Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 22:12 - ಕನ್ನಡ ಸತ್ಯವೇದವು C.L. Bible (BSI)

12 “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದಿಲ್ಲ. ಅವನನ್ನು ಎಲ್ಲಿಗೆ ಸೆರೆ ಒಯ್ದರೋ ಅಲ್ಲೇ ಅವನು ಸಾಯುವನು. ಈ ನಾಡನ್ನು ಇನ್ನು ಅವನು ನೋಡುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವನನ್ನು ಎಲ್ಲಿಗೆ ಸೆರೆಯೊಯ್ದರೋ ಅಲ್ಲೇ ಸಾಯುವನು, ಈ ದೇಶವನ್ನು ಇನ್ನು ಕಾಣನು” ಎಂಬುದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವನನ್ನು ಎಲ್ಲಿಗೆ ಸೆರೆಯೊಯ್ದರೋ ಅಲ್ಲೇ ಸಾಯುವನು, ಈ ದೇಶವನ್ನು ಇನ್ನು ಕಾಣನು ಎಂಬದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಈಜಿಪ್ಟಿನವರು ಅವನನ್ನು ತೆಗೆದುಕೊಂಡು ಹೋದ ಸ್ಥಳದಲ್ಲಿಯೇ ಸತ್ತುಹೋಗುವನು. ಅವನು ಮತ್ತೊಮ್ಮೆ ಈ ಪ್ರದೇಶವನ್ನು ನೋಡಲಾರನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದಲ್ಲಿಯೇ ಸಾಯುವನು. ಅವನು ಈ ದೇಶವನ್ನು ಇನ್ನು ನೋಡುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 22:12
6 ತಿಳಿವುಗಳ ಹೋಲಿಕೆ  

ಫರೋಹ ನೆಕೋವನು, ಯೋಷೀಯನಿಗೆ ಬದಲಾಗಿ ಅವನ ಮಗ ಎಲ್ಯಾಕೀಮನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೊಸ ಹೆಸರನ್ನಿಟ್ಟು, ಯೆಹೋವಾಹಾಜನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದನು; ಯೆಹೋವಾಹಾಜನು ಅಲ್ಲೆ ಮೃತನಾದನು.


ಆದಕಾರಣ ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ವಿಷಯವಾಗಿ ಸರ್ವೇಶ್ವರ ಹೀಗೆನ್ನುತ್ತಾರೆ: “ಇವನಿಗಾಗಿ ಯಾರೂ ‘ಅಯ್ಯೋ ಸೋದರಸೋದರಿಯೇ’ ಎಂದು ಗೋಳಾಡರು ‘ಅಯ್ಯೋ ನಮ್ಮೊಡೆಯಾ, ರಾಜಾಧಿರಾಜ’ ಎಂದು ಪ್ರಲಾಪಿಸರು.


ಅನ್ಯಜನಗಳಲ್ಲಿ ಚದರಿಹೋಗಿ ಕಣ್ಮರೆಯಾಗುವಿರಿ. ಶತ್ರುಗಳ ದೇಶ ನಿಮ್ಮನ್ನು ಕಬಳಿಸಿಬಿಡುವುದು.


ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ವಿರುದ್ಧ ಯುದ್ಧಮಾಡುವುದಕ್ಕಾಗಿ ಯೂಫ್ರಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು, ಕೂಡಲೆ ಅವನಿಂದ ಹತನಾದನು.


ಹಿಂದಿರುಗಬೇಕೆಂದು ಹಂಬಲಿಸಿದರೂ ತಾಯ್ನಾಡಿಗೆ ಹಿಂದಿರುಗುವುದೇ ಇಲ್ಲ.”


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು