡೆಯಬೇಕಾಗುವುದು. ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ. ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು. ನಾನು ಅವರಿಗೆ ಕೇಡನ್ನು ಬರಮಾಡಿ ಅವರನ್ನು ದಂಡಿಸುವೆನು.” ಇದು ಯೆಹೋವನಿಂದ ಬಂದ ಸಂದೇಶ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 “ಆದ್ದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗಿರುವುದು. ಅವರು ಮುಗ್ಗರಿಸಿಬೀಳುವರು. ನಾನು ಕೇಡನ್ನು ದಂಡನೆಯ ವರ್ಷವನ್ನಾಗಿ ಅವರ ಮೇಲೆ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 23:12
18 ತಿಳಿವುಗಳ ಹೋಲಿಕೆ  

ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.


ದಂಡನೆಯ ಕಾಲವನ್ನು ಗೊತ್ತುಮಾಡಿರುವೆನು. ಅದು ಬಂದಾಗ ಅವರಲ್ಲಿ ಯಾರೂ ಉಳಿಯರು. ಇದು ನನ್ನ ತೀರ್ಮಾನ,” ಎಂದರು.


ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.


ಇಳಿಜಾರು, ಕಾರಿರುಳು ಇರುವ ಹಾದಿಯಲಿ I ಪ್ರಭುವಿನ ದೂತನವರನು ಓಡಿಸಿಬಿಡಲಿ II


ಅದಕ್ಕೆ ಯೇಸು, “ಇನ್ನು ತುಸುಕಾಲ ಮಾತ್ರ ಜ್ಯೋತಿ ನಿಮ್ಮ ನಡುವೆ ಇರುತ್ತದೆ. ನಿಮ್ಮನ್ನು ಕತ್ತಲು ಕವಿಯದಂತೆ ಜ್ಯೋತಿಯಿರುವಾಗಲೇ ನಡೆಯಿರಿ. ಕತ್ತಲಲ್ಲಿ ನಡೆಯುವವನಿಗೆ ಗೊತ್ತುಗುರಿ ಕಾಣದು.


ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.


ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ I ನಿಶ್ಚಯವಾಗಿ ನೀ ಬೀಳಿಸಿ ಅವರನು ನಾಶಮಾಡುವೆ II


ನೀನಾದರೋ ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ನಾಡಿಗೆ ಈ ಜನರನ್ನು ನಡೆಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆ ನಡೆಯುವನು. ಆದರೂ ನಾನು ಅವರನ್ನು ದಂಡಿಸುವ ದಿನದಂದು ಅವರ ಪಾಪಕ್ಕೆ ತಕ್ಕಂತೆ ದಂಡಿಸುವೆನು.


ತಮ್ಮ ನಾಚಿಕೆಗೇಡಿತನದ ನೊರೆಯನ್ನು ಕಾರುವ ಸಾಗರದ ಹುಚ್ಚು ತೆರೆಗಳು; ದಿಕ್ಕುಗೆಟ್ಟ ತಾರೆಗಳಿವರು. ಇವರಿಗಾಗಿ ಕಾದಿದೆ ನಿರಂತರ ಕಾರ್ಗತ್ತಲಿನ ಕಂದಕ.


ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲಲ್ಲಿ ಇದ್ದಾನೆ; ಕತ್ತಲಲ್ಲೇ ನಡೆಯುತ್ತಾನೆ. ಕತ್ತಲು ಅವನನ್ನು ಕುರುಡಾಗಿಸಿರುವುದರಿಂದ ಎತ್ತ ಹೋಗುತ್ತಿದ್ದಾನೆಂದು ಅವನಿಗೇ ತಿಳಿಯದು.


ಅವರಲ್ಲಿ ಅತ್ಯುತ್ತಮನಾದವನೂ ಮುಳ್ಳಿನ ಪೊದೆಗೆ ಸಮಾನ. ಸತ್ಯವಂತನೂ ಮುಳ್ಳುಬೇಲಿಗಿಂತ ಕಡೆ. ಜನರ ದಂಡನೆಯ ದಿನ ಸಮೀಪಿಸಿದೆ. ಅವರ ಕಾವಲುಗಾರರಾದ ಪ್ರವಾದಿಗಳು ಮುಂತಿಳಿಸಿದ ಕಾಲ ಬಂದಿದೆ. ಜನರೆಲ್ಲರು ದಿಗ್ಭ್ರಾಂತರಾಗುವರು.


ಅದರ ಗೂಳಿಗಳನ್ನೆಲ್ಲ ಕೊಲ್ಲಿರಿ. ಹೋಗಲಿ ಅವು ವಧ್ಯಸ್ಥಾನಕ್ಕೆ. ಅವುಗಳಿಗೆ ಧಿಕ್ಕಾರ. ಅವುಗಳಿಗೆ ಬಂದಿದೆ ವಿಪತ್ಕಾಲ! ಸಮೀಪಿಸಿದೆ ದಂಡನೆಯ ದಿನ!


ಭಯಕ್ಕೆ ಓಡುವವನು ಗುಂಡಿಯಲ್ಲಿ ಬೀಳುವನು ಗುಂಡಿಯಿಂದ ಹತ್ತಿ ಬರುವವನು ಬಲೆಗೆ ಸಿಕ್ಕುವನು. ದಂಡನೆಯ ವರ್ಷವನ್ನು ಮೋವಾಬಿಗೆ ಖಂಡಿತ ಬರಮಾಡುವೆನು - ಇದು ಸರ್ವೇಶ್ವರನ ನುಡಿ.


ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ ಅಟ್ಟಿಬಿಡುವರು ಅವನನ್ನು ಲೋಕದಿಂದಲೆ.


ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸಮೀಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ಧವಾದ ದುರ್ಗತಿಕಾಲ!


ಬುದ್ಧಿಹೀನರು, ಮಂದಮತಿಗಳು, ಕತ್ತಲಲಿ ನಡೆವವರು ನೀವು I ಇದರಿಂದಲೆ ಕದಲುತ್ತಿರುವುವು ಧರೆಯ ಅಸ್ತಿವಾರಗಳು II


ಹೇ, ಸರ್ವೇಶ್ವರಾ ಕಟಾಕ್ಷಿಸು ! ಇಷ್ಟೆಲ್ಲಾ ನೀ ಮಾಡಿದ್ದು ಯಾರಿಗೆಂದು ಯೋಚಿಸು ! ತಾಯಂದಿರು ತಿನ್ನಬೇಕೆ ತಾವು ಆರೈಕೆ ಮಾಡಿದ ತಮ್ಮ ಕರುಳ ಕುಡಿಯನ್ನೇ? ಹತರಾಗಬೇಕೆ ಯಾಜಕರೂ ಪ್ರವಾದಿಗಳೂ ಸ್ವಾಮಿಯ ಪವಿತ್ರಾಲಯದಲ್ಲೆ?


ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಲಜ್ಜೆಯ ಗಂಧವೂ ಅವರಿಗಿಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು