Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 21:10 - ಕನ್ನಡ ಸತ್ಯವೇದವು C.L. Bible (BSI)

10 ಈ ನಗರಕ್ಕೆ ಒಳಿತನ್ನು ಅಲ್ಲ, ಕೆಡುಕನ್ನು ಮಾಡಲೆಂದೆ ಇದರ ಮೇಲೆ ಕಣ್ಣಿಟ್ಟಿದ್ದೇನೆ. ಇದು ಬಾಬಿಲೋನಿಯಾದ ಅರಸನ ಕೈವಶವಾಗುವುದು. ಅವನು ಇದನ್ನು ಸುಟ್ಟು ಭಸ್ಮಮಾಡುವನು. ಇದು ಸರ್ವೇಶ್ವರನಾದ ನನ್ನ ನುಡಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಮೇಲಿಗಲ್ಲ, ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವುದು, ಅವನು ಅದನ್ನು ಸುಟ್ಟುಬಿಡುವನು; ಇದು ಯೆಹೋವನ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮೇಲಿಗಲ್ಲ ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವದು, ಅವನು ಸುಟ್ಟು ಬಿಡುವನು; ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’” ಇದು ಯೆಹೋವನಿಂದ ಬಂದ ಸಂದೇಶ. “‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವುದು. ಏಕೆಂದರೆ ನಾನು ಒಳ್ಳೆಯದಕ್ಕಲ್ಲ, ಕೆಟ್ಟದ್ದಕ್ಕೆ ಈ ಪಟ್ಟಣಕ್ಕೆ ವಿರೋಧವಾಗಿ ನನ್ನ ಮುಖವನ್ನಿಟ್ಟಿದ್ದೇನೆಂದು ಯೆಹೋವ ದೇವರು ಅನ್ನುತ್ತಾರೆ. ಅದು ಬಾಬಿಲೋನಿನ ಅರಸನ ಕೈಯಲ್ಲಿ ಒಪ್ಪಿಸಲಾಗುವುದು. ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 21:10
26 ತಿಳಿವುಗಳ ಹೋಲಿಕೆ  

“ಆದಕಾರಣ ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೇಳುವುದನ್ನು ಕೇಳಿರಿ: ‘ಜುದೇಯವನ್ನೆಲ್ಲ ನಿರ್ಮೂಲ ಮಾಡುವೆನು. ಕೇಡಿಗಾಗಿಯೇ ನಿಮ್ಮ ಮೇಲೆ ಕಣ್ಣಿಡುವೆನು.


ಶತ್ರುವಶವಾಗಿ ಸೆರೆಗೆ ಹೋಗಿದ್ದರೂ ಅಲ್ಲಿಯೂ ಖಡ್ಗವು ನನ್ನ ಆಜ್ಞಾನುಸಾರ ಅವರನ್ನು ಕೊಲ್ಲುವುದು; ಅವರ ಮೇಲಿಗಾಗಿ ಅಲ್ಲ, ಕೇಡಿಗಾಗಿಯೇ ಅವರ ಮೇಲೆ ಕಣ್ಣಿಡುವೆನು.


ಇಗೋ, ನಿಮಗೆ ಒಳಿತನ್ನು ಅಲ್ಲ, ಕೇಡನ್ನು ಬರಮಾಡಬೇಕೆಂದು ನಿಮ್ಮ ವಿಷಯದಲ್ಲಿ ಎಚ್ಚರಗೊಂಡಿದ್ದೇನೆ. ಈಜಿಪ್ಟಿನ ಎಲ್ಲ ಯೆಹೂದ್ಯರು ಖಡ್ಗ-ಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು.


ನಾನವರ ಮೇಲಿಡುವೆನು ಕೋಪ ದೃಷ್ಟಿಯನ್ನು; ಬೆಂಕಿಯಿಂದ ತಪ್ಪಿಸಿಕೊಂಡರೂ ನುಂಗಿಬಿಡುವುದು ಅದು ಅವರನ್ನು. ನಾನವರ ಮೇಲೆ ಕೋಪ ದೃಷ್ಟಿಯನ್ನಿಟ್ಟಾಗ ನಾನೇ ಸರ್ವೇಶ್ವರನೆಂದು ನಿಮಗೆ ಮನದಟ್ಟಾಗುವುದು.


ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.


ಅರಮನೆಯನ್ನೂ ಪ್ರಜೆಗಳ ಮನೆಗಳನ್ನೂ ಬಾಬಿಲೋನಿಯದವರು ಬೆಂಕಿಯಿಂದ ಸುಟ್ಟು ಜೆರುಸಲೇಮಿನ ಸುತ್ತಣವಿದ್ದ ಗೋಡೆಗಳನ್ನು ಕೆಡವಿದರು.


ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳಿಗೆ ಮೊರೆಹೋಗದಿದ್ದರೆ ಈ ನಗರವು ಬಾಬಿಲೋನಿನವರ ಕೈವಶವಾಗುವುದು. ಅವರು ಇದನ್ನು ಬೆಂಕಿ ಇಂದ ಸುಟ್ಟುಬಿಡುವರು. ತಾವು ಅವರ ಕೈಯಿಂದ ತಪ್ಪಿಸಿಕೊಳ್ಳಲಾರಿರಿ,” ಎಂದು ಹೇಳಿದನು.


ಮತ್ತಾನನ ಮಗ ಶೆಫತ್ಯ, ಪಷ್ಹೂರನ ಮಗ ಗೆದಲ್ಯ, ಸೆಲೆಮ್ಯನ ಮಗ ಯೂಕಲ, ಹಾಗೂ ಮಲ್ಕೀಯನ ಮಗ ಪಷ್ಹೂರ ಇವರು ಮೇಲೆ ಹೇಳಿದ ಮಾತುಗಳನ್ನು ಕೇಳಿದರು.


“ಇಸ್ರಯೇಲರ ದೇವರಾದ ಸರ್ವೇಶ್ವರನಾದ ನನ್ನ ನುಡಿ ಇದು: ನೀನು ಜುದೇಯದ ಅರಸ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆಂದು ಹೇಳು - ‘ಸರ್ವೇಶ್ವರನ ಮಾತನ್ನು ಆಲಿಸು: ಇಗೋ, ನಾನು ಈ ನಗರವನ್ನು ಬಾಬಿಲೋನಿನ ಅರಸನ ಕೈವಶಮಾಡುವೆನು. ಅವನು ಇದನ್ನು ಬೆಂಕಿಯಿಂದ ಸುಟ್ಟುಹಾಕುವನು.


ಅವನ ಜನರು ಜೆರುಸಲೇಮಿನ ಪೌಳಿಗೋಡೆಗಳನ್ನು ಕೆಡವಿದರು. ಅದರ ಎಲ್ಲ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟು ನೆಲಸಮ ಮಾಡಿದರು; ಅಮೂಲ್ಯವಾದ ವಸ್ತುಗಳನ್ನು ನಾಶಮಾಡಿದರು.


ತಮ್ಮ ಎಲ್ಲ ಮಡದಿಯರನ್ನೂ ಮಕ್ಕಳನ್ನೂ ಬಾಬಿಲೋನಿಯರ ಬಳಿಗೆ ತರಲಾಗುವುದು. ತಾವು ತಪ್ಪಿಸಿಕೊಳ್ಳಲಾಗದೆ ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಕೊಳ್ಳುವಿರಿ. ಈ ನಗರವು ತಮ್ಮ ನಿಮಿತ್ತ ಬೆಂಕಿಯಿಂದ ಸುಟ್ಟುಹೋಗುವುದು,” ಎಂದು ಹೇಳಿದನು.


ದುರ್ಜನರಿಗಾದರೋ ಪ್ರಭು ವಿಮುಖನು I ಅವರ ಹೆಸರನು ಧರೆಯಿಂದ ಅಳಿಸುವನು II


ನಾನು ನಿಮ್ಮ ಮೇಲೆ ಕಡುಕೋಪಗೊಳ್ಳುವೆನು; ನೀವು ನಿಮ್ಮ ಶತ್ರುಗಳ ಮುಂದೆಯೇ ಸೋತುಬೀಳುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು. ಯಾರೂ ಬೆನ್ನಟ್ಟಿ ಬರದಿದ್ದರೂ ನೀವು ಹೆದರಿ ಓಡುವಿರಿ.


“ಅಷ್ಟುಮಾತ್ರವಲ್ಲ, ಇಸ್ರಯೇಲರಲ್ಲಾಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಾಗಲಿ ಯಾರಾದರು ರಕ್ತಭೋಜನ ಮಾಡಿದರೆ ಸರ್ವೇಶ್ವರ ಅಂಥ ವ್ಯಕ್ತಿಯ ವಿರುದ್ಧ ಉಗ್ರಕೋಪಗೊಳ್ಳುವರು; ಅವನನ್ನು ತನ್ನ ಪ್ರಜೆಯಿಂದ ತೆಗೆದುಹಾಕುವರು.


ಆದರೂ ನನ್ನ ದಾಸರಾದ ಪ್ರವಾದಿಗಳಿಗೆ ನಾನು ಕೊಟ್ಟ ಆಜ್ಞೆಗಳು, ವಿಧಿನಿಯಮಗಳು ನಿಮ್ಮ ಪಿತೃಗಳ ಮರಣದ ನಂತರವೂ ಶಾಶ್ವತವಾಗಿ ಉಳಿದಿವೆಯಲ್ಲವೆ? ಅವರು ಪಶ್ಚಾತ್ತಾಪಪಟ್ಟು, ‘ಸೇನಾಧೀಶ್ವರ ಸರ್ವೇಶ್ವರ ನಮ್ಮ ದುರ್ಮಾರ್ಗ ಹಾಗೂ ದುಷ್ಕೃತ್ಯಗಳಿಗೆ ತಕ್ಕಂತೆ ಏನು ಮಾಡಬೇಕೆಂದು ಸಂಕಲ್ಪಿಸಿದ್ದರೋ, ಅದನ್ನು ನಮಗೆ ಮಾಡಿಯೇ ಮಾಡಿದ್ದಾರೆ’ ಎಂದು ಹೇಳಿಕೊಂಡರಲ್ಲವೆ?”


ಸರ್ವೇಶ್ವರನಾದ ನನ್ನ ಗುರಿಯನ್ನು ಗಮನಿಸಿರಿ - ನಾನು ಅಪ್ಪಣೆಕೊಟ್ಟು, ಶತ್ರುಗಳು ಈ ನಗರಕ್ಕೆ ಮತ್ತೆ ಬರುವಂತೆ ಮಾಡುವೆನು. ಅವರು ಇದರ ವಿರುದ್ಧ ಯುದ್ಧಮಾಡಿ, ಇದನ್ನು ಆಕ್ರಮಿಸಿಕೊಂಡು, ಬೆಂಕಿಯಿಂದ ಸುಟ್ಟುಹಾಕುವರು. ನಾನು ಜುದೇಯದ ನಗರಗಳನ್ನು ನಿರ್ಜನವಾದ ಪಾಳುಭೂಮಿಯನ್ನಾಗಿಸುವೆನು.


ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”


ಆದರೆ ನನ್ನ ಕಡೆಗೆ ಕಿವಿಗೊಡದೆ, ಸಬ್ಬತ್ ದಿನದಲ್ಲಿ ಹೊರೆಹೊತ್ತು, ಜೆರುಸಲೇಮಿನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಗೊಳ್ಳದೆ, ಆ ಸಬ್ಬತ್ ದಿನವನ್ನು ಪವಿತ್ರ ದಿನ ಎಂದು ಆಚರಿಸದೆಹೋದರೆ, ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು. ಅದು ಜೆರುಸಲೇಮಿನ ಅರಮನೆಗಳನ್ನು ದಹಿಸಿಬಿಡುವುದು, ಆ ಬೆಂಕಿ ಆರುವುದೇ ಇಲ್ಲ.”


ಈ ಊರಿನವರು ಬಾಬಿಲೋನಿಯರ ವಿರುದ್ಧ ಕದನಕ್ಕೆ ಹೊರಟರೆ ಏನು ಪ್ರಯೋಜನ? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರಷ್ಟೆ. ಇವರ ಅಧರ್ಮದ ನಿಮಿತ್ತ ಈ ನಗರಕ್ಕೆ ವಿಮುಖವಾಗಿ, ಕಡುಕೋಪಾವೇಶನಾಗಿ ನಾನೇ ಇವರನ್ನು ಸದೆಬಡಿಯುವೆನು.


ನೀನು ಹೋಗಿ ಸುಡಾನಿನ ಎಬೆದ್ಮೆಲೆಕನಿಗೆ ಹೀಗೆ ತಿಳಿಸು: “ಈ ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ - ನಾನು ನುಡಿದ ಮೇಲನ್ನು ಅಲ್ಲ, ಕೇಡನ್ನೇ ಈ ನಗರದ ಮೇಲೆ ಬರಮಾಡುವೆನು. ಅದು ನಿನ್ನ ಕಣ್ಣೆದುರಿಗೇ ಆ ದಿನದಂದು ನಡೆಯುವುದು.


ಆಮೇಲೆ ಹಂಡೆಯು ಕಾದು ತಾಮ್ರವು ಕೆಂಪಾಗಿ, ಒಳಗಣ ಕಲ್ಮಷವು ಕರಗಿ ಕಿಲುಬು ಇಲ್ಲವಾಗುವಂತೆ, ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು.


ಆದಕಾರಣ ನಾನು ಜುದೇಯದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಜೆರುಸಲೇಮಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.”


ಆಗ ಯೆರೆಮೀಯನು, “ಸೇನಾಧೀಶ್ವರ ಸರ್ವೇಶ್ವರನೂ ಇಸ್ರಯೇಲರ ದೇವರೂ ಆದ ಸ್ವಾಮಿ ಹೀಗೆನ್ನುತ್ತಾರೆ: ತಾವು ಬಾಬಿಲೋನಿಯದ ಅರಸನ ಪದಾಧಿಕಾರಿಗಳ ಮೊರೆಹೊಕ್ಕರೆ ತಮ್ಮ ಪ್ರಾಣ ಉಳಿಯುವುದು. ಈ ನಗರ ಬೆಂಕಿ ಇಂದ ಸುಟ್ಟುಹೋಗದು, ತಾವೂ ತಮ್ಮ ಮನೆಯವರೂ ಮನೆತನದವರೂ ಬದುಕುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು