Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 22:20 - ಕನ್ನಡ ಸತ್ಯವೇದವು C.L. Bible (BSI)

20 “ಲೆಬನೋನ್ ಬೆಟ್ಟವನ್ನು ಹತ್ತಿ ಬೊಬ್ಬೆಯಿಡು ! ಬಾಷಾನಿನಲ್ಲಿ ಮೊರೆಯಿಡು ! ಅಬಾರೀಮಿನಲ್ಲಿ ಕಿರುಚಾಡು ! ಏಕೆಂದರೆ ನಿನ್ನ ಮಿಂಡರೆಲ್ಲ ಹಾಳಾಗಿಹೋದರು !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಚೀಯೋನ್ ಯುವತಿಯೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೋ! ಬಾಷಾನಿನಲ್ಲಿ ಮೊರೆಯಿಡು, ಅಬಾರೀಮಿನಲ್ಲಿ ಅರಚಿಕೋ! ನಿನ್ನೊಂದಿಗೆ ವ್ಯಭಿಚಾರ ಮಾಡಿದವರೆಲ್ಲಾ ಹಾಳಾಗಿ ಹೋದರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 [ಚೀಯೋನ್ ಯುವತಿಯೇ,] ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೋ! ಬಾಷಾನಿನಲ್ಲಿ ಮೊರೆಯಿಡು, ಅಬಾರೀವಿುನಲ್ಲಿ ಅರಚಿಕೋ! ನಿನ್ನ ವಿುಂಡರೆಲ್ಲಾ ಹಾಳಾಗಿ ಹೋದರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಯೆಹೂದವೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೊ, ನಿನ್ನ ಧ್ವನಿಯು ಬಾಷಾನ್ ಪರ್ವತಗಳಲ್ಲಿ ಕೇಳಿಸಲಿ. ಅಬಾರೀಮಿನಲ್ಲಿ ಅರಚಿಕೊ; ಏಕೆಂದರೆ ನಿನ್ನ ‘ಪ್ರಿಯತಮರೆಲ್ಲರನ್ನೂ’ ನಾಶಮಾಡಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಲೆಬನೋನಿಗೆ ಹೋಗಿ ಕೂಗು, ಬಾಷಾನಿನಲ್ಲಿ ನಿನ್ನ ಸ್ವರವನ್ನೆತ್ತು, ಅಬಾರೀಮಿನಲ್ಲಿ ಮೊರೆಯಿಡು; ಏಕೆಂದರೆ ನಿನ್ನ ಜೊತೆಗಾರರು ನಾಶವಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 22:20
22 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಈ ಅಬಾರೀಮ್ ಬೆಟ್ಟವನ್ನು ಹತ್ತಿ ಇಸ್ರಯೇಲರಿಗೆ ನಾನು ವಾಗ್ದಾನ ಮಾಡಿದ ನಾಡನ್ನು ನೋಡು.


ಹೀಗಿರಲು, ಒಹೊಲೀಬಳೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ಯಾವ ಮಿಂಡರಿಂದ ನಿನ್ನ ಆಸೆ ತೊಲಗಿತೋ ಆ ಮಿಂಡರನ್ನು ಅಂದರೆ, ಮನೋಹರ ಯುವಕರು, ಎಲ್ಲ ನಾಯಕ ಉಪನಾಯಕರು, ಪ್ರಭುಪ್ರಧಾನರು, ಅಶ್ವಾರೂಢರು ಆದ ಬಾಬಿಲೋನಿನವರು,


ಇರುಳೆಲ್ಲ ಅತ್ತಳು ಬಿಕ್ಕಿಬಿಕ್ಕಿ ಕೆನ್ನೆ ಮೇಲೆ ನೋಡಿ, ಕಣ್ಣೀರ ಕೋಡಿ ! ಆಕೆಯ ಹಲವಾರು ಪ್ರಿಯರಲ್ಲಿ ಸಂತೈಸುವವರೇ ಇಲ್ಲ ಮಿತ್ರರಾಗಿದ್ದವರೇ ದ್ರೋಹವೆಸಗಿ ಶತ್ರುಗಳಾಗಿರುವರಲ್ಲಾ !


ಆದಕಾರಣ ನಾನು ಅವಳನ್ನು ಅವಳ ಮಿಂಡರ ಕೈಗೆ ಅಂದರೆ, ಅವಳು ಮೋಹಿಸಿದ ಅಸ್ಸೀರಿಯರ ಕೈಗೆ ಒಪ್ಪಿಸಿದೆ.


“ನನ್ನ ಪ್ರಿಯರನ್ನು ಕರೆದೆ; ಅವರೇ ಮೋಸಮಾಡಿದರೆನಗೆ. ನನ್ನ ಯಾಜಕರೂ ಪ್ರಮುಖರೂ ಪಟ್ಟಣದಲ್ಲೇ ಪ್ರಾಣತೆತ್ತರು, ಉಸಿರನ್ನು ಉಳಿಸಿಕೊಳ್ಳಲು ಊಟವನ್ನು ಹುಡುಕುತ್ತಿರಲು.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


ನಿನ್ನನ್ನು ಅಟ್ಟಿ ಮೇಯಿಸುವ ಕುರುಬರನ್ನು ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಮಿಂಡರನ್ನು ಸೆರೆಹಿಡಿದುಕೊಂಡು ಹೋಗುವರು. ಆಗ ಖಂಡಿತವಾಗಿ ನೀನು ಆಶಾಭಂಗಪಡುವೆ ನಿನ್ನ ದುಷ್ಕೃತ್ಯಗಳ ನಿಮಿತ್ತ ಅವಮಾನಕ್ಕೀಡಾಗುವೆ.


ಎಲೈ ಜೆರುಸಲೇಮ್, ಸೂರೆಯಾಗುವಾಗ ಏನು ಮಾಡುವೆ? ಪಟ್ಟದ ಬಟ್ಟೆಗಳನ್ನು ಉಟ್ಟುಕೊಂಡು ಚಿನ್ನದ ಒಡವೆಗಳನ್ನು ತೊಟ್ಟುಕೊಂಡು ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೆ ಏನು ಪ್ರಯೋಜನ? ಎಲ್ಲವೂ ವ್ಯರ್ಥ ! ನಿನ್ನ ಮಿಂಡರೇ ನಿನ್ನನ್ನು ತಿರಸ್ಕರಿಸಿ ನಿನ್ನ ಪ್ರಾಣಹುಡುಕುವರು.


ನಿಮ್ಮ ಮಾರ್ಗವನ್ನು ಕೈಬಿಟ್ಟು ಎಷ್ಟು ಸುಲಭವಾಗಿ ಅತ್ತಿತ್ತ ಓಡಾಡುತ್ತೀರಿ! ಅಸ್ಸೀರಿಯದ ವಿಷಯವಾಗಿ ಹೇಗೆ ಆಶಾಭಂಗಪಟ್ಟಿರೋ ಹಾಗೆಯೇ ಈಜಿಪ್ಟಿನ ವಿಷಯವಾಗಿಯೂ ಆಶಾಭಂಗಪಡುವಿರಿ.


ಬಾಬಿಲೋನಿನ ಅರಸನು ಈಜಿಪ್ಟಿನ ಪ್ರವಾಹಕ್ಕೂ ಯೂಫ್ರಟಿಸ್ ನದಿಗೂ ಮಧ್ಯದಲ್ಲಿದ್ದ ಈಜಿಪ್ಟ್ ರಾಜನ ಎಲ್ಲಾ ದೇಶವನ್ನು ಸ್ವಾಧೀನ ಮಾಡಿಕೊಂಡನು. ಅಂದಿನಿಂದ ಈಜಿಪ್ಟಿನ ಅರಸನು ತನ್ನ ದೇಶದಿಂದ ಈಚೆಗೆ ಬರಲೇ ಇಲ್ಲ.


ಸಹಾಯಕ್ಕಾಗಿ ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ಈ ವಿಗ್ರಹಗಳೇ ನಿನಗೆ ರಕ್ಷಣೆ ನೀಡಲಿ. ಇವುಗಳನ್ನೆಲ್ಲ ಗಾಳಿ ಬಡಿದುಕೊಂಡು ಹೋಗುವುದು. ಕೇವಲ ಒಂದು ಉಸಿರು ಸಾಕು, ಇವುಗಳನ್ನು ಒಯ್ದುಬಿಡಲು. ಆದರೆ ನನ್ನನ್ನು ಆಶ್ರಯಿಸಿಕೊಂಡವನು ನಾಡಿಗೆ ಬಾಧ್ಯಸ್ಥನಾಗುವನು; ನನ್ನ ಪವಿತ್ರ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವನು.


ನಾನು, ‘ಅನ್ಯದೇವತೆಗಳನ್ನು ಅರಸಿ ಓಡಬೇಡ, ನಿನ್ನ ಪಾದರಕ್ಷೆ ಸವೇದೀತು, ನಿನ್ನ ಗಂಟಲು ಸೊರಗೀತು’ ಎಂದೆ. ನೀನೋ, ‘ಆ ಮಾತು ಆಶಾದಾಯಕವಲ್ಲ, ಅದನ್ನು ಕೇಳಲಾಗದು; ಅನ್ಯದೇವತೆಗಳ ಮೇಲೆ ಮೋಹಗೊಂಡಿದ್ದೇನೆ. ಅವರನ್ನೇ ಹಿಂಬಾಲಿಸುತ್ತೇನೆ’ ಎಂದೆ.”


ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ಗಂಡನು ತ್ಯಜಿಸಿದವಳು, ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ, ಅವಳನ್ನು ಆ ಗಂಡನು ಮತ್ತೆ ಸೇರಿಸಿಕೊಳ್ಳುತ್ತಾನೆಯೆ? ಸೇರಿಸಿಕೊಂಡರೆ ಆ ನಾಡು ಕೆಟ್ಟು ಅಪವಿತ್ರವಾಗಿ ಹೋಗುವುದಿಲ್ಲವೇ? ಹೀಗಿರಲು ಓ ಇಸ್ರಯೇಲ್, ಬಹುಮಂದಿ ಮಿಂಡರೊಡನೆ ವೇಶ್ಯವಾಟಿಕೆ ನಡೆಸಿದ ನೀನು ನನ್ನ ಬಳಿಗೆ ಬರುವೆಯಾ?


ನಿನ್ನ ಹುಟ್ಟುಗಳು ರೂಪಿಸಲಾಗಿವೆ ಬಾಷಾನಿನ ಅಲ್ಲೋನ್ ಮರದಿಂದ ನಿನ್ನ ಮೇಲ್ಮಾಳಿಗೆ ಕಟ್ಟಲಾಗಿದೆ ಕಿತ್ತೀಮ್ ದ್ವೀಪದ ತಿಲಕ ಹಲಗೆಯಿಂದ, ಕೆತ್ತಲಾಗಿದೆ ದಂತದಿಂದ.


ಅಲ್ಲಿಂದಲೂ ನಿರಾಶೆಯಿಂದ ತಲೆಯ ಮೇಲೆ ಕೈಹೊತ್ತು ಹೊರಡುವಿರಿ. ನೀವು ಯಾರಲ್ಲಿ ನಂಬಿಕೆಯಿಟ್ಟಿದ್ದಿರೋ ಅವರನ್ನು ಸರ್ವೇಶ್ವರನಾದ ನಾನು ನಿರಾಕರಿಸಿದ್ದೇನೆ. ಅವರಿಂದ ನಿಮ್ಮ ಕಾರ್ಯ ಕೈಗೂಡದು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು